ಬಿಡುಗಡೆಯಾಯ್ತು ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಎಕ್ಸ್ ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು, ದೇಶಿಯ ಮಾರುಕಟ್ಟೆಯ ಮಧ್ಯಮ ಸರಣಿಯ ಬೈಕುಗಳ ಸೆಗ್‍‍ಮೆಂಟಿನಲ್ಲಿ, ಲಾಭದ ಜೊತೆಗೆ, ಉತ್ತಮ ಬೆಳವಣಿಗೆ ಹಾಗೂ ಏಕಸ್ವಾಮ್ಯವನ್ನು ಅನುಭವಿಸುತ್ತಿದೆ. ಆದರೆ ದೇಶಿಯ ಆಟೋಮೊಬೈಲ್ ಉದ್ಯಮದಲ್ಲಿ ಉಂಟಾಗಿರುವ ಕುಸಿತದ ಕಾರಣ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಸಹ ಬೇರೆ ಕಂಪನಿಗಳ ಮಾರಾಟದಂತೆ ಕುಸಿತ ಕಾಣುತ್ತಿದೆ.

ಬಿಡುಗಡೆಯಾಯ್ತು ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಎಕ್ಸ್ ಬೈಕ್

ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಯಲ್ ಎನ್‍‍ಫೀಲ್ಡ್ ಕಂಪನಿಯ ಮಾರಾಟದಲ್ಲಿ 19% ನಷ್ಟು ಕುಸಿತ ಉಂಟಾಗಿದೆ. ಇದರಿಂದಾಗಿ ರಾಯಲ್ ಎನ್‍‍ಫೀಲ್ಡ್ ಕಂಪನಿಯ ಮಾತೃ ಕಂಪನಿಯಾದ ಐಷರ್ ಗ್ರೂಪ್‌ನ ಆದಾಯವು 7% ನಷ್ಟು ಕಡಿಮೆಯಾಗಿದೆ. ಹೊಸ ಜೆ ಪ್ಲಾಟ್‌ಫಾರ್ಮ್ ಆಧರಿಸಿ ತಯಾರಾಗಿರುವ ಹೊಸ ತಲೆಮಾರಿನ ಬೈಕುಗಳು ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯುವ ಸಾಧ್ಯತೆಗಳಿವೆ.

ಬಿಡುಗಡೆಯಾಯ್ತು ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಎಕ್ಸ್ ಬೈಕ್

ಇತ್ತೀಚೆಗೆ, ರಾಯಲ್ ಎನ್‌ಫೀಲ್ಡ್‌ ಕಂಪನಿಯ ಹೊಸ ಸಿಇಒ ವಿನೋದ್ ದಾಸರಿರವರು ಕಂಪನಿಯು ಮುಂದಿನ ದಿನಗಳಲ್ಲಿ ಹೆಚ್ಚಿನ ಗ್ರಾಹಕರನ್ನು ತಲುಪುವ ಉದ್ದೇಶದಿಂದ ಹೊಸ ಸರಣಿಯ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಬಿಡುಗಡೆಯಾಯ್ತು ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಎಕ್ಸ್ ಬೈಕ್

ದಾಸರಿರವರು ಹೇಳಿದ ಹೊಸ ಬೈಕುಗಳ ಪೈಕಿ ಒಂದು ಬೈಕು ಎಂಟ್ರಿ ಲೆವೆಲ್ ಬೈಕ್ ಆಗಿರಲಿದ್ದು, ಈಗಿರುವ ಬುಲೆಟ್ ಪ್ಲಾಟ್‍‍ಫಾರಂ ಮೇಲೆ ಆಧಾರಿತವಾಗಿರಲಿದೆ.ಈ ಬೈಕಿಗೆ ಬುಲೆಟ್ 350 ಎಕ್ಸ್ ಎಂದು ಹೆಸರಿಡಲಾಗಿದೆ. ಈ ಬೈಕ್ ಅನ್ನು ಇಂದು ಬಿಡುಗಡೆಗೊಳಿಸಲಾಗಿದೆ. ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.12 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಎಕ್ಸ್ ಬೈಕ್

ಹೊಸ ಬುಲೆಟ್ 350 ಎಕ್ಸ್ ಬೈಕ್ ಶೈನಿ ಕ್ರೋಮ್ ಬಣ್ಣದ ಜೊತೆಗೆ ಗಾಢ ಬಣ್ಣದ ಥೀಮ್‌ ಹಾಗೂ ಕಪ್ಪು ಬಣ್ಣವನ್ನು ಹೊಂದಿರುವ ಎಂಜಿನ್ ಬಿಡಿಭಾಗಗಳನ್ನು ಹೊಂದಿದೆ. ಈ ಬೈಕಿನ ಬೆಲೆಯನ್ನು ಕಡಿಮೆಗೊಳಿಸುವ ಕಾರಣಕ್ಕಾಗಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಬಿಡುಗಡೆಯಾಯ್ತು ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಎಕ್ಸ್ ಬೈಕ್

ಈ ಬೈಕಿನಲ್ಲಿ ಬುಲೆಟ್ 350 ಬೈಕಿನಲ್ಲಿರುವ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 19.78 ಬಿ‍‍ಹೆಚ್‍‍ಪಿ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್‍‍ನ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಹೊಸ ಬೈಕ್ ಬಿಎಸ್ 4 ಎಂಜಿನ್ ಹೊಂದಿದೆ.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಬಿಡುಗಡೆಯಾಯ್ತು ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಎಕ್ಸ್ ಬೈಕ್

ರಾಯಲ್ ಎನ್‍‍ಫೀಲ್ಡ್ ಕಂಪನಿಯು ಬಿಎಸ್ 6 ಎಂಜಿನ್ ಅನ್ನು ಅಭಿವೃದ್ದಿಪಡಿಸುತ್ತಿದೆ. ಜೊತೆಗೆ ಹೊಸ ತಲೆಮಾರಿನ ಬುಲೆಟ್, ಕ್ಲಾಸಿಕ್ ಹಾಗೂ ಥಂಡರ್‍‍ಬರ್ಡ್ ಸರಣಿಗಳನ್ನೂ ಸಹ ಅಭಿವೃದ್ಧಿಪಡಿಸುತ್ತಿದೆ. ಈ ಬೈಕುಗಳನ್ನು ಹೊಸ ಮಾಲಿನ್ಯ ನಿಯಮಗಳು ಜಾರಿಯಾಗುವ 2020ರ ಏಪ್ರಿಲ್1ರ ವೇಳೆಗೆ ಬಿಡುಗಡೆಗೊಳಿಸಲಿದೆ.

MOST READ: ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಬಿಡುಗಡೆಯಾಯ್ತು ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಎಕ್ಸ್ ಬೈಕ್

ರಾಯಲ್ ಎನ್‍‍ಫೀಲ್ಡ್ ಕಂಪನಿಯು, ಬುಲೆಟ್ 500 ಬೈಕ್ ಅನ್ನು ಸಹ ಇದೇ ರೀತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಲಿದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಕಿಕ್ ಸ್ಟಾರ್ಟ್ ಮಾದರಿಯು ಸದ್ಯಕ್ಕೆ ಕಂಪನಿಯ ಜನಪ್ರಿಯ ಬೈಕ್ ಆಗಿದೆ.

MOST READ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಬಿಡುಗಡೆಯಾಯ್ತು ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಎಕ್ಸ್ ಬೈಕ್

ಹೊಸ ಬೈಕಿನ ಬೆಲೆಯು ಸುಮಾರು ರೂ.10,000ಗಳಿಂದ ರೂ.15,000ಗಳಷ್ಟು ಕಡಿಮೆಯಾಗಲಿದೆ. ಇದರಿಂದಾಗಿ ಈ ಬೈಕ್ 200 ಸಿಸಿ ಸೆಗ್‍‍ಮೆಂಟಿನಲ್ಲಿರುವ ಟಿವಿಎಸ್ ಅಪಾಚೆ ಆರ್‍‍‍‍ಟಿಆರ್ 200 ಹಾಗೂ ಬಜಾಜ್ ಪಲ್ಸರ್ 200 ಎನ್ಎಸ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Bookings open for Royal Enfield Bullet 350 X – Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X