ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಜಗತ್ತಿನಾದ್ಯಂತ ಅತಿ ಹೆಚ್ಚು ಸುರಕ್ಷತೆಯುಳ್ಳ ಹೊಸ ವಾಹನಗಳ ಅಭಿವೃದ್ಧಿಗಾಗಿ ತರೇವಾರಿ ಸಂಶೋಧನೆಗಳು ನಡೆಯುತ್ತಿದ್ದು, ವಾಹನ ಸವಾರರಿಗೆ ಗರಿಷ್ಠ ಭದ್ರತೆ ಒದಗಿಸುವುದೇ ಇದರ ಮೂಲ ಉದ್ದೇಶವಾಗಿದೆ.

ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಈ ನಿಟ್ಟಿನಲ್ಲಿ ವಾಹನಗಳ ಸುರಕ್ಷಾ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯೊಂದು ಇದೀಗ ಹೊಸ ಮಾದರಿಯ ಬೈಕ್ ಮಾದರಿಯೊಂದು ಸಿದ್ದಪಡಿಸಿದ್ದು, ಈ ಬೈಕ್ ಅನ್ನು ನಿಮಗೆ ಬೇಕಾದ ಹಾಗೆ ರೈಡಿಂಗ್ ಮಾಡಬಹುದಲ್ಲದೇ ಆಗಬಹುದಾದ ಅಪಘಾತಗಳನ್ನು ತಪ್ಪಿಸುವ ವಿಶೇಷ ಗುಣವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ. ಕೆನಡಾದ ವ್ಯಾನ್‍‍ಕೋರ್‍‍ನಲ್ಲಿರುವ ಡೆಮೊನ್ ಮೋಟಾರ್‍‍ಸೈಕಲ್ ಟೆಕ್ನಾಲಜಿ ಕಂಪನಿಯು, ಡೆಮೊನ್ ಎಕ್ಸ್ ಎಂಬ ಹೆಸರಿನ ಮೂಲ ಮಾದರಿಯ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಈ ಬೈಕಿನಲ್ಲಿ ಅಳವಡಿಸಲಾಗಿರುವ ಹೊಸ ಸುಧಾರಿತ ತಂತ್ರಜ್ಞಾನವನ್ನು ಈ ಮೊದಲು ಪ್ರಪಂಚದ ಯಾವುದೇ ಬೈಕುಗಳಲ್ಲಿ ಅಳವಡಿಸಿರಲಿಲ್ಲ. ವೇರಿಯಬಲ್ ರೈಡಿಂಗ್ ಪೊಸಿಷನ್ ಹಾಗೂ ಟ್ರಾಫಿಕ್ ಟ್ರಾಕಿಂಗ್ ಕೊಲ್ಯುಷನ್ ವಾರ್ನಿಂಗ್ ಸಿಸ್ಟಂ ಎಂಬ ಎರಡು ಹೊಸ ತಂತ್ರಜ್ಞಾನಗಳನ್ನು ಅಳವಡಿಸುತ್ತಿದೆ.

ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಇವುಗಳಿಂದಾಗಿ ಬೈಕ್ ಸವಾರರು ರಸ್ತೆಗಳಲ್ಲಿ ಬೈಕ್ ಚಲಾಯಿಸುವಾಗ ಹೆಚ್ಚಿನ ಸುರಕ್ಷತೆಯನ್ನು ಪಡೆಯಲಿದ್ದಾರೆ. ಈ ಯೋಜನೆಯ ಜೊತೆಗೆ ಡೆಮೊನ್ ಕಂಪನಿಯು ಎಲೆಕ್ಟ್ರಿಕ್ ಬೈಕುಗಳನ್ನು ಸಹ ಅಭಿವೃದ್ಧಿಪಡಿಸಲಿದೆ. ಕಂಪನಿಯು ಈ ಯೋಜನೆಗಳಿಗಾಗಿ 2.5 ಮಿಲಿಯನ್ ಕೆನಡಿಯನ್ ಡಾಲರ್‍‍ಗಳನ್ನು ಮೀಸಲಿರಿಸಿದೆ.

ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಡೆಮೊನ್ ಕಂಪನಿಯು ಅಭಿವೃದ್ಧಿ ಪಡಿಸಿರುವ ಈ ತಂತ್ರಜ್ಞಾನವನ್ನು ಫ್ಯಾಕ್ಟರಿಗಳಲ್ಲೂ ಸಹ ಬಳಸಬಹುದು. ಈ ತಂತ್ರಜ್ಞಾನವನ್ನು ವಿಶ್ವದಲ್ಲಿರುವ ಬೇರೆ ಬೇರೆ ಬೈಕ್ ತಯಾರಕ ಕಂಪನಿಗಳಿಗೂ ಸಹ ಪೂರೈಸಲಿದೆ. ವೇರಿಯಬಲ್ ರೈಡಿಂಗ್ ಪೊಸಿಷನ್‍‍ನಿಂದಾಗಿ ಬೈಕ್ ಸವಾರರು ತಮ್ಮ ರೈಡಿಂಗ್ ಭಂಗಿಗಳನ್ನು ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಿಕೊಳ್ಳಬಹುದಾಗಿದೆ. ಸವಾರನು ಸೀಟುಗಳನ್ನು, ಫುಟ್‍‍ಪೆಗ್‍‍ಗಳನ್ನು, ಹ್ಯಾಂಡಲ್‍‍ಬಾರ್‍‍ಗಳ ಮೇಲಿರುವ ಕ್ಲಿಪ್‍‍ಗಳನ್ನು ಮೇಲೆ ಕೆಳಗೆ, ಮಾಡಿಕೊಳ್ಳಬಹುದು.

ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಹೈವೇಗಳಲ್ಲಿ ಚಲಿಸುವಾಗ ಸವಾರನು ಹ್ಯಾಂಡಲ್‍‍ಬಾರ್‍‍ಗಳನ್ನು ತನ್ನತ್ತ ಸೆಳೆಯಬಹುದು ಅಥವಾ ಫುಟ್ ಪೆಗ್‍‍ಗಳನ್ನು ಕೆಳಗಿಳಿಸಬಹುದು. ಇದರಿಂದಾಗಿ ಆರಾಮದಾಯಕ ರೈಡಿಂಗ್ ಭಂಗಿಗಳನ್ನು ಪಡೆಯಬಹುದು. ಸವಾರನು ತನ್ನ ಅನುಕೂಲಕ್ಕೆ ತಕ್ಕಂತೆ ಫುಟ್‍‍ಪೆಗ್‍‍ಗಳನ್ನು ಹಾಗೂ ಸೀಟುಗಳನ್ನು ಎತ್ತರಿಸಬಹುದು.

MOST READ: ಬಿ‍ಎಸ್6 ಎಂಜಿನ್‍‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍‍ಗಳು

ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಇದರಿಂದಾಗಿ ಬೆಟ್ಟ ಗುಡ್ಡಗಳಲ್ಲಿ ಚಲಿಸುವಾಗ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಪಡೆಯಬಹುದು. ಇನ್ನು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಡೆಮೊನ್ ಕಂಪನಿಯು, ಅಡ್ವಾನ್ಸ್ಡ್ ವಾರ್ನಿಂಗ್ ಸಿಸ್ಟಂ ಫಾರ್ ಮೋಟಾರ್‍‍ಸೈಕಲ್ಸ್ (ಎ‍‍‍ಡಬ್ಲ್ಯು‍ಎಸ್‍ಎಂ) ಎಂಬ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಈ ಸುರಕ್ಷಾ ವ್ಯವಸ್ಥೆಯಲ್ಲಿ ರಾಡಾರ್, ಕ್ಯಾಮರಾ, ಸೆನ್ಸಾರ್ ಹಾಗೂ ನ್ಯೂಟ್ರಲ್ ನೆಟ್ ಕಂಪ್ಯೂಟರ್ ಆನ್ ಬೋರ್ಡ್ ಹೊಂದಿದ್ದು, ಇವು ಬೈಕ್ ಚಲಿಸುವಾಗ ಸುತ್ತಲಿರುವ 64 ತರಹದ ವಸ್ತುಗಳನ್ನು ಟ್ರಾಕ್ ಮಾಡುತ್ತವೆ.

MOST READ: ನಾಳೆ ಅನಾವರಣಗೊಳ್ಳಲಿದೆ ರಿವೋಲ್ಟ್ ಇ-ಬೈಕ್

ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಬೈಕ್ ಚಲಾಯಿಸುವಾಗ ಯಾವುದೇ ಅಪಾಯ ಕಂಡು ಬಂದಲ್ಲಿ, ಬೈಕಿನ ಕಾಕ್‍‍ಪಿಟ್‍‍ನಲ್ಲಿರುವ ಅಳವಡಿಸಲಾಗಿರುವ ಎಲ್‍ಇ‍‍ಡಿ ಸ್ಟ್ರಿಪ್‍‍ಗಳು ತಕ್ಷಣವೇ ಚಾಲಕನಿಗೆ ಮುನ್ಸೂಚನೆ ನೀಡುತ್ತವೆ. ಇದರಿಂದಾಗಿ ಸವಾರನಿಗೆ ಬೈಕಿಗೆ ಎದುರಾಗ ಬಹುದಾದ ಅಪಾಯದ ಬಗ್ಗೆ ಅರಿವು ಮೂಡಲಿದೆ.

ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಹ್ಯಾಂಡಲ್‍‍ಬಾರ್ ಗ್ರಿಪ್‍‍ಗಳು ಹಾಗೂ ಸೀಟುಗಳಲ್ಲಿರುವ ವೈಬ್ರೇಷನ್ ಯೂನಿಟ್‍‍ಗಳೂ ಸಹ ಬೈಕ್ ಸವಾರನಿಗೆ ಮುನ್ಸೂಚನೆ ನೀಡುತ್ತವೆ. ಇದರಲ್ಲಿರುವ ಸುರಕ್ಷತಾ ಸಿಸ್ಟಂಗಳನ್ನು 5ಜಿ ಕನೆಕ್ಷನ್‍‍ಗಳ ಸಹಾಯದಿಂದ ಡೆಮೊನ್‍‍ಗಳ ಆನ್‍‍ಬೋರ್ಡ್‍‍ಗೆ ಜೋಡಿಸಲಾಗಿದೆ.

MOST READ: ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಡೆಮೊನ್ ಕಂಪನಿಯು ಈಗಾಗಲೇ ಮೂಲ ಮಾದರಿಯನ್ನು ಪರೀಕ್ಷಿಸಿದೆ. ಎ‍‍ಡಬ್ಲ್ಯು‍ಎಸ್‍ಎಂ ಸಿಸ್ಟಂ ಅನ್ನು ಪಶ್ಚಿಮ ವ್ಯಾಕೋವರ್ ಪೊಲೀಸ್ ಇಲಾಖೆಗೂ ಸಹ ಪೂರೈಸಿದೆ.

Most Read Articles

Kannada
English summary
Damon X Could Be The Safety Motorcycle Ever With Advanced Technologies - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X