ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ಕಣಿವೆ ರಾಜ್ಯಗಳಲ್ಲಿ ಬೈಕ್ ರೈಡಿಂಗ್‌ ಮಾಡಲು ಇಚ್ಚಿಸುವ ಬಹುತೇಕ ಸಾಹಸಿ ಬೈಕ್ ಸವಾವರು ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬೈಕ್ ಮಾದರಿಗಳನ್ನೇ ಹೆಚ್ಚಾಗಿ ಬಳಕೆ ಮಾಡುವುದನ್ನು ನೋಡಿದ್ದೇವೆ. ಇದೀಗ ಸಾಹಸಿ ಬೈಕ್ ಸವಾರ ಪಟ್ಟಿಯಲ್ಲಿ ಹೊಸ ಆಯ್ಕೆಯೊಂದು ಸೇರ್ಪಡೆಯಾಗಿದ್ದು, ವಿಶ್ವದ ಅತಿ ಎತ್ತರದ ಕಣಿವೆ ಪ್ರದೇಶವಾದ ಖರ್ದಂಗ್ ಲಾ ಪಾಸ್ ತಲುಪುವಲ್ಲಿ ಮೊದಲ ಇಂಟರ್‌ಸೆಪ್ಟರ್ 650 ಯಶಸ್ವಿಯಾಗಿದೆ.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ಸಮುದ್ರ ಮಟ್ಟದಿಂದ 18,380 ಅಡಿ ಎತ್ತರದಲ್ಲಿರುವ ಖರ್ದಂಗ್ ಲಾ ಪಾಸ್ ವಿಶ್ವದ ಅತಿ ಎತ್ತರದ ವಾಹನ ಸಂಚಾರದ ರಸ್ತೆ ಹೊಂದಿರುವ ಖ್ಯಾತಿ ಹೊಂದಿದ್ದು, ಇಲ್ಲಿ ಸಂಚರಿಸುವುದು ಅಷ್ಟು ಸುಲಭದ ಮಾತಲ್ಲ. ಆದ್ರೆ ಸಾಹಸಿ ಬೈಕ್ ಸವಾರರ ಅನುಕೂಲಕ್ಕೆ ತಕ್ಕಂತೆ ಸಿದ್ದವಾಗಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸದ್ದು ಮಾತ್ರ ಇಲ್ಲಿ ಕೇಳುತ್ತಲೇ ಇರುತ್ತದೆ. ಕಠಿಣ ಪ್ರದೇಶದಲ್ಲೂ ಸರಾಗವಾಗಿ ನುಗ್ಗುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸಾಹಸಿ ಬೈಕ್ ಸವಾರರ ಆಯ್ಕೆಯಲ್ಲಿ ಇದೇ ಕಾರಣಕ್ಕೆ ಮುಂಚೂಣಿಯಲ್ಲಿವೆ ಎಂದ್ರೆ ತಪ್ಪಾಗುವುದಿಲ್ಲ.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ವಿವಿಧ ನಮೂನೆಯ ಕ್ಲಾಸಿಕ್ ಕ್ರೂಸರ್ ಬೈಕ್‌ಗಳನ್ನು ಪರಿಚಯಿಸಿ ಯಶಸ್ವಿಯಾಗಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕಳೆದ ಕೆಲ ತಿಂಗಳ ಹಿಂದಷ್ಟೇ ಇಂಟರ್‌ಸೆಪ್ಟರ್ 650 ಮತ್ತು ಕಾಂಟೆನೆಂಟಲ್ ಜಿಟಿ 650 ಎನ್ನುವ ಬೈಕ್‌ಗಳನ್ನು ಪರಿಚಯಿಸಿದೆ.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಳ್ಳುತ್ತಿರುವ ಇಂಟರ್‌ಸೆಪ್ಟರ್ 650 ಮತ್ತು ಕಾಂಟೆನೆಂಟಲ್ ಜಿಟಿ 650 ಬೈಕ್‌ಗಳು ಆಫ್ ರೋಡ್ ಕೌಶಲ್ಯ ಪ್ರದೇಶಿಸುವ ಗ್ರಾಹಕರ ಆಕರ್ಷಣೆ ಕಾರಣವಾಗುತ್ತಿದ್ದು, ಕಣಿವೆ ರಾಜ್ಯಗಳಲ್ಲೂ ಇದೀಗ ಟ್ವಿನ್ ಬೈಕ್‌ಗಳ ಸದ್ದು ಜೋರಾಗುತ್ತಿದೆ.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ಹೌದು, ತೆಲಂಗಾಣ ಮೂಲದ ಇಂಟರ್‌ಸೆಪ್ಟರ್ 650 ಬೈಕ್ ಮಾಲೀಕರೊಬ್ಬರು ಮೊದಲ ಬಾರಿಗೆ ವಿಶ್ವದ ಅತಿ ಎತ್ತರದ ಕಣಿವೆ ಪ್ರದೇಶ ಖರ್ದಂಗ್ ಲಾ ಪಾಸ್ ತಲುಪುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಅಡೆತಡೆಯಿಲ್ಲದೇ ಹೊಸ ಬೈಕ್ ಮಾದರಿಯೊಂದು ಕಠಿಣ ಸಂಚಾರಿ ಮಾರ್ಗದಲ್ಲಿ ಸರಳ ಚಾಲನೆಗೆ ಸಹಕಾರಿಯಾಗಿರುವುದರ ಬಗೆಗೆ ಬೈಕ್ ಮಾಲೀಕರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ಈಗಾಗಲೇ ಖರ್ದಂಗ್ ಲಾ ಪಾಸ್ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸಂಚರಿಸುತ್ತಲೇ ಇರುತ್ತವೆ. ಆದ್ರೆ ಈ ಬೈಕಿನ ವಿಶೇಷ ಅಂದ್ರೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪರಿಚಯಿಸಿದ 650 ಸಿಸಿ ಎಂಜಿನ್ ಸಾಮಾರ್ಥ್ಯದ ಬೈಕ್ ಮಾದರಿಯೊಂದು ಮೊದಲ ಬಾರಿಗೆ ಎತ್ತರ ಕಣಿವೆ ಪ್ರದೇಶವನ್ನು ತಲುಪುವಲ್ಲಿ ಯಶಸ್ವಿಯಾಗಿರುವುದು ಆರ್‌ಇ ಸಂಸ್ಥೆಯು ಸಹ ಖುಷಿ ವ್ಯಕ್ತಪಡಿಸಿದೆ.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ನುಬ್ರಾ ಕಣಿವೆಯನ್ನು ತಲುಪುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಖರ್ದಂಗ್ ಲಾ ಪಾಸ್. ಇದನ್ನು ಸ್ಥಳೀಯವಾಗಿ ಕೆ-ಟಾಪ್ ಎಂದೂ ಸಹ ಇದನ್ನು ಕರೆಯಲ್ಪಡುತ್ತದೆ. ಸಮುದ್ರ ಮಟ್ಟದಿಂದ 18380 ಅಡಿ ಎತ್ತರದಲ್ಲಿರುವ ಖರ್ದಂಗ್ ಲಾ ಪಾಸ್ ವಿಶ್ವದ ಅತಿ ಎತ್ತರದ ವಾಹನ ಸಂಚಾರದ ರಸ್ತೆ ಹೊಂದಿರುವ ಖ್ಯಾತಿ ಪಡೆದುಕೊಂಡಿದೆ.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ಕೆ-ಟಾಪ್ ನ ನಿರ್ಮಾಣ ಕಾಮಗಾರಿಯು ಪ್ರಾರಂಭವಾಗಿದ್ದು 17ನೇ ಆಗಸ್ಟ್ 1972ರಲ್ಲಿ. ಭಾರತೀಯ ಸೇನೆಯ 201 ಇಂಜಿನೀಯರ್ ರೆಜಿಮೆಂಟ್ ಮದ್ರಾಸ್ ಸ್ಯಾಪರ್ಸ್ ಸಹಾಯದಿಂದ ಕೆ-ಟಾಪ್ ನಿರ್ಮಾಣ ಮಾಡಿದೆ.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ಸತತ ಒಂದು ವರ್ಷದ ಕಾಮಗಾರಿಯ ನಂತರ 27ನೇ ಆಗಸ್ಟ್ 1973ರಲ್ಲಿ ಇದು ಸಾರ್ವಜನಿಕ ಬಳಕೆಗೆ ಅರ್ಪಿತವಾಗಿದ್ದು, ಕಾರಾಕೋರಮ್ ಮತ್ತು ಲಡಾಖ್ ನ ಸೌಂದರ್ಯವನ್ನು ಉತ್ತರ ಮತ್ತು ದಕ್ಷಿಣದಲ್ಲಿ ಸವಿಯಲು ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಪ್ರವಾಸಿಗರು ಮತ್ತು ಸಾಹಸಿ ಬೈಕ್ ಸವಾರರು ಭೇಟಿ ನೀಡುತ್ತಿರುತ್ತಾರೆ.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ಇದೀಗ ಇಂಟರ್‌ಸೆಪ್ಟರ್ 650 ಬೈಕ್ ಕೂಡಾ ಖರ್ದಂಗ್ ಲಾ ಪಾಸ್ ತಲುಪುವಲ್ಲಿ ಯಶಸ್ವಿಯಾಗಿದ್ದು, 649-ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 47-ಬಿಹೆಚ್‍ಪಿ ಮತ್ತು 52-ಎನ್ಎಮ್ ಟಾರ್ಕ್ ಉತ್ಪಾದನೆಯ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ನೀಡಬಲ್ಲದು.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍‍ಕಾಂಪ್ ಟೈ‍‍ರ್‍‍ಗಳನ್ನು ಅಳವಡಿಸಲಾಗಿದೆ.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ವಿಶ್ವದ ಅತಿ ಎತ್ತರದ ಕಣಿವೆ ತಲುಪಿದ ಆರ್‌ಇ ಮೊದಲ ಇಂಟರ್‌ಸೆಪ್ಟರ್ 650

ಇಂಟರ್‍‍ಸೆಪ್ಟರ್ 650 ಬೈಕ್ ಮಾದರಿಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.50 ಲಕ್ಷಕ್ಕೆ ಮತ್ತು ಕಾಂಟಿನೆಂಟಲ್ ಜಿಟಿ 650 ರೂ. 2.65 ಲಕ್ಷ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, 300ಸಿಸಿ ಸಾಮಾರ್ಥ್ಯದ ಕವಾಸಕಿ ನಿಂಜಾ 300 ಬೈಕ್‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವುದು ಹಲವು ವಿಶೇಷತೆಗಳಿವೆ ಕಾರಣವಾಗಿದೆ.

Source: Team BHP

Most Read Articles

Kannada
English summary
The First Royal Enfield Interceptor 650 That Reaches Khardung La Pass. Read in Kannada.
Story first published: Monday, May 27, 2019, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X