ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಶಬ್ದ ಮಾಲಿನ್ಯವು ಹಲವು ಕಾರಣಗಳಿಂದಾಗಿ ಉಂಟಾಗುತ್ತದೆ. ಕೆಲವು ವಾಹನ ಚಾಲಕರು ಮಾಡುವ ಕರ್ಕಶ ಹಾರ್ನ್‍‍ಗಳಿಂದಾಗಿ ಶಬ್ದ ಮಾಲಿನ್ಯವು ಉಂಟಾದರೆ, ಇನ್ನೂ ಕೆಲವರು ತಮ್ಮ ಬೈಕಿನಲ್ಲಿ ಅಳವಡಿಸಿರುವ ಮಾಡಿಫೈಗೊಂಡ ಸೈಲೆನ್ಸರ್‍‍ಗಳಿಂದಲೂ ಶಬ್ದ ಮಾಲಿನ್ಯ ಉಂಟಾಗುತ್ತದೆ. ಮಾಡಿಫೈಗೊಂಡಿರುವ ಸೈಲೆನ್ಸರ್‍‍ಗಳನ್ನು ಬಳಸುವುದು ಅಕ್ರಮ ಹಾಗೂ ಕಾನೂನುಬಾಹಿರ.

ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಈ ಹಿಂದೆ ಪೊಲೀಸರು ಅಕ್ರಮವಾಗಿ ಮಾಡಿಫೈಗೊಳಿಸಿ ಬಳಸುತ್ತಿದ್ದ ಸೈಲೆನ್ಸರ್‍‍ಗಳನ್ನು ನಾಶಪಡಿಸಿದ್ದ ಬಗ್ಗೆ ವರದಿಯಾಗಿತ್ತು. ಈಗ ಇದೇ ರೀತಿಯ ಅಭಿಯಾನವನ್ನು ದೆಹಲಿ ಪೊಲೀಸರು ಶುರು ಮಾಡಿದ್ದಾರೆ. ಮಾಡಿಫೈಗೊಂಡ ಸೈಲೆನ್ಸರ್‍‍ಗಳನ್ನು ಬಳಸುತ್ತಿದ್ದ ರಾಯಲ್ ಎನ್‍‍ಫೀಲ್ಡ್ ಬೈಕುಗಳನ್ನು ವಶಕ್ಕೆ ಪಡೆದು, ಸೈಲೆನ್ಸರ್‍‍ಗಳನ್ನು ನಾಶಪಡಿಸಿದ್ದಾರೆ. ಈ ಅಭಿಯಾನದ ವೀಡಿಯೊವನ್ನು ರಾಯಲ್ ಸೊಲ್ಜರ್ ಯೂಟ್ಯೂಬ್‍‍ನಲ್ಲಿ ಅಪ್‍‍ಲೋಡ್ ಮಾಡಿದೆ.

ಪೊಲೀಸರು ಕಾನೂನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ತಂಡವೊಂದನ್ನು ರಚಿಸಿದ್ದರು. ಮಾಡಿಫೈಗೊಂಡ ಸೈಲೆನ್ಸರ್‍‍ಗಳನ್ನು ಮತ್ತೆ ಬಳಸಬಾರದೆಂಬ ಕಾರಣಕ್ಕೆ, ಬೈಕುಗಳಲ್ಲಿದ್ದ ಸೈಲೆನ್ಸರ್‍‍ಗಳನ್ನು ಸ್ಥಳದಲ್ಲಿಯೇ ತೆಗೆದು ಹಾಕಿದರು.

ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಪೊಲೀಸರ ತಂಡವು ಸ್ಥಳದಲ್ಲಿಯೇ ಸೈಲೆನ್ಸರ್‍‍‍ಗಳನ್ನು ಬೈಕುಗಳಿಂದ ಹೊರತೆಗೆದು ಅವುಗಳನ್ನು ಮಾರ್ಕ್ ಮಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಸೈಲೆನ್ಸರ್ ಇಲ್ಲದೇ ಬೈಕುಗಳನ್ನು ಚಲಾಯಿಸಲು ಅನುಮತಿ ನೀಡಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ.

ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಸೈಲೆನ್ಸರ್‍‍‍ಗಳಿಲ್ಲದಿದ್ದರೆ ಯಾವುದೇ ಬೈಕುಗಳು ಹೆಚ್ಚಿನ ಶಬ್ದವನ್ನುಂಟು ಮಾಡುತ್ತವೆ. ಇನ್ನೂ ರಾಯಲ್ ಎನ್‌ಫೀಲ್ಡ್ ಬೈಕುಗಳ ಶಬ್ದದ ಬಗ್ಗೆಯಂತೂ ಹೇಳುವುದೇ ಬೇಡ. ಸೈಲೆನ್ಸರ್‍‍‍ಗಳ ಹೊರತಾಗಿ, ಪೊಲೀಸರು ಕರ್ಕಶವಾಗಿ ಹಾರ್ನ್ ಮಾಡುತ್ತಿದ್ದ ಬೈಕುಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.

ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ನಿರ್ದಿಷ್ಟ ಮಟ್ಟವನ್ನು ಮೀರಿ ಹಾರ್ನ್ ಮಾಡುವುದು ಭಾರತದಲ್ಲಿ ಕಾನೂನುಬಾಹಿರವಾಗಿದ್ದು, ಶಬ್ದ ಮಾಲಿನ್ಯವನ್ನು ಸೃಷ್ಟಿಸಿದ ಕಾರಣಕ್ಕೆ ಪ್ರಕರಣ ದಾಖಲಿಸಬಹುದು. ಈ ವೀಡಿಯೊದಲ್ಲಿ ಪೊಲೀಸರು ಹಾರ್ನ್‍‍ಗಳನ್ನು ಬೈಕುಗಳಿಂದ ಹೊರತೆಗೆಯುತ್ತಿರುವುದನ್ನು ಸಹ ಕಾಣಬಹುದು.

ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಸೈಲೆನ್ಸರ್‍‍ಗಳ ಜೊತೆಗೆ ಕರ್ಕಶವಾಗಿ ಶಬ್ದವನ್ನುಂಟು ಮಾಡುತ್ತಿದ್ದ ಎಲ್ಲಾ ರೀತಿಯ ಹಾರ್ನ್‍‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ, ಹಲವು ರಾಜ್ಯಗಳ ಪೊಲೀಸರು ರಾಯಲ್ ಎನ್‌ಫೀಲ್ಡ್ ಬೈಕುಗಳ ವಿರುದ್ಧ ಇದೇ ರೀತಿಯ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಅನೇಕ ರಾಜ್ಯಗಳಲ್ಲಿ, ಸೈಲೆನ್ಸರ್‍‍ಗಳನ್ನು ಸಂಪೂರ್ಣವಾಗಿ ನಾಶಮಾಡುವಂತಹ ಕ್ರಮಗಳನ್ನು ಪೊಲೀಸರು ತೆಗೆದುಕೊಂಡಿದ್ದರು.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಸೈಲೆನ್ಸರ್ ಅನ್ನು ಅರ್ಧದಷ್ಟು ಕತ್ತರಿಸಲು ಮಹಾರಾಷ್ಟ್ರ ಪೊಲೀಸರು ವಿಶೇಷ ಸಾಧನವನ್ನು ಬಳಸಿದ್ದರೆ, ಮಧ್ಯಪ್ರದೇಶದ ಪೊಲೀಸರು ಬೃಹತ್ ಗಾತ್ರದ ರೋಡ್ ರೋಲರ್ ಅನ್ನು ಬಳಸಿ ಸೈಲೆನ್ಸರ್‍‍‍ಗಳನ್ನು ಸಂಪೂರ್ಣವಾಗಿ ಸಾರ್ವಜನಿಕರ ಎದುರಲ್ಲೇ ನಾಶಪಡಿಸಿದ್ದರು.

MOST READ: ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಬೇರೆಯವರು ಮುಂದಿನ ದಿನಗಳಲ್ಲಿ ಹೆಚ್ಚು ಶಬ್ದವನ್ನುಂಟು ಮಾಡುವ ಸೈಲೆನ್ಸರ್‍‍‍ಗಳನ್ನು ಬಳಸದಿರಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದರು. ಈ ಮೊದಲು ಪೊಲೀಸರು ಬೈಕುಗಳನ್ನು ವಶಪಡಿಸಿಕೊಳ್ಳುತ್ತಿದ್ದರು ಅಥವಾ ಮಾಲೀಕರಿಂದ ಡಾಕ್ಯುಮೆಂಟ್ ಅನ್ನು ವಶಪಡಿಸಿಕೊಳ್ಳುತ್ತಿದ್ದರು.

MOST READ: ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಬೈಕ್ ಮಾಲೀಕರು ಪುನ: ಹಳೆಯ ಸೈಲೆನ್ಸರ್‍‍‍ಗಳನ್ನು ಅಳವಡಿಸಿಕೊಂಡ ನಂತರ ಹಾಗೂ ಆರ್‍‍ಟಿ‍ಒ ಅಧಿಕಾರಿಗಳ ಪರಿಶೀಲನೆಯ ನಂತರ ಡಾಕ್ಯುಮೆಂಟ್‍‍ಗಳನ್ನು ವಾಪಸ್ ನೀಡುತ್ತಿದ್ದರು. ಕರ್ಕಶವಾಗಿ ಶಬ್ದವನ್ನುಂಟು ಮಾಡುವ ಸೈಲೆನ್ಸರ್‍‍‍ಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ.

ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ರಾಯಲ್ ಎನ್‌ಫೀಲ್ಡ್ ಕಂಪನಿಯು ಅಧಿಕೃತವಾಗಿವೇ ಈ ರೀತಿಯ ಸೈಲೆನ್ಸರ್‍‍‍ಗಳನ್ನು ಮಾರಾಟ ಮಾಡುತ್ತದೆ. ಬೈಕುಗಳಲ್ಲಿ ಈ ರೀತಿಯ ಸೈಲೆನ್ಸರ್‍‍‍ಗಳನ್ನು ಅಳವಡಿಸಿ ಕೊಳ್ಳುವುದು ಕಾನೂನುಬಾಹಿರವಲ್ಲ, ಆದರೆ ಸಾರ್ವಜನಿಕ ರಸ್ತೆಗಳಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಮಾಡುವುದು ಕಾನೂನುಬಾಹಿರ. ಹೆಚ್ಚು ಶಬ್ದವನ್ನುಂಟು ಮಾಡುವ ಬೈಕುಗಳನ್ನು ರೇಸ್ ಟ್ರ್ಯಾಕ್‌ಗಳಲ್ಲಿ ಅಥವಾ ಫಾರ್ಮ್‌ಹೌಸ್‌ಗಳಂತಹ ಖಾಸಗಿ ಸ್ಥಳಗಳಲ್ಲಿ ಬಳಸಬಹುದಾಗಿದೆ.

Most Read Articles

Kannada
English summary
Cops removes Royal Enfield motorcycle silencers - Read in kannada
Story first published: Tuesday, August 13, 2019, 12:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X