ಜುಲೈ 9ಕ್ಕೆ ಬಿಡುಗಡೆಯಾಗಲಿದೆ ಡುಕಾಟಿ ಮಲ್ಟಿಸ್ಟ್ರಾಡಾ ಬೈಕ್

ಡುಕಾಟಿ ಕಂಪನಿಯ ಮಲ್ಟಿಸ್ಟ್ರಾಡಾ ವಿಶಿಷ್ಟ ಶೈಲಿಯ ಬೈಕ್ ಆಗಿದ್ದು, ಅಡ್ವೆಂಚರ್ ಟೂರರ್ ಬೈಕ್ ಮಾದರಿಯಲ್ಲಿದ್ದರೂ, ರಸ್ತೆ ಆಧಾರಿತ ಬೈಕ್ ಆಗಿದೆ. ಇಟಲಿ ಮೂಲದ ಬೈಕ್ ತಯಾರಕ ಕಂಪನಿಯಾದ ಡುಕಾಟಿ 2016 ರಲ್ಲಿ ಮಲ್ಟಿಸ್ಟ್ರಾಡಾದ ಎಂಡ್ಯೂರೋ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಮೂರು ವರ್ಷಗಳ ನಂತರ, ಕಂಪನಿಯು ಮಲ್ಟಿಸ್ಟ್ರಾಡಾ ಎಂಡ್ಯೂರೋ 1260 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಬೈಕ್ ಅನ್ನು 2019 ಜುಲೈ 09 ರಂದು ಬಿಡುಗಡೆ ಮಾಡಲಾಗುವುದು.

ಜುಲೈ 9ಕ್ಕೆ ಬಿಡುಗಡೆಯಾಗಲಿದೆ ಡುಕಾಟಿ ಮಲ್ಟಿಸ್ಟ್ರಾಡಾ ಬೈಕ್

ಆಟೋಕಾರ್ ಇಂಡಿಯಾದ ಪ್ರಕಾರ, ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ಎಂಡ್ಯೂರೋ 1260 ಬೈಕಿನಲ್ಲಿ ಟೆಸ್ಟಾಸ್ಟ್ರೆಟಾ ಡಿವಿಟಿ ಎಂಜಿನ್ ಅನ್ನು ಅಳವಡಿಸಲಾಗಿದೆ. ರಸ್ತೆ ಆಧಾರಿತ ಮಲ್ಟಿಸ್ಟ್ರಾಡಾ 1260 ಬೈಕಿನಲ್ಲಿಯೂ ಸಹ ಈ ಎಂಜಿನ್ ಅನ್ನು ಅಳವಡಿಸಲಾಗಿತ್ತು. 1,262 ಸಿಸಿಯ ಟ್ವಿನ್ ಎಂಜಿನ್ 9,500ಆರ್‍‍ಪಿ‍ಎಂನಲ್ಲಿ 158ಬಿಹೆಚ್‍‍ಪಿಯನ್ನು ಹಾಗೂ 7,500ಆರ್‍‍ಪಿ‍ಎಂನಲ್ಲಿ 128ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ 256 ಕೆಜಿ ತೂಕವನ್ನು ಹೊಂದಿದೆ. ಈ ಎಂಜಿನ್‍‍ನಲ್ಲಿ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿರುವುದರಿಂದ ಗೇರುಗಳನ್ನು ವೇಗವಾಗಿ ಬದಲಿಸಲು ಅನುಕೂಲವಾಗಲಿದೆ.

ಜುಲೈ 9ಕ್ಕೆ ಬಿಡುಗಡೆಯಾಗಲಿದೆ ಡುಕಾಟಿ ಮಲ್ಟಿಸ್ಟ್ರಾಡಾ ಬೈಕ್

ಈ ಬೈಕಿನಲ್ಲಿ6 ಆಕ್ಸಿಸ್ ಐಎಂಯು, ಕಾರ್ನರಿಂಗ್ ಎಬಿಎಸ್‍‍ಗಳ ಜೊತೆಗೆ, ಅರ್ಬನ್, ಸ್ಪೋರ್ಟ್, ಟೂರಿಂಗ್ ಹಾಗೂ ಎಂಡ್ಯೂರೋ ಎಂಬ ನಾಲ್ಕು ಕಸ್ಟಮೈಸೆಬಲ್ ರೈಡಿಂಗ್ ಮೋಡ್‍‍ಗಳಿವೆ. ಡುಕಾಟಿ ವ್ಹೀಲಿ ಕಂಟ್ರೋಲ್, ಡುಕಾಟಿ ಟ್ರಾಕ್ಷನ್ ಕಂಟ್ರೋಲ್, ವೆಹಿಕಲ್ ಹೋಲ್ಡ್ ಕಂಟ್ರೋಲ್ (ಹಿಲ್-ಹೋಲ್ಡ್ ಅಸಿಸ್ಟ್) ಒಳಗೊಂಡಿರುವ ಮೈಂಡ್ ಬ್ಲೋಯಿಂಗ್ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್, ಸ್ಕೈ-ಹುಕ್ ಸಸ್ಪೆಂಷನ್ ಪ್ಯಾಕೇಜ್‍‍ಗಳಿವೆ. ಈ ಬೈಕಿನಲ್ಲಿ ಅಳವಡಿಸಲಾಗಿರುವ 5.0-ಇಂಚಿನ ಟಿಎಫ್‌ಟಿ ಡಿಸ್‍‍ಪ್ಲೇಯನ್ನು ಸ್ಮಾರ್ಟ್‌ಫೋನ್‌ನೊಂದಿಗೆ ಕನೆಕ್ಟ್ ಮಾಡಬಹುದಾಗಿದೆ.

ಜುಲೈ 9ಕ್ಕೆ ಬಿಡುಗಡೆಯಾಗಲಿದೆ ಡುಕಾಟಿ ಮಲ್ಟಿಸ್ಟ್ರಾಡಾ ಬೈಕ್

ಇದರಿಂದಾಗಿ ಸವಾರರಿಗೆ ಚಾಲನೆಯ ಅಂಕಿಅಂಶಗಳನ್ನು ಗಮನಿಸಲು ಹಾಗೂ ಬೈಕಿನ ಸೆಟಪ್ ಅನ್ನು ಬದಲಾಯಿಸಲು ಅನುಕೂಲವಾಗಲಿದೆ. ಉಳಿದ ಬೈಕುಗಳಿಗೆ ಹೋಲಿಸಿದರೆ ಮಲ್ಟಿಸ್ಟ್ರಾಡಾ ಎಂಡ್ಯೂರೋ 1260 ಬೈಕ್ ಸ್ವಲ್ಪ ಹೆಚ್ಚಿನ ಎತ್ತರವನ್ನು ಹೊಂದಿದೆ. ಡುಕಾಟಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಸಲುವಾಗಿ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಎರಡೂ ಬದಿಯಲ್ಲಿದ್ದ ಸಸ್ಪೆಂಷನ್‍‍ಗಳನ್ನು 200 ಎಂಎಂ ನಿಂದ 185 ಎಂಎಂಗಳಿಗೆ ಇಳಿಸಲಾಗಿದೆ.

ಜುಲೈ 9ಕ್ಕೆ ಬಿಡುಗಡೆಯಾಗಲಿದೆ ಡುಕಾಟಿ ಮಲ್ಟಿಸ್ಟ್ರಾಡಾ ಬೈಕ್

ಸ್ಟ್ಯಾಂಡರ್ಡ್ ಸೀಟಿನ ಎತ್ತರವನ್ನು 870 ಎಂಎಂ ನಿಂದ 860 ಎಂಎಂಗೆ ಇಳಿಸಲಾಗಿದೆ. 840 ಎಂಎಂನಷ್ಟು ಕಡಿಮೆ ಎತ್ತರವನ್ನು ಹೊಂದಿರುವ ಸೀಟ್ ಅನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಬಹುದು. 1260 ಎಂಡ್ಯೂರೋ ಬೈಕಿನ ಮುಂಭಾಗದಲ್ಲಿ 120/70 ಆರ್ 19 ಹಾಗೂ ಹಿಂಭಾಗದಲ್ಲಿ 170/60 ಆರ್ 17 ಲ್ಲಿ ಟ್ಯೂಬ್‌ಲೆಸ್ ಪೈರೆಲಿ ಸ್ಕಾರ್ಪಿಯಾನ್ ಟ್ರಯಲ್ 2 ಟಯರ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ವೈರ್-ಸ್ಪೋಕ್ ವ್ಹೀಲ್‍‍ಗಳನ್ನು ಹೊಂದಿದೆ.

MOST READ: ಶೇ.400ರಷ್ಟು ಏರಿಕೆಯಾಗಲಿದೆ ಹೊಸ ವಾಹನಗಳ ನೋಂದಣೆ ಶುಲ್ಕ

ಜುಲೈ 9ಕ್ಕೆ ಬಿಡುಗಡೆಯಾಗಲಿದೆ ಡುಕಾಟಿ ಮಲ್ಟಿಸ್ಟ್ರಾಡಾ ಬೈಕ್

ಬಿಡುಗಡೆಯಾದ ನಂತರ, ಡುಕಾಟಿ ಮಲ್ಟಿಸ್ಟ್ರಾಡಾ ಎಂಡ್ಯೂರೋ 1260 ಬೈಕ್, ಈ ಸೆಗ್‍‍ಮೆಂಟಿನ ಬೈಕುಗಳ ರಾಜ ಎಂದೇ ಪರಿಗಣಿಸಲಾಗುವ ಬಿಎಂಡಬ್ಲ್ಯು ಆರ್ 1250 ಜಿಎಸ್ ಅಡ್ವೆಂಚರ್ ಬೈಕಿಗೆ ಪೈಪೋಟಿ ನೀಡಲಿದೆ. ಇದರ ಜೊತೆಗೆ ಟ್ರಯಂಫ್ ಟೈಗರ್ 1200 ಎಕ್ಸ್‌ಸಿಎಕ್ಸ್‌ ಬೈಕಿಗೂ ಸಹ ಪೈಪೋಟಿ ನೀಡಲಿದೆ. ಈ ಬೈಕಿನಲ್ಲಿರುವ ಆಡ್-ಆನ್ ಕಿಟ್‌ಗಳು ಹಾಗೂ ಹೆಚ್ಚಿನ ಸಾಮರ್ಥ್ಯವನ್ನು ಗಮನಿಸಿದರೆ, ಮಲ್ಟಿಸ್ಟ್ರಾಡಾ 1260 ಬೈಕಿನ ಬೆಲೆಯು ರೂ.17.8 ಲಕ್ಷಗಳಾಗುವ ಸಾಧ್ಯತೆಗಳಿದ್ದರೆ, ಮಲ್ಟಿಸ್ಟ್ರಾಡಾ 1200 ಎಂಡ್ಯೂರೋ ಬೈಕಿನ ಬೆಲೆಯು ರೂ.18.03 ಲಕ್ಷಗಳಾಗುವ ಸಾಧ್ಯತೆಗಳಿವೆ. ಈ ಎಲ್ಲಾ ಬೆಲೆಗಳು ಭಾರತದಲ್ಲಿನ ಎಕ್ಸ್ ಶೋರೂಂ ದರಗಳಾಗಿವೆ.

MOST READ: ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 8 ಕಾರುಗಳಿವು

ಜುಲೈ 9ಕ್ಕೆ ಬಿಡುಗಡೆಯಾಗಲಿದೆ ಡುಕಾಟಿ ಮಲ್ಟಿಸ್ಟ್ರಾಡಾ ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸಾಹಸಿ ಬೈಕುಗಳನ್ನು ಬಯಸುವವರಿಗೆ ಈ ಬೈಕುಗಳು ಹೇಳಿ ಮಾಡಿಸಿದಂತಿವೆ. ಈ ಬೈಕ್‍‍ಗಳು ಆಕರ್ಷಕವಾಗಿ ಕಾಣಿಸುತ್ತವೆ. ಹೊಸ ಡುಕಾಟಿ ಬೈಕ್ ಸಹ ತನ್ನ ಸರಣಿಯಲ್ಲಿರುವ ಬೈಕುಗಳ ರೀತಿಯಲ್ಲಿ ಕಾರ್ಯನಿರ್ವಹಿಸಿ, ಯಶಸ್ವಿಯಾಗುವ ಸಾಧ್ಯತೆಗಳಿವೆ. ಈ ಬೈಕಿನ ಬಿಡುಗಡೆಯ ನಂತರ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ.

Most Read Articles

Kannada
Read more on ಡುಕಾಟಿ ducati
English summary
Ducati Multistrada Enduro 1260 Launching On 9 July — Taming Boundaries - Read in kannada
Story first published: Thursday, June 27, 2019, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X