ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಬೆಲೆ ಏರಿಕೆ ಕಂಡ ಹೀರೋ ಮ್ಯಾಸ್ಟ್ರೋ ಎಡ್ಜ್ 125

ಹೀರೋ ಮೊಟೊಕಾರ್ಪ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಮ್ಯಾಸ್ಟ್ರೋ ಎಡ್ಜ್ 125 ವಿನೂತನ ಸ್ಕೂಟರ್ ಮಾದರಿಯನ್ನು ಮೇ 13 ರಂದು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 58,500ಕ್ಕೆ ನಿಗದಿ ಮಾಡಲಾಗಿತ್ತು.

ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಬೆಲೆ ಏರಿಕೆ ಕಂಡ ಹೀರೋ ಮ್ಯಾಸ್ಟ್ರೋ ಎಡ್ಜ್ 125

ಆದರೆ ಇದೀಗ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ 125 ಸ್ಕೂಟರ್‍‍ಗಳಿಗೆ ಟಕ್ಕರ್ ನೀಡಲು ಹೀರೋ ಮೋಟೊಕಾರ್ಪ್ ಸಂಸ್ಥೆಯು ತಮ್ಮ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್‍‍ನ ಬೆಲೆಯನ್ನು ಏರಿಸಲಾಗಿದ್ದು, ಎಕ್ಸ್ ಶೋರುಂ ಪ್ರಕಾರ ರೂ. 58,500 ಪ್ರಾರಂಭಿಕ ಬೆಲೆಯಲ್ಲಿ ಮಾರಾಟವಾಗುತ್ತಿದ್ದ ಈ ಸ್ಕೂಟರ್ ಬಿಡುಗಡೆಗೊಂಡ ಕೇವಲ ಎರಡು ತಿಂಗಳಿನಲ್ಲಿ ಮೊದಲ ಬಾರಿಗೆ ಬೆಲೆ ಏರಿಕೆ ಕಂಡಿದೆ.

ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಬೆಲೆ ಏರಿಕೆ ಕಂಡ ಹೀರೋ ಮ್ಯಾಸ್ಟ್ರೋ ಎಡ್ಜ್ 125

ಹೊಸ ಸ್ಕೂಟರ್‍‍ಗಳ ಬೆಲೆ

ಫೈನಾನ್ಶಿಯಲ್ ಎಕ್ಸ್ಪ್ರೆಸ್ ವರದಿ ಪ್ರಕಾರ ಹೀರೋ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್‍‍ನ ಬೇಸ್ ಡ್ರಂ ವೇರಿಯೆಂಟ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 59,000, ಡಿಸ್ಕ್ ಬ್ರೇಕ್ ವೇರಿಯೆಂಟ್ ರೂ. 60,500, ಮತ್ತು ಎಫ್ಐ ವೇರಿಯೆಂಟ್ ರೂ. 63,200 ಬೆಲೆಯನ್ನು ಪಡೆದುಕೊಂಡಿದೆ. ಅಂದರೆ ಈ ಸ್ಕೂಟರ್‍‍ಗಳ ಬೆಲೆಯಲ್ಲಿ ಕೇವಲ ರೂ. 500 ಮಾತ್ರ ಏರಿಕೆಯನ್ನು ಮಾಡಲಾಗಿದೆ.

ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಬೆಲೆ ಏರಿಕೆ ಕಂಡ ಹೀರೋ ಮ್ಯಾಸ್ಟ್ರೋ ಎಡ್ಜ್ 125

ಇನ್ನು ತಾಂತ್ರಿಕವಾಗಿ ಡೆಸ್ಟಿನಿ 125 ಮಾದರಿಯಲ್ಲೇ ಹಲವು ಹೊಸ ಸೌಲಭ್ಯಗಳನ್ನು ಪಡೆದುಕೊಂಡಿರುವ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಮಾದರಿಯು, ಇದೇ ಮೊದಲ ಬಾರಿಗೆ ಏರ್ ಕೂಲ್ಡ್ ಎಂಜಿನ್‌ನೊಂದಿಗೆ ಆಯ್ಕೆ ರೂಪದಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಫ್ಯೂಲ್ ಇಂಜೆಕ್ಷಡ್ ವೆರಿಯೆಂಟ್ ಅನ್ನು ಅಭಿವೃದ್ಧಿಗೊಳಿಸಿದೆ.

ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಬೆಲೆ ಏರಿಕೆ ಕಂಡ ಹೀರೋ ಮ್ಯಾಸ್ಟ್ರೋ ಎಡ್ಜ್ 125

ಎಂಜಿನ್ ಸಾಮರ್ಥ್ಯ

ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಮಾದರಿಯು 125 ಸಿಸಿ ಎಂಜಿನ್‌ನೊಂದಿಗೆ 8.7-ಬಿಎಚ್‌ಪಿ ಮತ್ತು 10.2-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಇದರಲ್ಲಿ ಫ್ಯೂಲ್ ಇಂಜೆಕ್ಷಡ್ ಮಾದರಿಯು 125 ಸಿಸಿ ಎಂಜಿನ್‌ನಲ್ಲಿಯೇ 9.1-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು. ಹಾಗೆಯೆ ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಬೆಲೆ ಏರಿಕೆ ಕಂಡ ಹೀರೋ ಮ್ಯಾಸ್ಟ್ರೋ ಎಡ್ಜ್ 125

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇದು ಪರ್ಫಾಮೆನ್ಸ್ ಪ್ರಿಯರ ಆಯ್ಕೆಯನ್ನು ಹೆಚ್ಚಿಸಲಿದ್ದು, ಮುಂಭಾಗದಲ್ಲಿ ಮರುಹೊಂದಾಣಿಕೆ ಮಾಡಿಕೊಳ್ಳಬಹುದಾದ ಟೆಲಿಸ್ಕೋಪಿಕ್ ಫ್ರಂಟ್ ಫೋಕ್ಸ್ ಮತ್ತು ಹಿಂಭಾಗದಲ್ಲಿನ ಮೊನೋಶಾರ್ಕ್ ಸಸ್ಷೆಷನ್‌ಗಳು ಸ್ಪೋರ್ಟಿ ಲುಕ್ ನೀಡಿವೆ.

ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಬೆಲೆ ಏರಿಕೆ ಕಂಡ ಹೀರೋ ಮ್ಯಾಸ್ಟ್ರೋ ಎಡ್ಜ್ 125

ಹೊಸ ಸ್ಕೂಟರ್ ವೈಶಿಷ್ಟ್ಯತೆಗಳು

125ಸಿಸಿ ಸ್ಕೂಟರ್ ಮಾದರಿಗಳಲ್ಲೇ ಈ ಬಾರಿ ವಿಶೇಷ ಸೌಲಭ್ಯಗಳನ್ನು ಹೊತ್ತುಬಂದಿರುವ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಮಾದರಿಯಲ್ಲಿ ಮರು ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್, ವಿಭಜಿತ ಮಾದರಿಯಲ್ಲಿರುವ ಇಂಡಿಕೇಟರ್‌ಗಳು ಮತ್ತು ವಿಸ್ತರಿಸಲಾದ ಫುಲ್ ಬೋರ್ಡ್ ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿವೆ.

ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಬೆಲೆ ಏರಿಕೆ ಕಂಡ ಹೀರೋ ಮ್ಯಾಸ್ಟ್ರೋ ಎಡ್ಜ್ 125

ಹಾಗೆಯೇ ಈ ಹಿಂದೆ ಡೆಸ್ಟಿನಿ 125 ಸ್ಕೂಟರಿನಲ್ಲಿ ಪರಿಚಯಿಸಲಾಗಿದ್ದ ಐ3ಎಸ್ ಸೌಲಭ್ಯ ಕೂಡಾ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್‌ನಲ್ಲೂ ಅಳವಡಿಸಲಾಗಿದ್ದು, ಇದು ಸ್ಕೂಟರ್ ಮೈಲೇಜ್ ಪ್ರಮಾಣವನ್ನು ಹೆಚ್ಚಿಸಲು ಸಾಕಷ್ಟು ಸಹಕಾರಿಯಾಗಲಿದೆ.

ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಬೆಲೆ ಏರಿಕೆ ಕಂಡ ಹೀರೋ ಮ್ಯಾಸ್ಟ್ರೋ ಎಡ್ಜ್ 125

ಇನ್ನುಳಿದಂತೆ ಹೊಸ ಸ್ಕೂಟರ್‌ನಲ್ಲಿ ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಕನ್ಸೊಲ್, ಸರ್ವಿಸ್ ರಿಮೆಂಡರ್ ಇಂಡಿಕೇಟರ್, ಯುಎಸ್‌ಬಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೂಟ್ ಲೈಟ್,ಮಲ್ಟಿ ಫಂಕ್ಷನ್ ಕೀ ಹೋಲ್ಡರ್, ಡೈಮಂಡ್ ಕಟ್ ಅಲಾಯ್ ವೀಲ್ಹ್, ಟೈರ್ ಲೆಸ್ ಟ್ಯೂಬ್ ಮತ್ತು ಹೊರ ಭಾಗದಲ್ಲಿ ಫ್ಯೂಲ್ ಟ್ಯಾಂಕ್ ಕ್ಯಾಪ್ ಸೌಲಭ್ಯವು ಹೊಸ ಸ್ಕೂಟರಿನ ಪ್ರಮುಖ ಆಕರ್ಷಣೆಗಳಾಗಿವೆ.

ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಬೆಲೆ ಏರಿಕೆ ಕಂಡ ಹೀರೋ ಮ್ಯಾಸ್ಟ್ರೋ ಎಡ್ಜ್ 125

ಲಭ್ಯವಿರುವ ಬಣ್ಣಗಳ ಆಯ್ಕೆ

ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್‌ಗಳು ಒಟ್ಟು 6 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, ಬ್ಲ್ಯೂ, ಬ್ರೌನ್, ಗ್ರೇ, ರೆಡ್, ಪರ್ಲ್ ಫೆಡ್‌ಲೆಸ್ ವೈಟ್ ಮತ್ತು ಪ್ಯಾಂಥರ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿವೆ.

Most Read Articles

Kannada
English summary
Hero Maestro Edge 125 Scooter Price Hike By Rs.500. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X