ಬಿಡುಗಡೆಯಾಯ್ತು ಹಾರ್ಲೆ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕ್ ಅನ್ನು ಇಂದು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. 2020ರ ಹೊಸ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋ ರೂಂ ದರದಂತೆ ರೂ.5.47 ಲಕ್ಷಗಳಾಗಿದೆ. ಹೊಸ ಬೈಕ್ ಸ್ಟಾಂಡರ್ಡ್ ಮಾದರಿಯ ಬೈಕಿಗಿಂತ ರೂ.13,000 ಹೆಚ್ಚು ಬೆಲೆಯನ್ನು ಹೊಂದಿದೆ.

ಬಿಡುಗಡೆಯಾಯ್ತು ಹಾರ್ಲೆ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್

ಭಾರತದ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯು 10 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕುಗಳನ್ನು ಬಿಡುಗಡೆಗೊಳಿಸಲಾಗಿದೆ. ಹೊಸ ಸ್ಟ್ರೀಟ್ 750 ಬೈಕ್ ಅನ್ನು ವಿಶೇಷವಾಗಿಸಲು ಕೇವಲ 300 ಬೈಕುಗಳನ್ನು ಮಾರಾಟ ಮಾಡಲಾಗುವುದು. 2020ರ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕ್, ಹಾರ್ಲೆ ಡೇವಿಡ್ಸನ್ ಕಂಪನಿಯು ಬಿಎಸ್6 ನಿಯಮಗಳಿಗೆ ತಕ್ಕಂತೆ ತಯಾರಿಸಿದ ಮೊದಲ ಬೈಕ್ ಆಗಿದೆ.

ಬಿಡುಗಡೆಯಾಯ್ತು ಹಾರ್ಲೆ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್

ಲಿಮಿಟೆಡ್ ಎಡಿಷನ್ ಬೈಕಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಆದರೆ ಈ ಬೈಕಿನಲ್ಲಿರುವ ಟ್ಯಾಂಕ್ ಹಾಗೂ ಟೇಲ್ ಸೆಕ್ಷನ್ ಹೊಸ ಇಂಡಿಯನ್ ಮೋಟಿಫ್ ವಿನ್ಯಾಸವನ್ನು ಹೊಂದಿವೆ. ಲಿಮಿಟೆಡ್ ಎಡಿಷನ್ ಬೈಕಿನಲ್ಲಿರುವ ಅಲಾಯ್ ವ್ಹೀಲ್‌ಗಳು ಕಪ್ಪು ಬಣ್ಣವನ್ನು ಹೊಂದಿವೆ. ಮುಂಭಾಗದಲ್ಲಿರುವ ಸಸ್ಪೆಂಷನ್ ಸೆಟಪ್‌ ಫೋರ್ಕ್ ಗೈಟರ್‌ಗಳೂ ಸಹ ಕಪ್ಪು ಬಣ್ಣವನ್ನು ಹೊಂದಿವೆ.

ಬಿಡುಗಡೆಯಾಯ್ತು ಹಾರ್ಲೆ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್

ಈ ಕಾಸ್ಮೆಟಿಕ್ ಅಪ್‍‍ಡೇಟ್‍‍ಗಳ ಹೊರತಾಗಿ, 2020ರ ಹೊಸ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳಾಗಿಲ್ಲ. ಈ ಬೈಕಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯ ಬೈಕಿನಲ್ಲಿರುವಂತಹ ಮೆಕಾನಿಕಲ್ ಅಂಶಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ 749 ಸಿಸಿ ವಿ ಟ್ವಿನ್ ಲಿಕ್ವಿಡ್ ಕೂಲ್ಡ್ ಪೆಟ್ರೋಲ್ ಎಂಜಿನ್ ಸೇರಿದೆ.

ಬಿಡುಗಡೆಯಾಯ್ತು ಹಾರ್ಲೆ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್

ಈ ಎಂಜಿನ್ 3,750 ಆರ್‌ಪಿಎಂನಲ್ಲಿ 60 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗೆ ಆರು ಸ್ಪೀಡಿನ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಬೈಕಿನಲ್ಲಿರುವ ಸಸ್ಪೆಂಷನ್ ಕಾರ್ಯಗಳನ್ನು ಮುಂಭಾಗದಲ್ಲಿರುವ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿರುವ ಟ್ವಿನ್ ಶಾಕ್‍‍‍ಗಳನ್ನು ನಿರ್ವಹಿಸುತ್ತವೆ.

ಬಿಡುಗಡೆಯಾಯ್ತು ಹಾರ್ಲೆ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್

ಬ್ರೇಕಿಂಗ್‍‍ಗಳಿಗಾಗಿ ಎರಡೂ ತುದಿಯಲ್ಲಿ ಡಿಸ್ಕ್ ಬ್ರೇಕ್‌ಗಳಿವೆ. ಡ್ಯುಯಲ್ ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಲೈವ್‌ವೈರ್ ಎಲೆಕ್ಟ್ರಿಕ್ ಬೈಕಿನ ಅನಾವರಣದ ಜೊತೆಗೆ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕ್ ಅನ್ನು ಬಿಡುಗಡೆಗೊಳಿಸಲಾಯಿತು.

ಬಿಡುಗಡೆಯಾಯ್ತು ಹಾರ್ಲೆ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್

ಹಾರ್ಲೆ ಡೇವಿಡ್ಸನ್ ಕಂಪನಿಯು, ಲೈವ್‍‍ವೈರ್ ಎಲೆಕ್ಟ್ರಿಕ್ ಬೈಕ್ ಅನ್ನು ಈ ವರ್ಷದ ಕೊನೆಯಲ್ಲಿ ಅಥವಾ 2020ರ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಲೈವ್‍‍ವೈರ್, ಹಾರ್ಲೆ ಡೇವಿಡ್ಸನ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಬೈಕ್ ಆಗಿದೆ.

ಬಿಡುಗಡೆಯಾಯ್ತು ಹಾರ್ಲೆ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್

ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ಸುಮಾರು ರೂ.21 ಲಕ್ಷಗಳಾಗಲಿದೆ. ಹಾರ್ಲೆ ಡೇವಿಡ್ಸನ್ ಕಂಪನಿಯ ಲೈವ್‌ವೈರ್ ಬೈಕ್ ಅನ್ನು ಅಮೇರಿಕಾ, ಕೆನಡಾ ಹಾಗೂ ಇತರ ಯುರೋಪಿಯನ್ ದೇಶಗಳಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಬಿಡುಗಡೆಯಾಯ್ತು ಹಾರ್ಲೆ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್

ಹಾರ್ಲೆ ಡೇವಿಡ್ಸನ್ ಲೈವ್‌ವೈರ್ ಬೈಕಿನಲ್ಲಿ 15.5 ಕಿ.ವ್ಯಾ ಬ್ಯಾಟರಿ ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 235 ಕಿ.ಮೀ ದೂರದವರೆಗೆ ಚಲಿಸಬಹುದು ಎಂದು ಹೇಳಲಾಗಿದೆ. ಇದರ ಜೊತೆಗೆ ಈ ಬೈಕಿನಲ್ಲಿ ಲೆವೆಲ್ 3 ಫಾಸ್ಟ್ ಚಾರ್ಜಿಂಗ್ ಸಿಸ್ಟಂ ನೀಡಲಾಗುವುದು. ಈ ಸಿಸ್ಟಂನಿಂದಾಗಿ ಕೇವಲ 50 ನಿಮಿಷಗಳಲ್ಲಿ 80%ನಷ್ಟು ಚಾರ್ಜ್ ಮಾಡಬಹುದಾಗಿದೆ.

ಬಿಡುಗಡೆಯಾಯ್ತು ಹಾರ್ಲೆ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕ್ ಅನ್ನು, ಅಮೇರಿಕಾ ಮೂಲದ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲಿ 10 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಹಾಗೂ ಇಂಟರ್‌ಸೆಪ್ಟರ್ 650 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Harley-Davidson Street 750 Limited Edition Launched In India At Rs 5.47 Lakh - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X