ನಾಲ್ಕು ಹೊಸ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಚೀನಾ ಮೂಲದ ಸಿಎಫ್ ಮೋಟೊ

ಸಿಎಫ್ ಮೋಟೊ - ಇದೊಂದು ಚೀನಾ ಮೂಲದ ವಾಹನ ತಯಾರಕ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಇಂದು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ನಾಲ್ಕು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಸಿಎಫ್ ಮೋಟೊ ಬಿಡುಗಡೆ ಮಾಡಲಾದ ಬೈಕ್‍ಗಳು ರೂ. 2.29 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಇದರಲ್ಲಿ ಎರಡು ನೇಕೆಡ್ ಸ್ಟ್ರೀಟ್ ಫೈಟರ್ ಬೈಕ್ಸ್, ಒಂದು ಅಡ್ವೆಂಚರ್ ಟೂರರ್ ಹಾಗು ಒಂದು ಸ್ಪೋರ್ಟ್-ಟೂರರ್ ಬೈಕ್ ಆಗಿದೆ.

ನಾಲ್ಕು ಹೊಸ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಚೀನಾ ಮೂಲದ ಸಿಎಫ್ ಮೋಟೊ

ಬೈಕ್‍ಗಳ ಬೆಲೆ

ಸಿಎಫ್ ಮೋಟೊ ಬಿಡುಗಡೆ ಮಾಡಲಾದ 300ಎನ್‍ಕೆ ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.29 ಲಕ್ಷ, 650ಎನ್‍ಕೆ ಬೈಕ್ ರೂ. 3.99 ಲಕ್ಷದ ಬೆಲೆ, 650ಎಂಟಿ ರೂ. 4.99 ಮತ್ತು 650ಜಿಟಿ ಬೈಕ್ ರೂ. 5.49 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಬೆಲೆ ಪ್ರಕಾರ 650ಸಿಸಿ ಬೈಕ್‍ಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ಗ್ರಾಹಕರನ್ನು ಸೆಳೆಯುವಲ್ಲಿ ಸಿಎಫ್ ಮೋಟೋ ಯಶಸ್ವಿಯಾಗಲಿದೆಯೆ.?

ನಾಲ್ಕು ಹೊಸ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಚೀನಾ ಮೂಲದ ಸಿಎಫ್ ಮೋಟೊ

ಇನ್ನು ಸಿಎಫ್ ಮೋಟೊ ಕಂಪೆನಿಯು ಬಿಡುಗಡೆ ಮಾಡಲಾದ ಎಲ್ಲಾ ಬೈಕ್‍ಗಳನ್ನು ದೇಶಿಯವಾಗಿ ಉಪಕರಣಗಳನ್ನು ಜೋಡಿಸಲಾಗುತ್ತದೆ. ಈ ಬೈಕ್ ಅನ್ನು ಚೀನಾದಿಂದ ಸಿಕೆಡಿ (ಕಂಪ್ಲೀಟ್ಲಿ ಕ್ನಾಕ್ಡ್ ಡೌನ್) ಯೂನಿಟ್ ಮಾರ್ಗದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿರುವ ಎಎಂಡಬ್ಲ್ಯೂ ಮೋಟಾರ್‍‍ಸೈಕಲ್ಸ್ ಸಂಸ್ಥೆಯೊಂದಿಗೆ ಕೈ ಜೋಡಿಸಿ ತಮ್ಮ 4 ಹೊಸ ಬೈಕ್‍ಗಳ ಉಪಕರಣಗಳು, ಮಾರಾಟ ಮತ್ತು ಸರ್ವೀಸಿಂಗ್‍ನ ಬಾಧ್ಯತೆಯನ್ನು ನೀಡಿದೆ.

ನಾಲ್ಕು ಹೊಸ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಚೀನಾ ಮೂಲದ ಸಿಎಫ್ ಮೋಟೊ

ಎಎಂಡಬ್ಲ್ಯೂ ಮೋಟಾರ್‍‍ಸೈಕಲ್ಸ್ ಹೈದೆರಾಬಾದ್‍‍ನ ಸಮೀಪದಲ್ಲಿರುವ ಪ್ಲಾಂಟ್ನಲ್ಲಿ ನಾಲ್ಕು ಹೊಸ ಬೈಕ್‍ಗಳ ಉತ್ಪಾದನೆಯನ್ನು ಮಾಡಲಾಗುತ್ತದೆ. ಎಎಂಡಬ್ಲ್ಯೂ ವರ್ಷಕ್ಕೆ 10,000 ಯೂನಿಟ್ ಬೈಕ್‍ಗಳನ್ನು ಉತ್ಪಾದನೆ ಮಾಡುವುದಾಗಿ ಹೇಳಿಕೊಂಡಿದೆ. ಸಿಎಫ್ ಮೋಟೊ ಸಧ್ಯಕ್ಕೆ ರಾಷ್ಟ್ರದೆಲ್ಲೆಡೆ ಏಳು ಡೀಲರ್‍‍ಶಿಪ್‍ಗಳನ್ನು ತೆರಯಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಡೀಲರ್‍‍ಶಿಪ್‍ಗಳನ್ನು ತೆರೆಯುವುದಾಗಿ ಹೇಳಿಕೊಂಡಿದೆ.

ನಾಲ್ಕು ಹೊಸ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಚೀನಾ ಮೂಲದ ಸಿಎಫ್ ಮೋಟೊ

ಇದಲ್ಲದೆ ಸಿಎಫ್ ಮೋಟೊ ಸಂಸ್ಥೆಯು ರಾಷ್ಟ್ರದಲ್ಲಿ ಬಿಎಸ್-6 ನಿಯಮಾವಳಿಗಳು ಪ್ರಾರಂಭವಾದ ನಂತರ 400ಸಿಸಿ ಬೈಕ್ ಅನ್ನು ಸಹ ಬಿಡುಗಡೆ ಮಾಡುವುದಾಗಿ ಭರವಸೆಯನ್ನು ನೀಡಿದೆ. ಇದರ ಜೊತೆಗೆ ಸಂಸ್ಥೆಯು ಎಲೆಕ್ಟ್ರಿಕ್ ಮಾದರಿಯ ಬೈಕ್‍ಗಳನ್ನು ಮುಂದಿನ 18 ರಿಂದ 24 ತಿಂಗಳ ಗಡುವಿನಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ಕೂಡಾ ಹೇಳಿಕೊಂಡಿದೆ.

ನಾಲ್ಕು ಹೊಸ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಚೀನಾ ಮೂಲದ ಸಿಎಫ್ ಮೋಟೊ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಸಿಎಫ್ ಮೋಟೊ ಬಿಡುಗಡೆ ಮಾಡಲದ ಪ್ರತಿಯೊಂದು ಬೈಕ್ ವಿವಿಧ ಸೆಗ್ಮೆಂಟ್‍ನಲ್ಲಿದ್ದು, ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಪ್ರಾರಂಭದಿಂದಲೇ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ. ಇಷ್ಟೆ ಅಲ್ಲದೆಯೆ ಸಂಸ್ಥೆಯು ಹೊಸ ಬೈಕಿನ ಖರೀದಿದಾರರಿಗೆ ಅಕ್ಟೋಬರ್ ಮೊದಲ ವಾರದಿಂದ ವಿತರಣೆಯನ್ನು ಸಹ ಪ್ರಾರಂಭಿಸಲಿದೆ.

ನಾಲ್ಕು ಹೊಸ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಚೀನಾ ಮೂಲದ ಸಿಎಫ್ ಮೋಟೊ

ಎಂಜಿನ್ ಸಾಮರ್ಥ್ಯ

ಸಿಎಫ್ ಮೋಟೊ ಬಿಡುಗಡೆ ಮಾಡಲಾದ 300ಎನ್‍ಕೆ ಬೈಕ್ 292ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 33.5 ಬಿಹೆಚ್‍ಪಿ ಮತ್ತು 20.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಬೈಕ್ ಎಲ್ಇಡಿ ಹೆಡ್‍ಲ್ಯಾಂಪ್ಸ್, ಡಿ‍ಅರ್‍‍‍ಎಲ್‍ಗಳು ಮತ್ತು ಟೈಲ್‍ಲೈಟ್ಸ್ ಹಾಗು ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ನಾಲ್ಕು ಹೊಸ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಚೀನಾ ಮೂಲದ ಸಿಎಫ್ ಮೋಟೊ

ಇನ್ನು 650ಸಿಸಿ ಬೈಕ್‍ಗಳಾದ 650ಎನ್‍ಕೆ, 650ಜಿಟಿ ಮತ್ತು 650ಎಂಟಿ ಬೈಕ್ 649ಸಿಸಿ ಪ್ಯಾರಲಲ್-ಟ್ವಿನ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 66.68 ಬಿಹೆಚ್‍ಪಿ ಮತ್ತು 56ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಬೈಕ್‍ಗಳಲ್ಲಿ ನೀಡಲಾದ ಎಂಜಿನ್ ಒಂದೇ ಆದರೂ ರೈಡಿಂಗ್ ಸ್ಟೈಲ್‍ನ ಮೇಲೆ ಟ್ಯೂನ್ ಮಾಡಲಾಗುವ ಹಾಗೆ ಎಂಜಿನ್ ಅನ್ನು ವಿನ್ಯಾಸ ಮಾಡಲಾಗಿದೆ.

ನಾಲ್ಕು ಹೊಸ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಚೀನಾ ಮೂಲದ ಸಿಎಫ್ ಮೋಟೊ

650ಸಿಸಿ ಆಧಾರಿತ ಬೈಕ್‍ಗಳು ಹೆಚ್ಚು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಎಲ್ಇಡಿ ಲೈಟಿಂಗ್ ಆಲ್-ಅರೌಂಡ್, ಫುಲ್ಲಿ ಡಿಜಿಟಲ್ ಟಿಎಫ್‍ಟಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಒಂಗೊಂಡತೆ ಇನ್ನು ಹಲವಾರು ಫೀಚರ್ಸ್ ಅನ್ನು ಪಡೆದಿದೆ.

ನಾಲ್ಕು ಹೊಸ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಚೀನಾ ಮೂಲದ ಸಿಎಫ್ ಮೋಟೊ

ಕನ್ನಡ ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಸಿಎಫ್ ಮೋಟೊ ಸಂಸ್ಥೆಯು ಕೊನೆಗೂ ದೇಶಿಯ ಮಾರಕಟ್ಟೆಯಲ್ಲಿ ತಮ್ಮ ಬೈಕ್‍ಗಳನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಲಾದ ಈ ಬೈಕ್‍ಗಳು ಈ ಮುನ್ನವೇ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡು ಬೈಕ್ ಪ್ರಿಯರಲ್ಲಿ ಕುತೂಹಲವನ್ನು ಹುಟ್ಟುಹಾಕಿತ್ತು. ಸಿಎಫ್ ಮೋಟೊ ಸಂಸ್ಥೆಯು ಶೀಘ್ರವೇ ತಮ್ಮ ಡೀಲರ್‍‍ಶಿಪ್‍ಗಳನ್ನು ವಿಸ್ತರಿಸಲಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಸಹ ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿಕೊಂಡಿದೆ.

ನಾಲ್ಕು ಹೊಸ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಚೀನಾ ಮೂಲದ ಸಿಎಫ್ ಮೋಟೊ

ಸಿಎಫ್ ಮೋಟೊನ 300ಎನ್‍ಕೆ ಬೈಕ್ ಮಾರುಕಟ್ಟೆಯಲ್ಲಿರುವ ಕೆಟಿಎಂ ಡ್ಯೂಕ್ 390, ಹೋಂಡಾ ಸಿಬಿ300ಆರ್ ಬೈಕ್‍ಗಳಿಗೆ ಪೈಪೋಟಿ ನೀಡಿದರೆ, ಇನ್ನುಳಿದ 600ಎನ್‍ಕೆ, 600ಎಂಟಿ ಮತ್ತು 650ಜಿಟಿ ಬೈಕ್‍ಗಳು ಕವಾಸಕಿ ನಿಂಜಾ 650, ಕವಾಸಕಿ ವರ್ಸಿಸ್ 650ಮತ್ತು ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
CF Moto Launch Four New Motorcycles In India — Prices Start At Rs 2.29 Lakh. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X