ರಾಯಲ್ ಎನ್‍‍ಫೀಲ್ಡ್ ಅನ್ನು ಕೋರ್ಟಿಗೆಳೆದ ಫ್ಲಾಶ್ ಎಲೆಕ್ಟ್ರಾನಿಕ್ಸ್

ವಾಹನ ಬಿಡಿಭಾಗಗಳ ತಯಾರಿಕಾ ಕಂಪನಿ ಫ್ಲಾಶ್ ಎಲೆಕ್ಟ್ರಾನಿಕ್ಸ್ ಇಂಡಿಯಾ, ಚೆನ್ನೈ ಮೂಲದ ಮೋಟಾರ್‍‍ಸೈಕಲ್ ತಯಾರಕ ಕಂಪನಿ ರಾಯಲ್ ಎನ್‍‍ಫೀಲ್ಡ್ ವಿರುದ್ಧ, ಎಲೆಕ್ಟ್ರಾನಿಕ್ ಬಿಡಿಭಾಗಗಳ ಉತ್ಪಾದನೆಯ ಪೇಟೆಂಟ್ ಕಾಯ್ದೆ ಉಲ್ಲಂಘನೆಗಾಗಿ ಅಮೇರಿಕಾದಲ್ಲಿ ದಾವೆ ಹೂಡಿರುವುದಾಗಿ ತಿಳಿಸಿದೆ.

ರಾಯಲ್ ಎನ್‍‍ಫೀಲ್ಡ್ ಅನ್ನು ಕೋರ್ಟಿಗೆಳೆದ ಫ್ಲಾಶ್ ಎಲೆಕ್ಟ್ರಾನಿಕ್ಸ್

ಪುಣೆ ಮೂಲದ ಫ್ಲಾಶ್ ಎಲೆಕ್ಟ್ರಾನಿಕ್ಸ್ ಇಂಡಿಯಾದ ಪ್ರಕಾರ ರಾಯಲ್ ಎನ್‍‍ಫೀಲ್ಡ್ ಕಂಪನಿಯು "ರೆಗ್ಯೂಲೇಟರ್ ರೆಕ್ಟಿಫೈಯರ್ ಡಿವೈಸ್" ವಿಚಾರದಲ್ಲಿ ಪೇಟೆಂಟ್ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ. ನಾಲ್ಕು ವರ್ಷಗಳ ಕಾಲ ನಡೆಸಿದ ಸಂಶೋಧನೆ ಮತ್ತು ಅಭಿವೃದ್ದಿಯ ನಂತರ, ಅಮೇರಿಕಾದ ಪೇಟೆಂಟ್ ಮತ್ತು ಟ್ರೇಡ್‍‍ಮಾರ್ಕ್ ಕಚೇರಿಯಿಂದ, 2018ರ ಫೆಬ್ರವರಿ 20 ರಂದು ಫ್ಲಾಶ್ ಎಲೆಕ್ಟ್ರಾನಿಕ್ಸ್ ಕಂಪನಿಯು ಪೇಟೆಂಟ್ ಪಡೆದಿತ್ತು.

ರಾಯಲ್ ಎನ್‍‍ಫೀಲ್ಡ್ ಅನ್ನು ಕೋರ್ಟಿಗೆಳೆದ ಫ್ಲಾಶ್ ಎಲೆಕ್ಟ್ರಾನಿಕ್ಸ್

ಫ್ಲಾಶ್ ಎಲೆಕ್ಟ್ರಾನಿಕ್ಸ್ ಕಂಪನಿ ಈ ಬಿಡಿ ಭಾಗದ ತಯಾರಿಕೆ ಮತ್ತು ಪೂರೈಕೆಯಲ್ಲಿ ಭಾರತ ಹಾಗೂ ವಿಶ್ವದ್ಯಾಂತ ಮುಂಚೂಣಿಯಲ್ಲಿದ್ದು, ಅನೇಕ ದ್ವಿ ಚಕ್ರ ವಾಹನ ಕಂಪನಿಗಳಿಗೆ ಬಿಡಿಭಾಗಗಳನ್ನು ಪೂರೈಸುತ್ತದೆ. ಫ್ಲಾಶ್ ಎಲೆಕ್ಟ್ರಾನಿಕ್ಸ್ ಇಂಡಿಯಾದ ಸ್ಥಾಪಕ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸಂಜೀವ್ ವಾಸುದೇವ್ ರವರು ಈ ಬಗ್ಗೆ ಮಾತನಾಡಿದ್ದಾರೆ.

ರಾಯಲ್ ಎನ್‍‍ಫೀಲ್ಡ್ ಅನ್ನು ಕೋರ್ಟಿಗೆಳೆದ ಫ್ಲಾಶ್ ಎಲೆಕ್ಟ್ರಾನಿಕ್ಸ್

ನಾವು ಭಾರತದಲ್ಲಿ ಮತ್ತು ವಿಶ್ವದಲ್ಲಿ ಅನೇಕ ಕಂಪನಿಗಳಿಗೆ ನಮ್ಮ ಬಿಡಿಭಾಗಗಳನ್ನು ತಯಾರಿಸಿ ಪೂರೈಸುತ್ತೇವೆ. ರಾಯಲ್ ಎನ್‍‍ಫೀಲ್ಡ್ ನಮ್ಮ ಜೊತೆಯಲ್ಲಿ ನಡೆದುಕೊಂಡಿರುವ ರೀತಿಯು ಅನಿರೀಕ್ಷಿತ ಹಾಗೂ ಆಕಸ್ಮಿಕವಾಗಿದೆ ಎಂದು ತಿಳಿಸಿದರು.

ರಾಯಲ್ ಎನ್‍‍ಫೀಲ್ಡ್ ಅನ್ನು ಕೋರ್ಟಿಗೆಳೆದ ಫ್ಲಾಶ್ ಎಲೆಕ್ಟ್ರಾನಿಕ್ಸ್

ಈ ಘಟನೆಯು ಆಕ್ಷೇಪರ್ಹಾವಾಗಿದ್ದು, ನಾವು ರಾಯಲ್ ಎನ್‍‍ಫೀಲ್ಡ್ ಕಂಪನಿಯ ಮೇಲಿಟ್ಟಿದ್ದ ನಂಬಿಕೆಗೆ ಧಕ್ಕೆಯಾಗಿದೆ ಎಂದು ತಿಳಿಸಿದರು. ವಾಸುದೇವ್ ರವರ ಪ್ರಕಾರ ರಾಯಲ್ ಎನ್‍‍ಫೀಲ್ಡ್ ನ ಮೂವರು ಹಿರಿಯ ಅಧಿಕಾರಿಗಳು 2018ರ ಅಕ್ಟೋಬರ್ 12 ರಂದು ನಮ್ಮನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ, ಸಂಧಾನ ಮಾಡಿಕೊಳ್ಳುವಂತೆ ಕೇಳಿಕೊಂಡರು. ಆ ಅಧಿಕಾರಿಗಳು ಯಾವುದೇ ದಾವೆಯನ್ನು ದಾಖಲಿಸದಂತೆ ನಮ್ಮನ್ನು ಕೇಳಿಕೊಂಡರು ಎಂದು ತಿಳಿಸಿದ್ದಾರೆ.

ರಾಯಲ್ ಎನ್‍‍ಫೀಲ್ಡ್ ಅನ್ನು ಕೋರ್ಟಿಗೆಳೆದ ಫ್ಲಾಶ್ ಎಲೆಕ್ಟ್ರಾನಿಕ್ಸ್

ನಾವು ಈ ಭೇಟಿ ಪಲಫದ್ರವಾಗಬಹುದೆಂಬ ನಿರೀಕ್ಷೆಯಲ್ಲಿದ್ದೆವು, ಆದರೆ ರಾಯಲ್ ಎನ್‍‍‍ಫೀಲ್ಡ್ ಕಂಪನಿಯು ಸಮಸ್ಯೆಯನ್ನು ಬಗೆಹರಿಸಲಿಲ್ಲ ಎಂದು ತಿಳಿಸಿದರು. ಅವರ ಪ್ರಕಾರ ವಿಶ್ವದ್ಯಾಂತವಿರುವ ನಮ್ಮ ಕಂಪನಿಯು ರಾಯಲ್ ಎನ್‍‍ಫೀಲ್ಡ್ ನಮ್ಮ ಪೇಟೆಂಟ್ ಅನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲಾಗುತ್ತದೆ ಹಾಗೂ ಈಗ ಆಗಿರುವ ಉಲ್ಲಂಘನೆಗಾಗಿ ಪರಿಹಾರವನ್ನು ಪಡೆಯುತ್ತೇವೆ, ಪರಿಹಾರವು ಲಕ್ಷಾಂತರ ಡಾಲರ್‍‍ಗಳಾಗಿರಲಿದೆ ಎಂದು ತಿಳಿಸಿದರು.

MOST READ: 500 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಹಾರ್ಲೆ ಡೇವಿಡ್ಸನ್

ರಾಯಲ್ ಎನ್‍‍ಫೀಲ್ಡ್ ಅನ್ನು ಕೋರ್ಟಿಗೆಳೆದ ಫ್ಲಾಶ್ ಎಲೆಕ್ಟ್ರಾನಿಕ್ಸ್

ಫ್ಲಾಶ್ ಕಂಪನಿಯ ರೆಗ್ಯುಲೇಟರ್ ರೆಕ್ಟಿಫೈಯರ್ ಪ್ರಮುಖವಾದ ಬಿಡಿಭಾಗವಾಗಿದ್ದು, ಅದನ್ನು ಆಲ್ಟರ್‍‍ನೇಟ್ ಕರೆಂಟ್ ವೋಲ್ಟೆಜ್ ಅನ್ನು ಡೈರೆಕ್ಟ್ ಕರೆಂಟ್ ವೋಲ್ಟೆಜಿಗೆ ಪರಿವರ್ತಿಸಿ ಬ್ಯಾಟರಿಗಳನ್ನು ಚಾರ್ಜ್ ಮಾಡಲು, ಹೆಡ್‍‍‍ಲೈಟ್ ಗಳಿಗೆ ಪವರ್ ನೀಡಲು, ಇನ್ಸ್ ಟ್ರೂಮೆಂಟ್ ಪ್ಯಾನೆಲ್‍‍ಗಳಿಗೆ ಬೆಳಕು ನೀಡಲು ಮತ್ತು ಬೈಕಿನಲ್ಲಿರುವ ಎಲೆಕ್ಟ್ರಿಕಲ್ ಸಿಸ್ಟಂಗಳನ್ನು ಚಲಾಯಿಸಲು ಬಳಸಲಾಗುತ್ತದೆ.

ರಾಯಲ್ ಎನ್‍‍ಫೀಲ್ಡ್ ಅನ್ನು ಕೋರ್ಟಿಗೆಳೆದ ಫ್ಲಾಶ್ ಎಲೆಕ್ಟ್ರಾನಿಕ್ಸ್

ಅಮೇರಿಕಾದ ಹೊರತಾಗಿ, ಫ್ಲಾಶ್ ಕಂಪನಿಯು ಜರ್ಮನಿ, ಫ್ರಾನ್ಸ್, ಇಟಲಿ, ಬ್ರಿಟನ್, ನೆದರ್‍‍ಲ್ಯಾಂಡ್, ಸ್ವೀಡನ್, ಸ್ಪೇನ್, ಆಸ್ಟ್ರಿಯಾ, ಸ್ವಿಜರ್‍‍ಲ್ಯಾಂಡ್ ಮತ್ತು ಟರ್ಕಿ ದೇಶಗಳಲ್ಲೂ ಸಹ ಪೇಟೆಂಟ್ ಪಡೆದಿದೆ. ಕಂಪನಿಯು ಈ ಎಲ್ಲಾ ದೇಶಗಳಲ್ಲೂ ಸಹ ಇದೇ ರೀತಿಯ ಪ್ರಕರಣಗಳನ್ನು ದಾಖಲಿಸಲು ನಿರ್ಧರಿಸಿದೆ.

ರಾಯಲ್ ಎನ್‍‍ಫೀಲ್ಡ್ ಅನ್ನು ಕೋರ್ಟಿಗೆಳೆದ ಫ್ಲಾಶ್ ಎಲೆಕ್ಟ್ರಾನಿಕ್ಸ್

ಫ್ಲಾಶ್ ಎಲೆಕ್ಟ್ರಾನಿಕ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಆಟೋ, ಇಂಡಿಯಾ ಯಮಹಾ ಮೋಟಾರ್ ಮತ್ತು ಜಾವಾ ಮೋಟಾರ್‍‍ಸೈಕಲ್‍‍ಗಳಿಗೆ ಹಾಗೂ ವಿಶ್ವ ಮಾರುಕಟ್ಟೆಯಲ್ಲಿ ಪೋರ್ಷೆ, ಆಡಿ, ಬಿ‍ಎಂ‍‍ಡಬ್ಲ್ಯು, ಕೆಟಿ‍ಎಂ, ಕವಾಸಕಿ, ಹಾರ್ಲೆ ಡೇವಿಡ್ಸನ್, ಡುಕಾಟಿ, ಟ್ರಯಂಫ್ ಮತ್ತು ಬಿ‍ಆರ್‍‍ಪಿ-ರೊಟಕ್ಸ್ ಕಂಪನಿಗಳಿಗೆ ಬಿಡಿಭಾಗಗಳನ್ನು ಪೂರೈಸುತ್ತದೆ.

ರಾಯಲ್ ಎನ್‍‍ಫೀಲ್ಡ್ ಅನ್ನು ಕೋರ್ಟಿಗೆಳೆದ ಫ್ಲಾಶ್ ಎಲೆಕ್ಟ್ರಾನಿಕ್ಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಒಳ್ಳೆಯ ದಿನಗಳು ಮುಗಿದು ಹೋಗಿವೆ ಎನಿಸುತ್ತಿದೆ. ರಾಯಲ್ ಎನ್‍‍ಫೀಲ್ಡ್ ಈ ಮೊದಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿತ್ತು. ಕಳೆದ 6 ತಿಂಗಳುಗಳಿಂದ ಮಾರಾಟ ಪ್ರಮಾಣವು ಕುಸಿದಿದೆ. ಈಗ ವಿಶ್ವದದ್ಯಾಂತ ಹಲವಾರು ದೇಶಗಳಲ್ಲಿ ಪ್ರಕರಣ ದಾಖಲಾಗಿದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಗೆ ಮತ್ತೆ ಒಳ್ಳೆಯ ದಿನಗಳು ಬರಲಿ ಎಂದು ಶುಭ ಕೋರುತ್ತೇವೆ.

Most Read Articles

Kannada
English summary
Flash Electronics Files Suit Against Royal Enfield — Are The Good Times Over? - Read in kannada
Story first published: Tuesday, May 21, 2019, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X