ನಾಚಿಕೆಯಿಲ್ಲದೇ ಮೇಡ್ ಇನ್ ಇಂಡಿಯಾ ಬೈಕ್ ಅನ್ನು ನಕಲು ಮಾಡಿದ ಚೀನಾ

ಚೀನಾದ ಮಾರುಕಟ್ಟೆಯು ಪಾಶ್ಚಾತ್ಯ ದೇಶಗಳ ವಸ್ತುಗಳ ನಕಲು ಮಾಲುಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ. ಮೊಬೈಲ್ ಆಗಲಿ ಅಥವಾ ಯಾವುದೇ ಎಲೆಕ್ಟ್ರಾನಿಕ್ ಬಿಡಿಭಾಗಗಳೇ ಆಗಲಿ ಅವುಗಳ ನಕಲುಗಳನ್ನು ತಯಾರಿಸುವುದರಲ್ಲಿ ಚೀನಾ ದೇಶದ್ದು ಎತ್ತಿದ ಕೈ. ಈಗ ಬೈಕುಗಳ ನಕಲುಗಳನ್ನೇ ತಯಾರಿಸಲು ಶುರು ಮಾಡಿದೆ.

ನಾಚಿಕೆಯಿಲ್ಲದೇ ಮೇಡ್ ಇನ್ ಇಂಡಿಯಾ ಬೈಕ್ ಅನ್ನು ನಕಲು ಮಾಡಿದ ಚೀನಾ

ಭಾರತದಲ್ಲಿ ತಯಾರಾದ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನ ನಕಲನ್ನೇ ಚೀನಾ ತಯಾರಿಸಿದ್ದು, ಆ ಬೈಕಿಗೆ ಎವರೆಸ್ಟ್ ಕೈಯು 400 ಎಕ್ಸ್ ಎಂಬ ಹೆಸರನ್ನಿಟ್ಟಿದೆ. ಈ ಅಡ್ವೆಂಚರ್ ಟೂರರ್ ಬೈಕ್ ಅನ್ನು ಇತ್ತೀಚಿಗೆ ತಯಾರಿಸಲಾಗಿದ್ದು, ಚೀನಾದಲ್ಲಿ ಸಿಎನ್‌ವೈ 29,800ಗಳಿಗೆ, ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ. 2.98 ಲಕ್ಷ, ಬಿಡುಗಡೆ ಮಾಡಲಾಗಿದೆ.

ನಾಚಿಕೆಯಿಲ್ಲದೇ ಮೇಡ್ ಇನ್ ಇಂಡಿಯಾ ಬೈಕ್ ಅನ್ನು ನಕಲು ಮಾಡಿದ ಚೀನಾ

ಒರಿಜಿನಲ್ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.3.49 ಲಕ್ಷಗಳಾಗಿದೆ. ಎವರೆಸ್ಟ್ ಕೈಯು 400 ಎಕ್ಸ್ ಬೈಕಿನಲ್ಲಿ 378 ಸಿಸಿಯ ಟ್ವಿನ್ ಸಿಲಿಂಡರ್, 8 ವಾಲ್ವ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಇನ್ನೊಂದು ಚೀನಾದ ಬೈಕ್ ತಯಾರಕ ಕಂಪನಿಯಾದ ಜಾಂಗ್‍‍ಶೆನ್‍‍ನಿಂದ ಪಡೆಯಲಾಗಿದೆ.

ನಾಚಿಕೆಯಿಲ್ಲದೇ ಮೇಡ್ ಇನ್ ಇಂಡಿಯಾ ಬೈಕ್ ಅನ್ನು ನಕಲು ಮಾಡಿದ ಚೀನಾ

ಈ ಎಂಜಿನ್‍‍ನಲ್ಲಿ 6 ಸ್ಪೀಡ್‍‍ನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಈ ಎಂಜಿನ್ 35.49 ಬಿ‍‍ಹೆಚ್‍‍ಪಿ ಹಾಗೂ 35 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಅಂಕಿಅಂಶಗಳು ಸುಮಾರು 400 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್‌ ಹೊಂದಿರುವ ಬೈಕುಗಳಿಗೆ ಹತ್ತಿರವಾಗಿವೆ.

ನಾಚಿಕೆಯಿಲ್ಲದೇ ಮೇಡ್ ಇನ್ ಇಂಡಿಯಾ ಬೈಕ್ ಅನ್ನು ನಕಲು ಮಾಡಿದ ಚೀನಾ

ಮೇಡ್ ಇನ್ ಇಂಡಿಯಾ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್, 313 ಸಿಸಿಯ ಸಿಂಗಲ್ ಸಿಲಿಂಡರ್ ಹೊಂದಿದ್ದು, 33.52 ಬಿ‍‍ಹೆಚ್‍‍ಪಿ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎವರೆಸ್ಟ್ ಕೈಯು 400 ಎಕ್ಸ್ ಬೈಕ್, ಮುಂಭಾಗದಲ್ಲಿ 41 ಎಂಎಂನ ತಲೆಕೆಳಗಾದ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳನ್ನು ಹೊಂದಿದೆ.

ನಾಚಿಕೆಯಿಲ್ಲದೇ ಮೇಡ್ ಇನ್ ಇಂಡಿಯಾ ಬೈಕ್ ಅನ್ನು ನಕಲು ಮಾಡಿದ ಚೀನಾ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಎರಡೂ ಕ್ರಮವಾಗಿ 165 ಎಂಎಂ ಹಾಗೂ 160 ಎಂಎಂ ಸ್ಟ್ರೋಕ್ ಹೊಂದಿವೆ. ಬ್ರೇಕಿಂಗ್ ನಿಯಂತ್ರಣಕ್ಕಾಗಿ ಬೈಕಿನ ಮುಂಭಾಗದಲ್ಲಿ ಎರಡು 296 ಎಂಎಂ ಡಿಸ್ಕ್ ಗಳಿದ್ದು ​​ಡ್ಯುಯಲ್ ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಕಾರ್ಯ ನಿರ್ವಹಿಸುತ್ತವೆ. ಹಿಂಭಾಗದಲ್ಲಿ ಸಿಂಗಲ್ ಪಿಸ್ಟನ್ ಕ್ಯಾಲಿಪರ್‌ ಹೊಂದಿರುವ 240 ಎಂಎಂ ಡಿಸ್ಕ್ ಗಳಿವೆ.

ನಾಚಿಕೆಯಿಲ್ಲದೇ ಮೇಡ್ ಇನ್ ಇಂಡಿಯಾ ಬೈಕ್ ಅನ್ನು ನಕಲು ಮಾಡಿದ ಚೀನಾ

ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟಾಂಡರ್ಡ್ ಫಿಟ್‌ಮೆಂಟ್ ಆಗಿ ನೀಡಲಾಗುತ್ತದೆ. ಚೀನಿಯರು ಇದನ್ನು ಸೂಪರ್ ಅಡ್ವೆಂಚರ್ ಬೈಕ್ ಎಂದು ಕರೆಯುತ್ತಾರೆ. ಎವರೆಸ್ಟ್ ಕೈಯು 400 ಎಕ್ಸ್ ಬೈಕ್ ಮುಂಭಾಗದಲ್ಲಿ ವಿಸ್ತೃತವಾದ ಬೀಕ್ ಹಾಗೂ ಎತ್ತರದ ವಿಂಡ್‌ಸ್ಕ್ರೀನ್ ಹೊಂದಿದೆ.

ನಾಚಿಕೆಯಿಲ್ಲದೇ ಮೇಡ್ ಇನ್ ಇಂಡಿಯಾ ಬೈಕ್ ಅನ್ನು ನಕಲು ಮಾಡಿದ ಚೀನಾ

ಫ್ಯೂಯಲ್ ಟ್ಯಾಂಕ್ ಬಿಎಂಡಬ್ಲ್ಯು ಜಿ 310 ಜಿಎಸ್‌ ಬೈಕಿನಲ್ಲಿರುವಂತಹ ಟ್ಯಾಂಕಿನ ಶೇಪ್ ಅನ್ನು ಹೊಂದಿದೆ. ಟ್ಯಾಂಕ್ ಎಕ್ಸ್ ಟೆಂಷನ್ ಕಂ ರೇಡಿಯೇಟರ್ ಮುಚ್ಚಿಹೋಗಿದೆ. ಈ ಬೈಕ್ ಎತ್ತರವಾಗಿರುವ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 790 ಎಂಎಂನಷ್ಟು ಎತ್ತರವಾದ ಸೀಟ್ ಹೊಂದಿದೆ.

ನಾಚಿಕೆಯಿಲ್ಲದೇ ಮೇಡ್ ಇನ್ ಇಂಡಿಯಾ ಬೈಕ್ ಅನ್ನು ನಕಲು ಮಾಡಿದ ಚೀನಾ

ಬಣ್ಣಗಳನ್ನು ಸಹ ಬಿಎಂಡಬ್ಲ್ಯು ಜಿ 310 ಜಿಎಸ್ ನಿಂದ ನಕಲು ಮಾಡಲಾಗಿದೆ. ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನ ನಕಲು ಪ್ರತಿಯಾದ ಎವರೆಸ್ಟ್ ಕೈಯು 400 ಬೈಕ್ ಎಲ್ಇಡಿ ಹೆಡ್‍‍ಲ್ಯಾಂಪ್, ನಕ್ಕಲ್ ಗಾರ್ಡ್ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟೇಶನ್‍‍ಗಳನ್ನು ಹೊಂದಿದೆ.

ನಾಚಿಕೆಯಿಲ್ಲದೇ ಮೇಡ್ ಇನ್ ಇಂಡಿಯಾ ಬೈಕ್ ಅನ್ನು ನಕಲು ಮಾಡಿದ ಚೀನಾ

ಇದರ ಜೊತೆಗೆ ಯು‍ಎಸ್‍‍ಬಿ ಪೋರ್ಟ್, 12 ವೋಲ್ಟ್ ಪೋರ್ಟ್‍‍ನ ಆಲ್ ಟೆರೈನ್ ಟಯರ್‍‍ಗಳು, ಹಿಂಭಾಗದಲ್ಲಿ 150 ಸೆಕ್ಷನ್‍‍ನ ಟಯರ್‍‍ಗಳಿವೆ. ಬೈಕ್ 20 ಲೀಟರ್‍‍ನ ದೊಡ್ಡ ಗಾತ್ರದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಟಾಪ್ ಮಾದರಿಯ ಬೈಕಿನಲ್ಲಿ ಎರಡೂ ಬದಿಯಲ್ಲಿ ಲಗೇಜ್ ಪ್ಯಾನಿಯರ್‌ಗಳನ್ನು ಪಡೆಯಬಹುದು.

Source: Newmotor

Most Read Articles

Kannada
English summary
Chinese clones: BMW G 310 GS shamelessly copied by Everest - Read in kannada
Story first published: Saturday, July 20, 2019, 18:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X