ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ದೇಶಾದ್ಯಂತ ಅಲ್ಲಲ್ಲಿ ಮಳೆ ಮಳೆ ಶುರುವಾಗಿದೆ. ಇಂತಹ ವೇಳೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಧೋ.. ಎಂದು ಸುರಿವ ಮಳೆಗೆ ಕೊಡೆ ಹಿಡಿಯಲು ಸಾಧ್ಯವಾಗದು. ತೊಟ್ಟಿರುವ ರೇನ್ ಕೋಟ್ ಒದ್ದೆಮುದ್ದೆಯಾಗಿರಬಹುದು. ಈ ವೇಳೆ ಸುರಿಯೋ ಮಳೆಹನಿಗೆ ಹೆಲ್ಮೆಟ್ ಮಸುಕು ಮಸುಕು. ದಾರಿ ಕಾಣದಾಗಿದೆ ರಾಘವೇಂದ್ರನೇ ಎಂದು ಬೈಕ್ ಸೈಡಿಗೆ ನಿಲ್ಲಿಸಿಬಿಡಬೇಕಷ್ಟೇ!

ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಇಲ್ಲವೇ ಸುರಿಯೋ ಮಳೆಹನಿಯನ್ನು ಕ್ಯಾರೇ ಮಾಡದೇ, ಬಿಲ್ ಕುಲ್ ಬೈಕಿಂದ ಇಳಿಯದೇ ಬೈಕ್ ಸವಾರಿ ಮುಂದುವರೆಸಬೇಕಲ್ಲದೇ ಹೆಲ್ಮೆಟಿನಲ್ಲಿ ನಿಲ್ಲುವ ಮಳೆಹನಿಯನ್ನು ಕರವಸ್ತ್ರದಲ್ಲಿ ಒರೆಸಿ ಒರೆಸಿ ಸುಸ್ತಾಗುವುದು ಖಂಡಿತ. ಆದ್ರೆ ಈ ವೇಳೆ ಹೆಲ್ಮೆಟ್‌ನಲ್ಲೇ ವೈಪರ್ ಒಂದು ಇರುತ್ತಿದ್ದರೆ.. ಎಂಬ ಬಯಕೆಯೂ ಆಗ ನಿಮಗೆ ಬಂದಿರಬಹುದು ಅಲ್ಲವೇ? ಖಂಡಿತವಾಗಿಯೂ ನಿಮ್ಮ ಆಲೋಚನೆ ಇದೀಗ ನಿಜವಾಗಿದೆ. ಹೆಲ್ಮೆಟ್‌ನಲ್ಲೂ ಕೂಡಾ ವೈಪರ್ ಅಳವಡಿಕೆ ಸಾಧ್ಯವಿದೆ ಎಂಬುವುದನ್ನು ಕೆಲವು ಆಟೋ ಬಿಡಿಭಾಗಗಳ ಉತ್ಪಾದನಾ ಸಂಸ್ಥೆಗಳು ಇಂತದೊಂದು ಪರಿಕಲ್ಪನೆಯನ್ನು ನಿಜವಾಗಿಸಿವೆ.

ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ವೈಪೆ ಎನ್ನುವ ಆಟೋ ಬಿಡಿಭಾಗಗಳ ಉತ್ಪಾದನಾ ಸಂಸ್ಥೆಯೊಂದು ಎಲೆಕ್ಟ್ರಾನಿಕ್ ಮೋಟಾರ್ ಸಹಾಯದೊಂದಿಗೆ ಕಾರ್ಯನಿರ್ವಹಿಸಬಲ್ಲ ಹೆಲ್ಮೆಟ್ ವೈಪರ್‌ಗಳನ್ನು ಅಭಿವೃದ್ಧಿಗೊಳಿಸಿದ್ದು, ಅತಿಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿಕೊಂಡಿದೆ.

ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಇದು ಕಾರುಗಳಲ್ಲಿ ಅಳವಡಿಸಲಾಗುವ ವೈಪರ್‌ಗಳಂತೆಯೇ ಕಾರ್ಯನಿರ್ವಹಿಸಬಲ್ಲದು ಎಂದು ಹೇಳಿಕೊಂಡಿರುವ ವೈಪೆ ಸಂಸ್ಥೆಯು, ಎಲ್ಲಾ ಮಾದರಿಯ ಹೆಲ್ಮೆಟ್‌ಗಳಿಗೂ ಹೊಂದಬಹುದಾದ ರೀತಿಯಲ್ಲಿ ವಿನ್ಯಾಸ ಮಾಡಿರುವುದಾಗಿ ಮಾಹಿತಿ ಹಂಚಿಕೊಂಡಿದೆ.

ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ವಿಶೇಷ ಅಂದ್ರೆ, ವೈಪಿ ಎಲೆಕ್ಟ್ರಿಕ್ ವೈಪರ್‌ಗಳನ್ನು ಯಾವುದು ಒಂದು ಹೆಲ್ಮೆಟ್‌ಗೆ ಫಿಕ್ಸ್ ಮಾಡದೇ ಬೇಕೆಂದಾಗ ಹಾಕಿ ತೆಗೆಯಬಹುದಾದ ಸೌಲಭ್ಯವನ್ನು ಹೊಂದಿದ್ದು, ಸತತವಾಗಿ 12 ಗಂಟೆಗಳ ಕಾಲ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠವಾಗಿ 3 ಗಂಟೆಗಳ ಕಾಲ ವೈಪರ್ ಬಳಕೆ ಮಾಡಿಕೊಳ್ಳಬಹುದಂತೆ. ಜೊತೆಗೆ ಗಂಟೆಗೆ 130ಕಿ.ಮಿ ವೇಗದಲ್ಲೂ ಈ ವೈಪರ್ ಸರಾಗವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಹೇಳಿಕೊಂಡಿರುವ ವೈಪಿ ಸಂಸ್ಥೆಯು ಮುಂದಿನ ತಿಂಗಳು ಅಧಿಕೃತವಾಗಿ ಮಾರಾಟ ಮಾಡುವುದಾಗಿ ಮಾಹಿತಿ ಬಿಚ್ಚಿಟ್ಟಿದೆ.

ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಇನ್ನೊಂದು ಪ್ರಮುಖ ವೈಶಿಷ್ಟ್ಯತೆ ಅಂದ್ರೆ ಬ್ಲಟೂಥ್ ಮೂಲಕ ವೈಪರ್ ಸ್ಪೀಡ್ ಅನ್ನು ನಿಯಂತ್ರಣ ಮಾಡಬಹುದಾಗಿದ್ದು, ಒಂದು ಸೇಕೆಂಡ್‌ನಲ್ಲಿ ಒಂದು ಬಾರಿ ಮಾತ್ರ ಹೆಲ್ಮೆಟ್ ಗ್ಲಾಸ್ ಕ್ಲಿನ್ ಆಗಬೇಕಿದ್ದಲ್ಲಿ ಒಂದು ಬಾರಿ, ಇಲ್ಲವೇ ಮೂರು ಸೇಕೆಂಡ್‌ಗೆ ಒಂದರಂತೆ ವೈಪರ್ ಕ್ಲಿನ್ ಅನ್ನು ಸೆಟ್ ಮಾಡಿಕೊಳ್ಳಬಹುದಾಗಿದೆ.

ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಮೊದಲು ಬುಕ್ ಮಾಡಿದವರಿಗೆ ಬಂಪರ್ ಆಫರ್..!

ಮೇ ಅಥವಾ ಜೂನ್ ಆರಂಭದಲ್ಲಿ ಹೆಲ್ಮೆಟ್ ವೈಪರ್‌ಗಳನ್ನು ಮಾರಾಟ ಆರಂಭಿಸಲಿರುವ ವೈಪೇ ಸಂಸ್ಥೆಯು ಕಿಕ್‌ಸ್ಟಾಟರ್ ಹೆಲ್ಮೆಟ್ ವೈಪರ್‌ಗಳನ್ನು ಮೊದಲಿಗೆ ಬುಕ್ ಮಾಡುವ ಗ್ರಾಹಕರಿಗೆ ಆಕರ್ಷಕ ಆಫರ್‌ಗಳು ನೀಡುತ್ತಿದ್ದು, ಶೇ.50ರಷ್ಟು ಡಿಸ್ಕೌಂಟ್ ಜೊತೆಗೆ ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಘೋಷಿಸಿದೆ.

MOST READ: ಹೋಂಡಾ ಆಕ್ಟೀವಾ ಸ್ಕೂಟರ್‌ಗಿಂತಲೂ ದುಬಾರಿ ಈ ಹೆಲ್ಮೆಟ್ ಬೆಲೆ..!

ಜೊತೆಗೆ ಕಿಕ್‌ಸ್ಟಾಟರ್ ಹೆಲ್ಮೆಟ್ ವೈಪರ್ ಡಿವೈಸ್ ಮೇಲೆ ಗರಿಷ್ಠ 1 ವರ್ಷದ ವಾರಂಟಿ ನೀಡಲಾಗುತ್ತಿದ್ದು, ಸದ್ಯದಲ್ಲೇ ಪ್ರದರ್ಶನಗೊಳಿಸಲಾಗಿರುವ ವೈಪರ್ ಮಾದರಿಯನ್ನು ಉತ್ಪಾದನೆ ಶುರು ಮಾಡುವುದಾಗಿ ತಿಳಿಸಿದೆ. ಒಂದು ನಿಮಗೂ ವೈಪರ್ ಬಳಕೆ ಬೇಕಿದ್ದಲ್ಲಿ ವೈಪೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಬಹುದು.

ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಇನ್ನು ಘಾಟಿ ಪ್ರದೇಶಗಳಲ್ಲಿ ಬೈಕ್ ಸವಾರರನ್ನು ಮಳೆರಾಯ ಆಗಾಗ ಕಾಡುವುದುಂಟು. ಸುರಿವ ಜಡಿಮಳೆಗೆ ಕೊಡೆಹಿಡಿಯುವ ಹೆಲ್ಮೆಟ್ ತುಂಬಾ ನೀರಹನಿಗಳು. ಸುರಕ್ಷಿತ ಪ್ರಯಾಣಕ್ಕೂ ಇದು ಅಡ್ಡಿಮಾಡುತ್ತದೆ. ಹೀಗಾಗಿ ಹೆಲ್ಮೆಟ್ಟಿಗೆ ವೈಪರ್ ಇದ್ದರೆ ಒಳ್ಳೆಯದು ಎಂಬ ವಾದವನ್ನು ನೀವು ಒಪ್ಪಬಹುದು.

MOST READ: ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!

ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಹಾಗೆಯೇ ಕಣ್ಣಿಗೆ ಅಡ್ಡಬರುವ ಹೆಲ್ಮೆಟ್ ವೈಪರ್ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯೂ ಕಾಡದೆ ಇರದು. ಜೊತೆಗೆ ಅದರಲ್ಲಿರುವ ಮೋಟಾರ್ ಗಿರ್ ಗಿರ್ ಅಂತ ತಿರುಗುತ್ತಿದ್ದರೆ ತಲೆ ಸುತ್ತು ಕೂಡಾ ಬರಬಹುದು ಏನೋ ಗೊತ್ತಿಲ್ಲ. ಮೊದಲ ಮಾರುಕಟ್ಟೆಗೆ ಬರಲಿ ಆಮೇಲೆ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಪ್ಪದೇ ಹಂಚಿಕೊಳ್ಳುತ್ತೇವೆ.

Most Read Articles

Kannada
English summary
An Electric Hemet Wiper For The Monsoon — Meet Wipey, The Helmet Wiper!
Story first published: Friday, April 26, 2019, 19:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X