ಸೈಕಲ್ ಅನ್ನೇ ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

ಒಡಿಶಾದ ರೈತರೊಬ್ಬರು ತಮ್ಮ ಸೈಕಲ್ ಅನ್ನು ಬೈಕ್ ಆಗಿ ಮಾರ್ಪಡಿಸಿದ್ದಾರೆ. ಒಡಿಶಾದಲ್ಲಿರುವ ಬುದ್ಧ್ ಜಿಲ್ಲೆಯ ಬಮಂಡಾ ಗ್ರಾಮದ ವಾಸಿಯಾದ ದಿಲೀಪ್ ಮಹಾಪಾತ್ರರವರು ತಮ್ಮ ಸ್ವಂತ ಹಣದಿಂದ ಈ ಬೈಕ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಸೈಕಲ್ಲನ್ನು ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

ದಿಲೀಪ್‍‍ರವರ ಪ್ರಕಾರ ಈ ಎಲೆಕ್ಟ್ರಿಕ್ ಬೈಕ್ ಯಾವುದೇ ಶಬ್ದ ಮಾಲಿನ್ಯವನ್ನಾಗಲೀ, ವಾಯು ಮಾಲಿನ್ಯವನ್ನಾಗಲೀ ಮಾಡುವುದಿಲ್ಲ. ಒಡಿಶಾದ ದಿಲೀಪ್ ಮಹಾಪಾತ್ರರವರು ಒಬ್ಬ ಸಾಮಾನ್ಯ ರೈತರಾಗಿದ್ದಾರೆ. ದಿಲೀಪ್‍‍ರವರಿಗೆ ಯಾವುದೇ ಆಟೋಮೊಬೈಲ್ ಹಿನ್ನೆಲೆಯಿಲ್ಲ.

ಸೈಕಲ್ಲನ್ನು ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

ಯಾವುದೇ ತಾಂತ್ರಿಕ ಜ್ಞಾನವು ಇಲ್ಲ. ಆದರೂ ಸಹ ಫ್ಯಾಕ್ಟರಿಯಿಂದ ಖರೀದಿಸಿದ ಸೈಕಲ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಮಾರ್ಪಡಿಸಿದ್ದಾರೆ. ತಮ್ಮ ಈ ಅನ್ವೇಷಣೆಗಾಗಿ ಎಲ್ಲೆಡೆಯಿಂದ ಪ್ರಶಂಸೆಯನ್ನು ಪಡೆಯುತ್ತಿದ್ದಾರೆ.

ಸೈಕಲ್ಲನ್ನು ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

ಇದರಿಂದ ಉತ್ತೇಜಿತರಾಗಿರುವ ಅವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ಬೈಕುಗಳನ್ನು ಅಭಿವೃದ್ಧಿಪಡಿಸಲು ಬಯಸಿದ್ದಾರೆ. ಒಡಿಶಾದ ಸ್ಥಳೀಯ ಚಾನೆಲ್ ಒಮ್‍‍ಕಾಮ್ ನ್ಯೂಸ್ ಈ ಬಗ್ಗೆ ವಿಸ್ತೃತ ವರದಿಯನ್ನು ಪ್ರಸಾರ ಮಾಡಿದೆ.

ಸೈಕಲ್ಲನ್ನು ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

ಭಾರತದಲ್ಲಿ ಯಾವುದೇ ಎಲೆಕ್ಟ್ರಿಕ್ ಬೈಕಿನ ಬೆಲೆಯು ರೂ.30,000ದಿಂದ ರೂ.55,000ದವರೆಗೆ ಇರಲಿದೆ. ಆದರೆ ದಿಲೀಪ್‍‍ರವರಿಗೆ ಈ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬೈಕ್ ಅನ್ನು ಅಭಿವೃದ್ದಿಪಡಿಸಲು ರೂ.10,000 ದಿಂದ ರೂ.15,000ದವರೆಗೆ ವೆಚ್ಚವಾಗಿದೆ.

ಸೈಕಲ್ಲನ್ನು ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

4ರಿಂದ 5 ಗಂಟೆಯಲ್ಲಿ ಈ ಬೈಕಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಬಹುದು. 30 ಕಿ.ಮೀ ವೇಗದಲ್ಲಿ ಚಲಿಸುವ ಈ ಬೈಕಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 80 ಕಿ.ಮೀ ದೂರದವರೆಗೆ ಚಲಿಸಬಹುದು.

ಸೈಕಲ್ಲನ್ನು ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

ಈ ಪರಿಸರ ಸ್ನೇಹಿ ಬೈಕ್ ಅನ್ನು ತಮ್ಮ ಸ್ವಂತ ಹಣದಿಂದ ಅಭಿವೃದ್ಧಿಪಡಿಸಿರುವ ದಿಲೀಪ್‍‍‍ರವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಬೈಕ್ ಸೈಕಲ್‍‍ನಂತೆ ಕಂಡು ಬಂದರೂ ಬೈಕ್‍‍ನಂತೆ ಕಾರ್ಯ ನಿರ್ವಹಿಸುತ್ತದೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಸೈಕಲ್ಲನ್ನು ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

ಈ ಬೈಕಿನಲ್ಲಿ ಅಳವಡಿಸಿರುವ 12 ವೋಲ್ಟ್ ಬ್ಯಾಟರಿ ಹಾಗೂ 35 ವ್ಯಾಟ್ ಮೋಟರ್ ಅನ್ನು ದಿಲೀಪ್‍‍ರವರು ದೆಹಲಿಯಲ್ಲಿ ಖರೀದಿಸಿದ್ದರು. ಈ ಬೈಕ್ ಆಕ್ಸೆಲೆರೇಟರ್, ಸ್ಪೀಡ್ ನಿಯಂತ್ರಣಕ್ಕಾಗಿ ಕಂಟ್ರೋಲರ್, ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಹಾಗೂ ಬ್ಯಾಟ್ ಲೈಟ್‍‍ಗಳನ್ನು ಹೊಂದಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ದಿಲೀಪ್‍‍ರವರಿಗೆ ಮುಂಚಿನಂತೆ ಸೈಕಲ್ ತುಳಿಯಲು ಕಷ್ಟವಾಗುತ್ತಿದ್ದ ಕಾರಣಕ್ಕೆ ಈ ಬೈಕ್ ಅನ್ನು ಅಭಿವೃದ್ಧಿಪಡಿಸಿರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಅವರು ತಮ್ಮ ಸೈಕಲ್ ಅನ್ನು ಬೈಕ್ ರೀತಿಯಲ್ಲಿ ಮಾಡಿಫೈ ಮಾಡಲು ಇದೂ ಸಹ ಒಂದು ಮುಖ್ಯ ಕಾರಣವಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸೈಕಲ್ಲನ್ನು ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

ಈಗ ಅವರು ತಾವು ಹೋಗಬೇಕಾಗಿರುವ ಸ್ಥಳಗಳಿಗೆ ಹೆಚ್ಚಿನ ಶ್ರಮ ಹಾಕದೇ, ಸೈಕಲ್‍‍ಗಿಂತ ಹೆಚ್ಚಿನ ವೇಗದಲ್ಲಿ ತಲುಪಬಹುದಾಗಿದೆ. ಅಗತ್ಯವಿರುವವರಿಗೆ ಈ ಬೈಕಿನಿಂದ ಡ್ರಾಪ್ ನೀಡಲೂ ಬಹುದು. ಅಂದಹಾಗೆ ಬ್ಯಾಟರಿ ಚಾಲಿತ ಈ ಎಲೆಕ್ಟ್ರಿಕ್ ಬೈಕ್ ಅನ್ನು ಚಾಲನೆ ಮಾಡಲು ಯಾವುದೇ ಹೆಲ್ಮೆಟ್, ರಿಜಿಸ್ಟ್ರೇಷನ್ ಹಾಗೂ ಲೈಸೆನ್ಸ್ ಬೇಕಾಗಿಲ್ಲ.

ಸೈಕಲ್ಲನ್ನು ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

ಆದರೂ ಸಹ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸುವುದು ಒಳ್ಳೆಯದು. ಈ ಬೈಕ್ ಸುಲಭವಾಗಿ ಇಬ್ಬರನ್ನು ಹೊತ್ತೊಯ್ಯಲಿದೆ. ಯಾವುದೇ ರೀತಿಯ ಮಾಲಿನ್ಯವನ್ನುಂಟು ಮಾಡದ ಈ ಬೈಕ್‍‍ನಿಂದಾಗಿ ಹದಗೆಟ್ಟ ರಸ್ತೆಗಳನ್ನು ಹೊಂದಿರುವ ಗ್ರಾಮೀಣ ರಸ್ತೆಗಳಲ್ಲಿ ಪ್ರಯೋಜನವಾಗಲಿದೆ.

ಸೈಕಲ್ಲನ್ನು ಎಲೆಕ್ಟ್ರಿಕ್ ಬೈಕ್‍ ಆಗಿ ಬದಲಿಸಿದ ರೈತ..!

ದಿಲೀಪ್‍‍ರವರು ಮುಂಬರುವ ದಿನಗಳಲ್ಲಿ ಈ ರೀತಿಯ ಎಲೆಕ್ಟ್ರಿಕ್ ಬೈಕ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿಪಡಿಸ ಬಯಸಿದ್ದಾರೆ. ಆದರೆ ಅವರ ಹಣಕಾಸು ಪರಿಸ್ಥಿತಿಯು ಅವರ ಹಾದಿಗೆ ಅಡ್ಡ ಬಂದಿದೆ. ಕಡಿಮೆ ವೆಚ್ಚದ ಈ ಎಲೆಕ್ಟ್ರಿಕ್ ಬೈಕ್‍‍ನಿಂದ ರೈತರಿಗೆ ಅನುಕೂಲವಾಗಲಿದೆ. ಈ ಎಲೆಕ್ಟ್ರಿಕ್ ಬೈಕಿನ ಅಭಿವೃದ್ಧಿಯಿಂದ ಉತ್ತೇಜಿತರಾಗಿರುವ ದಿಲೀಪ್ ಮಹಾಪಾತ್ರರವರು ಮುಂಬರುವ ದಿನಗಳಲ್ಲಿ ರೈತರಿಗೆ ಬ್ಯಾಟರಿ ಚಾಲಿತ ಕಾರ್ಟ್ ಅನ್ನು ಅಭಿವೃದ್ಧಿಪಡಿಸಲು ಬಯಸಿದ್ದಾರೆ.

Image Courstesy: Ommcom News/YouTube

Most Read Articles

Kannada
English summary
Farmer modifies cycle to electric bike - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X