ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಬೈಕ್ ಆದ ಲೈವ್‍‍ವೈರ್ ಅನ್ನು ಇಂದು ಭಾರತದಲ್ಲಿ ಅನಾವರಣಗೊಳಿಸಿದೆ. ಹಾರ್ಲೆ ಡೇವಿಡ್ಸನ್‍‍‍ನ ಹೊಸ ಬೈಕ್ ಭಾರತದಲ್ಲಿ 2020ರ ಆರಂಭದಿಂದ ಮಾರಾಟವಾಗಲಿದೆ. ಅಮೇರಿಕಾ ಮೂಲದ ಈ ಬೈಕ್ ಅನ್ನು ವಿಶ್ವದ ಹಲವಾರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಈ ಎಲೆಕ್ಟ್ರಿಕ್ ಬೈಕ್ ಅನ್ನು ಮೊದಲ ಬಾರಿಗೆ 2018ರ ಇಐಸಿಎಂಎ ಮತ್ತು ನಂತರ ಅದೇ ವರ್ಷ ನಡೆದ ಕಂಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋದಲ್ಲಿ (ಸಿಇಎಸ್) ಅನಾವರಣಗೊಳಿಸಲಾಗಿತ್ತು. ಇದಾದ ನಂತರ ಅಮೇರಿಕಾ, ಕೆನಡಾ ಹಾಗೂ ಇತರ ಯುರೋಪಿಯನ್ ದೇಶಗಳಲ್ಲಿಯೂ ಮಾರಾಟ ಮಾಡಲಾಯಿತು.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಅಮೇರಿಕಾ ಮೂಲದ ಬೈಕ್ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಸರಣಿ ಪೋಸ್ಟ್‌ಗಳ ಮೂಲಕ ಭಾರತದಲ್ಲಿ ಲೈವ್‌ವೈರ್ ಬಿಡುಗಡೆಯ ಸುಳಿವು ನೀಡಿತ್ತು. ಈ ಬೈಕ್ ಅನ್ನು ಕಂಪನಿಯ ಭಾರತದ ವೆಬ್‌ಸೈಟ್‌‍‍ನಲ್ಲಿಯೂ ಸಹ ಪ್ರದರ್ಶಿಸಲಾಗಿತ್ತು. ಆದರೆ ಇದುವರೆಗೂ ದೇಶಿಯ ಮಾರುಕಟ್ಟೆಯಲ್ಲಿ ಲೈವ್‌ವೈರ್‌ನ ಅಧಿಕೃತ ಬಿಡುಗಡೆಯ ದಿನವನ್ನು ಖಚಿತಪಡಿಸಿಲ್ಲ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ವಿನ್ಯಾಸ

ಹಾರ್ಲೆ ಡೇವಿಡ್ಸನ್ ಲೈವ್‌ವೈರ್ ಎಲೆಕ್ಟ್ರಿಕ್ ಬೈಕ್ ತನ್ನ ವಿನ್ಯಾಸವನ್ನು ಕಂಪನಿಯ ಸ್ಪೋರ್ಟ್‌ಸ್ಟರ್ ಸರಣಿಗಳಿಂದ ಪಡೆದಿದೆ. ಈ ಬೈಕಿನ ಸುತ್ತಲೂ ಎಲ್ಇಡಿ ಲೈಟಿಂಗ್‌‍‍ಗಳಿವೆ. ಇವುಗಳಲ್ಲಿ ಹೆಡ್‌ಲ್ಯಾಂಪ್‌, ಟೇಲ್‍‍ಲೈಟ್‌, ಡಿ‍ಆರ್‍ಎಲ್ ಹಾಗೂ ಟರ್ನ್ ಇಂಡಿಕೇಟರ್‌ಗಳು ಸೇರಿವೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಹಾರ್ಲೆ ಡೇವಿಡ್ಸನ್ ಕನಿಷ್ಠ ವಿನ್ಯಾಸಗಳನ್ನು ಹೊಂದಿದ್ದು, ಎಕ್ಸ್ ಪೋಸ್ಡ್ ಫ್ರೇಮ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಸೀಟ್ ಸೆಟಪ್‍‍ಗಳಿವೆ. ಹೆಡ್‌ಲ್ಯಾಂಪ್‌ಗಳಿಗೆ ಸ್ಪೋರ್ಟಿ ಕೌಲ್‌ ಅಳವಡಿಸಲಾಗಿದೆ. ಲೈವ್‌ವೈರ್ ಬೈಕಿನಲ್ಲಿ ಡಮ್ಮಿಯಾದ ಇಂಧನ ಟ್ಯಾಂಕ್ ಅಳವಡಿಸಲಾಗಿದೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಈ ಟ್ಯಾಂಕ್ ಕಂಪನಿಯ ಸ್ಪೋರ್ಟ್‌ಸ್ಟರ್ ಬೈಕುಗಳಲ್ಲಿರುವಂತಿದೆ. ಈ ಬೈಕಿನಲ್ಲಿರುವ ಬ್ಯಾಟರಿಯನ್ನು ಡಮ್ಮಿಯಾದ ಇಂಧನ ಟ್ಯಾಂಕ್‍‍ನಲ್ಲಿ ಇಡಲಾಗುವುದು. ಫ್ಯೂಯಲ್ ಫಿಲ್ಲರ್ ಕ್ಯಾಪ್‍‍ಗಳಲ್ಲಿ ಬೈಕಿನ ಚಾರ್ಜಿಂಗ್ ಸಾಕೆಟ್‍‍ಗಳಿರಲಿವೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಪವರ್‌ಟ್ರೇನ್ ಹಾಗೂ ಪರ್ಫಾಮೆನ್ಸ್

ಹಾರ್ಲೆ ಡೇವಿಡ್ಸನ್ ಲೈವ್‌ವೈರ್ ಬೈಕ್ 15.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇದನ್ನು ಸಾಂಪ್ರದಾಯಿಕ ಮಾದರಿಯ ಐಸಿ ಎಂಜಿನ್‌ನ ಬದಲಿಗೆ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟರ್‌ಗೆ ಕನೆಕ್ಟ್ ಮಾಡಲಾಗಿದೆ. ಲೈವ್‌ವೈರ್‌‍‍ನಲ್ಲಿರುವ ಎಲೆಕ್ಟ್ರಿಕ್ ಮೋಟರ್ 103 ಬಿ‍‍ಹೆಚ್‍‍ಪಿ ಪವರ್ ಹಾಗೂ 116 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಲೈವ್‌ವೈರ್ ಎಲೆಕ್ಟ್ರಿಕ್ ಬೈಕ್ ಅದ್ಭುತವಾದ ಪರ್ಫಾಮೆನ್ಸ್ ನೀಡುತ್ತದೆ. ಕಂಪನಿಯ ಪ್ರಕಾರ, ಲೈವ್‌ವೈರ್ ಸುಮಾರು 3 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0-100 ಕಿ.ಮೀ ವೇಗವನ್ನು ಪಡೆಯುತ್ತದೆ. 100-129 ಕಿ.ಮೀ ವೇಗವನ್ನು 1.9 ಸೆಕೆಂಡುಗಳಲ್ಲಿ ಪಡೆಯುತ್ತದೆ.

MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಹಾರ್ಲೆ ಡೇವಿಡ್ಸನ್ ಲೈವ್‌ವೈರ್‌ನಲ್ಲಿನ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ 235 ಕಿ.ಮೀ ವ್ಯಾಪ್ತಿಯವರೆಗೂ ಚಲಿಸಬಹುದು. ಅಮೇರಿಕಾ ಮೂಲದ ಕಂಪನಿಯು ಬ್ರಾಂಡ್ ಲೆವೆಲ್ 1 ಚಾರ್ಜಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ. ಇದು ಬ್ಯಾಟರಿಯನ್ನು 12 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಇದರ ಜೊತೆಗೆ ಲೆವೆಲ್ 3 ಡಿಸಿ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ನೀಡಲಾಗುವುದು. ಇದರಿಂದಾಗಿ ಬ್ಯಾಟರಿಗಳನ್ನು ಕೇವಲ 40 ನಿಮಿಷಗಳಲ್ಲಿ 0-80% ಹಾಗೂ 60 ನಿಮಿಷಗಳಲ್ಲಿ 0-100%ನಷ್ಟು ಚಾರ್ಜ್ ಮಾಡಬಹುದಾಗಿದೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಫೀಚರ್ಸ್

ಹಾರ್ಲೆ ಡೇವಿಡ್ಸನ್ ಲೈವ್‌ವೈರ್ ಬೈಕ್ ಹಲವಾರು ಫೀಚರ್‍‍ಗಳನ್ನು ಹೊಂದಿದೆ. ಇವುಗಳಲ್ಲಿ ಎಲ್ಇಡಿ ಲೈಟಿಂಗ್, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ 4.3 ಇಂಚಿನ ಟಿಎಫ್‍‍ಟಿ ಡಿಸ್ ಪ್ಲೇ ಹೊಂದಿರುವ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳು ಸೇರಿವೆ. ಇದರ ಜೊತೆಗೆ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಹಾಗೂ ಜಿಯೋಫೆನ್ಸಿಂಗ್ ಫೀಚರ್‍‍‍ಗಳೂ ಸಹ ಸೇರಿವೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಹಾರ್ಲೆ ಡೇವಿಡ್ಸನ್ ಲೈವ್‌ವೈರ್‌ನಲ್ಲಿನ ಇತರ ಮೆಕಾನಿಕಲ್ ಹಾಗೂ ರೈಡರ್ ಸಾಧನಗಳಲ್ಲಿ ಸಿಕ್ಸ್ ಆಕ್ಸಿಸ್‍‍ನ ಇನ್‍‍ಹರ್ಶಿಯಲ್ ಮ್ಯಾನೇಜ್‍‍ಮೆಂಟ್ ಯೂನಿಟ್(ಐಎಂಯು), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಡ್ರ್ಯಾಗ್ ಟಾರ್ಕ್ ಸ್ಲಿಪ್ ಕಂಟ್ರೋಲ್ ಸಿಸ್ಟಮ್ (ಡಿಎಸ್‌ಸಿಎಸ್), ಕಾರ್ನರಿಂಗ್ ಎಬಿಎಸ್ ಹಾಗೂ ರೇರ್ ವ್ಹೀಲ್ ಲಿಫ್ಟ್ ಮಿಟಿಗೇಷನ್ ಸಿಸ್ಟಂಗಳು ಸೇರಿವೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಎರಡೂ ತುದಿಗಳಲ್ಲಿ 17 ಇಂಚಿನ ಮೈಕೆಲಿನ್ ಸ್ಕಾರ್ಚರ್ ಟಯರ್‌ಗಳನ್ನು ಹೊಂದಿದೆ. ಈ ಟಯರ್‍‍ಗಳು ಕ್ರಮವಾಗಿ ಮುಂಭಾಗ ಹಾಗೂ ಹಿಂಭಾಗದಲ್ಲಿ 120/70 ಹಾಗೂ 180/55 ಪ್ರೊಫೈಲ್‌ಗಳನ್ನು ಹೊಂದಿದೆ. ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ ಶೋವಾ ಯುಎಸ್‌ಡಿ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಪೂರ್ಣವಾಗಿ ಅಡ್ಜಸ್ಟ್ ಮಾಡಬಹುದಾದ ಶೋವಾ ಕಂಪನಿಯ ಮೊನೊ ಶಾಕ್‍‍ಗಳಿವೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ ದೊಡ್ಡ ಡ್ಯುಯಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕಿಂಗ್‍‍ಗಳಿವೆ. ಲೈವ್ ವೈರ್ ಬೈಕಿನಲ್ಲಿ ಸ್ಟ್ಯಾಂಡರ್ಡ್ ಆಗಿ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ನೀಡಲಾಗುವುದು. ಲೈವ್‌ವೈರ್ ಬೈಕ್ ಏಳು ರೀತಿಯ ರೈಡಿಂಗ್ ಮೋಡ್‍‍ಗಳನ್ನು ಹೊಂದಿದೆ. ಇವುಗಳಲ್ಲಿ ನಾಲ್ಕು ಪ್ರಿ ಪ್ರೋಗ್ರಾಂ ಆಗಿದ್ದರೆ, ಉಳಿದ ಮೂರು ಕಸ್ಟಮ್ ಮೋಡ್‍‍ಗಳಾಗಿವೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಪ್ರಿ ಪ್ರೋಗ್ರಾಂ ಮೋಡ್‍‍ನಲ್ಲಿ ರೋಡ್, ಸ್ಪೋರ್ಟ್, ರೇನ್ ಹಾಗೂ ರೇಂಜ್ ಮೋಡ್‍‍ಗಳು ಸೇರಿವೆ. ಮೂರು ಕಸ್ಟಮೈಸಬಲ್ ಮೋಡ್‍‍ಗಳಲ್ಲಿ ಸವಾರರು ತಮಗೆ ಇಷ್ಟ ಬಂದ ಪವರ್ ಲೆವೆಲ್, ಥ್ರಾಟಲ್ ರೆಸ್ಪಾನ್ಸ್, ಟ್ರಾಕ್ಷನ್ ಕಂಟ್ರೋಲ್ ಹಾಗೂ ರಿಜನರೇಷನ್ ಬಳಸಬಹುದಾಗಿದೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಬಣ್ಣಗಳು

ಹಾರ್ಲೆ ಡೇವಿಡ್ಸನ್ ಲೈವ್‌ವೈರ್ ಬೈಕ್ ಅನ್ನು ಲೈಮ್ ಗ್ರೀನ್, ಆರೇಂಜ್ ಹಾಗೂ ಬ್ಲಾಕ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಬಣ್ಣಗಳಲ್ಲಿರುವ ಬೈಕುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಈ ಬಣ್ಣಗಳಲ್ಲಿಯೇ ಈ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಾಧ್ಯತೆಗಳಿವೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಬೆಲೆಗಳು

ಹಾರ್ಲೆ ಡೇವಿಡ್ಸನ್ ಕಂಪನಿಯ ಲೈವ್‌ವೈರ್ ಬೈಕ್ ಅನ್ನು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಎಲೆಕ್ಟ್ರಿಕ್ ಬೈಕಿನ ಬೆಲೆಯು, ತೆರಿಗೆಯನ್ನು ಹೊರತುಪಡಿಸಿ 29,799 ಅಮೇರಿಕನ್ ಡಾಲರ್‍‍ಗಳು ಅಂದರೆ ಭಾರತದ ರೂಪಾಯಿಯಲ್ಲಿ ಸುಮಾರು ರೂ.21.37 ಲಕ್ಷಗಳಾಗುತ್ತದೆ. ಈ ಬೈಕ್ ಭಾರತಕ್ಕೆ ಕಾಲಿಟ್ಟ ನಂತರ ಬೆಲೆಯು ಸ್ವಲ್ಪ ಹೆಚ್ಚಾಗುವ ಸಾಧ್ಯತೆಗಳಿವೆ.

ಅನಾವರಣಗೊಂಡ ಹಾರ್ಲೆ ಡೇವಿಡ್ಸನ್ ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತವು ಹಾರ್ಲೆ ಡೇವಿಡ್‌ಸನ್‌ ಕಂಪನಿಯ ಪ್ರಮುಖ ಮಾರುಕಟ್ಟೆಯಾಗಿದೆ. ಕಂಪನಿಯು ದೇಶದಲ್ಲಿ ಹಲವು ರೀತಿಯ ಗ್ರಾಹಕರಿಗಾಗಿ ಹಲವಾರು ಬೈಕುಗಳನ್ನು ಮಾರಾಟ ಮಾಡುತ್ತಿದೆ. ಲೈವ್‌ವೈರ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಬೈಕ್ ಆಗಿದೆ. 2020ರ ಆರಂಭದಲ್ಲಿ ಮಾರಾಟವಾಗಲಿದೆ.

Most Read Articles

Kannada
English summary
Harley-Davidson Livewire Unveiled In India: Details About Harley’s All-Electric Offering - Read in kannada
Story first published: Tuesday, August 27, 2019, 16:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X