ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಎಲೆಕ್ಟ್ರಿಕ್ ವಾಹನಗಳಿಗೆ ಇದೀಗ ಬೇಡಿಕೆ ಸೃಷ್ಠಿಯಾಗುತ್ತಿದೆ. ಇದೇ ಕಾರಣಕ್ಕೆ ಆಟೋ ಉತ್ಪಾದನಾ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ನಾನಾ ಬಗೆಗೆ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿವೆ. ಇದರಲ್ಲಿ ಹಾರ್ಲೆ ಡೇವಿಡ್ಸನ್ ಸಹ ಹೊಸ ಇವಿ ಬೈಕ್ ಒಂದನ್ನು ಸಿದ್ದಗೊಳಿಸಿದೆ.

ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

2020ರ ವೇಳೆಗೆ ವಿಶ್ವದ ಎಲ್ಲಾ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನ ಉತ್ಪಾದನೆಗಾಗಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ಐಷಾರಾಮಿ ಕ್ರೂಸರ್ ಬೈಕ್ ಉತ್ಪಾದನಾ ಸಂಸ್ಥೆಯಾದ ಹಾರ್ಲೆ ಡೇವಿಡ್ಸನ್ ಕೂಡಾ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಬಿಡುಗಡೆ ಮಾಡುತ್ತಿರುವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಲೈವ್‌ವೈರ್ ಎನ್ನುವ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಮುಂದಿನ ಮೇ ತಿಂಗಳಿನಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಸಿಇಎಸ್ ಆಟೋಮೇಳದಲ್ಲಿ ಹೊಸ ಬೈಕ್ ಪ್ರದರ್ಶನಗೊಳಿಸಿ ತದನಂತರವಷ್ಟೇ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಅತ್ಯುತ್ತಮ ಬ್ಯಾಟರಿ ಪ್ಯಾಕ್ ಹೊಂದಿರುವ ಲೈವ್‌ವೈರ್ ಬೈಕ್ ಮಾದರಿಯು ಪ್ರತಿಚಾರ್ಜ್‌ಗೆ 177ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೇವಲ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗಪಡೆದುಕೊಳ್ಳಬಹುದಾದ ಗುಣಲಕ್ಷಣ ಹೊಂದಿದೆ.

ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಎಲೆಕ್ಟ್ರಿಕ್ ಕ್ರೂಸರ್ ಬೈಕ್‌ಗಳಲ್ಲೇ ಉತ್ತಮ ಎನ್ನಿಸುವ ತಾಂತ್ರಿಕ ಅಂಶಗಳು ಲೈವ್‌ವೈರ್ ಬೈಕ್ ಆವೃತ್ತಿಯಲ್ಲಿದ್ದು, ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ದೊಡ್ಡದಾದ ಟಚ್ ಸ್ಕ್ರೀನ್ ಎಲ್‌ಸಿಡಿ ಡಿಸ್‌ಪೈ, ಸ್ಮಾರ್ಟ್‌ಫೋನ್ ಮೂಲಕ ಮಾಹಿತಿ ನೀಡುವ ಹಾರ್ಲೆ ಡೇವಿಡ್ಸನ್ ಕನೆಕ್ಟ್ ಸೌಲಭ್ಯ ಪಡೆದುಕೊಂಡಿದೆ.

ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಇನ್ನೊಂದು ವಿಶೇಷ ಅಂದ್ರೆ, ಹೊಸ ಲೈವ್‌ವೈರ್ ಬೈಕಿನಲ್ಲಿ ಚೈನ್ ಬದಲಾಗಿ ಬೆಲ್ಟ್ ಡ್ರೈವ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಇದು ಬೈಕಿನ ವೇಗವನ್ನು ಹೆಚ್ಚಳ ಮಾಡುವಲ್ಲಿ ಸಹಕಾರಿಯಾಗಿದೆ. ಹಾಗೆಯೇ 17-ಇಂಚಿನ ಮಿಚೆನ್ ಸ್ಕೋರರ್ ಟೈರ್ ಹೊಂದಿರುವ ಹೊಸ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಹೊಸ ಬೈಕಿನಲ್ಲಿ 4-ಪಿಸ್ಟನ್ ಡಬಲ್ ಕ್ಯಾಪಿಪರ್ ಬ್ರೆಂಬೊ ಬ್ರೇಕ್‌ಗಳನ್ನು ಜೋಡಿಸಲಾಗಿದ್ದು, ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳ್ಳುವ ಚಾರ್ಚಿಂಗ್ ಗುಣಲಕ್ಷಣಗಳು ಈ ಬೈಕಿನ ಆಯ್ಕೆಯನ್ನು ಹೆಚ್ಚಿಸಲಿವೆ ಎನ್ನಲಾಗಿದೆ.

ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಬೈಕಿನ ಬೆಲೆ

ಸದ್ಯ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುತ್ತಿರುವ ಹೊಸ ಬೈಕಿನ ಬೆಲೆಯನ್ನು ಬಹಿರಂಗ ಪಡಿಸಲಾಗಿದ್ದು, 29,799 ಯುಎಸ್‌ ಡಾಲರ್ ಬೆಲೆ ಪಡೆದುಕೊಂಡಿರಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಅಂದ್ರೆ ಇದು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಲೈವ್‌ವೈರ್ ಬೈಕ್ ಬರೋಬ್ಬರಿ ರೂ. 20 ಲಕ್ಷ ಬೆಲೆ ಪಡೆದುಕೊಳ್ಳಲಿದ್ದು, ಐಷಾರಾಮಿ ಎಲೆಕ್ಟ್ರಿಕ್ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ಎಲ್ಲಾ ಗುಣಲಕ್ಷಣಗಳು ಈ ಬೈಕಿನಲ್ಲಿವೆ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಭಾರತದಲ್ಲಿ ಬಿಡುಗಡೆಯಾಗುತ್ತಾ?

ಸದ್ಯ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಮಾತ್ರವೇ ಲೈವ್‌ವೈರ್ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಹಾರ್ಲೆ ಸಂಸ್ಥೆಯು ಭಾರತದಲ್ಲಿ ಸದ್ಯಕ್ಕೆ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಇದಕ್ಕೆ ಕಾರಣ ಬೆಲೆಗಳಲ್ಲಿ ತುಸು ದುಬಾರಿ ಎನ್ನಿಸುವ ಲೈವ್‌ವೈರ್ ಬೈಕ್ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿನ ಹೊಸ ಕಾಯ್ದೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಅಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದ್ದು, ಮುಂದಿನ 2020ರ ನಂತರವಷ್ಟೇ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

MOST READ: ಬಿಡುಗಡೆಗೂ ಮುನ್ನವೇ ಹಾರುವ ಕಾರಿನ ಬೆಲೆ ಪಟ್ಟಿ ಬಿಡುಗಡೆ ಮಾಡಿದ ಪಿಎಲ್-ವಿ ಲಿಬರ್ಟಿ

ರಸ್ತೆಗಿಳಿಯಲಿರುವ ಹಾರ್ಲೆ ಮೊದಲ ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಒಟ್ಟಿನಲ್ಲಿ ಸಿಇಎಸ್ ಆಟೋಮೇಳದ ನಂತರವಷ್ಟೇ ಗ್ರಾಹಕರ ಕೈಸೆರಲಿರುವ ಲೈವ್‌ವೈರ್ ಬೈಕ್‌ಗಳು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಭಾರತೀಯ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮತ್ತಷ್ಟು ಹೊಸ ಬೈಕ್ ಉತ್ಪನ್ನಗಳು ಸದ್ಯದಲ್ಲೇ ರಸ್ತೆಗಿಳಿಸುವ ಯೋಜನೆಯು ಸಹ ಹಾರ್ಲೆ ಡೇವಿಡ್ಸನ್ ಮುಂದಿದೆ.

Most Read Articles

Kannada
English summary
Harley-Davidson Livewire Prices Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X