ಹೀಗಿರಲಿವೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕುಗಳು

ಎಂಫ್ಲಕ್ಸ್, ತನ್ನ ಟೂ ಹಾಗೂ ಟೂ ಪ್ಲಸ್ ಎಲೆಕ್ಟ್ರಿಕ್ ಬೈಕುಗಳ ಟೀಸರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಬಿಡುಗಡೆಗೊಳಿಸಿದೆ. ಭಾರತೀಯ ಮೂಲದ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ ಅಪ್ ಕಂಪನಿಯಾದ ಎಂಫ್ಲಕ್ಸ್, ಕಳೆದ ವರ್ಷ ಟೂ - ಫ್ಯೂಚರ್ ಫೈಟರ್ ಎಂಬ ಟೀಸರ್ ಅನ್ನು ಬಿಡುಗಡೆಗೊಳಿಸಿತ್ತು.

ಹೀಗಿರಲಿವೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕುಗಳು

ಈ ಬಾರಿ ಬಿಡುಗಡೆಯಾಗಿರುವ ಟೀಸರ್ ಎರಡು ಹೊಸ ಮಾದರಿಯ ಬೈಕುಗಳ ಪವರ್ ಹಾಗೂ ದೂರದ ಅಂಕಿ ಅಂಶಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ಎರಡೂ ಬೈಕುಗಳ ಪೈಕಿ ಎಂಫ್ಲಕ್ಸ್ ಟೂ ಪ್ಲಸ್ ಹೆಚ್ಚು ಬಲಶಾಲಿಯಾಗಿದೆ. ಟೂ ಪ್ಲಸ್ 0 - 100 ಕಿ.ಮೀ ವೇಗವನ್ನು ಕೇವಲ 3.6 ಸೆಕೆಂಡುಗಳಲ್ಲಿ ಕ್ರಮಿಸಲಿದೆ. ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 180 ಕಿ.ಮೀ ಆಗಿರಲಿದೆ. ಒಂದು ಬಾರಿಯ ಚಾರ್ಜ್‍‍ನಿಂದ ಟೂ ಪ್ಲಸ್ ಬೈಕ್ 200 ಕಿ.ಮೀವರೆಗೂ ಚಲಿಸಲಿದೆ.

ಹೀಗಿರಲಿವೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕುಗಳು

ಟೂ ಬೈಕ್ ಎಂಫ್ಲಕ್ಸ್ ಕಂಪನಿಯು ಕೈಗೆಟಕುವ ದರದಲ್ಲಿ ನೀಡುತ್ತಿರುವ ಬೈಕ್ ಆಗಿದೆ. ಟೂ ಬೈಕ್ 0 - 100 ಕಿ.ಮೀ ವೇಗವನ್ನು 4.5 ಸೆಕೆಂಡುಗಳಲ್ಲಿ ಕ್ರಮಿಸಲಿದೆ. ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 160 ಕಿ.ಮೀ ಆಗಿರಲಿದೆ.

ಹೀಗಿರಲಿವೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕುಗಳು

ಟೂ ಬೈಕ್ ಒಂದು ಬಾರಿಯ ಚಾರ್ಜ್‍‍ನಿಂದ 160 ಕಿ.ಮೀ ದೂರದವರೆಗೆ ಚಲಿಸಲಿದೆ. ಈ ಎಲೆಕ್ಟ್ರಿಕ್ ಬೈಕ್, ರಸ್ತೆ ಆಧಾರಿತ ಬೈಕ್ ಆಗಿರುವ ಸಾಧ್ಯತೆಗಳಿವೆ. ಟೀಸರ್‍‍ನಲ್ಲಿರುವ ಚಿತ್ರಗಳಲ್ಲಿ ಟೂ ಬೈಕ್ ಬಿಳಿ ಬಣ್ಣವನ್ನು ಹೊಂದಿದ್ದರೆ, ಟೂ ಪ್ಲಸ್ ಬೈಕ್ ಗ್ರೇ ಬಣ್ಣವನ್ನು ಹೊಂದಿದೆ. ಆಕರ್ಷಕವಾಗಿರುವ ಎಲ್ಇಡಿ ಹೆಡ್ಲೈಟ್ ಅನ್ನು ಸಹ ಕಾಣಬಹುದು.

ಹೀಗಿರಲಿವೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕುಗಳು

ಈ ಬೈಕುಗಳಲ್ಲಿ ಹಿಂಬದಿಯಲ್ಲಿ ಎಲ್ಇಡಿ ಲೈಟ್ ಹಾಗೂ ಟರ್ನ್ ಇಂಡಿಕೇಟರ್‍‍ಗಳಿರುವ ಸಾಧ್ಯತೆಗಳಿವೆ. ಟ್ಯಾಂಕಿನ ವಿನ್ಯಾಸವು ಬೈಕುಗಳ ನೇಕೆಡ್ ವಿನ್ಯಾಸಕ್ಕೆ ಹೆಚ್ಚಿನ ಆಕರ್ಷಣೆಯನ್ನು ನೀಡುವ ಮೂಲಕ, ಬೈಕುಗಳು ಮತ್ತಷ್ಟು ಆಕ್ರಮಣಕಾರಿಯಾಗಿ ಕಾಣುವಂತೆ ಮಾಡುತ್ತವೆ.

ಹೀಗಿರಲಿವೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕುಗಳು

ಟೂ ಹಾಗೂ ಟೂ ಪ್ಲಸ್ ಬೈಕುಗಳ ಒಟ್ಟಾರೆ ವಿನ್ಯಾಸವು ಎಂಫ್ಲಕ್ಸ್ ಒನ್‌ ಬೈಕಿನಂತಿರುವ ಸಾಧ್ಯತೆಗಳಿವೆ. ಎಂಫ್ಲಕ್ಸ್ ಹೊಸ ಬೈಕ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸದಿದ್ದರೂ, ಈ ಬೈಕುಗಳು ಎತ್ತರವಾದ ಹಾಗೂ ಫ್ಲಾಟ್ ಹ್ಯಾಂಡಲ್‍‍ಬಾರ್‍‍ಗಳನ್ನು ಹೊಂದಿರಲಿವೆ.

ಹೀಗಿರಲಿವೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕುಗಳು

ಇದರಿಂದಾಗಿ ಆರಾಮದಾಯಕವಾದ ಹಾಗೂ ನೇರವಾದ ಸವಾರಿಯನ್ನು ಮಾಡಬಹುದಾಗಿದೆ. ಎಂಫ್ಲಕ್ಸ್ ಒನ್‌ನಲ್ಲಿರುವಂತಹ ಅದೇ ಬಣ್ಣದ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಈ ಬೈಕಿನಲ್ಲಿಯೂ ಸಹ ನಿರೀಕ್ಷಿಸಬಹುದು.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಹೀಗಿರಲಿವೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕುಗಳು

ನೇಕೆಡ್ ಸ್ಟ್ರೀಟ್ ಲುಕ್ ಹೊಂದಿರುವ ಹಾಗೂ ಫೇರಿಂಗ್‍‍ಗಳನ್ನು ಹೊಂದಿಲ್ಲದೇ ಇರುವ ಈ ಬೈಕ್ 169 ಕೆ.ಜಿ ತೂಕವನ್ನು ಹೊಂದಿರಲಿದ್ದು, ಎಂಫ್ಲಕ್ಸ್ ಒನ್‌ಗಿಂತ ಕಡಿಮೆ ತೂಕವನ್ನು ಹೊಂದಿರಲಿದೆ. ಈ ಬೈಕುಗಳ ಫ್ರೇಮ್, ಸ್ಟೀಲ್ ಟ್ರೆಲ್ಲಿಸ್ ಆಗಿರಲಿದ್ದು, ರಸ್ತೆ ಸವಾರಿಗಾಗಿ ಎರ್ಗೊನಾಮಿಕ್ಸ್ ಹೊಂದಿರಲಿದೆ.

MOST READ: ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಹೀಗಿರಲಿವೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕುಗಳು

ಎಂಫ್ಲಕ್ಸ್ ಟೂ ಹಾಗೂ ಟೂ ಪ್ಲಸ್ ಒಂದೇ ಪ್ಲಾಟ್‍‍ಫಾರಂ ಅನ್ನು ಹೊಂದಿರಲಿವೆ. ಟೂ ಪ್ಲಸ್ ಬೈಕಿನ ಮುಂಭಾಗದಲ್ಲಿ ಪೂರ್ಣ ಪ್ರಮಾಣದ ಅಡ್ಜಸ್ಟ್ ಮಾಡಬಹುದಾದ ಓಹ್ಲಿನ್ಸ್ ನ ಯುಎಸ್‌ಡಿ ಅಪ್‌ಸೈಡ್ ಡೌನ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್‍‍ಗಳಿರಲಿವೆ. ಟೂ ಮಾದರಿಯ ಬೈಕಿನಲ್ಲಿ ಮೂಲ ಮಾದರಿಯ ಸಸ್ಪೆಂಷನ್‍‍ಗಳಿರುವ ಸಾಧ್ಯತೆಗಳಿವೆ.

MOST READ: ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಹೀಗಿರಲಿವೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕುಗಳು

ಎಂಫ್ಲಕ್ಸ್ ಟೂ ಮಾದರಿಯ ಬೈಕಿನ ಬೆಲೆಯು ರೂ.4.5 ಲಕ್ಷ ಹಾಗೂ ಟೂ ಪ್ಲಸ್ ಮಾದರಿಯ ಬೈಕಿನ ಬೆಲೆಯು ರೂ.5 ಲಕ್ಷಗಳಾಗುವ ಸಾಧ್ಯತೆಗಳಿವೆ. ಈ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ. ಎಂಫ್ಲಕ್ಸ್ ಟೂ ಹಾಗೂ ಟೂ ಪ್ಲಸ್ ಮಾದರಿಯ ಬೈಕುಗಳನ್ನು 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸುವ ಸಾಧ್ಯತೆಗಳಿವೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಎಂಫ್ಲಕ್ಸ್, ಟೂ ಹಾಗೂ ಟೂ ಪ್ಲಸ್ ಬೈಕುಗಳನ್ನು 2020ರ ಕೊನೆಯ ವೇಳೆಗೆ ಬಿಡುಗಡೆಗೊಳಿಸಲಿದೆ.

ಹೀಗಿರಲಿವೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕುಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಂಫ್ಲಕ್ಸ್ ಟೀಸರ್ ಬಿಡುಗಡೆಗೊಳಿಸುವ ಮೂಲಕ ಗ್ರಾಹಕರ ಗಮನವನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿದೆ. ಈ ಎಲೆಕ್ಟ್ರಿಕ್ ಬೈಕುಗಳ ಪರ್ಫಾಮೆನ್ಸ್ ಹಾಗೂ ವ್ಯಾಪ್ತಿ ಭರವಸೆ ಮೂಡಿಸಿದೆ. ಎಂಫ್ಲಕ್ಸ್ ಈ ಹಿಂದೆ ಅಭಿವೃದ್ಧಿಪಡಿಸಿದ್ದ ಬೈಕುಗಳ ಬಿಡುಗಡೆಯಲ್ಲಿ ವಿಳಂಬವಾಗಿದ್ದರೂ, ಹೊಸ ಬೈಕುಗಳು ಆದಷ್ಟು ಬೇಗ ಮಾರುಕಟ್ಟೆಗೆ ಕಾಲಿಡುವ ಸಾಧ್ಯತೆಗಳಿವೆ.

Most Read Articles

Kannada
English summary
Emflux Two And Two+ Electric Motorcycle Teaser Reveals Performance And Range Figures - Read in kannada
Story first published: Monday, August 19, 2019, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X