ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಸುಮಾರು 2 ದಶಕಗಳ ನಂತರ ಭಾರತೀಯ ಮಾರುಕಟ್ಟೆಗೆ ಮರಳಿ ಪ್ರವೇಶ ಪಡೆದಿರುವ ಜಾವಾ ಮೋಟಾರ್‌ಸೈಕಲ್ ಸಂಸ್ಥೆಯು ಕಳೆದ 2018ರ ನವೆಂಬರ್‌ನಲ್ಲಿ ತನ್ನ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಹೊಸ ಬೈಕ್ ವಿತರಣೆಗೆ ಚಾಲನೆ ನೀಡಲಾಗಿದೆ. ಇದಕ್ಕೂ ಮುನ್ನ ಹೊಸ ಬೈಕ್ ಮಾದರಿಗಳ ಹರಾಜು ಪ್ರಕ್ರಿಯೆ ನಡೆಸುವ ಮೂಲಕ ಜಾವಾ ಸಂಸ್ಥೆಯು ಹೊಸ ಬೈಕ್‌ಗಳಿಂದ ಭಾರೀ ಪ್ರಮಾಣದ ಹಣ ಸಂಗ್ರಹಿಸಿದ್ದು, ಚಾರ್ಸಿ ನಂಬರ್ 001 ಹೊಂದಿರುವ ಬೈಕ್ ಭಾರೀ ಮೊತ್ತಕ್ಕೆ ಹರಾಜುಗೊಂಡಿದೆ.

ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಹೌದು, ಜಾವಾ ಸಂಸ್ಥೆಯು ಬಿಡುಗಡೆ ಮಾಡಿರುವ ಜಾವಾ ಮತ್ತು ಜಾವಾ 42 ಎನ್ನುವ ಬೈಕ್‌ಗಳ ವಿತರಣೆ ಮಾಡುವುದಕ್ಕೂ ಮುನ್ನ ಹರಾಜು ಪ್ರಕ್ರಿಯೆಯನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಚಾರ್ಸಿ ನಂಬರ್ 001 ಹೊಂದಿರುವ ಜಾವಾ ಬೈಕ್ ಮಾದರಿಯು ಬರೋಬ್ಬರಿ ರೂ. 45 ಲಕ್ಷಕ್ಕೆ ಮಾರಾಟವಾಗಿದ್ದು, ಮುಂಬೈ ಮೂಲದ ಉದ್ಯಮಿಯೊಬ್ಬರು ದುಬಾರಿ ಬೆಲೆ ನೀಡಿ ಈ ಬೈಕ್ ಮಾದರಿಯನ್ನು ಹರಾಜಿನಲ್ಲಿ ಖರೀದಿಸಿದ್ದಾರೆ. ಇದು ಸದ್ಯ ಮಾರುಕಟ್ಟೆಯಲ್ಲಿ ಖರೀದಿ ಲಭ್ಯವಿರುವ ಜಾಗ್ವಾರ್ ಎಕ್ಸ್ಇ ಸೆಡಾನ್ ಕಾರಿಗಿಂತಲೂ ದುಬಾರಿ ಅಂದ್ರೆ ತಪ್ಪಾಗುವುದಿಲ್ಲ.

ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಮುಂಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 13 ಬೈಕ್‌ಗಳು ಮಾರಾಟಗೊಂಡಿದ್ದು, ಹರಾಜು ಪ್ರಕ್ರಿಯೆ ಭಾಗಿಯಾಗಿದ್ದ ಸಾವಿರಾರು ಜಾವಾ ಪ್ರಿಯರು ದಾಖಲೆಯ ಬೆಲೆಗೆ ತಮ್ಮ ನೆಚ್ಚಿನ ಬೈಕ್‌ಗಳನ್ನು ಖರೀದಿಸಲು ಮುಗಿಬಿದ್ದರು. ಅಂತಿಮವಾಗಿ 13 ಬೈಕ್‌ಗಳನ್ನು ಹರಾಜು ಮಾಡುವಲ್ಲಿ ಯಶಸ್ವಿಯಾದ ಜಾವಾ ಸಂಸ್ಥೆಯು ಹೊಸ ದಾಖಲೆಯನ್ನೇ ಸೃಷ್ಠಿಸಿದೆ.

ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಇದರಲ್ಲಿ ಚಾರ್ಸಿ ನಂ. 001 ಹೊಂದಿರುವ ಜಾವಾ ಬೈಕ್ ಬರೋಬ್ಬರಿ ರೂ.45 ಲಕ್ಷಕ್ಕೆ ಹರಾಜುಗೊಂಡಿದ್ದು, ಇನ್ನುಳಿದಂತೆ ಚಾರ್ಸಿ ನಂಬರ್ ಆಧಾರಿಸಿ ವಿವಿಧ ಬೆಲೆಗಳಿಗೆ ಬೈಕ್ ಹರಾಜುಗೊಂಡವು. ಈ ಮೂಲಕ 13 ಬೈಕ್‌ಗಳಿಂದ ಬರೋಬ್ಬರಿ ರೂ.1.43 ಕೋಟಿ ಸಂಗ್ರಹವಾಗಿದ್ದು, ಹರಾಜಿನಲ್ಲಿ ಬೈಕ್ ಖರೀದಿ ಮಾಡಿರುವ ಗ್ರಾಹಕರಿಗೆ ಜಾವಾ ವಿಶೇಷ ಗ್ರಾಹಕ ಸೌಲಭ್ಯಗಳನ್ನು ಘೋಷಣೆ ಮಾಡಿದೆ.

ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಇನ್ನು ಸಂಗ್ರವಾದ ಹಣವನ್ನು ಹುತ್ಮಾತ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ಈ ನಿಧಿಯನ್ನು ಬಳಕೆ ಮಾಡಲಿರುವ ಜಾವಾ ಸಂಸ್ಥೆಯು, ದೇಶವೇ ಮೊದಲು ಎನ್ನುವ ಸಂದೇಶವನ್ನು ತನ್ನ ಗ್ರಾಹಕರಲ್ಲಿ ಅರಿವು ಮೂಡಿಸಿದಲ್ಲದೇ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ ದಾಖಲೆ ಬೆಲೆಗೆ ಬೈಕ್ ಖರೀದಿಸಿದ ಗ್ರಾಹಕರಿಗೆ ಧನ್ಯವಾದಗಳನ್ನು ತಿಳಿಸಿದೆ. ಜೊತೆಗೆ ಜಾವಾ ಸಂಸ್ಥೆಯ ಈ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದ್ದು, ದೇಶದ ಭದ್ರತೆಗಾಗಿ ತಮ್ಮ ಪ್ರಾಣವನ್ನೇ ಸಮರ್ಪಣೆ ಮಾಡುತ್ತಿರುವ ಯೋಧರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರುವುದಕ್ಕೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಒಂದು ವೇಳೆ ಹರಾಜು ವೇಳೆ ದುಬಾರಿ ಬೆಲೆ ನೀಡಿ ಜಾವಾ ಬೈಕ್ ಖರೀದಿಸಿದ ಗ್ರಾಹಕರನು ಅದೇ ಬೆಲೆಯಲ್ಲಿಯೇ ಇತರೆ ಐಷಾರಾಮಿ ಬೈಕ್‌ಗಳನ್ನು ಖರೀದಿ ಮಾಡಿದ್ದರೆ ಯಾವೆಲ್ಲಾ ಬೈಕ್‌ಗಳನ್ನು ಖರೀದಿ ಮಾಡಬಹುದಿತ್ತು? ಹಾಗಾದ್ರೆ ರೂ.45 ಲಕ್ಷ ಬೆಲೆ ಹೊಂದಿರುವ ಐಷಾರಾಮಿ ಬೈಕ್ ಭಾರತದಲ್ಲಿ ಎಷ್ಟಿವೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ..

ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಹಾರ್ಲೆ ಡೇವಿಡ್ಸನ್ ಸಿವಿಒ ಲಿಮಿಟೆಡ್

1,868ಸಿಸಿ ಟ್ವಿನ್ ಕೂಲ್ಡ್ ಮಿಲ್‌ವಾಕಿ-ಯೆಟ್ 117 ಎಂಜಿನ್ ಹೊಂದಿರುವ ಹಾರ್ಲೆ ಡೇವಿಡ್ಸನ್ ಸಿವಿಒ ಲಿಮಿಟೆಡ್ ಮಾದರಿಯು ಭಾರತದಲ್ಲಿ ಮಾರಾಟವಾಗುತ್ತಿರುವ ದುಬಾರಿ ಬೈಕ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಈ ಬೈಕ್ ರೂ.50.53 ಲಕ್ಷ ಬೆಲೆ ಹೊಂದಿದೆ.

ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಇಂಡಿಯನ್ ರೋಡ್‌ಮಾಸ್ಟರ್ ಎಲೈಟ್

ಇಂಡಿಯನ್ ಮೋಟಾರ್‍‍ಸೈಕಲ್‍ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಎರಡನೆಯ ಲಿಮಿಟೆಡ್ ಎಡಿಷನ್ ಮೋಟಾರ್‍‍ಸೈಕಲ್ ಇದಾಗಿದ್ದು, 24 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಮಾದರಿಯು 1,811ಸಿಸಿ ಎಂಜಿನ್‌ನೊಂದಿಗೆ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 48 ಲಕ್ಷ ಬೆಲೆ ಹೊಂದಿದೆ.

ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಡುಕಾಟಿ ಪ್ಯಾನಿಗಾಲೆ ವಿ4 ಆರ್

ಸೂಪರ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಡುಕಾಟಿ ಸಂಸ್ಥೆಯು ಭಾರತದಲ್ಲಿ ತನ್ನ ಟ್ರ್ಯಾಕ್ ರೇಸರ್ ಮಾದರಿಯಾದ ಪ್ಯಾನಿಗಾಲೆ ವಿ4 ಆರ್ ಆವೃತ್ತಿಯನ್ನು ಭಾರತದಲ್ಲೂ ಬಿಡುಗಡೆ ಮಾಡಿದ್ದು, ವಿನೂತನ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಬೈಕ್ ಮಾದರಿಯು 998 ಸಿಸಿ ಎಂಜಿನ್‌ನೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ 51.87 ಲಕ್ಷ ಬೆಲೆ ಹೊಂದಿದೆ.

ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಕವಾಸಕಿ ನಿಂಜಾ ಹೆಚ್2 ಕಾರ್ಬನ್

ನಿಂಜಾ ಹೆಚ್2 ಕಾರ್ಬನ್ ಬೈಕ್ ಮಾದರಿಯು 998 ಸೂಪರ್ ಚಾರ್ಜ್ ಎಂಜಿನ್ ಹೊಂದಿದ್ದು, 337 ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಈ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.41.79 ಲಕ್ಷ ಬೆಲೆ ಪಡೆದುಕೊಂಡಿದೆ.

ಜಾಗ್ವಾರ್ ಕಾರಿಗಿಂತಲೂ ದುಬಾರಿ ಬೆಲೆಯಲ್ಲಿ ಹರಾಜುಗೊಂಡ ಜಾವಾ ಚಾರ್ಸಿ ನಂಬರ್ 001 ಬೈಕ್

ಅಷ್ಟೇ ಅಲ್ಲದೇ ರೂ.45 ಲಕ್ಷ ವೆಚ್ಚದಲ್ಲಿ ಅತ್ಯುತ್ತಮ ಐಷಾರಾಮಿ ಸೌಲಭ್ಯವುಳ್ಳ ಕಾರು ಮಾದರಿಗಳನ್ನೇ ಖರೀದಿ ಮಾಡಬಹುದಾದರೂ ದುಬಾರಿ ಬೆಲೆಯಲ್ಲಿ ಬೈಕ್ ಖರೀದಿಸಿದ ಗ್ರಾಹಕರನ ದೂರದೃಷ್ಠಿ ಬೇರೆಯೇ ಇರಬಹುದು. ಹುತಾತ್ಮ ಸೈನಿಕ ಮಕ್ಕಳಿಗೆ ತನ್ನಿಂದ ಸಹಾಯವಾಗಲಿ ಎನ್ನುವ ಮನಸ್ಸಿನಿಂದಲೂ ಈ ರೀತಿಯಾಗಿ ದೊಡ್ಡ ಮೊತ್ತ ಪಾವತಿಸಿ ಒಂದೊವರಿ ಲಕ್ಷ ಮೌಲ್ಯದ ಬೈಕ್ ಅನ್ನು ರೂ.45 ಲಕ್ಷಕ್ಕೆ ಖರೀದಿ ಮಾಡಿರಬಹುದು ಅಲ್ವಾ?

Most Read Articles

Kannada
English summary
First Jawa Bike With Chassis 001 Sold For Rs 45 Lakh — Other Motorcycles For The Same Price.
Story first published: Tuesday, July 16, 2019, 17:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X