ಬೈಕ್ ಪ್ರಿಯರಿಗಾಗಿ ಹಾರ್ಲೆ ಡೇವಿಡ್ಸನ್ ಕಡೆಯಿಂದ ಅದ್ಭುತವಾದ ಅವಕಾಶ

ಅಮೆರಿಕದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಭಾರತದಲ್ಲಿ ಬೈಕ್ ಮಾರಾಟ ಆರಂಭಿಸಿ ಇಂದಿಗೆ ಹತ್ತು ವರ್ಷ ಪೂರೈಸಿವೆ. ಈ ಹಿನ್ನಲೆಯಲ್ಲಿ ಭಾರತೀಯ ಗ್ರಾಹಕರಿಗಾಗಿ ಕೆಲವು ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿರುವ ಹಾರ್ಲೆ ಸಂಸ್ಥೆಯು ಇದೇ ಮೊದಲ ಬಾರಿಗೆ ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಉಚಿತ ಬೇಸಿಗೆ ಶಿಬಿರವನ್ನು ಆರಂಭಿಸಿದೆ.

ಬೈಕ್ ಪ್ರಿಯರಿಗಾಗಿ ಹಾರ್ಲೆ ಡೇವಿಡ್ಸನ್ ಕಡೆಯಿಂದ ಅದ್ಬುತವಾದ ಅವಕಾಶ

ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಕಳೆದ ವರ್ಷ ಅಮೆರಿಕದಲ್ಲಿ ಮೊದಲ ಬಾರಿಗೆ ಅಡ್ವೆಂಚರ್ ಬೈಕ್ ಪ್ರಿಯರನ್ನು ಸೆಳೆಯುವ ಉದ್ದೇಶದಿಂದ ಬೇಸಿಗೆ ಶಿಬಿರವನ್ನು ಆರಂಭಿಸಿತ್ತು. ಇದಾದ ಬಳಿಕ ಭಾರತದಲ್ಲಿ ಇದೇ ಮೊದಲ ಬಾರಿಗೆ ತನ್ನ ಬೇಸಿಗೆ ಶಿಬರಕ್ಕೆ ಚಾಲನೆ ನೀಡಿದ್ದು, ಆಸಕ್ತ ಅಡ್ವೆಂಚರ್ ಬೈಕ್ ಸವಾರರು ಈ ಶಿಬಿರದಲ್ಲಿ ಉಚಿತವಾಗಿ ಭಾಗಿಯಾಗುವ ಅವಕಾಶವನ್ನು ನೀಡಿದೆ.

ಏಪ್ರಿಲ್ 1ರಿಂದಲೇ ಈ ಶಿಬಿರ ಆರಂಭವಾಗಿದ್ದು, ದೇಶದ ವಿವಿಧಡೆ ಇಂಟರ್ನ್‌ಶಿಪ್ ಮಾಡುವ ಅದ್ಬುತ ಅವಕಾಶ ಇದಾಗಿದೆ. ಮತ್ತೊಂದು ವಿಶೇಷ ಅಂದ್ರೆ ಈ ಶಿಬಿರದಲ್ಲಿ ಉತ್ತಮವಾಗಿ ಪರ್ಫಾಮೆನ್ಸ್ ತೊರುವ ಮೂವರಿಗೆ ಯುಎಸ್ಎನಲ್ಲಿ 1 ತಿಂಗಳ ಕಾಲ ಸುತ್ತುವ ಅವಕಾಶ ದೊರೆಯಲಿದೆ.

ಬೈಕ್ ಪ್ರಿಯರಿಗಾಗಿ ಹಾರ್ಲೆ ಡೇವಿಡ್ಸನ್ ಕಡೆಯಿಂದ ಅದ್ಬುತವಾದ ಅವಕಾಶ

ಹಾಗೆಯೇ ಯುಎಸ್ಎನಲ್ಲಿರುವ ಹಾರ್ಲೆ ಡೇವಿಡ್ಸನ್ ಅಡ್ವೆಂಚರ್ ಬೈಕ್ ಶಿಬಿರದಲ್ಲೂ ಭಾಗಿಯಾಗುವ ಅದ್ಬುತ ಅವಕಾಶ ಇದಾಗಿದ್ದು, ಬೈಕ್ ಸವಾರಿಯೊಂದಿಗೆ ಜೀವನ ರೂಪಿಸಿಕೊಳ್ಳ ಬಯಸುವ ಯುವ ಪ್ರತಿಭೆಗಳಿಗೆ ಇದೊಂದು ಅತ್ಯುತ್ತಮ ಅವಕಾಶ ಅಂದ್ರೆ ತಪ್ಪಾಗುವುದಿಲ್ಲ.

ಬೈಕ್ ಪ್ರಿಯರಿಗಾಗಿ ಹಾರ್ಲೆ ಡೇವಿಡ್ಸನ್ ಕಡೆಯಿಂದ ಅದ್ಬುತವಾದ ಅವಕಾಶ

ಈ ಬಗ್ಗೆ ಮಾತನಾಡಿರುವ ಹಾರ್ಲೆ ಡೇವಿಡ್ಸನ್ ಇಂಡಿಯಾ ವಿಭಾಗದ ಅಧ್ಯಕ್ಷ ಸಂಜೀವ್ ರಾಜಶೇಖರನ್ ಅವರು, ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಗುತ್ತಿರುವ ಹಾರ್ಲೆ ರೈಡ್ ಬೇಸಿಗೆ ಶಿಬಿರವು ಯುವ ಅಡ್ವೆಂಚರ್ ಪ್ರತಿಭೆಗಳಿಗೆ ಉತ್ತಮ ಅವಕಾಶ ದೊರಕಿದ್ದು, ಆಸಕ್ತ ಬೈಕ್ ಸವಾರರು ಇದರಲ್ಲಿ ಯಾವುದೇ ಶುಲ್ಕವಿಲ್ಲದೇ ಭಾಗಿಯಾಗಬಹುದು ಎಂದು ತಿಳಿದ್ದಾರೆ.

MOST READ: ವಾಹನಗಳ ಕಳ್ಳತನಕ್ಕೆ ಬ್ರೇಕ್ ಹಾಕಲು ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ..!

ಬೈಕ್ ಪ್ರಿಯರಿಗಾಗಿ ಹಾರ್ಲೆ ಡೇವಿಡ್ಸನ್ ಕಡೆಯಿಂದ ಅದ್ಬುತವಾದ ಅವಕಾಶ

ಜೊತೆಗೆ ಐಷಾರಾಮಿ ಬೈಕ್ ಅಡ್ವೆಂಚರ್ ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಹಾರ್ಲೆ ಡೇವಿಡ್ಸನ್ ಬ್ರಾಂಡ್ ತಿಳುವಳಿಕೆಯ ಸಂಬಂಧ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿರುವ ಸಂಜೀವ್ ರಾಜಶೇಖರನ್ ಅವರು, ಭಾರತೀಯ ಯುವ ಪ್ರತಿಭೆಗಳನ್ನು ಗುರುತಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದಿದ್ದಾರೆ.

ಹೀಗಾಗಿ ಅಡ್ವೆಂಚರ್ ಕೌಶಲ್ಯವನ್ನು ತೋರ್ಪಡಿಸಲು ಯುವ ಪ್ರತಿಭೆಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು, ಆಸಕ್ತ ಅಭ್ಯರ್ಥಿಗಳು ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಅಧಿಕೃತ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Most Read Articles

Kannada
English summary
Harley-Davidson Opens Summer Internship Program In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X