ವಿ ಮೊಟೊ ಜೊತೆಗೂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಡುಕಾಟಿ

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಸಾಮಾನ್ಯ ಆವೃತ್ತಿಗಳನ್ನು ಎಲೆಕ್ಟಿಕ್ ವರ್ಷನ್‌ಗಳಲ್ಲಿ ಬಿಡುಗಡೆ ಮಾಡುತ್ತಿವೆ. ಹೀಗಾಗಿ ಡುಕಾಟಿ ಸಂಸ್ಥೆಯು ಸಹ ಗ್ರಾಹಕರ ಬೇಡಿಕೆಯೆಂತೆ ವಿನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

ವಿ ಮೊಟೊ ಜೊತೆಗೂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಡುಕಾಟಿ

ಇಟಾಲಿಯನ್ ಬ್ರಾಂಡ್ ವಾಹನಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಡುಕಾಟಿ ಸಂಸ್ಥೆಯು ಸದ್ಯ ಸೂಪರ್ ಬೈಕ್ ಆವೃತ್ತಿಯಲ್ಲಿ ಭಾರೀ ಬೇಡಿಕೆ ಹೊಂದಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚಿನ ಗಮನಹರಿಸುತ್ತಿದೆ. ಇದಕ್ಕಾಗಿ ಚೀನಿ ಮೂಲದ ವಿ ಮೊಟೊ ಜೊತೆಗೂಡಿರುವ ಡುಕಾಟಿ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೊರತರುವುದಾಗಿ ಸುಳಿವು ನೀಡಿದೆ.

ವಿ ಮೊಟೊ ಜೊತೆಗೂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಡುಕಾಟಿ

ವಿ ಮೊಟೊ ಸಂಸ್ಥೆಯು ಈಗಾಗಲೇ ಚೀನಿ ಮತ್ತು ತೈವಾನ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದು, ಇದೀಗ ಡುಕಾಟಿ ಸಂಸ್ಥೆಯೊಂದಿಗೆ ಕೈ ಜೋಡಿಸಿರುವುದು ವಿ ಮೊಟೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟಕ್ಕೆ ಉತ್ತಮ ವೇದಿಕೆ ದೊರೆಯಲಿದೆ.

ವಿ ಮೊಟೊ ಜೊತೆಗೂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಡುಕಾಟಿ

ಯಾಕೆಂದ್ರೆ ಯುರೋಪ್ ಮತ್ತು ಏಷ್ಯಾ ಮಾರುಕಟ್ಟೆಗಳಲ್ಲಿ ಉತ್ತಮ ಮಾರಾಟ ಕ್ಷೇತ್ರವನ್ನು ಹೊಂದಿರುವ ಡುಕಾಟಿಗೆ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಮತ್ತಷ್ಟು ಲಾಭ ತಂದುಕೊಡಲಿದ್ದರೆ, ವಿ ಮೊಟೊ ಸಂಸ್ಥೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗಲಿದೆ.

ವಿ ಮೊಟೊ ಜೊತೆಗೂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಡುಕಾಟಿ

ಹೊಸ ಒಪ್ಪಂದದ ಪ್ರಕಾರ, ವಿ ಮೊಟೊ ಸಂಸ್ಥೆಯು ಡುಕಾಟಿ ಹೆಸರಿನಲ್ಲಿ ವಿವಿಧ ಮಾದರಿಯ ಗುಣಮಟ್ಟದ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಗಳನ್ನು ಅಭಿವೃದ್ದಿಗೊಳಿಸಲಿದ್ದು, ಡುಕಾಟಿ ಸಂಸ್ಥೆಯು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರುಕಟ್ಟೆ ಮತ್ತು ಮಾರಾಟದ ನಿರ್ವಹಣೆಯ ಮೂಲಕ ಎರಡು ಸಂಸ್ಥೆಗಳು ಸಹ ಲಾಭ ಗಳಿಸಲಿವೆ. ಇದಕ್ಕಾಗಿ ಈಗಾಗಲೇ ಅಂತಿಮ ಹಂತದ ಮಾತುಕತೆ ನಡೆಸುತ್ತಿರುವ ಉಭಯ ಸಂಸ್ಥೆಗಳು ಮುಂದಿನ ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಿವೆ.

ವಿ ಮೊಟೊ ಜೊತೆಗೂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಡುಕಾಟಿ

ಇನ್ನು ಡುಕಾಟಿ ಮತ್ತು ವಿ ಮೊಟೊ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳ್ಳವಲಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಇತರೆ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂತಲೂ ಇವು ತುಸು ದುಬಾರಿ ಎನ್ನಿಸಲಿವೆ.

ವಿ ಮೊಟೊ ಜೊತೆಗೂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಡುಕಾಟಿ

ಗ್ರಾಹಕರ ಬೇಡಿಕೆಯೆಂತೆ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಜೊತೆಗೆ ಐಷಾರಾಮಿ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಈ ಯೋಜನೆ ಅಡಿ ಅಭಿವೃದ್ಧಿಗೊಳ್ಳಲಿದ್ದು, ಮೈಲೇಜ್ ಹೆಚ್ಚು ಇಲ್ಲದ್ದಿದ್ದರೂ ಸ್ಕೂಟರ್‌ಗಳಲ್ಲಿ ನೀಡಲಾಗುವ ಸುಧಾರಿತ ತಂತ್ರಜ್ಞಾನ ಪ್ರೇರಿತ ಬಿಡಿಭಾಗಗಳು ಮತ್ತು ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಲ್ಲ ಬ್ಯಾಟರಿ ವೈಶಿಷ್ಟ್ಯತೆಗಳನ್ನು ಹೊಂದಿರಲಿವೆ.

ವಿ ಮೊಟೊ ಜೊತೆಗೂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಡುಕಾಟಿ

ಸದ್ಯ ಚೀನಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿರುವ ವಿ ಮೊಟೊ ಸೂಪರ್ ಸಾಕೊ ಎಲೆಕ್ಟ್ರಿಕ್ ಸ್ಕೂಟರ್‌ಗಳು 1.8kWh ಬ್ಯಾಟರಿ ಪ್ಯಾಕ್‌ ಮತ್ತು 2.8kWh ಬಾಷ್ ಹಬ್ ಮೋಟಾರ್ ಸಹಾಯದೊಂದಿಗೆ ಪ್ರತಿ ಚಾರ್ಜ್‌ಗೆ 75ಕಿ.ಮಿ ಮೈಲೇಜ್ ರೇಂಜ್‌ನೊಂದಿಗೆ ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿವೆ.

ವಿ ಮೊಟೊ ಜೊತೆಗೂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಡುಕಾಟಿ

ಆದ್ರೆ ಡುಕಾಟಿ ಹೆಸರಿನೊಂದಿಗೆ ಬರಲಿರುವ ವಿ ಮೊಟೊ ಸ್ಕೂಟರ್‌ಗಳು ಪ್ರತಿ ಚಾರ್ಜ್‌ಗೆ 120 ರಿಂದ 1150 ಕಿ.ಮಿ ಮೈಲೇಜ್ ರೇಂಜ್ ಹೊಂದಿರುವ ವಿವಿಧ ಮಾದರಿಯ ಸ್ಕೂಟರ್‌ಗಳು ರಸ್ತೆಗಿಳಿಯಲಿದ್ದು, ಡಿಸಿ ಚಾರ್ಜರ್, ಫ್ರಂಟ್ ಕ್ಯಾಮೆರಾ, ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಪ್ರತಿ ಗಂಟೆಗೆ 80 ಕಿ.ಮಿ ಟಾಪ್ ಸ್ಪೀಡ್ ಹೊಂದಿರಲಿವೆ.

ವಿ ಮೊಟೊ ಜೊತೆಗೂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಡುಕಾಟಿ

ಹೀಗಾಗಿ ಸ್ಕೂಟರ್‌ಗಳ ಬೆಲೆಯು ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಹೈ ಸ್ಪೀಡ್ ಮತ್ತು ಉತ್ತಮ ಮೈಲೇಜ್ ರೇಂಜ್ ಹೊಂದಿರುವ ಸ್ಕೂಟರ್‌ಗಳಿಂತಲೂ ದುಬಾರಿ ಎನ್ನಿಸಲಿದ್ದು, ರೂ. 2 ಲಕ್ಷದಿಂದ ರೂ.3 ಲಕ್ಷ ಬೆಲೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Ducati Introduce Electric Scooter With Chinese Brand Vmoto. Read In Kannada.
Story first published: Saturday, May 4, 2019, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X