ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಬೆಂಗಳೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ, ಕಾಂಟಿನೆಂಟಲ್ ಆಟೋಮೋಟಿವ್ ಇಂಡಿಯಾ ತನ್ನ ಮುಂಬರಲಿರುವ ತಂತ್ರಜ್ಞಾನಗಳನ್ನು ಪ್ರದರ್ಶಿಸಿತು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಾಂಟಿನೆಂಟಲ್ ಕ್ಯಾಂಪಸ್‌ನಲ್ಲಿ ನಡೆದ ಟೆಕ್ ತತ್ವಾ ಎಂಬ ಹೆಸರಿನ ಕಾರ್ಯಕ್ರಮದಲ್ಲಿ, ಜರ್ಮನ್ ಮೂಲದ ಕಂಪನಿಯ ಎಲ್ಲಾ ಇಲಾಖೆಗಳು ಹಾಗೂ ಅಂಗಸಂಸ್ಥೆಗಳು ತಾವು ಅಭಿವೃದ್ಧಿಪಡಿಸುತ್ತಿರುವ ಭವಿಷ್ಯದ ಎಲ್ಲಾ ತಂತ್ರಜ್ಞಾನಗಳನ್ನು ಪ್ರದರ್ಶಿಸಿದ ಒಂದು ವೇದಿಕೆಯಾಗಿದೆ.

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಈ ಪ್ರದರ್ಶನದಲ್ಲಿ ಕೇವಲ ಕಂಪನಿಯವರಿಗೆ ಮಾತ್ರ ಪ್ರವೇಶ ನೀಡಿ, ಹೊರಗಿನವರಿಗೆ ಪ್ರವೇಶ ನಿರ್ಭಂದಿಸಲಾಗಿತ್ತು. ಕಾಂಟಿನೆಂಟಲ್ ಕಂಪನಿಯು ಪ್ರಪಂಚದಲ್ಲಿರುವ ಪ್ರಮುಖ ಆಟೋಮೋಟಿವ್ ಬಿಡಿಭಾಗ ಪೂರೈಸುವ ಕಂಪನಿಗಳ ಪೈಕಿ ಒಂದಾಗಿದೆ. ಕಾಂಟಿನೆಂಟಲ್ ಎಷ್ಟು ಜನಪ್ರಿಯತೆಯನ್ನು ಹೊಂದಿದೆಯೆಂದರೆ, ರಸ್ತೆಯಲ್ಲಿ ಕಾಣುವ ಬಹುತೇಕ ಕಾರುಗಳು ಕಾಂಟಿನೆಂಟಲ್ ಕಂಪನಿಯ ಕನಿಷ್ಠ ಒಂದಾದರೂ ಬಿಡಿಭಾಗಗಳನ್ನು ಹೊಂದಿರುತ್ತವೆ. ಜರ್ಮನ್ ಕಂಪನಿಯು ಹೆಚ್ಚಾಗಿ ವಿದ್ಯುತ್ ಬಿಡಿಭಾಗಗಳನ್ನು ಹಾಗೂ ಸಾಫ್ಟ್‌ವೇರ್ ಸಿಸ್ಟಂಗಳನ್ನು ಅಭಿವೃದ್ಧಿಪಡಿಸಿ ಪೂರೈಸುತ್ತದೆ.

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಪ್ರಪಂಚದಾದ್ಯಂತವಿರುವ ಪ್ರಮುಖ ಆಟೋಮೊಬೈಲ್ ಕಂಪನಿಗಳು ತಮ್ಮ ವಾಹನಗಳಲ್ಲಿ ಅಳವಡಿಸಲಾಗುವ ಇಸಿಯುಗಳು, ಟರ್ಬೋಚಾರ್ಜರ್‌ಗಳು, ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ, ಎಲೆಕ್ಟ್ರಾನಿಕ್ ಹಾರ್ಡ್‍‍ವೇರ್, ಆಟೋಮೋಟಿವ್ ಕಂಪ್ಯೂಟಿಂಗ್ ಸಿಸ್ಟಂಗಳಿಗಾಗಿ ಕಾಂಟಿನೆಂಟಲ್ ಕಂಪನಿಯನ್ನು ಅವಲಂಬಿಸಿವೆ. ಟೆಕ್ ತತ್ವಾದಲ್ಲಿ, ಕಾಂಟಿನೆಂಟಲ್ ಪ್ರಸ್ತುತ ಮಾರುಕಟ್ಟೆಯಲ್ಲಿ ಬಳಸುತ್ತಿರುವ ಎಲ್ಲಾ ತಂತ್ರಜ್ಞಾನಗಳ ಜೊತೆಗೆ ಇನ್ನೂ ಬಿಡುಗಡೆಗೊಳಿಸಬೇಕಿರುವ ತಂತ್ರಜ್ಞಾನಗಳನ್ನು ಪ್ರದರ್ಶಿಸಿತು.

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಕಾಂಟಿನೆಂಟಲ್ ಕಂಪನಿಯು ಇಂಟರ್‍‍ನಲ್ ಕಂಬಸ್ಜನ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಒಂದೇ ಸೂರಿನಡಿ ತಯಾರಿಸಲಿದೆ. ವೆಹಿಕಲ್ ಡೈನಾಮಿಕ್ಸ್ ಟೀಂ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಟೀಂ, ಟಿಸಿಐ ಹಾಗೂ ಎಸ್‌ಡಬ್ಲ್ಯೂಎ ಟೀಂ, ಬಾಡಿ ಟೀಂ ಹಾಗೂ ಎಲೆಕ್ಟ್ರೋಬಿಟ್‍‍ಗಳನ್ನು ಸಹ ಪ್ರದರ್ಶಿಸಲಾಯಿತು. ಎಲೆಕ್ಟ್ರೋಬಿಟ್, ಕಾಂಟಿನೆಂಟಲ್ ಎಜಿಯ ಪೂರ್ಣ ಪ್ರಮಾಣದ ಅಂಗಸಂಸ್ಥೆಯಾಗಿದ್ದು, ಅಡ್ವಾನ್ಸ್ಡ್ ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ ಹಾಗೂ ಸಾಫ್ಟ್‌ವೇರ್ ಇಂಟಿಗ್ರೇಷನ್‍‍ಗಳನ್ನು ಅಭಿವೃದ್ಧಿಪಡಿಸುತ್ತದೆ.

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಎಲೆಕ್ಟ್ರೋಬಿಟ್, ಹಲವು ಕಂಪನಿಗಳು ತಮ್ಮ ಸಿಸ್ಟಂಗಳಲ್ಲಿ ಅಳವಡಿಸಿಕೊಂಡಿರುವ ಸಾಫ್ಟ್‌ವೇರ್ ಇಂಟಿಗ್ರೇಟೆಡ್ ಸಿಸ್ಟಂ ಅನ್ನು ಪ್ರದರ್ಶಿಸಿತು. ಎಲೆಕ್ಟ್ರೋಬಿಟ್‍‍ನ ಘಟಕವು ಇಸ್ರೇಲ್‍‍ನಲ್ಲಿದ್ದು, ಈ ಕಂಪನಿಯು ಹಲವು ಪ್ರಮುಖ ವಾಹನ ತಯಾರಕರೊಂದಿಗೆ ಕಾರ್ಯ ನಿರ್ವಹಿಸಿದೆ. ಫೋರ್ಡ್‍‍ನ ಎಸ್‌ವೈಎನ್‌ಸಿ 3 ಇನ್ಫೋಟೈನ್‌ಮೆಂಟ್ ವ್ಯವಸ್ಥೆಯಲ್ಲಿನ ಸಾಫ್ಟ್‌ವೇರ್ ಏಕೀಕರಣವನ್ನು ಎಲೆಕ್ಟ್ರೋಬಿಟ್ ಅಭಿವೃದ್ಧಿಪಡಿಸಿದೆ. ಎಸ್‌ವೈಎನ್‌ಸಿ 4 ಎಂದು ಕರೆಯಲ್ಪಡುವ, ಈ ಸಿಸ್ಟಂನ ಹೊಸ ತಲೆಮಾರಿನ ಮಾದರಿಯನ್ನು ಸಹ ಪ್ರದರ್ಶಿಸಲಾಯಿತು.

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಟೆಕ್ ತತ್ವಾದ ವಿಇಡಿ (ವೆಹಿಕಲ್ ಡೈನಾಮಿಕ್ಸ್) ವಿಭಾಗವು ಟ್ರಾಕ್ಷನ್ ಕಂಟ್ರೋಲ್, ಎಬಿಎಸ್, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ವಿತರಣೆ ಇತ್ಯಾದಿಗಳನ್ನು ಅಭಿವೃದ್ಧಿಪಡಿಸುವ ವಿವಿಧ ಎಲೆಕ್ಟ್ರಾನಿಕ್ಸ್‌ ಸಿಮ್ಯೂಲೇಷನ್‍‍ಗಳನ್ನು ಪ್ರದರ್ಶಿಸಿತು. ಈ ಪೈಕಿ ಕೆಲವು ಸಿಮ್ಯೂಲೇಷನ್‍‍ಗಳನ್ನು ಸಂದರ್ಶಕರಿಗೆ ತೋರಿಸಲೆಂದು ಇಡಲಾಗಿತ್ತು. ಎಲೆಕ್ಟ್ರಾನಿಕ್ ಸಿಸ್ಟಂ ಹೊಂದಿರುವ ಇನ್ನೊಂದು ಸಿಮ್ಯುಲೇಷನ್ ಅನ್ನು ಪ್ರದರ್ಶಿಸಲಾಯಿತು. ಈ ಸಿಸ್ಟಂ ವಾಹನಗಳನ್ನು ಪರಸ್ಪರ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಅಪಾಯಕಾರಿ ಪರಿಸ್ಥಿತಿ ಎದುರಾದಾಗ, ಮುಂಬರುವ ಅಪಾಯದ ಎರಡೂ ವಾಹನಗಳ ಚಾಲಕರನ್ನು ಎಚ್ಚರಿಸಲು ಡ್ಯಾಶ್‌ಬೋರ್ಡ್‌ನಲ್ಲಿ ವಾರ್ನಿಂಗ್ ಲೈಟ್ ಬರಲಿದೆ. ಕಾಂಟಿನೆಂಟಲ್ ಕಂಪನಿಯು, ವಿಶೇಷ ಕ್ಯಾಮೆರಾಗಳು ಹಾಗೂ ಸಾಫ್ಟ್‌ವೇರ್‌ಗಳನ್ನು ಬಳಸುವ ಏರ್‌ಬ್ಯಾಗ್ ನಿಯೋಜನಾ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಿದೆ. ಈ ಕ್ಯಾಮೆರಾ ಕಾರಿನಲ್ಲಿರುವವರ ಬಗ್ಗೆ, ಅವರ ಕಾಲುಗಳ ಚಲನೆಗಳ ಬಗ್ಗೆ ನಿಗಾವಹಿಸುತ್ತದೆ. ಯಾವುದೇ ರೀತಿಯ ಅಪಾಯಕಾರಿ ಪರಿಸ್ಥಿರಿ ಎದುರಾದರೆ, ಈ ಸಿಸ್ಟಂ ಕಾರಿನಲ್ಲಿರುವವರ ಕಾಲುಗಳ ಚಲನೆಯನ್ನು ಆಧರಿಸಿ ಏರ್‌ಬ್ಯಾಗ್‌ಗಳನ್ನು ನಿಯೋಜಿಸುತ್ತದೆ.

MOST READ: ಕುಸಿತ ಕಂಡ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಮಾರಾಟ

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಇದರಿಂದಾಗಿ ಏರ್‌ಬ್ಯಾಗ್, ದೇಹಕ್ಕೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಪ್ರದರ್ಶನದಲ್ಲಿ ಗಮನಸೆಳೆದ ತಂತ್ರಜ್ಞಾನವೆಂದರೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍ನ ಮೂಲಮಾದರಿ.

ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಮಾದರಿ

ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಮಾದರಿಯು ಭಾರತದ ಇವಿ ಮಾರುಕಟ್ಟೆಗೆ ಹೊಸದೇನಲ್ಲ. 2019ರ ಫ್ಯೂಚರ್ ಮೊಬಿಲಿಟಿ ಶೋನಲ್ಲಿ ಇದನ್ನು ಪ್ರದರ್ಶಿಸಿಲಾಗಿತ್ತು. ಆದರೆ, ಇದರ ಬಗ್ಗೆ ಆಗ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ. ಟೆಕ್ ತತ್ವಾದಲ್ಲಿ ಈ ಸ್ಕೂಟರ್‍‍ನ ಬಗ್ಗೆ ಸಂಪೂರ್ಣ ಮಾಹಿತಿ ದೊರೆತಿದೆ. ಕಾಂಟಿನೆಂಟಲ್ ಕಂಪನಿಯು, ಟೆಸ್ಟ್ ರೈಡ್‍‍ಗಳಿಗಾಗಿ ವೆಸ್ಪಾ ಜಿಟಿಎಕ್ಸ್ 150 ಸ್ಕೂಟರ್ ಅನ್ನು ಬಳಸುತ್ತಿದೆ. ಈ ಸ್ಕೂಟರ್ ಅನ್ನು ಸದ್ಯಕ್ಕೆ ಭಾರತದಲ್ಲಿ ಮಾರಾಟ ಮಾಡುತ್ತಿಲ್ಲ.

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಇಟಲಿಯ ಸ್ಕೂಟರ್ ತಯಾರಕ ಕಂಪನಿ ವೆಸ್ಪಾ, ಕಾಂಟಿನೆಂಟಲ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‍‍ನ ಅಭಿವೃದ್ಧಿಯಲ್ಲಿ ಯಾವುದೇ ಪಾತ್ರವನ್ನು ವಹಿಸುತ್ತಿಲ್ಲ. ಈ ಸ್ಕೂಟರ್‍ ಅನ್ನು ಕೇವಲ ಪರೀಕ್ಷಾರ್ಥವಾಗಿ ಬಳಸಲಾಗುತ್ತಿದೆ. ಈ ಸ್ಕೂಟರ್‍‍ನಲ್ಲಿರುವ ಡ್ರೈವ್‌ಟ್ರೇನ್ ಪೂರ್ಣವಾಗಿ ಹೊಸ ಡ್ರೈವ್‌ಟ್ರೇನ್ ಅಲ್ಲ. ಇದನ್ನು ಕಂಪನಿಯ ವಿವಿಧ ವಿಭಾಗಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ ವಿವಿಧ ಬಿಟ್‌ಗಳು ಮತ್ತು ತುಣುಕುಗಳಿಂದ ತಯಾರಿಸಲಾಗಿದೆ. ಉದಾಹರಣೆಗೆ ಮೋಟರ್ ಅನ್ನು ಪ್ರಯಾಣಿಕರ ಕಾರುಗಳಿಗಾಗಿ ಅಭಿವೃದ್ಧಿಪಡಿಸಿದ ಹೈಬ್ರಿಡ್ ಡ್ರೈವ್‌ಟ್ರೇನ್‌ನಿಂದ ತೆಗೆದುಕೊಳ್ಳಲಾಗಿದೆ.

MOST READ: ಇದು ಭಾರತದ ಬಲಿಷ್ಠ ಸ್ಕೋಡಾ ಕಾರ್ ಅಂತೆ..!

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಬ್ಯಾಟರಿ ಘಟಕವನ್ನೂ ಸಹ ಹಾಗೆಯೇ ಪಡೆಯಲಾಗಿದೆ. ಮೋಟರ್ ಅನ್ನು ವ್ಹೀಲ್‍‍ಗೆ ಸಂಪರ್ಕಿಸಲು ಬಳಸುವ ಬೆಲ್ಟ್ ಅನ್ನು ಕಾರ್ಬನ್ ಫೈಬರ್‍‍ನಿಂದ ತಯಾರಿಸಲಾಗಿದೆ. ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ವೆಸ್ಪಾ ಜಿಟಿಎಕ್ಸ್ 150 ಲಿಕ್ವಿಡ್ ಕೂಲ್ಡ್ ಹಾಗೂ ಕಾಂಟಿನೆಂಟಲ್ ಕಸ್ಟಮ್-ಫ್ಯಾಬ್ರಿಕೇಟೆಡ್‍‍ಗಳನ್ನು ಹೊಂದಿದ್ದು, ಅವುಗಳನ್ನು ಎಲೆಕ್ಟ್ರಿಕ್ ಡ್ರೈವ್‌ಟ್ರೇನ್‌ಗೆ ಸಂಪರ್ಕಿಸಲಾಗಿದೆ. ಈ ಎಲ್ಲದರ ಪರಿಣಾಮವಾಗಿ ಒಂದು ವಿಶಿಷ್ಟವಾದ ಸೆಟಪ್ ಸೃಷ್ಟಿಯಾಗಿದೆ. ಈ ರೀತಿಯ ಸೆಟ್‍ಅಪ್‍ಗಳು ಭಾರತಕ್ಕೆ ಇನ್ನೂ ಕಾಲಿಟ್ಟಿಲ್ಲ.

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಈ ಸ್ಕೂಟರ್‍ ಅನ್ನು ಕಾಂಟಿನೆಂಟಲ್ ಇಂಡಿಯಾ ಕಂಪನಿಯ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಟ್ಟಡದ ಸುತ್ತಲೂ ಚಲಾಯಿಸಲಾಯಿತು. ಹೆಚ್ಚು ಗಮನ ಸೆಳೆದದ್ದು ಈ ಸ್ಕೂಟರ್‍‍ನಲ್ಲಿರುವ ಆಕ್ಸೆಲೆರೇಷನ್. ಅಥರ್ 450 ಸ್ಕೂಟರ್ ಸೇರಿದಂತೆ ಭಾರತದ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಹೆಚ್ಚಿನ ವೇಗವನ್ನು ಹೊಂದಿದೆ. ಸದ್ಯಕ್ಕೆ ಪ್ರತಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಸ್ಕೂಟರ್‍ ಅನ್ನು 85 ಕಿ.ಮೀ ವೇಗದಲ್ಲಿ ಚಲಿಸುವಂತೆ ಮಾಡಲಾಗುವುದು.

MOST READ: ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ವೆಸ್ಪಾ ಜಿಟಿಎಕ್ಸ್ 150 ಸ್ಕೂಟ‍‍ರ್‍‍ನಲ್ಲಿ ಪ್ರಯಾಣಿಕರ ಕಾರುಗಳಿಗಾಗಿ ಅಭಿವೃದ್ಧಿಪಡಿಸಲಾಗಿರುವ ಮೋಟಾರ್ ಹಾಗೂ ಬ್ಯಾಟರಿಯನ್ನು ಅಳವಡಿಸಿರುವ ಕಾರಣ ಹೆಚ್ಚಿನ ತೂಕವನ್ನು ಹೊಂದಿದೆ. ಮೊದಲೇ ಹೇಳಿದಂತೆ ಕಾಂಟಿನೆಂಟಲ್ ಕಂಪನಿಯು ತನ್ನ ತಂತ್ರಜ್ಞಾನಗಳನ್ನು ವಿದ್ಯುತ್ ಸ್ಕೂಟರ್ ತಯಾರಿಸಲು ಆಸಕ್ತಿ ಹೊಂದಿರುವ ವಿವಿಧ ತಯಾರಕರಿಗೆ ತೋರಿಸಲು ಈ ಪ್ರದರ್ಶನವನ್ನು ಏರ್ಪಡಿಸಿತ್ತು. ಈ ಸ್ಕೂಟರ್‍‍ನಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 20 ಕಿ.ಮೀ ದೂರದವರೆಗೆ ಚಲಿಸುವುದು ಸೇರಿದಂತೆ ಅನೇಕ ಅನಾನುಕೂಲತೆಗಳಿವೆ. ಸೀಟ್‍‍ನ ಕೆಳಭಾಗದಲ್ಲಿ ಯಾವುದೇ ಸ್ಟೋರೇಜ್‍‍ಗಳಿಲ್ಲ.

ಬರಲಿವೆ ಕಾಂಟಿನೆಂಟಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಪ್ ಶ್ರೇಣಿಯ ಆಟೋಮೊಬೈಲ್ ಬಿಡಿಭಾಗಗಳ ಪೂರೈಕೆಯಲ್ಲಿ ಕಾಂಟಿನೆಂಟಲ್ ಕಂಪನಿಯು ಸಹ ಮುಂಚೂಣಿಯಲ್ಲಿದೆ. ಜರ್ಮನ್ ಮೂಲದ ಈ ಕಂಪನಿಯು ಎಲ್ಲಾ ಆಟೋಮೋಬೈಲ್ ಉದ್ಯಮದ ಬಹುತೇಕ ವಿಭಾಗಗಳಲ್ಲಿ ತನ್ನ ಹಿಡಿತವನ್ನು ಹೊಂದಿದೆ. ಪ್ರತಿ ಕ್ಷೇತ್ರದಲ್ಲೂ ಮುಂದುವರಿಯುತ್ತಿದೆ. ಪ್ರದರ್ಶಿಸಲಾದ ತಂತ್ರಜ್ಞಾನಗಳ ಪ್ರಕಾರ, ಹೊಸ ಸುರಕ್ಷಾ ನಿಯಮಗಳು, ಬಿಎಸ್6 ಮಾಲಿನ್ಯ ನಿಯಮಗಳು, ಎಲೆಕ್ಟ್ರಿಕ್ ವಾಹನಗಳೂ ಸೇರಿದಂತೆ, ಕಂಪನಿಯು ಭವಿಷ್ಯದಲ್ಲಿ ಬರಲಿರುವ ವಾಹನಗಳಿಗಾಗಿ ಸಿದ್ದವಾಗಿದೆ ಎಂದು ತಿಳಿಯುತ್ತದೆ.

Most Read Articles

Kannada
English summary
Continental Displays Futuristic Mobility Technologies And We Ride Their Electric Scooter - Read in kannada
Story first published: Monday, June 24, 2019, 12:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X