ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ದೇಶದ ನಂ.1 ಬೈಕ್ ಮಾರಾಟ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟಕ್ಕಾಗಿ ಬೃಹತ್ ಯೋಜನೆ ರೂಪಿಸಿದ್ದು, ತುಕ್ಕು ಹಿಡಿದ ಮತ್ತು ಹಳೆಯದಾದ ಯಾವುದೇ ಪೆಟ್ರೋಲ್ ಸ್ಕೂಟರ್‌ಗಳನ್ನು ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಎಕ್ಸ್‌ಚೆಂಜ್ ಮಾಡಿಕೊಂಡಲ್ಲಿ ಭರ್ಜರಿ ಆಫರ್ ಘೋಷಣೆ ಮಾಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಮಾಣವನ್ನು ಹೆಚ್ಚಿಸುವ ಸಂಬಂಧ ಆಟೋ ಉತ್ಪಾದನಾ ಸಂಸ್ಥೆಗಳ ಜೊತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಹೀರೋ ಮೋಟೋಕಾರ್ಪ್ ಸಂಸ್ಥೆಯು ಸಹ ಇದೇ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಸಿದ್ದಪಡಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ಹೀರೋ ಸಂಸ್ಥೆಯು ಸದ್ಯ ಭಾರತದಲ್ಲಿ ಅತಿಹೆಚ್ಚು ಬೈಕ್ ಮಾರಾಟ ಮಾಡುವ ಸಂಸ್ಥೆಗಳ ಪೈಕಿ ಅಗ್ರಸ್ಥಾನದಲ್ಲಿದ್ದು, ಅದೇ ರೀತಿಯಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲೂ ಮುಂಚೂಣಿ ಸಾಧಿಸುವ ಗುರಿಯೊಂದಿಗೆ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ಘೋಷಿಸುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟಕ್ಕೆ ಪೂರಕವಾಗಿ ಹೊಸ ಆಟೋ ಪಾಲಿಸಿಗಳನ್ನು ಜಾರಿಗೆ ತಂದಿದ್ದು, ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಕಾದ ಬ್ಯಾಟರಿ ಆಮದುವಿನ ಮೇಲಿನ ಸೆಸ್‌ನಲ್ಲಿ ಗಣನೀಯ ಇಳಿಕೆ ಮಾಡಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ಹೀಗಾಗಿ ಕೇಂದ್ರ ಸರ್ಕಾರದ ಹೊಸ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಹೀರೋ ಸಂಸ್ಥೆಯು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದ್ದು, ಎಕ್ಸ್‌ಚೆಂಜ್ ಆಫರ್‌ನೊಂದಿಗೆ ರೂ.6 ಸಾವಿರ ಬೊನಸ್ ಘೋಷಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ಹಳೆಯ ಸ್ಕೂಟರ್‌ಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಮರುಮಾರಾಟ ಮೌಲ್ಯದ ಮೇಲೆ ರೂ.6 ಸಾವಿರ ಹೆಚ್ಚುವರಿ ಬೋನಸ್ ಆಫರ್ ಇದಾಗಿದ್ದು, ಹೀರೋ ನಿರ್ಮಾಣದ ಫ್ಲ್ಯಾಶ್, ಎನ್‌ವೈಎಕ್ಸ್, ಆಪ್ಟಿಮಾ ಮತ್ತು ಫೋಟನ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಈ ಆಫರ್ ಅನ್ವಯವಾಗಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ಜೊತೆಗೆ ಪೇಟಿಮ್ ಮುಖಾಂತರ ಬುಕ್ ಮಾಡಿದ್ದಲ್ಲಿ ರೂ. 5 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ಸಹ ನೀಡಲಾಗುತ್ತದ್ದು, ನಿಮ್ಮ ಬಳಿಯಿರುವ ಹಳೆಯ ಪೆಟ್ರೋಲ್ ಸ್ಕೂಟರ್‌ಗಳನ್ನು ಬದಲಾಯಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ ಎನ್ನಬಹುದು.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ಹೀರೋ ಫ್ಲ್ಯಾಶ್, ಎನ್‌ವೈಎಕ್ಸ್ ಮತ್ತು ಆಪ್ಟಿಮಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗಂಟೆಗೆ 40ಕಿ.ಮಿ ವೇಗದೊಂದಿಗೆ ಪ್ರತಿ ಚಾರ್ಜ್‌ಗೆ 60 ಕಿ.ಮಿ ಮೈಲೇಜ್ ರೇಂಜ್ ಹೊಂದಿದ್ದು, 48 ವಿ/ 28 ಎಹೆಚ್ ಲೀಥಿಯಂ ಅಯಾನ್ ಬ್ಯಾಟರಿಯು ಪೂರ್ಣ ಪ್ರಮಾಣದಲ್ಲಿ ಚಾರ್ಜ್‌ಗೊಳ್ಳಲು ಕನಿಷ್ಠ 4 ಗಂಟೆ ಸಮಯ ತೆಗದುಕೊಳ್ಳುತ್ತವೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ಹಾಗೆಯೇ ಫೋಟನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗಂಟೆಗೆ 45 ಕಿ.ಮಿ ವೇಗ ಹೊಂದಿದ್ದು, ಪವರ್ ಮೊಡ್‌ನಲ್ಲಿ ಸ್ಕೂಟರ್ ಚಾಲನೆ ಮಾಡಿದ್ದಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮಿ ಹಾಗೂ ಎಕಾನಮಿ ಮೊಡ್‌ನಲ್ಲಿ ಸ್ಕೂಟರ್ ಚಾಲನೆ ಮಾಡಿದ್ದಲ್ಲಿ ಪ್ರತಿ ಚಾರ್ಜ್‌ಗೆ 110 ಕಿ.ಮಿ ಮೈಲೇಜ್ ನೀಡಬಲ್ಲದು.

MOST READ: ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ಇನ್ನು ಫೋಟನ್ ಸ್ಕೂಟರ್‌ನಲ್ಲಿ 48 ವಿ/28 ಎಹೆಚ್ 2 ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಲಾಗಿದ್ದು, ಬ್ಯಾಟರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್‌ಗೊಳ್ಳಲು ಕನಿಷ್ಠ 4 ಗಂಟೆ ಸಮಯ ತೆಗೆದುಕೊಳ್ಳುತ್ತೆ ಎನ್ನಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ಹೀರೋ ನಿರ್ಮಾಣದ ಪ್ರತಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲೂ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮೊದಲ ಮೂರು ಸಾಮಾನ್ಯ ಸ್ಕೂಟರ್‌ಗಳಲ್ಲಿ ಕ್ರ್ಯಾಶ್ ಗಾರ್ಡ್, ಟೆಲಿಸ್ಕೊಪಿಕ್ ಸಸ್ಫೆಷನ್, ಡಿಜಿಟಲ್ ಸ್ಪಿಡೋ ಮೀಟರ್, ರಿಮೋಟ್ ಜೊತೆ ಆ್ಯಂಟಿ ಥೆಪ್ಟ್ ಅಲಾರಾಂ ಮತ್ತು ಫೋಟನ್ ಮಾದರಿಯಲ್ಲಿ ಡಿಸ್ಕ್ ಬ್ರೇಕ್ ಜೊತೆಗೆ ಪವರ್, ಎಕಾನಮಿ ಡ್ಯುಯಲ್ ರೈಡ್ ಮೊಡ್ ಒದಗಿಸಲಾಗಿದೆ.

MOST READ: ಟೊಯೊಟಾ ಇನೋವಾ ಜನಪ್ರಿಯತೆಗೆ ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಕಾ?

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ಒಟ್ಟಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಮತ್ತು ಎಕ್ಸ್‌ಚೆಂಜ್ ಮೇಲೆ ಉತ್ತಮ ಆಫರ್ ಘೋಷಣೆ ಮಾಡಿರುವ ಹೀರೋ ಸಂಸ್ಥೆಯು, ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಗರಿಷ್ಠ 3 ವರ್ಷದ ವಾರಂಟಿ ನೀಡುವ ಮೂಲಕ ಬರೋಬ್ಬರಿ 70 ಸಾವಿರ ಉಳಿತಾಯ ಮಾಡಬಹುದು ಎಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮತ್ತು ಎಕ್ಸ್‌ಚೆಂಜ್ ಮೇಲೆ ಭರ್ಜರಿ ಆಫರ್ ನೀಡಿದ ಹೀರೋ

ಅದು ಹೇಗೆ ಅಂದ್ರೆ, ದಿನನಿತ್ಯದ ಪ್ರಯಾಣದಲ್ಲಿ ಪೆಟ್ರೋಲ್ ಸ್ಕೂಟರ್‌ಗಳಿಗೆ ಆಗುವ ಖರ್ಚು ವೆಚ್ಚಗಳು ಮತ್ತು ಪರಿಸರ ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಉತ್ತಮ ಆಯ್ಕೆಯಾಗಿದ್ದು, ಈ ಮೂಲಕ ನೀವು 3 ವರ್ಷಗಳ ಅವಧಿಯಲ್ಲಿ ಪರೋಕ್ಷವಾಗಿ ರೂ.70 ಸಾವಿರ ಉಳಿತಾಯವಾಗುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ಹೀರೋ ಎಲೆಕ್ಟ್ರಿಕ್ ವಿಭಾಗದ ಸಿಇಒ ಶೋಹಿಂದರ್ ಗಿಲ್.

Most Read Articles

Kannada
English summary
Hero Electric Can Buy Your Old And Rusty Petrol Scooters — New Exchange Offer Announced. Read in Kannada.
Story first published: Wednesday, February 6, 2019, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X