ನಮ್ಮ ಬೆಂಗಳೂರಿನಲ್ಲಿ ಸಿಎಫ್‌ಮೊಟೊ ಮೊದಲ ಬೈಕ್ ಮಾರಾಟ ಮಳಿಗೆ ಆರಂಭ..!

ಚೀನಾದ ಜನಪ್ರಿಯ ಸೂಪರ್ ಬೈಕ್ ನಿರ್ಮಾಣ ಸಂಸ್ಥೆಯಾದ ಸಿಎಫ್‌ಮೊಟೊ ಸಂಸ್ಥೆಯು ಭಾರತದಲ್ಲಿ ಇದೇ ಮೊದಲ ಬಾರಿಗೆ ವಿವಿಧ ಮಾದರಿಯ ಸೂಪರ್ ಬೈಕ್ ಆವೃತ್ತಿಗಳ ಮಾರಾಟವನ್ನು ಆರಂಭಿಸಿದ್ದು, ನಮ್ಮ ಬೆಂಗಳೂರಿನಲ್ಲಿ ದೇಶದ ಎರಡನೇ ಬೈಕ್ ಮಾರಾಟ ಮಳಿಗೆಗೆ ಚಾಲನೆ ನೀಡಿದೆ.

ನಮ್ಮ ಬೆಂಗಳೂರಿನಲ್ಲಿ ಸಿಎಫ್‌ಮೊಟೊ ಮೊದಲ ಬೈಕ್ ಮಾರಾಟ ಮಳಿಗೆ ಆರಂಭ..!

ಬೆಂಗಳೂರಿನ ಹೃದಯಭಾಗದಲ್ಲಿರುವ ಶಾಂತಿನಗರದ ಬಳಿಯ ಕೆಹೆಚ್ ರಸ್ತೆಯಲ್ಲಿ ಸಿಎಫ್‌ಮೊಟೊ ಅಧಿಕೃತ ಮಾರಾಟ ಮಳಿಗೆ ಆರುಷ್ ಮೋಟಾರ್ಸ್ ಶೋರೂಂ ಆರಂಭಗೊಂಡಿದ್ದು, ಮಾರಾಟ ಮತ್ತು ಬಿಡಿಭಾಗಗಳ ಸೇವಾಸೌಲಭ್ಯವನ್ನು ಹೊಂದಿರುವ ಹೊಸ ಬೈಕ್ ಮಾರಾಟ ಮಳಿಗೆಯಲ್ಲಿ ಸಿಎಫ್‌ಮೊಟೊ ನಿರ್ಮಾಣದ ವಿವಿಧ ಮಾದರಿಯ ನಾಲ್ಕು ಬೈಕ್ ಆವೃತ್ತಿಗಳನ್ನು ಪ್ರದರ್ಶನ ಮಾಡಲಾಗಿದೆ. 300ಸಿಸಿಯಿಂದ 650ಸಿಸಿ ಎಂಜಿನ್ ಸಾಮರ್ಥ್ಯವನ್ನು ಸಿಎಫ್‌ಮೊಟೊ ಹೊಸ ಬೈಕ್‌ಗಳು ಭಾರತೀಯ ಗ್ರಾಹಕರ ಬೇಡಿಕೆಯೆಂತೆ ವಿಶೇಷ ವಿನ್ಯಾಸದೊಂದಿಗೆ ರಸ್ತೆಗಿಳಿಯಲಿವೆ.

ನಮ್ಮ ಬೆಂಗಳೂರಿನಲ್ಲಿ ಸಿಎಫ್‌ಮೊಟೊ ಮೊದಲ ಬೈಕ್ ಮಾರಾಟ ಮಳಿಗೆ ಆರಂಭ..!

ಭಾರತದಲ್ಲಿ ಅನ್ವಿತಾ ಆಟೋ ಟೆಕ್ ವರ್ಕ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಸಿಎಫ್‍ಮೊಟೊ ಸಂಸ್ಥೆಯು ಸದ್ಯಕ್ಕೆ ಸಿಕೆಡಿ ನೀತಿಯಡಿಯಲ್ಲೇ ಹೊಸ ಬೈಕ್‌ಗಳನ್ನು ಅಸೆಂಬ್ಲಿ ಮೂಲಕ ಮಾರಾಟ ಮಾಡಲಿದ್ದು, ಮುಂದಿನ ಒಂದು ವರ್ಷದೊಳಗಾಗಿ ಭಾರತದಲ್ಲೇ ಶೇ.50ರಷ್ಟು ಬೈಕ್ ಬಿಡಿಭಾಗಗಳ ಉತ್ಪಾದನಾ ಗುರಿಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಸಿಎಫ್‌ಮೊಟೊ ಮೊದಲ ಬೈಕ್ ಮಾರಾಟ ಮಳಿಗೆ ಆರಂಭ..!

ಹೊಸ ಬೈಕ್ ಬಿಡಿಭಾಗಗಳ ಉತ್ಪಾದನೆಗಾಗಿ ಬೆಂಗಳೂರಿನ ಜಿಗಣಿ ಬಳಿ ಹೊಸದಾಗಿ ಅಸೆಂಬ್ಲಿ ಘಟಕವನ್ನು ತೆರೆದಿದ್ದು, 2020ರ ಜನವರಿ ಆರಂಭದಲ್ಲಿ ಹೊಸ ಬೈಕ್‌ಗಳನ್ನು ವಿತರಣೆಯನ್ನು ಶುರು ಮಾಡಲಿದೆ.

ನಮ್ಮ ಬೆಂಗಳೂರಿನಲ್ಲಿ ಸಿಎಫ್‌ಮೊಟೊ ಮೊದಲ ಬೈಕ್ ಮಾರಾಟ ಮಳಿಗೆ ಆರಂಭ..!

ಸದ್ಯಕ್ಕೆ ಬಿಡುಗಡೆಯಾಗಿರುವ ಹೊಸ ಬೈಕ್‌ಗಳ ಬೆಲೆಯನ್ನು ಮಾತ್ರವೇ ಬಹಿರಂಗಪಡಿಸಿರುವ ಸಿಎಫ್‌ಮೊಟೊ ಸಂಸ್ಥೆಯು ಈಗಾಗಲೇ 700 ಗ್ರಾಹಕರಿಂದ ಬುಕ್ಕಿಂಗ್ ಸ್ವಿಕರಿಸಿದ್ದು, ಪರ್ಫಾಮೆನ್ಸ್ ಪ್ರಿಯರ ಬೇಡಿಕೆಯೆಂತೆ 300ಎನ್‌ಕೆ, 650ಎನ್‌ಕೆ, 650ಎಂಟಿ ಮತ್ತು 650ಜಿಟಿ ಬೈಕ್ ಮಾದರಿಗಳನ್ನು ಅಭಿವೃದ್ದಿಪಡಿಸಿದೆ. ಹೊಸ ಬೈಕ್‌ಗಳು 300ಸಿಸಿಯಿಂದ 650ಸಿಸಿ ಎಂಜಿನ್ ಪ್ರೇರಣೆ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಬೈಕ್ ಆವೃತ್ತಿಯು ರೂ.2.29 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.5.49 ಲಕ್ಷ ಬೆಲೆ ಹೊಂದಿವೆ.

ನಮ್ಮ ಬೆಂಗಳೂರಿನಲ್ಲಿ ಸಿಎಫ್‌ಮೊಟೊ ಮೊದಲ ಬೈಕ್ ಮಾರಾಟ ಮಳಿಗೆ ಆರಂಭ..!

ಬೈಕ್ ಮಾರಾಟ ಮಳಿಗೆಗಳ ಕೊರತೆ ಹಿನ್ನಲೆಯಲ್ಲಿ ಬೈಕ್ ವಿತರಣೆಯನ್ನು ವಿಳಂಭ ಮಾಡುತ್ತಿರುವ ಸಿಎಫ್‌ಮೊಟೊ ಸಂಸ್ಥೆಯು ಸದ್ಯದಲ್ಲೇ ವಿವಿಧ ನಗರಗಳಲ್ಲಿ 50ಕ್ಕೂ ಹೊಸ ಶೋರೂಂಗಳಿಗೆ ಚಾಲನೆ ನೀಡಲಿದ್ದು, ಬೈಕ್ ವಿತರಣೆಗೆ ಭರ್ಜರಿ ತಯಾರಿ ನಡೆಸುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಸಿಎಫ್‌ಮೊಟೊ ಮೊದಲ ಬೈಕ್ ಮಾರಾಟ ಮಳಿಗೆ ಆರಂಭ..!

ಮತ್ತೊಂದು ಪ್ರಮುಖ ವಿಚಾರವೆಂದರೆ, ಬಿಎಸ್-4 ಎಂಜಿನ್ ಹೊತ್ತುಬಂದಿರುವ ಸಿಎಫ್‌ಮೊಟೊ ಬೈಕ್‌ಗಳು ಶೀಘ್ರದಲ್ಲೇ ಬಿಎಸ್-6 ನಿಯಮ ಅನುಸಾರ ಉನ್ನತೀಕರಣ ಹೊಂದಲಿದ್ದು, ಬಿಎಸ್-4 ಮಾದರಿಗಳ ಬೆಲೆಯನ್ನೇ ಬಿಎಸ್-6 ಮಾದರಿಗಳು ಮುಂದುವರಿಸುವ ಭರವಸೆ ನೀಡಿದೆ.

ನಮ್ಮ ಬೆಂಗಳೂರಿನಲ್ಲಿ ಸಿಎಫ್‌ಮೊಟೊ ಮೊದಲ ಬೈಕ್ ಮಾರಾಟ ಮಳಿಗೆ ಆರಂಭ..!

ಇನ್ನು ಸಿಎಫ್‌ಮೊಟೊ ನಿರ್ಮಾಣದ 300ಎನ್‌ಕೆ(ರೂ.2.29 ಲಕ್ಷ), 650ಎನ್‌ಕೆ(ರೂ.3.99 ಲಕ್ಷ), 650ಎಂಟಿ(ರೂ. 4.99 ಲಕ್ಷ) ಮತ್ತು 650ಜಿಟಿ ಬೈಕ್ ಆವೃತ್ತಿಯು(ರೂ. 5.49 ಲಕ್ಷ) ಎಕ್ಸ್‌ಶೋರೂಂ ಬೆಲೆಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳೊಂದಿಗೆ ಆಕರ್ಷಕ ಡಿಸೈನ್ ಹೊಂದಿವೆ.

ನಮ್ಮ ಬೆಂಗಳೂರಿನಲ್ಲಿ ಸಿಎಫ್‌ಮೊಟೊ ಮೊದಲ ಬೈಕ್ ಮಾರಾಟ ಮಳಿಗೆ ಆರಂಭ..!

ಇದಲ್ಲದೆ ಸಿಎಫ್‌ಮೊಟೊ ಸಂಸ್ಥೆಯು ಭಾರತದಲ್ಲಿ ಬಿಎಸ್-6 ನಿಯಮ ಜಾರಿ ನಂತರ 400ಸಿಸಿ ಬೈಕ್ ಅನ್ನು ಸಹ ಬಿಡುಗಡೆ ಮಾಡುವುದಾಗಿ ಭರವಸೆಯನ್ನು ನೀಡಿದ್ದು, ಪರ್ಫಾಮೆನ್ಸ್ ಪ್ರಿಯರ ನೆಚ್ಚಿನ ಬೈಕ್ ಮಾದರಿಯಾಗಲಿದೆ.

ನಮ್ಮ ಬೆಂಗಳೂರಿನಲ್ಲಿ ಸಿಎಫ್‌ಮೊಟೊ ಮೊದಲ ಬೈಕ್ ಮಾರಾಟ ಮಳಿಗೆ ಆರಂಭ..!

ಈ ಮೂಲಕ 300ಎನ್‌ಕೆ ಬೈಕ್ ಮಾದರಿಯು ಕೆಟಿಎಂ ಡ್ಯೂಕ್ 390, ಹೋಂಡಾ ಸಿಬಿ300ಆರ್ ಬೈಕ್‍ಗಳಿಗೆ ಪೈಪೋಟಿ ನೀಡಿದ್ದಲ್ಲಿ, ಇನ್ನುಳಿದ 600ಎನ್‍ಕೆ, 600ಎಂಟಿ ಮತ್ತು 650ಜಿಟಿ ಬೈಕ್‍ಗಳು ಕವಾಸಕಿ ನಿಂಜಾ 650, ಕವಾಸಕಿ ವರ್ಸಿಸ್ 650ಮತ್ತು ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ಗಳಿಗೆ ಪೈಪೋಟಿ ನೀಡಲಿವೆ.

Most Read Articles

Kannada
English summary
CFMoto Inaugurates First Dealership In Bangalore. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X