ಜೂನ್ ಕೊನೆಯ ವಾರದಿಂದ ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು..

ನವೆಂಬರ್ 2018ರಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಎಂಟ್ರಿ ಕೊಟ್ಟ ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ಈ ಹಿಂದೆಯೆ ತಮ್ಮ ಕೆಲ ಗ್ರಾಹಕರಿಗೆ ಬೈಕ್‍ಗಳ ವಿತರಣೆಯನ್ನು ಮಾಡಲಾಗಿದ್ದು, ಇದೀಗ ಸಂಸ್ಥೆಯ ಸ್ಥಾಪಕರು ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಇದೇ ತಿಂಗಳ ಕೊನೆಯ ವಾರದಿಂದ ವಿತರಣೆಯನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗಿದೆ.

ಜೂನ್ ಕೊನೆಯ ವಾರದಿಂದ ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು..

ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ಇಲ್ಲಿಯ ವರೆಗೂ ಎಷ್ಟು ವಾಹನಗಳಿಗಾಗಿ ಬುಕ್ಕಿಂಗ್ ಪಡೆದಿದೆ ಎಂಬ ಸರಿಯಾದ ಮಾಹಿತನ್ನು ಹೊರಹಾಕಿಲ್ಲವಾಗಿದ್ದು, ಎಷ್ಟು ಬೈಕ್‍ಗಳನ್ನು ವಿತರಣೆ ಮಾಡಿದೆ ಎಂಬ ಮಾಹಿತಿಯನ್ನು ಕೂಡಾ ಹೊರಹಾಕಿಲ್ಲ. ಆದರೆ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚುರರ್ಸ್ ವರದಿ ಪ್ರಕಾರ ನವೆಂಬರ್ 2018 ರಿಂದ ಮಾರ್ಚ್ 2019ರ ವರೆಗು ಕೇವಲ 255 ಬೈಕ್‍ಗಳನ್ನು ಸಂಸ್ಥೆಯು ಡಿಸ್‍ಪ್ಯಾಚ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಜೂನ್ ಕೊನೆಯ ವಾರದಿಂದ ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು..

ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

ಜೂನ್ ಕೊನೆಯ ವಾರದಿಂದ ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು..

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಜೂನ್ ಕೊನೆಯ ವಾರದಿಂದ ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು..

ಇನ್ನು ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಜೂನ್ ಕೊನೆಯ ವಾರದಿಂದ ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು..

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜೂನ್ ಕೊನೆಯ ವಾರದಿಂದ ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು..

ಇದರಲ್ಲಿ ಬಾಬ್ಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ. ಇದು ಜಾವಾ ಸಂಸ್ಥೆಯಿಂದಲೇ ಮಾಡಿಫೈಗೊಂಡ ಮೊದಲ ಬೈಕ್ ಮಾದರಿಯಾಗಿದ್ದು, ಇದೇ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಜೂನ್ ಕೊನೆಯ ವಾರದಿಂದ ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು..

ಈ ಮೂಲಕ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಭರ್ಜರಿ ಪೈಪೋಟಿ ನೀಡಲು ಸಜ್ಜಾಗಿರುವ ಜಾವಾ ಸಂಸ್ಥೆಯು ಬೈಕ್ ವಿತರಣೆಯೊಂದಿಗೆ ಮತ್ತಷ್ಟು ಬೈಕ್ ಮಾರಾಟ ಮಳಿಗೆಗಳನ್ನು ತೆರೆಯುವ ಇರಾದೆಯಲ್ಲಿದ್ದು, ಆರ್‌ಇ ಬೈಕ್ ಪ್ರಿಯರನ್ನು ತನ್ನತ್ತ ಸೆಳೆಯಲು ಹಲವು ಯೋಜನೆಗಳನ್ನು ರೂಪಿಸಿದೆ.

ಜೂನ್ ಕೊನೆಯ ವಾರದಿಂದ ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು..

ಲಭ್ಯವಿರುವ ಬಣ್ಣಗಳು

ಜಾವಾ ಬಿಡುಗಡೆಗೊಳಿಸಿದ ಈ ಎರಡೂ ಬೈಕ್‍ಗಳು ಆಕರ್ಷಕ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಜಾವಾ ಬೈಕ್ - ಜಾವಾ ಬ್ಲಾಕ್, ಜಾವಾ ಮರೂನ್ ಮತ್ತು ಜಾವಾ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಜೂನ್ ಕೊನೆಯ ವಾರದಿಂದ ಡ್ಯುಯಲ್ ಚಾನಲ್ ಎಬಿಎಸ್ ಜಾವಾ ಬೈಕ್‍ಗಳ ವಿತರಣೆ ಶುರು..

ಇನ್ನು ಜಾವಾ 42 ಬೈಕ್ ಹಾಲಿಸ್ ಟೀಲ್, ಗ್ಲಾಕ್ಟಿಕ್ ಗ್ರೀನ್, ಸ್ಟಾರ್‍‍ಲೈಟ್ ಬ್ಲೂ, ಲುಮೊಸ್ ಲೈಮ್, ನೆಬ್ಯುಲಾ ಬ್ಲೂ ಮತ್ತು ಕೊಮೆಟ್ ರೆಡ್ ಎಂಬ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Dual Channel ABS Jawa Bikes Delivery Starts From Last Week Of June. Read In Kannada
Story first published: Thursday, June 20, 2019, 9:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X