ಕನ್ಫರ್ಮ್ ಆಯ್ತು ಡುಕಾಟಿ 950 ಬಿಡುಗಡೆಯ ದಿನಾಂಕ

ಡುಕಾಟಿ ಕಂಪನಿಯು ತನ್ನ ಹೊಸ ಹೈಪರ್‍‍ಮೋಟಾರ್ಡ್ 950 ಬೈಕಿನ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಈ ಬೈಕ್ ಭಾರತದಲ್ಲಿ ಜೂನ್ 12 ರಂದು ಬಿಡುಗಡೆಯಾಗಲಿದೆ. ಈ ಬೈಕ್ ಅನ್ನು ಮೊದಲ ಬಾರಿಗೆ 2018 ಅಕ್ಟೋಬರ್‍‍ನಲ್ಲಿ ಇ‍ಐ‍‍ಸಿ‍ಎಂ‍ಎ ಆಟೋ ಶೋದಲ್ಲಿ ಅನಾವರಣಗೊಳಿಸಲಾಗಿತ್ತು.

ಕನ್ಫರ್ಮ್ ಆಯ್ತು ಡುಕಾಟಿ 950 ಬಿಡುಗಡೆಯ ದಿನಾಂಕ

ಹೈಪರ್‍‍ಮೋಟಾರ್ಡ್ 950 ಬೈಕ್ ಸ್ಟಾಂಡರ್ಡ್ ಹಾಗೂ ಎಸ್‍‍ಪಿ ಎಂಬ ಎರಡು ಮಾದರಿಗಳಲ್ಲಿ ದೊರೆಯಲಿದೆ. ಡುಕಾಟಿ ಹೈಪರ್‍‍ಮೋಟಾರ್ಡ್ ಬೈಕ್ ಸಂಪೂರ್ಣವಾಗಿ ಹೊಸ ಮಾದರಿಯ ಬೈಕ್ ಆಗಿದ್ದು, ಹೊಸ ವಿನ್ಯಾಸದ ಸ್ಟೈಲ್, ಹೊಸ ಎಂಜಿನ್, ಅಪ್‍‍ಡೇಟ್ ಆಗಿರುವ ಚಾಸೀಸ್, ಸಸ್ಪೆಂಷನ್ ಹಾಗೂ ಎಲೆಕ್ಟ್ರಾನಿಕ್ಸ್ ಗಳನ್ನು ಹೊಂದಿರಲಿದೆ. ಹೈಪರ್‍‍ಮೋಟಾರ್ಡ್ 950 ಬೈಕ್ ಈಗಿರುವ ಹೈಪರ್‍‍ಮೋಟಾರ್ಡ್ 939 ಬೈಕಿನ ಬದಲಿಗೆ ಬಿಡುಗಡೆಯಾಗಲಿದೆ.

ಕನ್ಫರ್ಮ್ ಆಯ್ತು ಡುಕಾಟಿ 950 ಬಿಡುಗಡೆಯ ದಿನಾಂಕ

ಈ ಬೈಕಿನಲ್ಲಿ 937ಸಿಸಿ ಟೆಸ್ಟಾ‍‍ಸ್ಟ್ರೆಟ್ಟಾ ಎಲ್-ಟ್ವಿನ್ ಎಂಜಿನ್ ಅಳವಡಿಸಲಾಗಿದ್ದು, 114 ಬಿ‍‍ಹೆಚ್‍‍ಪಿಯನ್ನು 9000 ಆರ್‍‍ಪಿ‍ಎಂನಲ್ಲಿ ಹಾಗೂ 96 ಎನ್‍ಎಂ ಟಾರ್ಕ್ ಅನ್ನು 7,250 ಆರ್‍‍ಪಿ‍ಎಂನಲ್ಲಿ ಉತ್ಪಾದಿಸಲಿದೆ.

ಕನ್ಫರ್ಮ್ ಆಯ್ತು ಡುಕಾಟಿ 950 ಬಿಡುಗಡೆಯ ದಿನಾಂಕ

ಈ ಎಂಜಿನ್‍ 6 ಸ್ಪೀಡಿನ ಗೇರ್‍‍ಬಾಕ್ಸ್ ಹೊಂದಿರಲಿದೆ. ಇದರ ಜೊತೆಗೆ ಹೆಚ್ಚಿನ ಕಂಪ್ರೇಷನ್, ಹೊಸದಾದ ಎಂಜಿನ್ ಮ್ಯಾಪಿಂಗ್, ಎಕ್ಸಾಸ್ಟ್ ಕ್ಯಾಮ್ ಪ್ರೊಫೈಲ್ ಹಾಗೂ 53 ಎಂಎಂ ಥ್ರಾಟಲ್ ಬಾಡಿಗಳನ್ನು ಹೊಂದಿರಲಿದೆ.

ಕನ್ಫರ್ಮ್ ಆಯ್ತು ಡುಕಾಟಿ 950 ಬಿಡುಗಡೆಯ ದಿನಾಂಕ

ಸ್ಟಾಂಡರ್ಡ್ ಮಾದರಿಯ ಡುಕಾಟಿ ಹೈಪರ್‍‍ಮೋಟಾರ್ಡ್ 950 ಬೈಕಿನಲ್ಲಿ ಮರ್ಜೊಕಿಯ ಅಡ್ಜಸ್ಟಬಲ್ ಫ್ರಂಟ್ ಫೋರ್ಕ್ ಹಾಗೂ ಸಾಚ್‍‍ನ ಮೊನೊಶಾಕ್ ಸಸ್ಪೆಂಷನ್‍‍ಗಳನ್ನು ಅಳವಡಿಸಲಾಗಿದೆ. ಹೈಪರ್‍‍ಮೋಟಾರ್ಡ್ 950 ಎಸ್‍‍ಪಿ ಬೈಕಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಒಹ್ಲಿನ್‍‍ನ ಸಸ್ಪೆಂಷನ್‍‍‍ಗಳನ್ನು ಅಳವಡಿಸಲಾಗಿದೆ. ಇನ್ನೂ ಎಸ್‍‍ಪಿ ಮಾದರಿಯ ಬೈಕಿನಲ್ಲಿ ಹಗುರವಾದ ಮಾರ್ಕೆಸಿನಿ ಫೋರ್ಜ್ಡ್ ವ್ಹೀಲ್‍‍ಗಳನ್ನು ಅಳವಡಿಸಲಾಗಿರುವ ಕಾರಣ ಸ್ಟಾಂಡರ್ಡ್ ಮಾದರಿಯ ಬೈಕಿಗಿಂತ 2 ಕೆ.ಜಿ ಕಡಿಮೆ ತೂಕ ಹೊಂದಿರಲಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಕನ್ಫರ್ಮ್ ಆಯ್ತು ಡುಕಾಟಿ 950 ಬಿಡುಗಡೆಯ ದಿನಾಂಕ

ಎಸ್‍‍ಪಿ ಮಾದರಿಯ ಡುಕಾಟಿ ಬೈಕ್ ಸ್ಟಾಂಡರ್ಡ್ ಮಾದರಿಗಿಂತ 120 ಎಂಎಂ ಹೆಚ್ಚಿನ ಸೀಟ್ ಹೈಟ್ ಹೊಂದಿದ್ದು, ಒಟ್ಟಾರೆಯಾಗಿ 890 ಎಂಎಂ ಸೀಟ್ ಹೈಟ್ ಹೊಂದಿರಲಿದೆ. ಇದರ ಹೊರತಾಗಿ ಎರಡೂ ಮಾದರಿಯ ಡುಕಾಟಿ ಹೈಪರ್‍‍ಮೋಟಾರ್ಡ್ 950 ಬೈಕುಗಳಲ್ಲಿ ಬಹಳಷ್ಟು ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಅಳವಡಿಸಲಾಗಿದೆ.

MOST READ: ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಕನ್ಫರ್ಮ್ ಆಯ್ತು ಡುಕಾಟಿ 950 ಬಿಡುಗಡೆಯ ದಿನಾಂಕ

ಇವುಗಳಲ್ಲಿ ಬಾಷ್‍‍ನ ಕಾರ್ನರಿಂಗ್ ಎ‍‍ಬಿ‍ಎಸ್, ವ್ಹೀಲಿ ಕಂಟ್ರೋಲ್, ಸ್ಪೋರ್ಟ್, ಟೂರಿಂಗ್ ಹಾಗೂ ಅರ್ಬನ್ ಎಂಬ ಮೂರು ವಿಧದ ರೈಡಿಂಗ್ ಮೋಡ್‍‍ಗಳು ಹಾಗೂ 4.3 ಇಂಚಿನ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಟ್ರಾಕ್ಷನ್ ಕಂಟ್ರೋಲ್‍‍ಗಳು ಸೇರಿವೆ.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಕನ್ಫರ್ಮ್ ಆಯ್ತು ಡುಕಾಟಿ 950 ಬಿಡುಗಡೆಯ ದಿನಾಂಕ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಡುಕಾಟಿಯ ಹೊಸ ಹೈಪರ್‍‍ಮೋಟಾರ್ಡ್ 950 ಬೈಕ್ ಈಗಿರುವ ಹೈಪರ್‍‍ಮೋಟಾರ್ಡ್ 939 ಬೈಕಿನ ಬದಲಿಗೆ ರಸ್ತೆಗಿಳಿಯಲಿದೆ. ಮೊದಲು ಸ್ಟಾಂಡರ್ಡ್ ಮಾದರಿಯ ಬೈಕ್ ಅನ್ನು ಬಿಡುಗಡೆಗೊಳಿಸಿ, ನಂತರ ಎಸ್‍‍ಪಿ ಮಾದರಿಯ ಬೈಕ್ ಅನ್ನು ಬಿಡುಗಡೆಗೊಳಿಸಲಾಗುವುದು. ಸ್ಟಾಂಡರ್ಡ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.11 ರಿಂದ 12 ಲಕ್ಷಗಳಾಗಲಿದೆ. ಬಿಡುಗಡೆಯ ನಂತರ ಏಪ್ರಿಲಿಯಾದ ಡೊರ್ಸೊಡ್ಯೂರೊ 900 ಬೈಕಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಡುಕಾಟಿ ducati
English summary
Ducati Hypermotard 950 India Launch Dates Confirmed — Receives Revised Styling & Electronic Updates - Read in kannada
Story first published: Monday, June 10, 2019, 10:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X