ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಡುಕಾಟಿ ಕಂಪನಿಯ ಬಹು ನಿರೀಕ್ಷಿತ ರೋಡ್‍‍ಸ್ಟರ್ ಬೈಕ್ ಆದ ಸ್ಟ್ರೀಟ್‌ಫೈಟರ್ ವಿ4 ಬೈಕ್ ಅನ್ನು ಮೊದಲ ಬಾರಿಗೆ ಇಟಲಿಯಲ್ಲಿ ನಡೆದ ವಿಶ್ವ ಡುಕಾಟಿ ಪ್ರೀಮಿಯರ್ ಮೇಳದಲ್ಲಿ ಅನಾವರಣಗೊಳಿಸಲಾಗಿದೆ.

ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಸ್ಟ್ರೀಟ್‌ಫೈಟರ್ ವಿ4 ಬೈಕ್ ತನ್ನ ಎಂಜಿನ್ ಹಾಗೂ ಎಲೆಕ್ಟ್ರಾನಿಕ್ ಪ್ಯಾಕೇಜ್‍‍ಗಳನ್ನು ಡುಕಾಟಿ ಪ್ಯಾನಿಗಲ್ ವಿ4 ಬೈಕಿನಿಂದ ಪಡೆದಿದೆ. ಇದರ ಜೊತೆಗೆ ಅಗ್ರೆಸಿವ್ ವಿನ್ಯಾಸ, ಬೈ ಪ್ಲೇನ್ ವಿಂಗ್‍‍ಗಳನ್ನು ಹೊಂದಿದೆ.

ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಇದೇ ಮೊದಲ ಬಾರಿಗೆ ನೇಕೆಡ್ ಬೈಕ್‍‍ವೊಂದು ಈ ಫೀಚರ್‍‍ಗಳನ್ನು ಹೊಂದಿದೆ. ಹೊಸ ಬೈಕುಗಳನ್ನು - ಬೇಸ್ ಸ್ಟ್ರೀಟ್‌ಫೈಟರ್ ವಿ4 ಹಾಗೂ ಸ್ಟ್ರೀಟ್‌ಫೈಟರ್ ವಿ4 ಎಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಪ್ಯಾನಿಗಲ್ ವಿ4 ಹಾಗೂ ವಿ4 ಎಸ್ ಬೈಕುಗಳಂತೆ ಟಾಪ್ ಎಂಡ್ ಮಾದರಿಯ ಸ್ಟ್ರೀಟ್‌ಫೈಟರ್ ವಿ4 ನೇಕೆಡ್ ಬೈಕ್ ಒಹ್ಲಿನ್ ಎಲೆಕ್ಟ್ರಾನಿಕ್ ಸಸ್ಪೆಂಷನ್, ಒಹ್ಲಿನ್ ಸ್ಟೀಯರಿಂಗ್ ಡ್ಯಾಂಪರ್ ಹಾಗೂ ಕಡಿಮೆ ತೂಕದ ಮಾರ್ಚೆಸಿನಿ ವ್ಹೀಲ್‍‍ಗಳನ್ನು ಹೊಂದಿರಲಿದೆ.

ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಸ್ಟ್ರೀಟ್‌ಫೈಟರ್ ವಿ4 ನ ಎರಡೂ ಮಾದರಿಗಳಲ್ಲಿ ಪ್ಯಾನಿಗಲ್ ವಿ4 ಬೈಕಿನಲ್ಲಿರುವಂತಹ 1,103 ಸಿಸಿ ಡೆಸ್ಮೋಸೆಡಿಸಿ ಸ್ಟ್ರಾಡೇಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 12,750 ಆರ್‌ಪಿಎಂನಲ್ಲಿ 208 ಬಿಹೆಚ್‌ಪಿ ಪವರ್ ಹಾಗೂ 11,500 ಆರ್‌ಪಿಎಂನಲ್ಲಿ 123 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಫ್ಯೂಯಲ್ ಹಾಗೂ ಎಂಜಿನ್ ಮ್ಯಾಪ್‍‍ಗಳು ಬದಲಾಗಿವೆ. ಸ್ಟ್ರೀಟ್‌ಫೈಟರ್ ವಿ4 ಬೈಕಿನಲ್ಲಿ ಇವುಗಳನ್ನು ಕಡಿಮೆ ಡ್ರೈವ್ ರೆಶಿಯೊದಲ್ಲಿ ತಿರುಚಲಾಗಿದೆ. ಐಚ್ಛಿಕ ರೇಸ್ ಕಿಟ್ ಅಕ್ರಪೋವಿಕ್ ಎಕ್ಸಾಸ್ಟ್ ಸಿಸ್ಟಂ ಎಂಜಿನ್ ಪವರ್ ಅನ್ನು 220 ಬಿಹೆಚ್‌ಪಿಗಳಿಗೆ ಹಾಗೂ ಟಾರ್ಕ್ ಅನ್ನು 130 ಎನ್‌ಎಂಗೆ ಹೆಚ್ಚಿಸುತ್ತದೆ.

ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಬೈಕ್‌ನ ಸೈಡ್ ಪ್ಯಾನೆಲ್‌ಗಳ ಪ್ರತಿಯೊಂದು ಬದಿಯಲ್ಲಿ ಅಳವಡಿಸಲಾಗಿರುವ ಎರಡು ಬೈಪ್ಲೇನ್ ವಿಂಗ್‍‍ಗಳು 270 ಕಿ.ಮೀ ವೇಗದಲ್ಲಿ 28 ಕೆಜಿ ಡೌನ್‌ಫೋರ್ಸ್ ಉತ್ಪಾದಿಸುತ್ತವೆ ಎಂದು ಹೇಳಲಾಗಿದೆ. ಸ್ಟ್ಯಾಂಡರ್ಡ್ ಸ್ಟ್ರೀಟ್‌ಫೈಟರ್ ವಿ4 ಬೈಕ್, ಸ್ಪ್ರಿಂಗ್ ಪ್ರಿ ಲೋಡ್ ಹಾಗೂ ಕಂಪ್ರೆಷನ್ ಮತ್ತು ರಿಬೌಂಡ್ ಡ್ಯಾಂಪಿಂಗ್ ಅಡ್ಜಸ್ಟಬಿಲಿಟಿಯ 43 ಎಂಎಂ ಶೋವಾ ಬಿಗ್ ಪಿಸ್ಟನ್ ಫೋರ್ಕ್ಸ್ (ಬಿಪಿಎಫ್) ಹೊಂದಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಇದರ ಜೊತೆಗೆ ಸ್ಯಾಚ್ಸ್ ಸ್ಟೀಯರಿಂಗ್ ಡ್ಯಾಂಪರ್ ಅನ್ನು ಸಹ ಹೊಂದಿದೆ. ಹಿಂಭಾಗದ ಸಸ್ಪೆಂಷನ್ ಸಂಪೂರ್ಣವಾದ ಅಡ್ಜಸ್ಟಬಲ್ ಸ್ಯಾಚ್ಸ್ ಶಾಕ್‍‍ನಿಂದ ನಿರ್ವಹಿಸಲ್ಪಡುತ್ತದೆ. ಇದನ್ನು ನಕಲಿ ಅಲ್ಯೂಮಿನಿಯಂ ಬ್ರಾಕೆಟ್ ಮೂಲಕ ಎಂಜಿನ್‌ಗೆ ಜೋಡಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಟಾಪ್ ಮಾದರಿಯ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್ ಓಹ್ಲಿನ್ಸ್ ಎನ್ಐಎಕ್ಸ್ -30 ಫ್ರಂಟ್ ಫೋರ್ಕ್, ಓಹ್ಲಿನ್ಸ್ ಟಿಟಿಎಕ್ಸ್ 36 ರೇರ್ ಶಾಕ್ ಅಬ್ಸರ್ವರ್ ಹಾಗೂ ಓಹ್ಲಿನ್‍‍ನ ಎಲೆಕ್ಟ್ರಾನಿಕ್ ಕಂಟ್ರೋಲ್ ಸ್ಟೀಯರಿಂಗ್ ಡ್ಯಾಂಪರ್ ಅನ್ನು ಹೊಂದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಸಸ್ಪೆಂಷನ್ ಸಿಸ್ಟಂ ಸೆಮಿ ಆಕ್ಟಿವ್ ಆಗಿದ್ದು, ಬ್ರೇಕಿಂಗ್ ಹಾಗೂ ಆಕ್ಸೆಲೆರೆಷನ್‍‍ನಲ್ಲಿ ನೆರವಾಗಲಿದೆ. ಸೆಮಿ ಆಕ್ಟಿವ್ ಸಸ್ಪೆಂಷನ್ ಅನ್ನು ಸಂಪೂರ್ಣವಾಗಿ ಆಫ್ ಮಾಡಬಹುದು. ಎರಡೂ ಮಾದರಿಗಳು ಮುಂಭಾಗದಲ್ಲಿ ಬ್ರೆಂಬೊ ಸ್ಟೈಲೆಮಾ ಮೊನೊಬ್ಲೋಕ್ ಕ್ಯಾಲಿಪರ್‌‍ನ ಟ್ವಿನ್ 330 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‌ನ ಸಿಂಗಲ್ 245 ಎಂಎಂ ಡಿಸ್ಕ್ ಗಳನ್ನು ಹೊಂದಿವೆ.

ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಬ್ರೇಕಿಂಗ್ ಕಾರ್ಯಗಳಿಗಾಗಿ 6 ಆಕ್ಸಿಸ್‍‍ನ ಇನರ್ಶಿಯಲ್ ಮೆಶರ್‍‍ಮೆಂಟ್ ಯುನಿಟ್ ಹಾಗೂ ಡುಕಾಟಿ ಕಾರ್ನರಿಂಗ್ ಎಬಿ‍ಎಸ್ ಇವೊ‍‍ಗಳಿವೆ. ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಭಾರತದಲ್ಲಿ 2020ರ ಮೊದಲ ಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಅನಾವರಣಗೊಂಡ ಡುಕಾಟಿ ಸ್ಟ್ರೀಟ್‌ಫೈಟರ್ ವಿ4

ಈ ಬೈಕುಗಳನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುವುದು. ಈ ಬೈಕಿನ ಬೆಲೆಯನ್ನು ಬೈಕ್ ಅನ್ನು ಬಿಡುಗಡೆ ಮಾಡುವಾಗ ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿದ್ದರೂ, ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.19ಲಕ್ಷದಿಂದ 20 ಲಕ್ಷಗಳಾಗುವ ಸಾಧ್ಯತೆಗಳಿವೆ.

Most Read Articles

Kannada
Read more on ಡುಕಾಟಿ ducati
English summary
Ducati Streetfighter V4 Revealed - Read in Kannada
Story first published: Friday, October 25, 2019, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X