ಗುರುಗ್ರಾಮ ಪೊಲೀಸರ ಗಸ್ತು ಪಡೆ ಸೇರಿದ ಹೊಸ ಬೈಕ್‍‍ಗಳು

ಕೆಲ ದಿನಗಳ ಹಿಂದಷ್ಟೇ ಅಬುಧಾಬಿ ಪೊಲೀಸರು ತಮ್ಮ ಪಡೆಗೆ ಐಷಾರಾಮಿ ಕಾರು ಹಾಗೂ ಬೈಕ್‍‍ಗಳನ್ನು ಸೇರ್ಪಡೆಗೊಳಿಸಿ ಕೊಂಡಿದ್ದ ಬಗ್ಗೆ ವರದಿಯಾಗಿತ್ತು. ಭಾರತದಲ್ಲಿ ಅಷ್ಟು ದುಬಾರಿ ಬೆಲೆಯ ಐಷಾರಾಮಿ ಬೈಕ್‍‍ಗಳನ್ನು ಪೊಲೀಸರು ಬಳಸದೇ ಇದ್ದರೂ, ವಿವಿಧ ರಾಜ್ಯಗಳ ಪೊಲೀಸರು ವಿವಿಧ ಬಗೆಯ ಬೈಕ್‍‍ಗಳನ್ನು ಬಳಸುತ್ತಾರೆ.

ಗುರುಗ್ರಾಮ ಪೊಲೀಸರ ಗಸ್ತು ಪಡೆ ಸೇರಿದ ಹೊಸ ಬೈಕ್‍‍ಗಳು

ಗುರುಗ್ರಾಮ ಪೊಲೀಸರು ಗಸ್ತು ತಿರುಗಲು 10 ಸುಜುಕಿ ಜಿಕ್ಸರ್ 250 ಬೈಕ್‍‍ಗಳನ್ನು ಹೊಸದಾಗಿ ಸೇರ್ಪಡೆಗೊಳಿಸಿದ್ದಾರೆ. ಈ ಬೈಕ್‍‍‍ಗಳನ್ನು ಇತ್ತೀಚಿಗೆ ಸುಜುಕಿ ಕಂಪನಿಯು ಗುರುಗ್ರಾಮ ಪೊಲೀಸರಿಗೆ ತನ್ನ ರಸ್ತೆ ಸುರಕ್ಷತೆಯ ಅಭಿಯಾನದ ಅಂಗವಾಗಿ ಹಸ್ತಾಂತರಿಸಿತು.

ಗುರುಗ್ರಾಮ ಪೊಲೀಸರ ಗಸ್ತು ಪಡೆ ಸೇರಿದ ಹೊಸ ಬೈಕ್‍‍ಗಳು

ಸುಜುಕಿ ಕಂಪನಿಯ ಪ್ರಕಾರ ಈ ಬೈಕ್‍‍ಗಳನ್ನು ಗುರುಗ್ರಾಮ ನಗರದಲ್ಲಿನ ಕಾನೂನು, ಸುವ್ಯವಸ್ಥೆಯನ್ನು ನಿರ್ವಹಿಸಲು ಬಳಸಲಾಗುವುದು. ಈ ಬೈಕ್‍‍ಗಳನ್ನು ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಆದ ಕೊಯಿಚಿರೊ ಹಿರಾವೊರವರು ಗುರುಗ್ರಾಮದ ಪೊಲೀಸ್ ಕಮೀಷನರ್ ಮೊಹಮ್ಮದ್ ಅಖಿಲ್‍‍ರವರಿಗೆ ಹಸ್ತಾಂತರಿಸಿದರು.

ಗುರುಗ್ರಾಮ ಪೊಲೀಸರ ಗಸ್ತು ಪಡೆ ಸೇರಿದ ಹೊಸ ಬೈಕ್‍‍ಗಳು

ಈ ಸಂಬಂಧ ಗುರುಗ್ರಾಮದ ಸೋಹ್ನಾ ರಸ್ತೆಯಲ್ಲಿರುವ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೊಯಿಚಿರೊ ಹಿರಾವೊರವರು ಸುಜುಕಿ ಮೋಟಾರ್ ಇಂಡಿಯಾ ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ.

ಗುರುಗ್ರಾಮ ಪೊಲೀಸರ ಗಸ್ತು ಪಡೆ ಸೇರಿದ ಹೊಸ ಬೈಕ್‍‍ಗಳು

ಇದಕ್ಕಾಗಿ ಗುರುಗ್ರಾಮ್ ಪೊಲೀಸರೊಂದಿಗೆ ಕೈಜೋಡಿಸಲು ಹಾಗೂ ಅವರ ಗಸ್ತು ಪಡೆಗೆ ಸುಜುಕಿ ಗಿಕ್ಸರ್ ಎಸ್‌ಎಫ್ 250 ಬೈಕ್‍‍ಗಳನ್ನು ಹಸ್ತಾಂತರಿಸಲು ನಾವು ಸಂತೋಷಪಡುತ್ತೇವೆ. ಈ ಬೈಕ್‍‍ಗಳನ್ನು ಪೊಲೀಸ್ ಇಲಾಖೆಯ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಲಾಗಿದೆ.

ಗುರುಗ್ರಾಮ ಪೊಲೀಸರ ಗಸ್ತು ಪಡೆ ಸೇರಿದ ಹೊಸ ಬೈಕ್‍‍ಗಳು

ಇದರಿಂದಾಗಿ ಗುರುಗ್ರಾಮ ನಗರದಲ್ಲಿ ಕಾನೂನು, ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚುವರಿ ಸಂಪನ್ಮೂಲಗಳು ದೊರೆದಂತಾಗುತ್ತವೆ ಎಂದು ಹೇಳಿದರು. ಪೋಲಿಸ್ ಪಡೆಗಾಗಿ ನೀಡಲಾಗಿರುವ ಸುಜುಕಿ ಗಿಕ್ಸರ್ ಎಸ್‌ಎಫ್ 250 ಬೈಕ್‍‍ಗಳು ಸ್ಟ್ಯಾಂಡರ್ಡ್ ಮಾದರಿಯ ಬೈಕಿನಂತಿವೆ.

ಗುರುಗ್ರಾಮ ಪೊಲೀಸರ ಗಸ್ತು ಪಡೆ ಸೇರಿದ ಹೊಸ ಬೈಕ್‍‍ಗಳು

ಆದರೆ ಈ ಬೈಕಿನ ಮುಂಭಾಗದಲ್ಲಿ ದೊಡ್ಡಗಾತ್ರದ ವಿಂಡ್‌ಸ್ಕ್ರೀನ್, ಫ್ಯೂಯಲ್ ಟ್ಯಾಂಕ್‌ ಮೇಲೆ ಪೊಲೀಸ್ ಡೆಕಾಲ್ ಹಾಗೂ ಸೈಡ್ ಪ್ಯಾನಿಯರ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಗುರುಗ್ರಾಮ ಪೊಲೀಸರ ಗಸ್ತು ಪಡೆ ಸೇರಿದ ಹೊಸ ಬೈಕ್‍‍ಗಳು

ಕ್ವಾರ್ಟರ್ ಲೀಟರಿನ ಈ ಬೈಕ್ ಬಿಳಿ ಬಣ್ಣವನ್ನು ಹೊಂದಿದೆ. ಜೊತೆಗೆ ಪೊಲೀಸ್ ಸೈರನ್‍‍ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಬೈಕಿನ ಮೆಕಾನಿಕಲ್ ಅಂಶಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಗುರುಗ್ರಾಮ ಪೊಲೀಸರ ಗಸ್ತು ಪಡೆ ಸೇರಿದ ಹೊಸ ಬೈಕ್‍‍ಗಳು

ಸುಜುಕಿ ಜಿಕ್ಸರ್ ಎಸ್‍ಎಫ್ 250 ಬೈಕಿನಲ್ಲಿ 249 ಸಿಸಿಯ ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಷನ್ ಹೊಂದಿರುವ 4 ಸ್ಟ್ರೋಕ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 26 ಬಿ‍‍ಹೆಚ್‍‍ಪಿ ಪವರ್ ಹಾಗೂ 22.6 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಗುರುಗ್ರಾಮ ಪೊಲೀಸರ ಗಸ್ತು ಪಡೆ ಸೇರಿದ ಹೊಸ ಬೈಕ್‍‍ಗಳು

ಬೈಕಿನ ಇಂಧನ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಈ ಬೈಕಿನಲ್ಲಿ ಸುಜುಕಿ ಆಯಿಲ್ ಕೂಲಿಂಗ್ ಸಿಸ್ಟಂ (ಎಸ್‍ಒ‍‍ಸಿ‍ಎಸ್) ಅಳವಡಿಸಲಾಗಿದೆ. ಈ ಸಿಸ್ಟಂ ಬೈಕಿನ ಲಿಕ್ವಿಡ್ ಕೂಲಿಂಗ್ ಅನ್ನು ತಡೆಯುತ್ತದೆ. ಹೊಸ ಸುಜುಕಿ ಜಿಕ್ಸರ್ ಎಸ್‍ಎಫ್ 250 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.71 ಲಕ್ಷಗಳಾಗಿದೆ.

Most Read Articles

Kannada
English summary
Gurugram police adds 10 Suzuki Gixxer SF 250 motorcycles to their squad - Read in Kannada
Story first published: Friday, December 13, 2019, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X