ರಾಯಲ್ ಎನ್‍‍ಫೀಲ್ಡ್ ಗೆ ಪೈಪೋಟಿ ನೀಡಲಿರುವ ಹಾರ್ಲೆ ಡೇವಿಡ್ಸನ್‍‍ನ ಹೊಸ ಬೈಕ್

ಪ್ರಪಂಚದ ಹಳೆಯ ಬೈಕ್ ತಯಾರಿಕಾ ಕಂಪನಿಗಳಾದ ರಾಯಲ್ ಎನ್‍‍ಫೀಲ್ಡ್ ಹಾಗೂ ಹಾರ್ಲೆ ಡೇವಿಡ್ಸನ್ ಕಂಪನಿಗಳು ಬಹುತೇಕ ಒಂದೇ ಮಾದರಿಯ ಬೈಕುಗಳನ್ನು ತಯಾರಿಸುತ್ತವೆ. ಆಧುನಿಕ ತಂತ್ರಜ್ಞಾನದೊಂದಿಗೆ ಕ್ಲಾಸಿಕ್ ನೋಟ ಎಂಬುದು ಇದರ ಹಿಂದಿರುವ ಉದ್ದೇಶ.

ರಾಯಲ್ ಎನ್‍‍ಫೀಲ್ಡ್ ಗೆ ಪೈಪೋಟಿ ನೀಡಲಿರುವ ಹಾರ್ಲೆ ಡೇವಿಡ್ಸನ್‍‍ನ ಹೊಸ ಬೈಕ್

ರಾಯಲ್ ಎನ್‍‍ಫೀಲ್ಡ್ ಇದುವರೆಗೂ ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಬೈಕುಗಳನ್ನು ನೀಡುತ್ತಾ ಬಂದಿದೆ, ಆದರೆ ಹಾರ್ಲೆ ಡೇವಿಡ್ಸನ್ ಕಂಪನಿಯ ಟ್ವಿನ್ ಸಿಲಿಂಡರ್ ಪವರ್ ಬೈಕುಗಳು ರಾಯಲ್ ಎನ್‍‍ಫೀಲ್ಡ್ ಬೈಕಿಗಳ ಬೆಲೆ ದುಬಾರಿಯಾಗಿದೆ. ರಾಯಲ್ ಎನ್‍‍ಫೀಲ್ಡ್ ಇತ್ತೀಚಿಗೆ ಪ್ಯಾರಲೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದ್ದ ಕಾಂಟಿನೆಂಟಲ್ ಜಿ‍‍ಟಿ ಹಾಗೂ ಇಂಟರ್‍‍ಸೆಪ್ಟರ್ ಎಂಬ ಬೈಕುಗಳನ್ನು ಬಿಡುಗಡೆ ಮಾಡಿ ಹಾರ್ಲೆ ಡೇವಿಡ್ಸನ್ ಸರಣಿಯ ಬೈಕುಗಳಿಗೆ ಪೈಪೋಟಿ ನೀಡಿತ್ತು.

ರಾಯಲ್ ಎನ್‍‍ಫೀಲ್ಡ್ ಗೆ ಪೈಪೋಟಿ ನೀಡಲಿರುವ ಹಾರ್ಲೆ ಡೇವಿಡ್ಸನ್‍‍ನ ಹೊಸ ಬೈಕ್

ಹಾರ್ಲೆ ಡೇವಿಡ್ಸನ್ ತನ್ನ ಹೊಸ ಬೈಕುಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ನೀಡಲಿದ್ದು, ರಾಯಲ್ ಎನ್‍‍ಫೀಲ್ಡ್ ಬೈಕುಗಳಿಗೆ ಪೈಪೋಟಿ ನೀಡಲಿದೆ. ಹಾರ್ಲೆ ಡೇವಿಡ್ಸನ್ ಕಂಪನಿಯ ಯೋಜನೆಯಾದ ಮೋರ್ ರೋಡ್ಸ್ ಟು ಹಾರ್ಲೆ ಡೇವಿಡ್ಸನ್ ಯೋಜನೆಯಡಿ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗಾಗಿ ಹೊಸ ಬೈಕುಗಳನ್ನು ಕೈಗೆಟುಕುವ ದರದಲ್ಲಿ ನೀಡಲಿದೆ.

ರಾಯಲ್ ಎನ್‍‍ಫೀಲ್ಡ್ ಗೆ ಪೈಪೋಟಿ ನೀಡಲಿರುವ ಹಾರ್ಲೆ ಡೇವಿಡ್ಸನ್‍‍ನ ಹೊಸ ಬೈಕ್

ಹಾರ್ಲೆ ಡೇವಿಡ್ಸನ್ ಕಂಪನಿಯ ಅಧ್ಯಕ್ಷರು ಮತ್ತು ಸಿ‍ಇ‍ಒ ಆದ ಮ್ಯಾಟ್ ಲೆವಾಟಿಕ್ ರವರು ಮಾತನಾಡಿ, ಮೋರ್ ರೋಡ್ಸ್ ಟು ಹಾರ್ಲೆ ಡೇವಿಡ್ಸನ್ ಯೋಜನೆಯಡಿ ಏಷ್ಯಾದಲ್ಲಿರುವ ದೇಶಗಳಲ್ಲಿ ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಅನುಕೂಲವಾಗಲಿದೆ.

ರಾಯಲ್ ಎನ್‍‍ಫೀಲ್ಡ್ ಗೆ ಪೈಪೋಟಿ ನೀಡಲಿರುವ ಹಾರ್ಲೆ ಡೇವಿಡ್ಸನ್‍‍ನ ಹೊಸ ಬೈಕ್

ಮುಂದಿನ ವರ್ಷ ಈ ಯೋಜನೆಯಡಿ ನಮ್ಮ ಮೊದಲ ಬೈಕ್ ಅನ್ನು ಬಿಡುಗಡೆಗೊಳಿಸಲಿದ್ದು, ಇದರಿಂದ ಲಕ್ಷಾಂತರ ಗ್ರಾಹಕರನ್ನು ಈ ಮಾರುಕಟ್ಟೆಯಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದರು. ಸದ್ಯಕ್ಕೆ ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯು 750 ಸಿಸಿ ಬೈಕುಗಳನ್ನು ಮಾರಾಟ ಮಾಡುತ್ತಿದೆ. ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯು 500 ಸಿಸಿಯ, ಸ್ಟ್ರೀಟ್ 500 ಬೈಕ್ ಗಳನ್ನು ಮಾರಾಟ ಮಾಡುತ್ತದೆ.

ರಾಯಲ್ ಎನ್‍‍ಫೀಲ್ಡ್ ಗೆ ಪೈಪೋಟಿ ನೀಡಲಿರುವ ಹಾರ್ಲೆ ಡೇವಿಡ್ಸನ್‍‍ನ ಹೊಸ ಬೈಕ್

ಹೊಸ ಬೈಕ್ ಅನ್ನು ಸ್ಥಳೀಯ ಬೈಕ್ ತಯಾರಕರ ಜೊತೆಯಲ್ಲಿ ಸೇರಿ ಅವರ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು. ಈ ಸಹಭಾಗಿತ್ವವು ಬಿ‍ಎಂಡಬ್ಲ್ಯು - ಟಿ‍‍ವಿ‍ಎಸ್ ಹಾಗೂ ಬಜಾಜ್ - ಕೆ‍‍ಟಿ‍ಎಂ ಗಳ ಸಹಭಾಗಿತ್ವದಂತೆ ಇರಲಿದೆ. ಹಾರ್ಲೆ ಡೇವಿಡ್ಸನ್ ಯಾವ ಬೈಕ್ ತಯಾರಕ ಕಂಪನಿಯ ಜೊತೆಗೆ ಕೈಜೋಡಿಸುವುದು ಎಂಬುದು ತಿಳಿದು ಬಂದಿಲ್ಲ.

MOST READ: ಈ ನೆಕ್ಸಾನ್ ಕಾರ್ ಮಾಡಿಫೈಗೆ ಖರ್ಚಾಗಿದ್ದು ಎಷ್ಟು ಗೊತ್ತಾ

ರಾಯಲ್ ಎನ್‍‍ಫೀಲ್ಡ್ ಗೆ ಪೈಪೋಟಿ ನೀಡಲಿರುವ ಹಾರ್ಲೆ ಡೇವಿಡ್ಸನ್‍‍ನ ಹೊಸ ಬೈಕ್

ಹಾಗೆಯೇ ಹಾರ್ಲೆ ಡೇವಿಡ್ಸನ್ ಬಿಡುಗಡೆ ಮಾಡಲಿರುವ ಹೊಸ ಬೈಕಿನ ಬಗ್ಗೆಯೂ ತಿಳಿದು ಬಂದಿಲ್ಲ. ಆದರೆ ಈಗ ವಿಶ್ವ ಮಾರುಕಟ್ಟೆಯಲ್ಲಿರುವ ಸ್ಟ್ರೀಟ್ ಬೈಕ್ ಮಾದರಿಯ ಬೈಕ್ ಅನ್ನೆ ಭಾರತದಲ್ಲಿ ಎಂಟ್ರಿ ಲೆವೆಲ್ ನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಎಂಟ್ರಿ ಲೆವೆಲ್ ಬೈಕ್ ಆದ ಕಾರಣ ದರ ಕಡಿತಗೊಳಿಸುವ ಉದ್ದೇಶದಿಂದ ಹಿಂಭಾಗದಲ್ಲಿರುವ ರೆಗ್ಯುಲರ್ ಟ್ವಿನ್ ಶಾಕ್ ಅಬ್ಸರ್ವರ್, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೆಡ್ ಲ್ಯಾಂಪ್ ಮೊದಲಾದ ಫೀಚರ್‍‍ಗಳು ಇಲ್ಲದೇ ಇರಬಹುದು. ಆದರೆ ಹಾರ್ಲೆ ಡೇವಿಡ್ಸನ್ ತನ್ನ ಬ್ರಾಂಡ್ ಆದ ವಿ-ಟ್ವಿನ್ ಎಂಜಿನ್‍‍ಗಳನ್ನು ಕೈಬಿಡುವ ಸಾಧ್ಯತೆಗಳಿಲ್ಲ.

ರಾಯಲ್ ಎನ್‍‍ಫೀಲ್ಡ್ ಗೆ ಪೈಪೋಟಿ ನೀಡಲಿರುವ ಹಾರ್ಲೆ ಡೇವಿಡ್ಸನ್‍‍ನ ಹೊಸ ಬೈಕ್

ಹೊಸ ಬೈಕಿನಲ್ಲಿ 250 ಸಿಸಿ - 350 ಸಿಸಿಯ ವರೆಗಿನ ಎಂಜಿನ್ ಇರುವ ಸಾಧ್ಯತೆಯಿದ್ದು, ಗರಿಷ್ಟ 25 ಬಿ‍‍ಹೆಚ್‍‍ಪಿ ಉತ್ಪಾದಿಸಲಿದೆ. ಉಳಿದ ಫೀಚರ್‍‍ಗಳಾದ 6 ಸ್ಪೀಡಿನ ಸ್ಲಿಪರ್ ಕ್ಲಚ್ ಟ್ರಾನ್ಸ್ ಮಿಷನ್, ಎಬಿ‍ಎಸ್ ಹೊಂದಿರುವ ಡ್ಯೂಯಲ್ ಡಿಸ್ಕ್ ಬ್ರೇಕ್ ಗಳಿರುವ ಸಾಧ್ಯತೆಗಳಿವೆ.

ರಾಯಲ್ ಎನ್‍‍ಫೀಲ್ಡ್ ಗೆ ಪೈಪೋಟಿ ನೀಡಲಿರುವ ಹಾರ್ಲೆ ಡೇವಿಡ್ಸನ್‍‍ನ ಹೊಸ ಬೈಕ್

ಸದ್ಯಕ್ಕೆ ರಾಯಲ್ ಎನ್‍‍ಫೀಲ್ಡ್ ನ 650 ಟ್ವಿನ್ - ಸಿಲಿಂಡರ್ ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ದೊರಕುತ್ತಿವೆ. ಹಾರ್ಲೆ ಡೇವಿಡ್ಸನ್ ಆ ಬೈಕುಗಳಿಗೆ ನೇರವಾಗಿ ಪೈಪೋಟಿ ನೀಡದಿದ್ದರೂ ತನ್ನ ಆರಂಭಿಕ ಎಂಟ್ರಿ ಲೆವೆಲ್ ಬೈಕುಗಳ ಬೆಲೆಯನ್ನು ರೂ.2.5 ಲಕ್ಷಗಳಿಗೆ ನಿಗದಿಪಡಿಸಿ, ಅದೇ ದರ ಹೊಂದಿರುವ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ ಬೈಕುಗಳಿಗೆ ಪೈಪೋಟಿ ನೀಡುವ ಸಂಭವವಿದೆ. ಹಾರ್ಲೆ ಡೇವಿಡ್ಸನ್ ಕಂಪನಿಯ ಹೊಸ ಬೈಕಿನ ಬಗ್ಗೆ ಯಾವುದೇ ಚಿತ್ರಗಳೂ ಸಹ ಲಭ್ಯವಾಗಿಲ್ಲ. ಆದರೆ ಮುಂದಿನ ವರ್ಷ ಹೊಸ ಬೈಕ್ ಅನ್ನು ನಾವು ಭಾರತೀಯ ಮಾರುಕಟ್ಟೆಯಲ್ಲಿ ಕಾಣಬಹುದು.

Most Read Articles

Kannada
English summary
All-new, cheap Harley-Davidson bike to take on Royal Enfield next year - Read in kannada
Story first published: Wednesday, May 22, 2019, 16:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X