ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

ರಾಯಲ್ ಎನ್‍ಫೀಲ್ಡ್ ಕಂಪನಿಯು ಬಿಎಸ್-6 ಎಂಜಿನ್ ಹೊಂದಿರುವ ಹಿಮಾಲಯನ್ ಬೈಕ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ರಾಯಲ್ ಎನ್‍‍ಫೀಲ್ಡ್ ಈಗಾಗಾಲೇ 2019ರ ಇಐಸಿಎಂಎನಲ್ಲಿ ಅನಾವರಣಗೊಳಿಸಿದ ಮೂರು ಬಣ್ಣಗಳ ಆಯ್ಕೆಯ ಹಿಮಾಲಯನ್‍ ಬೈಕ್‍‍ಗಳನ್ನು ನವೀಕರಿಸಿ ಭಾರತದಲ್ಲಿ ಬಿಡುಗಡೆಗೊಳಿಸುತ್ತಿದೆ.

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಬೈಕ್‍‍ಗಳ ಸರಣಿಯಲ್ಲಿರುವ ಜನಪ್ರಿಯ ಮಾದರಿಗಳಲ್ಲಿ ಹಿಮಾಲಯನ್ ಬೈಕ್ ಸಹ ಒಂದಾಗಿದೆ. ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್ ಹೊಸ ಮಾಲಿನ್ಯ ನಿಯಮಕ್ಕೆ ಅನುಸಾರವಾಗಿರಲಿದೆ. ಹಿಂದಿನ ಹಿಮಾಲಯನ್ ಮಾದರಿಗಿಂತ ಹೊಸ ಬಿಎಸ್-6 ಹಿಮಾಲಯನ್ ಮಾದರಿಯಲ್ಲಿ ನೂತನ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು ಇಲ್ಲಿವೆ.

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

1. ಪ್ರಮುಖವಾಗಿ ವಿನ್ಯಾಸದ ನವೀಕರಣ

ಮುಂದಿನ ವರ್ಷ ಬಿಡುಗಡೆಯಾಗಲಿರುವ ಹಿಮಾಲಯನ್ ಬೈಕಿನಲ್ಲಿ ಸಣ್ಣ ಮಟ್ಟದ ನವೀಕರಣವನ್ನು ನಿರೀಕ್ಷಿಸಬಹುದು. 2020ರ ಹಿಮಾಲಯನ್ ಬೈಕ್ ಮುಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಹೆಡ್‍‍ಲ್ಯಾಂಪ್ ಯುನಿ‍‍ಟ್‍, ರೈಡರ್ ಮತ್ತು ಹಿಂಬದಿ ಪ್ರಯಾಣಿಕನಿಗೆ ಆರಾಮದಾಯಕವಾಗಿ ಸವಾರಿ ಮಾಡುವಂತೆ ಬೈಕಿನ ಸೀಟ್ ಸಿದ್ದಪಡಿಸಲಾಗಿದೆ.

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹಿಮಾಲಯನ್ ಬೈಕ್ ಸ್ನೋ (ಬಿಳಿ), ಗ್ರಾನೈಟ್ (ಮ್ಯಾಟ್ ಕಪ್ಪು) ಮತ್ತು ಸ್ಲೀಟ್ ಎಂಬ ಮೂರು ಬಣ್ಣ ಆಯ್ಕೆಗಳೊಂದಿಗೆ ಲಭ್ಯವಿದೆ.

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

2. ಬಿಎಸ್-6 ಎಂಜಿನ್

ಮುಂದಿನ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರವು ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಇದೀಗ ಜನಪ್ರಿಯ ಬೈಕ್ ಉತ್ಪಾದಕರು ತಮ್ಮ ಸರಣಿಯಲ್ಲಿರುವ ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುತ್ತಿದ್ದಾರೆ.

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

ರಾಯಲ್ ಎನ್‍‍ಫೀಲ್ಡ್ ಕಂಪನಿಯು ಸಹ ತನ್ನ ಸರಣಿಯಲ್ಲಿನ ಪ್ರಮುಖ ಬೈಕ್ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರಲ್ಲಿ ನಿರತವಾಗಿದೆ. ಇದರ ಭಾಗವಾಗಿ ಕಂಪನಿಯ ಜನಪ್ರಿಯ ಹಿಮಾಲಯನ್ ಬೈಕ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುತ್ತಿದೆ.

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

ಹಿಮಾಲಯನ್ ಬಿಎಸ್-6 ಮಾದರಿಯಲ್ಲಿ 411 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 24.5 ಬಿ‍‍ಹೆಚ್‍‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗುವುದು.

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

3. ಸಸ್ಪೆಂಕ್ಷನ್ ಮತ್ತು ಬ್ರೇಕ್ ಸಿಸ್ಟಂ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಟೂರರ್ ಬೈಕಿನಲ್ಲಿ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಫ್ರೇಂಗಳಿವೆ. ಇವುಗಳೊಂದಿಗೆ ಮುಂಭಾಗದಲ್ಲಿ 41 ಎಂಎಂನ ಟೆಲಿಸ್ಕೋಪಿಕ್ ಸಸ್ಪೆಂಕ್ಷನ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ.

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

ಬೈಕಿನ ಮುಂಭಾಗದಲ್ಲಿ 21 ಇಂಚಿನ ಮತ್ತು ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ವ್ಹೀಲ್‍‍ಗಳಿದ್ದು, ಕ್ರಮವಾಗಿ 90/90 ಹಾಗೂ 120/90 ಸೆಕ್ಷನ್ ಟಯರ್‌ಗಳನ್ನು ಹೊಂದಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‍‍ನ 300 ಎಂಎಂ ಫ್ರಂಟ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂನ ಸಿಂಗಲ್ ಪಿಸ್ಟನ್ ಕ್ಯಾಲಿಪರ್‍‍ಗಳಿವೆ.

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

4. ಹೊಸ ಸ್ವಿಚೆಬಲ್ ಎಬಿಎಸ್ ಮತ್ತು ಬಣ್ಣಗಳು

ಹೊಸ ಹಿಮಾಲಯನ್ ಬೈಕ್ ಸ್ವಿಚೆಬಲ್ ಎಬಿಎಸ್ ಅನ್ನು ಹೊಂದಿರಲಿದೆ. ಸ್ವಿಚೆ‍ಬಲ್ ಮಾಡಬಹುದಾದ ಎಬಿಎಸ್ ಆಯ್ಕೆಯ ಸಹಾಯದಿಂದ ಸವಾರನು ಬೈಕಿನ ಮೇಲೆ ಹೆಚ್ಚು ಕಂಟ್ರೋಲ್ ಅನ್ನು ಹೊಂದಬಹುದು.

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

ಹೊಸ ಹಿಮಾಲಯನ್ ಬೈಕ್ ರಾಕ್ ರೆಡ್, ಲೇಕ್ ಬ್ಲೂ ಮತ್ತು ಗ್ರೇವೆಲ್ ಗ್ರೇ ಎಂಬ ಮೂರು ವಿಶೆಷ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಫ್ಯೂಯಲ್ ಟ್ಯಾಂಕ್, ರೇರ್ ಲಗೇಜ್ ರ್‍ಯಾಕ್‍‍ನ ಮೇಲಿರುವ ರಾಕ್ ರೆಡ್ ಅಸೆಂಟ್‍‍‍ನೊಂದಿಗಿರುವ ಕಪ್ಪು ಬಣ್ಣವನ್ನು ಹೊಂದಿರಲಿದೆ.

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು

5.ಬೈಕಿನ ಬೆಲೆ ಮತ್ತು ಪೈಪೋಟಿ

ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.81 ಲಕ್ಷಗಳಾಗಿದೆ. ಹೊಸ ಬಿಎಸ್-6 ಹಿಮಾಲಿಯನ್ ಬೈಕ್‍‍ಗಳ ಬೆಲೆಯು ರೂ.10 ಸಾವಿರದಿಂದ 15 ಸಾವಿರದವರೆಗೆ ಹೆಚ್ಚಬಹುದು ಎಂಬ ನಿರೀಕ್ಷೆಗಳಿವೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಹಾಗೂ ಕವಾಸಕಿ ವರ್ಸಿಸ್-ಎಕ್ಸ್ 300, ಕೆಟಿ‍ಎಂ 390 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Top 5 Things To Expect From Upcoming 2020 RE Himalayan - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X