ಹೆಚ್ಎಕ್ಸ್200ಆರ್ ಬಿಡುಗಡೆ ಮಾಡಲಿರುವ ಹೀರೋ

ಹೀರೋ ಮೊಟೊಕಾರ್ಪ್ ಎರಡು ವಿಷಯಗಳಿಗೆ ಜನಪ್ರಿಯತೆಯನ್ನು ಪಡೆದಿದೆ. ಒಂದು ಅದ್ಭುತವಾದ ಮೋಟಾರ್ ಸೈಕಲ್ ಕಾನ್ಸೆಪ್ಟ್ ಗಳನ್ನು ಅನಾವರಣ ಮಾಡುವುದು, ಮತ್ತೊಂದು ಆ ಕಾನ್ಸೆಪ್ಟ್ ಗಳನ್ನು ಉತ್ಪಾದಿಸುವುದು. ಹೀರೋ ಎಕ್ಸ್ ಪಲ್ಸ್ ಈ ಸಾಲಿನಲ್ಲಿರುವ ಒಂದು ಉದಾಹರಣೆಯಾಗಿದ್ದು, ಕಾನ್ಸೆಪ್ಟ್ ಆಗಿದ್ದ ಈ ಮೋಟಾರ್ ಸೈಕಲ್ ಅನ್ನು 2019ರ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲಿದೆ. ಹೀರೋ ಮೋಟೋ ಕಾರ್ಪ್ ಹೀರೋ ಹೆಚ್ಎಕ್ಸ್200ಆರ್ ಅನ್ನು ಬಿಡುಗಡೆಮಾಡಲಿದ್ದು, 6 ವರ್ಷಗಳ ಹಿಂದೆ ಅನಾವರಣಗೊಳಿಸಿದ್ದ ಹೀರೋ ಹೆಚ್ಎಕ್ಸ್250ಆರ್ ಮಾದರಿಯ ಅನುಸಾರ ಈ ಬೈಕ್ ಅನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಹೆಚ್ಎಕ್ಸ್200ಆರ್ ಬಿಡುಗಡೆ ಮಾಡಲಿರುವ ಹೀರೋ

ಗಾಡಿ ವಾಡಿ.ಕಾಮ್ ವರದಿಯ ಪ್ರಕಾರ, ಹೀರೋ ಹೆಚ್ಎಕ್ಸ್250ಆರ್ ಮಾದರಿಯನ್ನು ಹೀರೋ ಕರಿಜ್ಮಾ ಆರ್ ಮತ್ತು ಜೆಡ್ಎಂಆರ್ ಬೈಕುಗಳ ಮುಂದುವರೆದ ಭಾಗವೆಂದು ಹೇಳಲಾಗುತ್ತಿದೆ. ಹೆಚ್ಎಕ್ಸ್250ಆರ್ ಬೈಕ್ ಅನ್ನು ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡಿದ್ದರೆ ಹೊಂಡಾ ಸಿಬಿಆರ್250ಆರ್ ಬೈಕಿಗೆ ಪೈಪೋಟಿ ನೀಡುವ ಸಾಧ್ಯತೆಗಳಿತ್ತು. ಈಗ ಬಿಡುಗಡೆ ಮಾಡುತ್ತಿರುವ ಬೈಕಿನಲ್ಲಿ 200 ಸಿಸಿಯ ಎಂಜಿನ್ ಗೆ ಬದಲಾಗಿ 250 ಸಿಸಿಯ ಎಂಜಿನನ್ನು ಅಳವಡಿಸಲಾಗುತ್ತಿದೆ. ಇದೇ ಎಂಜಿನನ್ನು ಹೀರೋ ಎಕ್ಸ್ ಟ್ರೀಮ್ 200ಆರ್ ನಲ್ಲಿ ಅಳವಡಿಸಲಾಗಿತ್ತು.

ಹೆಚ್ಎಕ್ಸ್200ಆರ್ ಬಿಡುಗಡೆ ಮಾಡಲಿರುವ ಹೀರೋ

ಕಂಪನಿಯ 200 ಸಿಸಿ ಯೋಜನೆಯು ಹೆಚ್ಎಕ್ಸ್200ಆರ್ ನ ಬಿಡುಗಡೆಯೊಂದಿಗೆ ಪೂರ್ತಿಯಾಗಲಿದೆ. ಈ ಸರಣಿಯು ಎಕ್ಸ್ ಟ್ರೀಮ್200ಆರ್ ಅನ್ನು ಒಳಗೊಂಡಿದ್ದು, ಅದು ಸಿಟಿಯ ಮೋಟಾರ್ ಸೈಕಲ್ ಆಗಿತ್ತು, ಎಕ್ಸ್ ಪಲ್ಸ್200 ಆಫ್ ರೋಡ್ ಮೋಟಾರ್ ಸೈಕಲ್ ಮಾದರಿಯಾಗಿದೆ.

ಹೆಚ್ಎಕ್ಸ್200ಆರ್ ಬಿಡುಗಡೆ ಮಾಡಲಿರುವ ಹೀರೋ

ಎಕ್ಸ್ ಪಲ್ಸ್200ಟಿ ಟೂರಿಂಗ್ ಮೋಟಾರ್ ಸೈಕಲ್ ಆಗಿದ್ದು ಆಫ್ ರೋಡ್ ಗುಣಗಳನ್ನು ಹೊಂದಿದ್ದರೆ, ಹೆಚ್ಎಕ್ಸ್200ಆರ್ ಸ್ಪೋರ್ಟ್ ಟೂರರ್ ಬೈಕ್ ಆಗಿದೆ. ಹೆಚ್ಎಕ್ಸ್200ಆರ್ ಈ ಸೆಗ್‍ಮೆಂಟ್ ನಲ್ಲಿರುವ ವಾಹನಗಳು ಹೊಂದಿರುವ ಫೀಚರ್ ಗಳನ್ನು ಹೊಂದಿರಲಿದೆ.

ಹೆಚ್ಎಕ್ಸ್200ಆರ್ ಬಿಡುಗಡೆ ಮಾಡಲಿರುವ ಹೀರೋ

ಅವುಗಳೆಂದರೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಪ್ಲಿಟ್ ಸೀಟುಗಳು, ಸ್ಪ್ಲಿಟ್ ಗ್ರಾಬ್ ರೇಲ್ ಗಳು, ರೇರ್ ವೀವ್ ಮಿರರ್ ಗಳು, ಬ್ಲಾಕ್ ಅಲಾಯ್ ವ್ಹೀಲ್ಸ್, ಮುಂಭಾಗ ಮತ್ತು ಹಿಂಭಾಗದಲ್ಲಿರುವ ಡಿಸ್ಕ್ ಬ್ರೇಕ್ ಗಳು ಮತ್ತು ಸಿಂಗಲ್ ಚಾನೆಲ್ ನ ಎಬಿಎಸ್. ಹೀರೋ ಹೆಚ್ಎಕ್ಸ್200ಆರ್ ವಾಹನದಲ್ಲೂ ಎಕ್ಸ್ ಟ್ರೀಮ್200ಆರ್ ನಲ್ಲಿ ಅಳವಡಿಸಲಾಗಿದ್ದ ರೀ ಟ್ಯೂನ್ ಆವೃತ್ತಿಯ 200ಸಿಸಿ ಎಂಜಿನ್ ಅನ್ನು ಬಳಸಲಾಗಿದೆ. ಈ ಪವರ್ ಟ್ರೇನ್ ಲಿಕ್ವಿಡ್ ಕೂಲಿಂಗ್ ಮತ್ತು ಫ್ಯೂಯಲ್ ಇಂಜೆಕ್ಷನ್ ಹೊಂದಿದೆ.

MUST READ: ಸ್ಕ್ರ್ಯಾಂಬ್ಲರ್ ಮಾದರಿಯನ್ನು ಬಿಡುಗಡೆ ಮಾಡಿದ ಡುಕಾಟಿ

ಹೆಚ್ಎಕ್ಸ್200ಆರ್ ಬಿಡುಗಡೆ ಮಾಡಲಿರುವ ಹೀರೋ

ಎಷ್ಟು ಹಾರ್ಸ್ ಪವರ್ ಹೊಂದಿರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲದೇ ಇದ್ದರೂ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಲಿರುವ ಈ ವಾಹನದಲ್ಲಿ 20-ಬಿಹೆಚ್‍ಪಿ ಗಳಿರುವ ಸಾಧ್ಯತೆಗಳಿದೆ. ಹೀರೋ ಎಕ್ಸ್ ಟ್ರೀಮ್200ಆರ್ 199.6 ಸಿಸಿಯ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 18.1 ಬಿಹೆಚ್‍ಪಿ ಯನ್ನು 8,000 ಆರ್ ಪಿಎಂ ನಲ್ಲಿ ಮತ್ತು 17.1 ಎನ್ಎಂ ಟಾರ್ಕ್ ಅನ್ನು 6,500 ಆರ್ ಪಿಎಂ ನಲ್ಲಿ ಉತ್ಪಾದಿಸುತ್ತದೆ.

ಹೆಚ್ಎಕ್ಸ್200ಆರ್ ಬಿಡುಗಡೆ ಮಾಡಲಿರುವ ಹೀರೋ

ಹೀರೋ ಹೆಚ್ ಎಕ್ಸ್200ಆರ್ ಬಿಡುಗಡೆಯಾದ ನಂತರ ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಯಮಹಾ ಫೇಜರ್ 250 ಬೈಕುಗಳಿಗೆ ಪೈಪೋಟಿ ನೀಡಲಿದೆ. ಹೀರೋ ಮೋಟಾರ್ ಸೈಕಲ್ ನ ದರಗಳು ಯಾವಾಗಲೂ ಹೀರೋ ಮೊಟೊಕಾರ್ಪ್ ನ ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸಿವೆ. ಕರಿಜ್ಮಾ ಸರಣಿಯ ಬೈಕುಗಳಂತೆ ಹೆಚ್ಎಕ್ಸ್200ಆರ್ ಸಹ ಜನಪ್ರಿಯವಾಗಲಿವೆ ಎಂಬ ನಿರೀಕ್ಷೆಯಲ್ಲಿ ಹೀರೋ ಮೊಟೊಕಾರ್ಪ್ ಇದೆ.

ಹೆಚ್ಎಕ್ಸ್200ಆರ್ ಬಿಡುಗಡೆ ಮಾಡಲಿರುವ ಹೀರೋ

ಡ್ರೈವ್‍ಸ್ಪಾಕ್ ಅಭಿಪ್ರಾಯ

ಈ ಮೋಟಾರ್ ಸೈಕಲ್ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸಿದ 6 ವರ್ಷಗಳ ನಂತರ ಹೆಚ್ಎಕ್ಸ್200ಆರ್ ಅನ್ನು ಬಿಡುಗಡೆಗೊಳಿಸಲಾಗುತ್ತಿದೆ. ಈ ಹಿಂದೆ ಹೋಂಡಾ ಕಂಪನಿಯು ಸಿಬಿಆರ್25ಆರ್ ಅನ್ನು ಬಿಡುಗಡೆಗೊಳಿಸಿ ಯಶ ಕಂಡಿತ್ತು.

Most Read Articles

Kannada
English summary
Hero HX200R India Launch Scheduled For May 2019 — Is The Phoenix Rising? - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X