ಹೀಗಿರಲಿದೆ ನೋಡಿ ಹಾರ್ಲೆ ಡೇವಿಡ್‍‍ಸನ್ ಎಲೆಕ್ಟ್ರಿಕ್ ಬೈಕ್

ಹಾರ್ಲೆ ಡೇವಿಡ್‍‍ಸನ್ ಕಂಪನಿಯು ತನ್ನ ಎಲೆಕ್ಟ್ರಿಕ್ ಲೈವ್‍‍ವೈರ್‍ ಬೈಕಿನ ಸ್ಪೇಸಿಫಿಕೇಶನ್‍‍ಗಳನ್ನು ಕೊನೆಗೂ ಅನಾವರಣಗೊಳಿಸಿದೆ. ಹಾರ್ಲೆ ಡೇವಿಡ್‍‍ಸನ್ ಕಂಪನಿಯು ಈ ಬೈಕ್ ಅನ್ನು ಮೊದಲ ಬಾರಿಗೆ 2018ರ ಇ‍ಐ‍‍ಸಿ‍ಎಂ‍ಎನಲ್ಲಿ ಪ್ರದರ್ಶಿಸಿತ್ತು. ಈ ವರ್ಷ ನಡೆದ ಕನ್‍‍ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ‍‍ದಲ್ಲಿಯೂ(ಸಿ‍ಇ‍ಎಸ್) ಪ್ರದರ್ಶಿಸಲಾಗಿತ್ತು. ಅಮೇರಿಕಾ ಮೂಲದ ಬೈಕ್ ತಯಾರಕ ಕಂಪನಿಯು ಈ ಎಲೆಕ್ಟ್ರಿಕ್ ಬೈಕಿ ಬುಕ್ಕಿಂಗ್ ಅನ್ನು ಶುರುಮಾಡಿರುವುದಾಗಿ ಸಿ‍ಇ‍ಎಸ್‍‍ನಲ್ಲಿ ಘೋಷಿಸಿತ್ತು.

ಹೀಗಿರಲಿದೆ ನೋಡಿ ಹಾರ್ಲೆ ಡೇವಿಡ್‍‍ಸನ್ ಎಲೆಕ್ಟ್ರಿಕ್ ಬೈಕ್

ಕಂಪನಿಯು ಮುಂಬರುವ ದಿನಗಳಲ್ಲಿ ಅನೇಕ ಸರಣಿಯ ಎಲೆಕ್ಟ್ರಿಕ್ ಬೈಕುಗಳನ್ನು ಬಿಡುಗಡೆಗೊಳಿಸಲು ಉದ್ದೇಶಿಸಿದೆ. ಅದರಲ್ಲಿ ಲೈವ್‍‍ವೈರ್ ಮೊದಲನೆಯ ಬೈಕ್ ಆಗಿದೆ. ಈ ಎಲೆಕ್ಟ್ರಿಕ್ ಬೈಕ್ ಅಮೇರಿಕಾದ ಮಾರುಕಟ್ಟೆಯಲ್ಲಿ 2020ರಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಹಾರ್ಲೆ ಡೇವಿಡ್‍‍ಸನ್ ಎಲೆಕ್ಟ್ರಿಕ್ ಬೈಕಿನ ಬೆಲೆಯನ್ನು ನಿಗದಿಪಡಿಸಲಾಗಿದ್ದು, ತೆರಿಗೆಯನ್ನು ಹೊರತುಪಡಿಸಿ 29,799 ಅಮೇರಿಕನ್ ಡಾಲರ್‍ ಆಗಿರಲಿದೆ. ಭಾರತದ ರೂಪಾಯಿ ಮೌಲ್ಯದಲ್ಲಿ ರೂ.20.4 ಲಕ್ಷಗಳಾಗಲಿದೆ.

ಹೀಗಿರಲಿದೆ ನೋಡಿ ಹಾರ್ಲೆ ಡೇವಿಡ್‍‍ಸನ್ ಎಲೆಕ್ಟ್ರಿಕ್ ಬೈಕ್

ಈ ಬೈಕಿನ ಸ್ಪೆಸಿಫಿಕೇಶನ್‍‍‍ಗಳ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಬೈಕ್ 15.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರಲಿದ್ದು, 103 ಬಿ‍‍ಹೆಚ್‍‍ಪಿ ಹಾಗೂ 116 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 235 ಕಿ.ಮೀ ಚಲಿಸಲಿದ್ದು, 0-100 ಕಿ.ಮೀ ವೇಗವನ್ನು 3.5 ಸೆಕೆಂಡುಗಳಲ್ಲಿ ಕ್ರಮಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಾರ್ಲೆ ಡೇವಿಡ್‍‍ಸನ್ ಕಂಪನಿಯು ಲೈವ್‍‍ವೈರ್ ಬೈಕಿನಲ್ಲಿ ಲೆವೆಲ್ 3 ಡಿಸಿ ಫಾಸ್ಟ್ ಚಾರ್ಜಿಂಗ್ ಸಿಸ್ಟಂ ಅಳವಡಿಸಲಿದೆ.

ಹೀಗಿರಲಿದೆ ನೋಡಿ ಹಾರ್ಲೆ ಡೇವಿಡ್‍‍ಸನ್ ಎಲೆಕ್ಟ್ರಿಕ್ ಬೈಕ್

ಈ ಚಾರ್ಜಿಂಗ್ ಸಿಸ್ಟಂನಿಂದ, 40 ನಿಮಿಷಗಳಲ್ಲಿ 0 ರಿಂದ 80 % ವರೆಗೆ ಹಾಗೂ 60 ನಿಮಿಷಗಳಲ್ಲಿ 0 ರಿಂದ 100% ವರೆಗೆ ಬ್ಯಾಟರಿ ಚಾರ್ಜ್ ಆಗಲಿದೆ. ಫಾಸ್ಟ್ ಚಾರ್ಜಿಂಗ್ ಸಿಸ್ಟಂ ಲಭ್ಯವಿಲ್ಲದಿದ್ದಲ್ಲಿ, ಹಾರ್ಲೆ ಡೇವಿಡ್‍‍ಸನ್ ಕಂಪನಿಯು ಲೆವೆಲ್ 1 ಡಿಸಿಯನ್ನು ಸೀಟಿನ ಕೆಳಗೆ ಅಳವಡಿಸಲಿದೆ. ಈ ಡಿಸಿಯು 10 ರಿಂದ 11 ಗಂಟೆಗಳಲ್ಲಿ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲಿದೆ. ಸಾಂಪ್ರಾದಾಯಿಕ ಮಾದರಿಯ ಐ‍‍ಸಿ ಎಂಜಿನ್ ಇದ್ದಂತಹ ಜಾಗದಲ್ಲಿಯೇ ಈ ಬ್ಯಾಟರಿಗಳನ್ನು ಅಳವಡಿಸಲಾಗುವುದು.

ಹೀಗಿರಲಿದೆ ನೋಡಿ ಹಾರ್ಲೆ ಡೇವಿಡ್‍‍ಸನ್ ಎಲೆಕ್ಟ್ರಿಕ್ ಬೈಕ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಈ ಬ್ಯಾಟರಿಗಳನ್ನು ಫೇಕ್ ಫ್ಯೂಯಲ್ ಫಿಲ್ಲರ್ ಕ್ಯಾಪ್‍‍ನಿಂದ ಚಾರ್ಜ್ ಮಾಡಬಹುದಾಗಿದ್ದು, ಎಲೆಕ್ಟ್ರಿಕಲ್ ಸಾಕೆಟ್‍‍ಗಳನ್ನು ಡಬಲ್ ಮಾಡಲಿವೆ. ಹಾರ್ಲೆ ಡೇವಿಡ್‍‍ಸನ್ ಲೈವ್‍‍ವೈರ್ ಬೈಕ್ ಪೂರ್ಣ ಪ್ರಮಾಣದ ಶೊವಾ ಅಡ್ಜಸ್ಟಬಲ್ ಫ್ರಂಟ್ ಹಾಗೂ ರೇರ್ ಸಸ್ಪೆಂಷನ್‍‍ಗಳನ್ನು ಹೊಂದಿರಲಿದೆ. ಈ ಬೈಕಿನ ಎರಡೂ ಬದಿಯಲ್ಲಿ 17 ಇಂಚಿನ ಮಿಚೆಲಿನ್ ಸ್ಕಾರ್ಚರ್ ವ್ಹೀಲ್‍‍ಗಳಿದ್ದು, ಮುಂಭಾಗದಲ್ಲಿ 120/70 ಹಾಗೂ ಹಿಂಭಾಗದಲ್ಲಿ 180/55 ಅಳತೆಯ ಟಯರ್‍‍ಗಳಿವೆ. ಈ ಬೈಕ್ ಬೆಲ್ಟ್ ಡ್ರೈವ್ ಸಿಸ್ಟಂನಲ್ಲಿ ಚಾಲನೆಯಾಗಲಿದೆ. ಎರಡೂ ಬದಿಯಲ್ಲಿ ಬ್ರೆಂಬೊ ಬ್ರೇಕಿಂಗ್‍‍ಗಳನ್ನು ಅಳವಡಿಸಲಾಗಿದೆ.

ಹೀಗಿರಲಿದೆ ನೋಡಿ ಹಾರ್ಲೆ ಡೇವಿಡ್‍‍ಸನ್ ಎಲೆಕ್ಟ್ರಿಕ್ ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಲೈವ್‍‍ವೈರ್ ಬೈಕ್, ಹಾರ್ಲೆ ಡೇವಿಡ್‍‍ಸನ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಬೈಕ್ ಆಗಿದೆ. ಈ ಬೈಕ್ 2020ರಿಂದ ಅಮೇರಿಕಾ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ. ಇದಾದ ನಂತರ ಪ್ರಪಂಚದ ಬೇರೆ ಬೇರೆ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ.

Most Read Articles

Kannada
English summary
2020 Harley-Davidson Livewire Electric Specifications Revealed — The First Of Many From The Brand - Read in kannada
Story first published: Monday, July 15, 2019, 14:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X