ಸ್ಕೂಟರ್‍‍ಗಳಲ್ಲಿ ತಾಂತ್ರಿಕ ದೋಷ: ರಿಕಾಲ್ ಮಾಡಿದ ಹೋಂಡಾ

ಹೋಂಡಾ ಮೋಟಾರ್‍‍ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ (ಹೆಚ್‍ಎಂ‍ಎಸ್‍ಐ), ತನ್ನ ನಾಲ್ಕು ಮಾದರಿಗಳಲ್ಲಿರುವ ಫ್ರಂಟ್ ಬ್ರೇಕ್ ಮಾಸ್ಟರ್ ಸಿಲಿಂಡರ್‍‍ನಲ್ಲಿರುವ ದೋಷವನ್ನು ಸರಿಪಡಿಸಲು 50,034 ವಾಹನಗಳನ್ನು ಶುಕ್ರವಾರ ರಿಕಾಲ್ ಮಾಡಿದೆ.

ಸ್ಕೂಟರ್‍‍ಗಳಲ್ಲಿ ತಾಂತ್ರಿಕ ದೋಷ: ರಿಕಾಲ್ ಮಾಡಿದ ಹೋಂಡಾ

ಹೋಂಡಾ ಕಂಪನಿಯು ಡಿಸ್ಕ್ ಗಳನ್ನು ಹೊಂದಿರುವ ಏವಿಯೇಟರ್, ಆಕ್ಟಿವಾ 125, ಗ್ರೇಜಿಯಾ ಹಾಗೂ ಸೆಲ್ಫ್ ಡಿಸ್ಕ್ ಹೊಂದಿರುವ ಸಿಬಿ ಶೈನ್ ಸಿಬಿ‍ಎಸ್ ಮಾದರಿಗಳನ್ನು ರಿಕಾಲ್ ಮಾಡಿದೆ. ಕಂಪನಿಯು ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

ಸ್ಕೂಟರ್‍‍ಗಳಲ್ಲಿ ತಾಂತ್ರಿಕ ದೋಷ: ರಿಕಾಲ್ ಮಾಡಿದ ಹೋಂಡಾ

ಫ್ರಂಟ್ ಬ್ರೇಕ್ ಮಾಸ್ಟರ್ ಸಿಲಿಂಡರ್‍‍ನಲ್ಲಿ ದೋಷವಿರುವುದು ಕಂಡು ಬಂದಿದೆ. ಈ ದೋಷದಿಂದಾಗಿ ಫ್ರಂಟ್ ವ್ಹೀಲ್ ಅನ್ನು ತಿರುಗಿಸಲು ತೊಂದರೆಯಾಗಲಿದೆ. ಇದರಿಂದಾಗಿ ಕೆಲವು ಸಂದರ್ಭಗಳಲ್ಲಿ ವ್ಹೀಲ್ ಜಾಮ್ ಆಗುವ ಸಾಧ್ಯತೆಗಳಿವೆ ಎಂದು ಆ ಹೇಳಿಕೆಯಲ್ಲಿ ತಿಳಿಸಿದೆ.

ಸ್ಕೂಟರ್‍‍ಗಳಲ್ಲಿ ತಾಂತ್ರಿಕ ದೋಷ: ರಿಕಾಲ್ ಮಾಡಿದ ಹೋಂಡಾ

ಈಗ ರಿಕಾಲ್ ಮಾಡಲಾಗುತ್ತಿರುವ ವಾಹನಗಳನ್ನು 2019ರ ಫೆಬ್ರವರಿ 4ರಿಂದ 2019ರ ಜುಲೈ 3ರ ನಡುವಿನ ಅವಧಿಯಲ್ಲಿ ತಯಾರಿಸಲಾಗಿದೆ. ಹೋಂಡಾ ಕಂಪನಿಯು ಸ್ವತಃ ತಾನೇ ಈ ವಾಹನಗಳನ್ನು ಪರೀಕ್ಷಿಸಲಿದೆ. ಅವಶ್ಯಕತೆಯಿದ್ದಲ್ಲಿ ನಾಲ್ಕೂ ಮಾದರಿಗಳಲ್ಲಿರುವ ದೋಷ ಪೂರಿತ ಬಿಡಿಭಾಗಗಳನ್ನು ಬದಲಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಸ್ಕೂಟರ್‍‍ಗಳಲ್ಲಿ ತಾಂತ್ರಿಕ ದೋಷ: ರಿಕಾಲ್ ಮಾಡಿದ ಹೋಂಡಾ

ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಹಾಗೂ ಆರಾಮದಾಯಕ ಸವಾರಿಗಾಗಿ ಹೋಂಡಾ ಕಂಪನಿಯು ಮುನ್ನೆಚ್ಚರಿಕೆಯ ಕ್ರಮವಾಗಿ, ಈ ನಾಲ್ಕು ಮಾದರಿಯ ವಾಹನಗಳನ್ನು ಪರೀಕ್ಷಿಸಲಿದ್ದು, ಅವಶ್ಯಕತೆಯಿದ್ದಲ್ಲಿ ಬಿಡಿಭಾಗಗಳನ್ನು ಉಚಿತವಾಗಿ ಬದಲಿಸಿಕೊಡಲಾಗುವುದು ಎಂದು ತಿಳಿಸಿದೆ.

ಸ್ಕೂಟರ್‍‍ಗಳಲ್ಲಿ ತಾಂತ್ರಿಕ ದೋಷ: ರಿಕಾಲ್ ಮಾಡಿದ ಹೋಂಡಾ

ಹೋಂಡಾ ಏವಿಯೇಟರ್ 109.2 ಸಿಸಿ ಎಂಜಿನ್ ಹೊಂದಿದೆ. 7000 ಆರ್‌ಪಿಎಂನಲ್ಲಿ 8 ಬಿಎಚ್‌ಪಿ ಪವರ್ ಹಾಗೂ 5500 ಆರ್‍‍ಪಿ‍ಎಂನಲ್ಲಿ 8.94 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪ್ರತಿ ಲೀಟರ್ ಪೆಟ್ರೋಲಿಗೆ 49 ಕಿ.ಮೀ ಮೈಲೇಜ್ ನೀಡುತ್ತದೆ.

ಸ್ಕೂಟರ್‍‍ಗಳಲ್ಲಿ ತಾಂತ್ರಿಕ ದೋಷ: ರಿಕಾಲ್ ಮಾಡಿದ ಹೋಂಡಾ

ಹೋಂಡಾ ಆಕ್ಟಿವಾ 125 ಸ್ಕೂಟರ್, 124.9 ಸಿಸಿ ಎಂಜಿನ್ ಹೊಂದಿದ್ದು, 6,500 ಆರ್‌ಪಿಎಂನಲ್ಲಿ 8.52 ಬಿಹೆಚ್‌ಪಿ ಹಾಗೂ 5,000 ಆರ್‌ಪಿಎಂನಲ್ಲಿ 10.54 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಸಿವಿಟಿ ಯುನಿಟ್ ಅಳವಡಿಸಲಾಗಿದೆ.

ಸ್ಕೂಟರ್‍‍ಗಳಲ್ಲಿ ತಾಂತ್ರಿಕ ದೋಷ: ರಿಕಾಲ್ ಮಾಡಿದ ಹೋಂಡಾ

ಹೋಂಡಾ ಗ್ರಾಜಿಯಾ ಸ್ಕೂಟರ್, 124.9 ಸಿಸಿ ಎಂಜಿನ್ ಹೊಂದಿದೆ. ಈ ಎಂಜಿನ್ 6,500 ಆರ್‍‍ಪಿಎಂ‍‍ನಲ್ಲಿ 8.52 ಬಿಎಚ್‌ಪಿ ಪವರ್ ಹಾಗೂ 5,000 ಆರ್‍‍ಪಿ‍ಎಂನಲ್ಲಿ 10.54 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಕೂಟರ್‍‍ಗಳಲ್ಲಿ ತಾಂತ್ರಿಕ ದೋಷ: ರಿಕಾಲ್ ಮಾಡಿದ ಹೋಂಡಾ

ಹೋಂಡಾ ಸಿಬಿ ಶೈನ್ ಬೈಕ್, 124.7 ಸಿಸಿಯ ಎಂಜಿನ್ ಹೊಂದಿದೆ. ಈ ಎಂಜಿನ್ 7,500 ಆರ್‍‍ಪಿ‍ಎಂನಲ್ಲಿ 10.16 ಬಿ‍‍ಹೆಚ್‍‍ಪಿ ಪವರ್ ಹಾಗೂ 5,500 ಆರ್‍‍ಪಿ‍ಎಂನಲ್ಲಿ 10.3 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Honda recalls its of four variants - Read in kannada
Story first published: Saturday, August 3, 2019, 12:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X