Just In
Don't Miss!
- News
ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ವಿಧಿವಶ
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಮೊದಲ ಬೈಕ್ ಮಾರಾಟ ಮಳಿಗೆಯನ್ನು ಆರಂಭಿಸಿದ ಸಿಎಫ್ ಮೋಟೊ
ಚೀನಾ ಮೂಲದ ಸಿಎಫ್ ಮೊಟೊ ಮಹಾರಾಷ್ಟ್ರದ ಥಾಣೆಯಲ್ಲಿ ಮೊದಲ ಮಳಿಗೆಯನ್ನು ಆರಂಭಿಸಿದೆ. ಈ ಮಳಿಗೆಯು ಸಿಎಫ್ ಮೊಟೊ ಕಂಪನಿಯು ಭಾರತದಲ್ಲಿ ಆರಂಭಿಸಿದ ಮೊದಲ ಮಳಿಗೆಯಾಗಿದೆ. ಈ ಮಳಿಗೆಯಲ್ಲಿ ಬೈಕುಗಳ ಮಾರಾಟ, ಬೈಕುಗಳ ಬಿಡಿ ಭಾಗಗಳು, ಸರ್ವಿಸ್ ಮತ್ತು ಟೆಸ್ಟ್ ಡ್ರೈವ್ ಸೌಲಭ್ಯಗಳು ಲಭ್ಯವಿರಲಿವೆ.

ಅನ್ವಿತಾ ಆಟೋಟೆಕ್ ವರ್ಕ್ಸ್‌ನ ಚೀಫ್ ಆಪರೇಟಿಂಗ್ ಆಫೀಸರ್, ವಂಶೀ ಕೃಷ್ಣ ಜಾಗಿಣಿರವರು ಮಾತನಾಡಿ, ಥಾಣೆಯಲ್ಲಿ ಮೊದಲ ಸಿಎಫ್ ಮೋಟೊ ಮಳಿಗೆಯನ್ನು ಪ್ರಾರಂಭಿಲು ನಮಗೆ ಸಂತಸವಿದೆ. ಯುವ ಜನತೆಯ ನಡುವೆ ಸಿಎಫ್ ಮೋಟೊ ಒಂದು ಆಕರ್ಷಕ ಬ್ರ್ಯಾಂಡ್ ಆಗಿದೆ. ಗ್ರಾಹಕರಿಂದ ಇಲ್ಲಿಯವರೆಗೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ ಎಂದು ಹೇಳಿದರು.

ವಿತರಣೆಯ ವೇಗವನ್ನು ಹೆಚ್ಚಿಸುತ್ತೇವೆ. ಬೇಡಿಕೆಗೆ ಅನುಗುಣವಾಗಿ ಕಂಪನಿಯು ತಮ್ಮ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಇನ್ನಿತರ ಪ್ರಮುಖ ನಗರಗಳಲ್ಲಿ ತಮ್ಮ ಮಳಿಗೆಯನ್ನು ಪ್ರಾರಂಭಿಸಲು ಕಂಪನಿಯು ಚಿಂತಿಸುತ್ತಿದೆ.

ಸಿಎಫ್ ಮೋಟೊ ಗ್ಲೋಬಲ್ ಸೆಲ್ಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಕೆನ್ನತ್ ಚೆನ್ ರವರು ಮಾತನಾಡಿ, ಭಾರತದಲ್ಲಿ ನಮ್ಮ ಮೊದಲ ಮಳಿಗೆಯನ್ನು ಮುಂಬೈಯಲ್ಲಿ ಆರಂಭಿಸಿರುವುದಕ್ಕೆ ನಮಗೆ ಸಂತಸವಾಗಿದೆ. ಕಂಪನಿಯು ಬಿಡುಗಡೆಗೊಳಿಸಿದ ಎಲ್ಲಾ ಬೈಕ್‍ಗಳಿಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇದೀಗ ಗ್ರಾಹಕರ ನಿರೀಕ್ಷೆಗೆ ಮೀರಿದ ಉತ್ತಮ ಮಾದರಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ಸಿಎಫ್ ಮೋಟೊದ ಅಭಿಮಾನಿಗಳು ಮತ್ತು ಡೀಲರ್‍ಗಳು ಇರಿಸಿದ ವಿಶ್ವಾಸವು ಗ್ರಾಹಕರಿಗೆ ಬ್ರ್ಯಾಂಡ್ ಮೇಲೆ ವಿಶ್ವಾಸ ಮೂಡಲು ಸಹಕಾರಿಯಾಗಿದೆ. ಈ ಮಳಿಗೆಯನ್ನು ಆರಂಭಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಿದೆ ಎಂದು ಹೇಳಿದರು.

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಸಿಎಫ್ ಮೋಟೊ ಕಂಪನಿಯ ನಾಲ್ಕು ಮಾದರಿಯ ಬೈಕ್‍ಗಳಿವೆ. ಇದರಲ್ಲಿ 300ಎನ್‍ಕೆ ಬೈಕ್ 296 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.29 ಲಕ್ಷಗಳಾಗಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸಿಎಫ್ ಮೋಟೊ 650 ಎನ್‍ಕೆ ಬೈಕಿನಲ್ಲಿ 643.3 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.99 ಲಕ್ಷಗಳಾಗಿವೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸಿಎಫ್ ಮೋಟೊ 650 ಎಂಟಿ ಮತ್ತು 650 ಜಿಟಿ ಬೈಕ್‍ಗಳು ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಬೈಕುಗಳ ಬೆಲೆಯು ಕ್ರಮವಾಗಿ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.99 ಲಕ್ಷ ಮತ್ತು ರೂ.5.49 ಲಕ್ಷಗಳಾಗಿವೆ. ಈ ನಾಲ್ಕು ಮಾದರಿಯ ಬೈಕ್‍ಗಳು ಬೆಂಗಳೂರು, ಥಾಣೆ, ಚೆನ್ನೈ, ಕೊಚ್ಚಿನ್, ಕೋಲ್ಕತಾ ಮತ್ತು ಗುವಾಹಟಿಯಾದ್ಯಂತ ಕಂಪನಿಯ ಡೀಲರ್ ನೆಟವರ್ಕ್ ಮೂಲಕ ಲಭ್ಯವಿರಲಿವೆ. ಮುಂದಿನ 12 ತಿಂಗಳುಗಳಲ್ಲಿ ದೇಶಾದ್ಯಂತ ತಮ್ಮ ಮಳಿಗೆಗಳನ್ನು ವಿಸ್ತರಿಸಲು ಸಿಎಫ್ ಮೊಟೊ ಯೋಜಿಸಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸಿಎಫ್ ಮೋಟೊ ದೇಶದಲ್ಲಿ ತನ್ನ ಮೊದಲ ಮಳಿಗೆಯನ್ನು ಆರಂಭಿಸಿದೆ. ಗ್ರಾಹಕರಿಗೆ ಟೆಸ್ಟ್ ಡ್ರೈವ್‍ಗೆ ಬೈಕ್‍ಗಳನ್ನು ನೀಡಲಾಗುವುದು. ಇದಲ್ಲದೆ ಮಳಿಗೆಯಲ್ಲಿ ರೂ.50,000ಗಳಿಗೆ ಬುಕ್ಕಿಂಗ್ ಮಾಡಬಹುದು. ಬಣ್ಣ ಮತ್ತು ಮಾದರಿಯನ್ನು ಅವಲಂಬಿಸಿ ತಕ್ಷಣವೇ ವಿತರಣೆಯನ್ನು ಮಾಡಬಹುದು.