ಇತಿಹಾಸ ಸೇರಲಿದೆಯಾ ಯುವಕರ ಕನಸಿನ ಬೈಕ್?

ಹೀರೋ ಮೊಟೊಕಾರ್ಪ್‍‍ನ ಕರಿಜ್ಮಾ ಭಾರತದಲ್ಲಿ ಪಾರುಪತ್ಯ ಮೆರೆದ, ಯುವಕರ ಕನಸಿನ ಬೈಕ್‍ಗಳಲ್ಲಿ ಒಂದಾಗಿದೆ. ಆದರೆ ಇದೀಗ ಕಳೆದ ಆರು ತಿಂಗಳಲ್ಲಿ ಕಂಪನಿಯು ಒಂದು ಯು‍‍ನಿ‍ಟ್‍ ಕೂಡಾ ತಯಾರಿಸಿಲ್ಲ ಎಂದು ವರದಿಗಳಾಗಿವೆ.

ಇತಿಹಾಸ ಸೇರಲಿದೆಯಾ ಯುವಕರ ಕನಸಿನ ಬೈಕ್?

ಕರಿಜ್ಮಾವನ್ನು 2003 ರಲ್ಲಿ ಪ್ರಾರಂಭಿಸಲಾಯಿತು ಮತ್ತು 2009 ರಲ್ಲಿ ಯಮಹಾ ಆರ್ 15 ಬೈಕ್‍ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸಾಧಿಸಿತು. ಕರಿಜ್ಮಾವು ತನ್ನ ಸೆಗ್‍‍ಮೆಂಟ್‍ನಲ್ಲಿ ಅಗ್ಗವಾಗಿದೆ. 2012 ರಲ್ಲಿ ಕೆ‍‍ಟಿಎಂ 200, ಬಜಾಜ್ ಎನ್‍ಎಸ್ 200 ಮತ್ತು ಹೋಂಡಾದ ಸಿಬಿಆರ್ 250 ಆರ್ ಮಾರುಕಟ್ಟೆಗೆ ಲಗ್ಗೆ ಇಟ್ಟಾಗ ಈ ಬೈಕ್ ತೆರೆಯ ಹಿಂದೆ ಸರಿಯಲು ಆರಂಭಿಸಿತು.

ಇತಿಹಾಸ ಸೇರಲಿದೆಯಾ ಯುವಕರ ಕನಸಿನ ಬೈಕ್?

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರು ಸಿಐ‍ಎಎಂ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಏಪ್ರಿಲ್ 2019 ಮತ್ತು ಸೆಪ್ಟೆಂಬರ್ 2019 ರ ನಡುವೆ ಹೀರೋ ಕರಿಜ್ಮಾದ ಒಂದು ಯುನಿ‍‍ಟ್ ಕೂಡ ತರಯಾರಿಸಲಾಗಿಲ್ಲ.

ಇತಿಹಾಸ ಸೇರಲಿದೆಯಾ ಯುವಕರ ಕನಸಿನ ಬೈಕ್?

ಹೀರೋ ಮೊಟೊಕಾರ್ಪ್ ಮಾತ್ರ ಕರಿಜ್ಮಾ‍ವನ್ನು ಸ್ಥಗಿತಗೊಳಿಸಿದೆ ಎಂಬುದನ್ನು ನಿರಾಕರಿಸಿದೆ ಮತ್ತು ಅವರು ಮೋಟಾರ್‍‍ಸೈಕಲ್ ತಯಾರಿಕೆ ಮತ್ತು ರಫ್ತು ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಬೈ‍ಕ್‍ಗಳ ಡೇಟಾ ಪ್ರಕಾರ ಯಾವುದೇ ಯುನಿ‍‍ಟ್‍ಗಳು ಉತ್ಪಾದನೆಯಾಗಿಲ್ಲ.

ಇತಿಹಾಸ ಸೇರಲಿದೆಯಾ ಯುವಕರ ಕನಸಿನ ಬೈಕ್?

ಕರಿಜ್ಮಾ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿತ್ತು, ಆದರೆ ಈಗ ಮಾರುಕಟ್ಟೆಯಿಂದ ಮರೆಯಾಗುತ್ತಿದೆ. ಕಂಪನಿಯು 2018ರಲ್ಲಿ 314 ಮತ್ತು 2019ರಲ್ಲಿ 138 ಯು‍ನಿ‍ಟ್‍ಗಳನ್ನು ಉತ್ಪಾದಿಸಿದೆ. ಈ ಅವಧಿಯಲ್ಲಿ ಬೈಕಿನ ರಫ್ತು ಕೇವಲ 80 ಯು‍‍ನಿ‍ಟ್‍ಗಳು ಮಾತ್ರ.

ಇತಿಹಾಸ ಸೇರಲಿದೆಯಾ ಯುವಕರ ಕನಸಿನ ಬೈಕ್?

ಹೀರೋ ಮೊಟೊಕಾರ್ಪ್ ಕರಿಜ್ಮಾದ ಭವಿಷ್ಯದ ಬಗ್ಗೆ ಇನ್ನೂ ಯಾವ ಹೇಳಿಕೆ ನೀಡಿಲ್ಲ. ಕಂಪನಿಯು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿದ ಮೂರು ಬೈಕ್‍‍ಗಳ ಉತ್ಪಾದನೆ ಮತ್ತು ವಿತರಣೆಗಳ ಮೇಲೆ ಕೇಂದ್ರೀಕರಿಸಿದೆ. ಹೀರೋ ಅವರ ಹೊಸ ಬೈಕ್‍‍ಗಳು ಎಕ್ಸ್‌ಪ್ಲೂಸ್ 200, ಎಕ್ಸ್‌ಪಲ್ಸ್ 200 ಟಿ, ಮತ್ತು ಹೀರೋ ಎಕ್ಟ್ರೀಮ್ 200 ಎಸ್ ಆಗಿದೆ.

ಇತಿಹಾಸ ಸೇರಲಿದೆಯಾ ಯುವಕರ ಕನಸಿನ ಬೈಕ್?

ಹೀರೋ ಮೊಟೊಕಾರ್ಪ್ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೊಸ ಆದ್ಯತೆಗಳ ಕಾರಣ ಮುಂದಿನ ವರ್ಷದ ಎಕ್ಸ್ ಪೋದಲ್ಲಿ ಭಾಗವಹಿಸುದಿಲ್ಲವೆಂದು ಕಂಪನಿ ಹೇಳಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇತಿಹಾಸ ಸೇರಲಿದೆಯಾ ಯುವಕರ ಕನಸಿನ ಬೈಕ್?

ಹೀರೋ ಮೊಟೊಕಾರ್ಪ್ ಬಿಎಸ್-4 ಇಂದ ಬಿಎಸ್-6 ಎಂಜಿನ್‍ಗೆ ಪರಿವರ್ತನೆಗೊಳಿಸುವುದಕ್ಕೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತಿದೆ. ಆ ಮೂಲಕ ತಮ್ಮ ಗ್ರಾಹಕರನ್ನು ಸೆಳೆಯುವುದಕ್ಕೆ ಹೀರೋ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಇತಿಹಾಸ ಸೇರಲಿದೆಯಾ ಯುವಕರ ಕನಸಿನ ಬೈಕ್?

ಕರಿಜ್ಮಾ ಬಿಡುಗಡೆಯಾದ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. ಯುವಜನತೆಯು ಈ ಬೈಕಿನ ಲುಕ್‍ಗೆ ಮನಸೋತು ಹೆಚ್ಚಿನ ಜನರು ಈ ಬೈಕ್ ಅನ್ನು ಖರೀದಿಸಿದ್ದರು. ಆದರೆ ದಿನಗಳು ಕಳೆದಂತೆ ಹೊಸ ಬೈಕ್‍‍ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಕರಿಜ್ಮಾಗೆ ಪೈಪೋಟಿ ನೀಡಲು ಪ್ರಾರಂಭಿಸಿದವು. ಕರಿಜ್ಮಾ ಹೆಚ್ಚಿನ ಅಪ್‍‍ಡೇ‍ಟ್ ಮಾಡದೇ ಹೊಸ ಬೈಕ್‍‍ಗಳ ಜೊತೆ ಪೈಪೋಟಿ ನಡೆಸಲು ಸಾಧ್ಯವಾಗದೇ ತೆರೆ ಹಿಂದೆ ಸರಿದಿದೆ.

Most Read Articles

Kannada
English summary
Hero Karizma Sales Register 0 Units In Six Months: Will It Be Discontinued? - Read in Kannada
Story first published: Sunday, October 13, 2019, 12:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X