ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

1976ರ ಮಾಡೆಲಿನ ಹಾರ್ಲೆ ಡೇವಿಡ್ಸನ್ ಎಫ್‍ಎಲ್‍‍ಹೆಚ್ 1200 ಎಲೆಕ್ಟ್ರಾ ಗ್ಲೈಡ್ ವಿಶ್ವದ ಮೂರನೇ ಅತಿ ದುಬಾರಿ ಬೆಲೆಯ ಬೈಕ್ ಎನಿಸಿದೆ. ಈ ಬೈಕ್ ಜಿ‍‍ಡಬ್ಲ್ಯು‍ಎಸ್ ಹರಾಜಿನಲ್ಲಿ ಅತಿ ದುಬಾರಿ ಎನಿಸುವ 8 ಲಕ್ಷ ಡಾಲರ್ ಅಂದರೆ ಭಾರತೀಯ ಮೌಲ್ಯದಲ್ಲಿ ರೂ.5.75 ಕೋಟಿಗಳಿಗೆ ಮಾರಾಟವಾಗಿದೆ.

ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

ಇಷ್ಟೊಂದು ಬೆಲೆಯನ್ನು ಹೊಂದಿರುವ ಅತಿ ದುಬಾರಿ ಬೆಲೆಯ ಹಾರ್ಲೆ ಡೇವಿಡ್ಸನ್ ಬೈಕ್ ಎಂಬ ಹೆಗ್ಗಳಿಕೆಯನ್ನು ಈ ಬೈಕ್ ಹೊಂದಿದೆ. ಪಯೋನೀರ್ ಆಟೋ ಮ್ಯೂಸಿಯಂನಲ್ಲಿದ್ದ ಈ ಬೈಕಿನ ಹರಾಜಿನಿಂದ ಬಂದ ದುಬಾರಿ ಬೆಲೆಯಿಂದಾಗಿ ಮ್ಯೂಸಿಯಂಗೆ ಬಂಪರ್ ಲಾಟರಿ ಹೊಡೆದಿದೆ.

ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

1976ರ ಮಾಡೆಲಿನ ಹಾರ್ಲೆ ಡೇವಿಡ್ಸನ್ ಎಫ್‌ಎಲ್‌ಹೆಚ್ 1200 ಎಲೆಕ್ಟ್ರಾ ಗ್ಲೈಡ್ ಬೈಕ್ ಅನ್ನು ಅಮೇರಿಕನ್ ರಾಕ್ ಅಂಡ್ ರೋಲ್ ಸ್ಟಾರ್ ಆದ ಎಲ್ವಿಸ್ ಪ್ರೆಸ್ಲಿಯವರು ಖರೀದಿಸಿದ್ದರು. ಎಲ್ವಿಸ್ ಪ್ರೆಸ್ಲಿಯವರನ್ನು ಕಿಂಗ್ ಆಫ್ ರಾಕ್ ಅಂಡ್ ರೋಲ್ ಎಂದು ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ವಿಶ್ವದ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.

ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

ಎಲ್ವಿಸ್ ಪ್ರೆಸ್ಲಿಯವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಂಗೀತ ಇತಿಹಾಸದ ಜನಪ್ರಿಯ ಕಲಾವಿದರಲ್ಲಿ ಅವರೂ ಒಬ್ಬರು. ಅವರ ಮ್ಯೂಸಿಕ್ ಅಲ್ಬಂಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದವು. ಎಲ್ವಿಸ್ ಪ್ರೆಸ್ಲಿರವರು ಈ ಹಾರ್ಲೆ ಡೇವಿಡ್ಸನ್ ಎಫ್‌ಎಲ್‌ಹೆಚ್ 1200 ಎಲೆಕ್ಟ್ರಾ ಗ್ಲೈಡ್ ಬೈಕ್ ಅನ್ನು 1976ರಲ್ಲಿ ಖರೀದಿಸಿದರೆಂದು ಹೇಳಲಾಗಿದೆ.

ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

1977ರಲ್ಲಿ ಅವರು ಸಾಯುವ ಮುನ್ನ ಈ ಬೈಕ್ ಅನ್ನು ಹಾರ್ಲೆ ಡೇವಿಡ್ಸನ್ ಬೈಕುಗಳ ಡೀಲರ್‍‍ಗೆ ಮಾರಾಟ ಮಾಡಿದ್ದರು. ಹೀಗೆ ಮಾರಾಟ ಮಾಡುವ ಮೊದಲು ಅವರು ಈ ಬೈಕ್ ಅನ್ನು ಕೇವಲ ಮೂರು ತಿಂಗಳು ಚಲಾಯಿಸಿದ್ದರು. ಎಲ್ವಿಸ್ ಪ್ರೆಸ್ಲಿ ದೊಡ್ಡ ಸ್ಟಾರ್ ಆದ ಕಾರಣ, ಎಲ್ವಿಸ್‍‍ರವರ ಹೆಸರಿನಲ್ಲಿದ್ದ ಬೈಕಿನ ರಿಜಿಸ್ಟ್ರೇಷನ್ ಅನ್ನು ಹಾಗೆಯೇ ಉಳಿಸಲಾಯಿತು.

ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

ಅದಾದ ನಂತರ ಈ ಬೈಕ್ ಅನ್ನು ಹೊಸ ಮಾಲೀಕರು ಖರೀದಿಸಿದರು. ನಂತರ ಅವರು ಅದನ್ನು ದಕ್ಷಿಣ ಡಕೋಟಾದಲ್ಲಿರುವ ಪಯೋನೀರ್ ಆಟೋ ಮ್ಯೂಸಿಯಂಗೆ ನೀಡಿದರು. ಆ ಮ್ಯೂಸಿಯಂನಲ್ಲಿ ಈ ಬೈಕ್ ಅನ್ನು 30 ವರ್ಷಗಳ ಕಾಲ ಪ್ರದರ್ಶಿಸಲಾಯಿತು.

ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

ಈ ಬೈಕ್ ಅನ್ನು ಇತ್ತೀಚೆಗೆ ಹರಾಜಿನಲ್ಲಿ ಮಾರಾಟ ಮಾಡಲು ತೀರ್ಮಾನಿಸಲಾಯಿತು. ಜಿಡಬ್ಲ್ಯೂಎಸ್ ಹರಾಜಿನಲ್ಲಿ, ಈ ಬೈಕಿಗೆ 2 ಮಿಲಿಯನ್ ಡಾಲರ್ ಅಂದರೆ ರೂ. 14.36 ಕೋಟಿ ಗಳಿಸಬಹುದೆಂದು ನಿರೀಕ್ಷಿಸಿತ್ತು.

ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

ಆದರೆ ಹರಾಜಿನಲ್ಲಿ ಈ ಬೈಕಿಗೆ 8 ಲಕ್ಷ ಡಾಲರ್ ಅಂದರೆ ರೂ. 5.75 ಕೋಟಿ ನೀಡಿ ಖರೀದಿಸಲಾಯಿತು. ಇದರಿಂದ ಈ ಬೈಕ್ ಪ್ರಪಂಚದ ಮೂರನೇ ಅತಿ ದುಬಾರಿ ಬೆಲೆಯ ಬೈಕ್ ಹಾಗೂ ಹಾರ್ಲೆ ಡೇವಿಡ್ಸನ್ ಕಂಪನಿಯ ಅತಿ ದುಬಾರಿ ಬೆಲೆಯ ಬೈಕ್ ಎಂಬ ಹೆಗ್ಗಳಿಕೆಯನ್ನು ಪಡೆಯಿತು.

ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

ಪ್ರಪಂಚದ ದುಬಾರಿ ಬೈಕುಗಳ ಬಗ್ಗೆ ಹೇಳುವುದಾದರೆ, ನೈಮನ್ ಮಾರ್ಕಸ್ ಕಂಪನಿಯ ಫೈಟರ್ ಬೈಕ್, 11 ಮಿಲಿಯನ್ ಡಾಲರ್ ಬೆಲೆ ಅಂದರೆ ರೂ.7.59 ಕೋಟಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಎ‍‍ಜೆ‍ಎಸ್ ಕಂಪನಿಯ ಪಾರ್ಕ್ಯುಪೈನ್ ಬೈಕ್ ಎರಡನೇ ಸ್ಥಾನದಲ್ಲಿದೆ.

ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

ಹಾರ್ಲೆ ಡೇವಿಡ್ಸನ್ ಬೈಕ್‍‍ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಹಾರ್ಲೆ ಡೇವಿಡ್ಸನ್ ಸ್ಟ್ರಾಪ್ ಟ್ಯಾಂಕ್ ಬೈಕ್ ಅನ್ನು 1907ರಲ್ಲಿ ನಡೆದ ಹರಾಜಿನಲ್ಲಿ ಖರೀದಿಸಲಾಗಿತ್ತು. ಆಗ ಈ ಬೈಕಿಗೆ 7.15 ಲಕ್ಷ ಡಾಲರ್ ಅಂದರೆ ರೂ.5.13 ಕೋಟಿ ನೀಡಿ ಹರಾಜಿನಲ್ಲಿ ಖರೀದಿಸಲಾಗಿತ್ತು.

ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

ಹಾರ್ಲೆ ಡೇವಿಡ್ಸನ್ ಕಂಪನಿಯ ದುಬಾರಿ ಬೈಕುಗಳ ಪೈಕಿ ಮೂರನೇ ಸ್ಥಾನದಲ್ಲಿರುವ ಫ್ಯಾಟ್‌ಬಾಯ್ ಬೈಕ್‍ ಅನ್ನು, ಹಾಲಿವುಡ್‍‍ನ ಬ್ಲಾಕ್ ಬಸ್ಟರ್ ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ ಚಿತ್ರದಲ್ಲಿ ಅರ್ನಾಲ್ಡ್ ಶ್ವಾರ್ಟ್‌ಜೆನ್ನೆಗರ್ ಸವಾರಿ ಮಾಡಿದ್ದರು. ಈ ಬೈಕ್ ಅನ್ನು 5.12 ಲಕ್ಷ ಡಾಲರ್ ಅಂದರೆ ರೂ.3.67 ಕೋಟಿ ನೀಡಿ ಹರಾಜಿನಲ್ಲಿ ಖರೀದಿಸಲಾಗಿತ್ತು.

ದುಬಾರಿ ಬೆಲೆಗೆ ಹರಾಜಾಯಿತು ಎಲ್ವಿಸ್ ಪ್ರೆಸ್ಲಿಯ ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹಾರ್ಲೆ ಡೇವಿಡ್ಸನ್ ಬೈಕುಗಳು ಪ್ರೀಮಿಯಂ ಬೈಕುಗಳಾಗಿದ್ದು, ಕೇವಲ ಶ್ರೀಮಂತರು ಮಾತ್ರ ಖರೀದಿಸುವ ಬೈಕುಗಳಾಗಿವೆ. ಎಲ್ವಿಸ್ ಪ್ರೆಸ್ಲಿಯಂತಹ ಸೆಲೆಬ್ರಿಟಿ ಈ ಬೈಕ್ ಅನ್ನು ಹೊಂದಿದ್ದು, ಹಾರ್ಲೆ ಡೇವಿಡ್ಸನ್ ಬೈಕಿನ ಪ್ರಸಿದ್ದಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬೈಕ್ ಇಷ್ಟೊಂದು ಜನಪ್ರಿಯವಾಗಿ, ಇಷ್ಟೊಂದು ಹಣವನ್ನು ಪಡೆಯುವ ಬಗ್ಗೆ ಯಾರೂ ಯೋಚಿಸಿರಲಿಲ್ಲ. ಕೆಲವು ಬೈಕುಗಳು ಹಳೆಯದಾದಷ್ಟು ಹೆಚ್ಚು ಬೆಲೆಯನ್ನು ಹೊಂದುತ್ತವೆ.

Most Read Articles

Kannada
English summary
Elvis Presley’s 1976 Harley-Davidson Becomes Third Most-Expensive Motorcycle In Auction - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X