ಸಿ‍ಎಫ್ ಮೋಟೊನಿಂದ ಬಿಡುಗಡೆಯಾಗಲಿವೆ 4 ಬೈಕುಗಳು

ಚೀನಾ ಮೂಲದ ಬೈಕ್ ತಯಾರಕ ಕಂಪನಿ ಸಿ‍ಎಫ್ ಮೋಟೊ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ. ಕಂಪನಿಯು 2019 ರ ಜುಲೈ 4 ರಂದು ಭಾರತದಲ್ಲಿ ನಾಲ್ಕು ಹೊಸ ಬೈಕುಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿದೆ. 300ಎನ್‌ಕೆ, 650 ಎನ್‌ಕೆ, 650ಎಂಟಿ ಹಾಗೂ 650 ಜಿಟಿ ಮುಂದಿನ ತಿಂಗಳು ಬಿಡುಗಡೆಯಾಗುತ್ತಿರುವ ಬೈಕುಗಳಾಗಿವೆ. ಕಂಪನಿಯು ಸದ್ಯಕ್ಕೆ ಭಾರತದ ವಿವಿಧ ನಗರಗಳಲ್ಲಿ ಡೀಲರ್‍‍‍ಶಿಪ್‍‍ಗಳನ್ನು ಆರಂಭಿಸುವ ಕಾರ್ಯದಲ್ಲಿ ತೊಡಗಿದೆ.

ಸಿ‍ಎಫ್ ಮೋಟೊನಿಂದ ಬಿಡುಗಡೆಯಾಗಲಿವೆ 4 ಬೈಕುಗಳು

ಮೊದಲಿಗೆ ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಲಾಗುವುದು. ನಂತರ ಮುಂಬೈ, ಪುಣೆ, ಚೆನ್ನೈ ಹಾಗೂ ದೆಹಲಿಯಂತಹ ಇತರ ನಗರಗಳಿಗೆ ವಿಸ್ತರಿಸಲಾಗುವುದು.

ಸಿಎಫ್ ಮೋಟೊ ಸದ್ಯಕ್ಕೆ ತನ್ನ ಬೈಕುಗಳನ್ನು ದೇಶದಲ್ಲಿ ತಯಾರಿಸಲು ಬೆಂಗಳೂರು ಮೂಲದ ಎಎಂಡಬ್ಲ್ಯು ಮೋಟಾರ್‌ಸೈಕಲ್‌‍‍ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ಎಎಂಡಬ್ಲ್ಯು ಮೋಟಾರ್‌ಸೈಕಲ್‌ ಬೆಂಗಳೂರಿನಲ್ಲಿ ಒಂದು ಘಟಕವನ್ನು ಹೊಂದಿದ್ದು, ವರ್ಷಕ್ಕೆ 10,000 ಬೈಕುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಸಿ‍ಎಫ್ ಮೋಟೊನಿಂದ ಬಿಡುಗಡೆಯಾಗಲಿವೆ 4 ಬೈಕುಗಳು

ಚೀನಾ ಕಂಪನಿಯು ಬಿಡುಗಡೆಗೊಳಿಸಲಿರುವ ಬೈಕುಗಳಲ್ಲಿ 300 ಎನ್‌ಕೆ ಹಾಗೂ 650 ಎನ್‌ಕೆ ಬೈಕುಗಳು ನೇಕೆಡ್ ಸ್ಟ್ರೀಟ್ ಫೈಟರ್ ಬೈಕುಗಳಾದರೆ, 650 ಎಂಟಿ ಅಡ್ವೆಂಚರ್-ಟೂರರ್ ಹಾಗೂ 650 ಜಿಟಿ ಸ್ಪೋರ್ಟ್-ಟೂರರ್‍ ಬೈಕುಗಳಾಗಿವೆ. ನಾಲ್ಕು ವಿವಿಧ ಬಗೆಯ ಬೈಕುಗಳ ಬಿಡುಗಡೆಯೊಂದಿಗೆ ಕಂಪನಿಯು ದೊಡ್ಡ ಮಟ್ಟದ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿದೆ. ಸಿಎಫ್ ಮೋಟೋ 300 ಎನ್‌ಕೆ ಬೈಕಿನಲ್ಲಿ 292 ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದ್ದು, 33.5ಬಿ‍‍ಹೆಚ್‍‍ಪಿ ಹಾಗೂ 20.5ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸಿ‍ಎಫ್ ಮೋಟೊನಿಂದ ಬಿಡುಗಡೆಯಾಗಲಿವೆ 4 ಬೈಕುಗಳು

6 ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. 300ಎನ್‌ಕೆ ಬೈಕಿನಲ್ಲಿರುವ ಬಹುತೇಕ ಬಿಡಿಭಾಗಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿರುವ 250ಎನ್‌ಕೆ ಬೈಕುಗಳಲ್ಲಿಯೂ ಸಹ ಅಳವಡಿಸಲಾಗಿದೆ. ಸಿಎಫ್ ಮೋಟೊ 250 ಎನ್‌ಕೆ ಬೈಕ್ ಅನ್ನು ಮುಂಬರುವ ದಿನಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ 650 ಸಿಸಿ ಶ್ರೇಣಿಯ ಬೈಕುಗಳಲ್ಲಿ ಒಂದೇ ರೀತಿಯ 649 ಸಿಸಿ ಪ್ಯಾರೆಲಲ್ ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್‌‍‍ಗಳನ್ನು ಅಳವಡಿಸಲಾಗಿದೆ.

ಸಿ‍ಎಫ್ ಮೋಟೊನಿಂದ ಬಿಡುಗಡೆಯಾಗಲಿವೆ 4 ಬೈಕುಗಳು

ಈ ಎಂಜಿನ್ 66.68ಬಿ‍‍ಹೆಚ್‍‍ಪಿ ಹಾಗೂ 56ಎನ್‍ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್‍‍ನಲ್ಲಿಯೂ ಸಹ 6 ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಪ್ರತಿಯೊಂದು ಬೈಕಿನ ಎಂಜಿನ್‍‍ಗಳನ್ನು ರೈಡಿಂಗ್ ಸ್ಟೈಲ್ ಹಾಗೂ ಅವಶ್ಯಕತೆಗಳಿಗೆ ತಕ್ಕಂತೆ ವಿಭಿನ್ನವಾಗಿ ಟ್ಯೂನ್ ಮಾಡಲಾಗುತ್ತದೆ. ಸಿಎಫ್ ಮೋಟೊ ಬಿಡುಗಡೆಗೊಳಿಸುತ್ತಿರುವ ಎಲ್ಲಾ ನಾಲ್ಕು ಬೈಕುಗಳು ಹಲವಾರು ಫೀಚರ್‍‍ಗಳನ್ನು ಹಾಗೂ ಬಿಡಿಭಾಗಗಳನ್ನು ಹೊಂದಿರಲಿವೆ.

MOST READ: ಇನ್ಮುಂದೆ ಹೊಸ ವಾಹನಗಳ ನೋಂದಣಿ ಅಷ್ಟು ಸುಲಭವಲ್ಲ..!

ಸಿ‍ಎಫ್ ಮೋಟೊನಿಂದ ಬಿಡುಗಡೆಯಾಗಲಿವೆ 4 ಬೈಕುಗಳು

ಈ ಬೈಕುಗಳ ಮುಂಭಾಗ ಹಾಗೂ ಹಿಂಭಾಗದಲ್ಲಿ ಎಲ್ಇಡಿ ಲೈಟಿಂಗ್, ವಿಭಿನ್ನ ರೀತಿಯ ರೈಡಿಂಗ್ ಮೋಡ್‍‍ಗಳು, ಡಿಜಿಟಲ್ ಟಿಎಫ್‍‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಡ್ಯುಯಲ್-ಚಾನೆಲ್ ಎಬಿಎಸ್ ಜೊತೆಗೆ ಇನ್ನಿತರ ಫೀಚರ್‍‍ಗಳಿರಲಿವೆ.

MOST READ: ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

ಸಿ‍ಎಫ್ ಮೋಟೊನಿಂದ ಬಿಡುಗಡೆಯಾಗಲಿವೆ 4 ಬೈಕುಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸಿಎಫ್ ಮೋಟೊ ಭಾರತೀಯ ಮಾರುಕಟ್ಟೆಗೆ ಆಕ್ರಮಣಕಾರಿ ತಂತ್ರವನ್ನು ರೂಪಿಸುತ್ತಿದೆ. ಕಂಪನಿಯು ಈ ಹಿಂದೆ ಭಾರತದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಗೆ ಪ್ರವೇಶಿಸಲು ಪ್ರಯತ್ನಿಸಿತ್ತು. ಆದರೆ ಪಾಲುದಾರಿಕೆ ಕುಸಿದ ಕಾರಣ ವಿಫಲವಾಗಿತ್ತು. ಈಗ ಹೊಸ ಪಾಲುದಾರರ ಮೂಲಕ ಭಾರತದಲ್ಲಿ ಉತ್ಪಾದನೆ ನಡೆಯುತ್ತಿರುವುದರಿಂದ, ಕಂಪನಿಯು ತನ್ನ ಬೈಕುಗಳ ದರಗಳನ್ನು ಹೇಗೆ ನಿಗದಿಪಡಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
CF Moto To Launch Four Motorcycles — India-Launch Confirmed For 4th July - Read in kannada
Story first published: Thursday, June 27, 2019, 14:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X