500 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಹಾರ್ಲೆ ಡೇವಿಡ್ಸನ್

ಮನಿ ಕಂಟ್ರೋಲ್ ವರದಿಗಳ ಪ್ರಕಾರ, ಪ್ರಿಮೀಯಂ ಮೋಟಾರ್‍‍ಸೈಕಲ್ ಕಂಪನಿಗಳು 500 ಸಿಸಿ ಸೆಗ್‍‍ಮೆಂಟಿನಲ್ಲಿ ತಮ್ಮ ಕಂಪನಿಯ ಮೋಟಾರ್‍‍ಸೈಕಲ್‍‍ಗಳ ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನ ಪಡುತ್ತಲೇ ಇವೆ. ಇದರಲ್ಲಿ ಕೆಲವು ಕಂಪನಿಗಳು ಯಶಸ್ವಿಯಾಗಿದ್ದರೆ, ಇನ್ನೂ ಕೆಲವು ಕಂಪನಿಗಳು ಹೋರಾಟ ನಡೆಸುತ್ತಲೇ ಇವೆ.

500 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಹಾರ್ಲೆ ಡೇವಿಡ್ಸನ್

ಬಿ‍ಎಂ‍‍ಡಬ್ಲ್ಯು ಮೋಟಾರಾಡ್, ಕೆ‍‍ಟಿ‍ಎಂ, ಕವಾಸಕಿ, ಯಮಹಾ ಮತ್ತು ಹೋಂಡಾ ಕಂಪನಿಗಳು ಸಣ್ಣ ಸಾಮರ್ಥ್ಯದ ಬೈಕುಗಳ ಸೆಗ್‍‍ಮೆಂಟಿನಲ್ಲಿ ಮಾರಾಟ ಪ್ರಮಾಣವನ್ನು ಹೆಚ್ಚು ಮಾಡಲು ಪ್ರಯತ್ನಿಸುತ್ತಿರುವ ಪ್ರಿಮೀಯಂ ಮೋಟಾರ್‍‍ಸೈಕಲ್‍ ಕಂಪನಿಗಳಾಗಿವೆ. ಈ 500 ಸಿಸಿ ಸೆಗ್‍‍ಮೆಂಟಿಗೆ ಬ್ರಿಟನ್ ಮೂಲದ ಟ್ರಯಂಫ್ ಮತ್ತು ಅಮೇರಿಕಾ ಮೂಲದ ಹಾರ್ಲೆ ಡೇವಿಡ್ಸನ್ ಕಂಪನಿಗಳು ಸೇರ್ಪಡೆಯಾಗಿವೆ. ಹಾರ್ಲೆ ಕಂಪನಿಯು 500 ಸಿಸಿ ಬೈಕುಗಳನ್ನು 2020ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

500 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಹಾರ್ಲೆ ಡೇವಿಡ್ಸನ್

ಒಂದು ವರ್ಷದ ಹಿಂದೆ, ಹಾರ್ಲೆ ಡೇವಿಡ್ಸನ್ ಕಂಪನಿಯು ಏಷ್ಯಾ ಮಾರುಕಟ್ಟೆಗಳಲ್ಲಿ ತನ್ನ 250 ಸಿಸಿ - 500 ಸಿಸಿ ಸಾಮರ್ಥ್ಯದ ಬೈಕುಗಳನ್ನು ಬಿಡುಗಡೆಗೊಳಿಸುವ ಯೋಜನೆಗಳ ಬಗ್ಗೆ ಘೋಷಿಸಿತ್ತು. ಹಾರ್ಲೆ ವಿಶ್ವ ಮಾರುಕಟ್ಟೆಯಲ್ಲಿ ಸ್ಟ್ರೀಟ್ 500 ಹೆಸರಿನ ಬೈಕ್‍‍ಗಳನ್ನು ಮಾರಾಟ ಮಾಡಿದರೆ, ಭಾರತೀಯ ಮಾರುಕಟ್ಟೆಯಲ್ಲಿ 750 ಸಿಸಿಯ ಸ್ಟ್ರೀಟ್ ಬೈಕುಗಳನ್ನು ಮಾರಾಟ ಮಾಡುತ್ತದೆ.

500 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಹಾರ್ಲೆ ಡೇವಿಡ್ಸನ್

ಹಾರ್ಲೆ ಡೇವಿಡ್‍‍ಸನ್ ಬಿಡಿ ಭಾಗಗಳ ತಯಾರಿಕೆಗಾಗಿ ಸ್ಥಳಿಯ ಮೋಟಾರ್‍‍‍ಸೈಕಲ್ ಕಂಪನಿಗಳ ಜೊತೆ ಕೈಜೋಡಿಸಲಿದೆ. ಈ ಯೋಜನೆಯಿಂದ ಹಾರ್ಲೆ ಡೇವಿಡ್ಸನ್ ಕಂಪನಿಯ ಉತ್ಪಾದನಾ ವೆಚ್ಚವು ತಗ್ಗುವುದಲ್ಲದೇ ಬೈಕುಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡಬಹುದಾಗಿದೆ. ಕಡಿಮೆ ದರವು ಮಾರುಕಟ್ಟೆಯ ಚಿತ್ರಣವನ್ನೇ ಬದಲಿಸಬಹುದು.

500 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಹಾರ್ಲೆ ಡೇವಿಡ್ಸನ್

ಹಾರ್ಲೆ ಕಂಪನಿಯು 2018-19ರ ಆರ್ಥಿಕ ವರ್ಷದಲ್ಲಿ 2,676 ವಾಹನಗಳನ್ನು ಮಾರಾಟ ಮಾಡಿದೆ. ಇದು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣವಾಗಿದೆ. ಎರಡು ವರ್ಷಗಳ ಹಿಂದೆ 4,708 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಹಾರ್ಲೆ ಕಂಪನಿಯ ಬೈಕುಗಳು ಭಾರತದಲ್ಲಿ ಬಿಡುಗಡೆಯಾದಾಗ ಅತಿ ಜನಪ್ರಿಯ ಪ್ರಿಮೀಯಂ ಮೋಟಾರ್‍‍ಸೈಕಲ್ ಎಂಬ ಹಿರಿಮೆಯನ್ನು ಹೊಂದಿದ್ದವು, ಅದಾದ ನಂತರದಲ್ಲಿ ಪ್ರಬಲ ಸ್ಪರ್ಧೆಯನ್ನು ಎದುರಿಸುತ್ತಿವೆ.

500 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಹಾರ್ಲೆ ಡೇವಿಡ್ಸನ್

ಹಾರ್ಲೆ ಡೇವಿಡ್ಸನ್ ಕಂಪನಿಯು 2020ರಲ್ಲಿ ಸ್ಟ್ರೀಟ್ ಫೈಟರ್ ಮತ್ತು ಅಡ್ವೆಂಚರ್ ಮೋಟಾರ್‍‍ಸೈಕಲ್ ಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ. ಈ ಬೈಕುಗಳು ಭಾರತೀಯ ಮಾರುಕಟ್ಟೆಗೂ ಲಗ್ಗೆಯಿಡುವ ನಿರೀಕ್ಷೆಗಳಿವೆ. ಭಾರತೀಯ ಮಾರುಕಟ್ಟೆಯು ನಿಧಾನವಾಗಿ ಅಡ್ವೆಂಚರ್ ಮೋಟಾರ್‍‍ಸೈಕಲ್ ಸೆಗ್‍‍ಮೆಂಟಿಗೆ ತೆರೆದುಕೊಳ್ಳುತ್ತಿದೆ.

500 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಹಾರ್ಲೆ ಡೇವಿಡ್ಸನ್

ಹಾರ್ಲೆ ಕಂಪನಿಯು ಇದರ ಸೂಕ್ಷ್ಮವನ್ನು ಗಮನಿಸಿ, ಇದರ ಮೇಲೆ ಹೂಡಿಕೆ ಮಾಡುತ್ತಿದೆ. ಈ ಎರಡೂ ಮೋಟಾರ್‍‍ಸೈಕಲ್‍‍ಗಳು 600 ಸಿಸಿಯ ಆಸುಪಾಸಿನ ಎಂಜಿನ್ ಹೊಂದಿರಲಿವೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿದೆ ಮಿಟ್ಸುಬಿಷಿ ಎಕ್ಲಿಪ್ಸ್

500 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಹಾರ್ಲೆ ಡೇವಿಡ್ಸನ್

ಸ್ಟ್ರೀಟ್ 750, ಹಾರ್ಲೆ ಕಂಪನಿಯ ಎಂಟ್ರಿ ಲೆವೆಲ್‍‍ನ ಮೋಟಾರ್‍‍ಸೈಕಲ್ ಆಗಿದ್ದು, ರಾಯಲ್ ಎನ್‍‍ಫೀಲ್ಡ್ ಕಂಪನಿಯ ಇಂಟರ್‍‍ಸೆಪ್ಟರ್ 650 ಬೈಕಿನಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯುತ್ತಿರುವ ಕಾರಣ ರಾಯಲ್ ಎನ್‍‍ಫೀಲ್ಡ್ ಕಂಪನಿಯ 650 ಟ್ವಿನ್ ಬೈಕುಗಳು ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.

500 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಹಾರ್ಲೆ ಡೇವಿಡ್ಸನ್

ಹಾರ್ಲೆ ಕಂಪನಿಯ ಸ್ಟ್ರೀಟ್ 500 ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದ ನಂತರ 3 ಲಕ್ಷ ರೂ.ಗಳ ಆಸುಪಾಸಿನಲ್ಲಿ ಮಾರಾಟ ಮಾಡಿದರೆ, ಬೇರೆ ಕಂಪನಿಯ ಬೈಕುಗಳಿಗೆ ಸ್ಪರ್ಧೆಯನ್ನೊಡ್ಡಿ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಭವಿಷ್ಯ ಹೊಂದಬಹುದಾಗಿದೆ. ಈ ಬೆಲೆಯಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯ ಸ್ಟ್ರೀಟ್ 500 ಬೈಕ್, ರಾಯಲ್ ಎನ್‍‍ಫೀಲ್ಡ್ ನ 650 ಟ್ವಿನ್, ಬಿಎಂ‍‍ಡಬ್ಲ್ಯು ಜಿ 310, ಕೆ‍‍ಟಿ‍ಎಂ ಡ್ಯೂಕ್ 390 ಮತ್ತು ಹೋಂಡಾ ಸಿಬಿ300 ಆರ್ ಕಂಪನಿಯ ಬೈಕುಗಳಿಗೆ ಪ್ರಬಲ ಸ್ಪರ್ಧೆ ನೀಡಲಿದೆ.

500 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಹಾರ್ಲೆ ಡೇವಿಡ್ಸನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹಾರ್ಲೆ ಡೇವಿಡ್ಸನ್ ಕಂಪನಿಯು ತಡವಾಗಿಯಾದರೂ ಈ ಸೆಗ್‍‍ಮೆಂಟಿನಲ್ಲಿ ಬೈಕುಗಳನ್ನು ಬಿಡುಗಡೆ ಮಾಡುತ್ತಿರುವುದು ಸಂತಸದ ಸಂಗತಿ. ಈ ಸೆಗ್‍‍ಮೆಂಟಿನಲ್ಲಿ ಬೈಕುಗಳ ಮಾರಾಟದ ಬೆಲೆಯನ್ನು ಮಾತ್ರವಲ್ಲದೇ ಮೆಂಟೆನೆನ್ಸ್ ವೆಚ್ಚ ಮತ್ತು ಗ್ರಾಹಕರಿಗೆ ಮಾರಾಟದ ನಂತರ ನೀಡುವ ಸೇವೆಗಳ ವೆಚ್ಚವನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾರ್ಲೆ ಕಂಪನಿಯು ಈ ಎಲ್ಲಾ ಸಂಗತಿಗಳನ್ನು ಹೇಗೆ ನಿಭಾಯಿಸಲಿದೆ ಎಂದು ಕಾದು ನೋಡಬೇಕಿದೆ.

Most Read Articles

Kannada
English summary
Harley Davidson To Launch Sub-500cc Motorcycles Next Year — Are The Americans Up To It? - Read in kannada
Story first published: Tuesday, May 21, 2019, 10:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X