ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ದ್ವಿಚಕ್ರ ವಾಹನ ಚಾಲಕರಿಗೆ ಮತ್ತು ಪಿಲಿಯಾನ್ ರೈಡರ್‍‍ಗೆ ಹೆಲ್ಮೆಟ್ ಕಡ್ಡಾಯಾವಾಗಿ ಇರಲೇಬೇಕೆಂದು ಹೈ ಕೋರ್ಟ್ ನಮ್ಮ ಬೆಂಗಳೂರು, ದೆಹಲಿ ಮತ್ತು ಇನ್ನಿತರೆ ಪ್ರಮುಖ ನಗರಗಳಲ್ಲಿ ಆದೇಶ ಮಾಡಿದರೂ, ಸಹ ಇನ್ನು ಕೆಲವು ನಗರಗಳಲ್ಲಿ ಹೈ ಕೋರ್ಟ್‍ನ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ.

ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ಅಂತಹ ನಗರಗಳಲ್ಲಿ ಮದ್ರಾಸ್ ಕೂಡಾ ಒಂದಾಗಿದ್ದು, ಅಲ್ಲಿನ ಹೈ ಕೋರ್ಟ್ ಅಧಿಕಾರಿಗಳೊಂದಿಗೆ ವಿಚಾರಣೆ ಮಾಡಲು ಮುಂದಾಗಿದ್ದಾರೆ. ದ್ವಿಚಕ್ರ ವಾಹನ ಚಾಲಕನು ಮತ್ತು ಪಿಲಿಯಾನ್ ರೈಡರ್ ಇಬ್ಬರೂ ಸಹ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕೆಂಬ ಆದೇಶವನ್ನು ನಾವು ನೀಡಿದ್ದರೂ ಸಹ ಹಲವಾರು ಚಾಲಕರು ಇದನ್ನು ಉಲ್ಲಂಘಿಸುತ್ತಿದ್ದಾರೆ.

ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ಈ ನಿಯಮಗಳು ಮಹಾ ನಗರಗಳಾದ ಬೆಂಗಳೂರು ಮತ್ತು ದೆಹಲಿಯಲ್ಲಿನ ಚಾಲಕರು ಪಾಲಿಸುತ್ತಿರುವಾಗ ನಮ್ಮಲ್ಲಿ ಏಕಿನ್ನು ಇದನುನ್ ಪಾಲಿಸಲು ಹಿಂದೇಟು ಹಾಕುತ್ತಿದ್ದೇವೆ ಎಂದು ಜಸ್ಟಿಸ್ ಎಸ್. ಮಣಿಕುಮಾರ್ ಮತ್ತು ಜಸ್ಟಿಸ್ ಸುಬ್ರಮನ್ಯಂರವರು ಅಧಿಕಾರಿಗಳನ್ನು ವಿಚಾರಣೆ ಮಾಡಲಾಗುತ್ತಿದೆ.

ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ಈ ಹಿಂದೆಯೆ ತಾವು ಹೆಲ್ಮೆಟ್ ವಿಚಾರವಾಗಿ ಆದೇಶವನ್ನು ನೀಡಲಾಗಿದ್ದು, ಕಡ್ಡಾಯ ಹೆಲ್ಮೆಟ್ ನಿಯಮವನ್ನು ರೈಡರ್ ಮತ್ತು ಪಿಲಿಯಾನ್ ರೈಡರ್‍‍ಗೆ ಅನುಷ್ಠಾನಗೊಳಿಸಲು ಕೋರಿ ಕೆ.ರಾಜೇಂದ್ರನ್ ಅವರು ಸಲ್ಲಿಸಿದ ಮನವಿಯನ್ನು ಕೇಳಿದ ಬಳಿಕ ಗುರುವಾರ ಗುರುವಾರ ಈ ವಿಚಾರಣೆಯನ್ನು ಮಾಡಲಾಗಿತ್ತು.

ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ವಿಚಾರಣೆಗಾಗಿ ಪಿಎಲ್ಐ ಬಂದಾಗ ನ್ಯಾಯಾಲಯವು ಉಲ್ಲಂಘನೆಗಾರರ ವಿರುದ್ಧ ಭಾರೀ ದಂಡವನ್ನು ವಿಧಿಸಿತು ಮತ್ತು ವಾಹನಗಳನ್ನು ದುರ್ಬಲಗೊಳಿಸುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತು. ಇದಕ್ಕೆ, ಹೆಚ್ಚುವರಿ ವಕೀಲ ಜನರಲ್ ಅರವಿಂದ್ ಪಾಂಡಿಯನ್ ಮೋಟಾರ್ ವಾಹನ ಕಾಯಿದೆ ಪ್ರಕಾರ, ಹೆಲ್ಮೆಟ್ ನಿಯಮ ಉಲ್ಲಂಘನೆಗಾಗಿ ಪೆನಾಲ್ಟಿಯಾಗಿ ರೂ. 100 ಮಾತ್ರ ವಿಧಿಸಬಹುದು ಎಂದು ಹೇಳಿದರು.

ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡುವ ರೈಡರ್‍‍ಗಳ ಮೇಲೆ ಕಠಿಣವಾದ ನಿಯಮವನ್ನು ತೆಗೆದುಕೊಳ್ಳಲು ನ್ಯಾಯಾಲಯದ ಬೆಂಚ್ ಈಗಾಗಲೇ ಆದೇಶವನ್ನು ಹೊರ ಹಾಕಿದ್ದು, ಅವಶ್ಯಕತೆ ಇದ್ದಲ್ಲಿ ಇಂತಹ ಚಾಲಕರ ವಾಹನಗಳನ್ನು ಕೂಡಾ ಸೀಜ್ ಮಾಡಲು ಕೂಡಾ ಆದೇಶ ನೀಡಲಾಗಿದೆ.

ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ಹೀಗಿರುವಾಗ ಚೆನ್ನೈನಲ್ಲಿ ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ತಮಿಳುನಾಡಿನಲ್ಲಿ ನೀವು ಯಾವುದೇ ಹೊಸ ದ್ವಿಚಕ್ರ ವಾಹನವನು ಖರೀದಿ ಮಾಡಿದ್ದಲ್ಲಿ ಆ ಡೀಲರ್‍‍‍ಗಳು ರೈಡರ್‍‍ಗೆ ಮತ್ತು ಪಿಲಿಯಾನ್ ರೈಡರ್‍‍ಗೆ ವಾಹನದ ಜೊತೆಗೆ ಹೆಲ್ಮೆಟ್ ಅನ್ನು ನೀಡಬೇಕಾಗಿ ಆದೇಶ ನೀಡಲಾಗಿದೆ.

ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ಈ ಕುರಿತಾದ ಆದೇಶವನ್ನು ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ತಮಿಳುನಾಡಿನಲ್ಲಿರುವ ಎಲ್ಲಾ ಡೀಲರ್‍‍ಗಳಿಗೆ ನೋಟಿಸ್ ಅನ್ನು ನೀಡಲಾಗಿದ್ದು, ಆ ಡೀಲರ್‍‍ಗಳು ಹೆಲ್ಮೆಟ್ ಅನ್ನು ಸಂಗ್ರಹಿಸಲು ಸಮಯವನ್ನು ಕೇಳಿದ್ದರು. ಹಾಗೆಯೆ ಅಲ್ಲಿನ ಸಾರಿಗೆ ಕಮಿಷನರ್ ಸಿ. ಸಮಮಮೂರ್ತಿ ಅವರು ತಮ್ಮ ಸಹಕಾರವನ್ನು ನಿರೀಕ್ಷಿಸುತ್ತಿರುವುದನ್ನು ವಿತರಕರು ಪುನರುಚ್ಚರಿಸಿದ್ದಾರೆ.

ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ಕೇಂದ್ರ ಮೋಟಾರ್ ವಾಹನ ನಿಯಮಗಳ ನಿಯಮ 138 (4) (ಎಫ್), 1989, ಈ ಶಿರಸ್ತ್ರಾಣಗಳು ರಾಷ್ಟ್ರೀಯ ಮಾನದಂಡಗಳ ಸಂಸ್ಥೆಯಾದ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಸೂಚಿಸಿರುವ ನಿರ್ದಿಷ್ಟತೆಗಳಿಗೆ ದೃಢಪಡಿಸಬೇಕು ಎಂದು ಹೇಳಿದೆ.

ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ಇವುಗಳ ಜೊತೆಗೆ ಪೆಟ್ರೋಲ್ ಬಂಕ್ ಮಾಲೀಕರ ಸಂಘದವರು ಹೆಲ್ಮೆಟ್ ಇಲ್ಲದ ಬೈಕ್ ಸವಾರರ ವಿರುದ್ದ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದು, ಹೆಲ್ಮೆಟ್ ಇಲ್ಲದೇ ಪೆಟ್ರೋಲ್ ಬಂಕ್‌ಗೆ ಬರುವವರಿಗೆ ಪೆಟ್ರೋಲ್ ಹಾಕದಿರಲು ನಿರ್ಧರಿಸಲಾಗಿದೆ.

ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್

ಜೂನ್ 1ರಿಂದಲೇ ಹೆಲ್ಮೆಟ್ ಇಲ್ಲದೆ ಪೆಟ್ರೋಲ್ ಬಂಕ್‌ಗೆ ಬರುವ ಬೈಕ್ ಸವಾರರಿಗೆ ಪೆಟ್ರೋಲ್ ಸಿಗುವುದಿಲ್ಲ ಎಂದು ಹೇಳಲಾಗಿದ್ದು, ದೆಹಲಿ ಬಳಿಯ ನೋಯ್ಡಾದಲ್ಲಿ ಇದನ್ನು ಮೊದಲ ಹಂತವಾಗಿ ಜಾರಿಗೆ ತರಲಾಗುತ್ತಿದೆ.

Most Read Articles

Kannada
English summary
Chennai High Court Warns Two Wheeler Riders To Wear Helmets. Read In Kannada
Story first published: Tuesday, June 11, 2019, 11:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X