ದಾಖಲೆಯ ಪ್ರಮಾಣದ ವಾಹನಗಳನ್ನು ಉತ್ಪಾದಿಸಿದ ಹೀರೋ ಮೋಟೊಕಾರ್ಪ್

ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ದ್ವಿಚಕ್ರ ಉತ್ಪಾದನೆಯಲ್ಲಿ ಬರೊಬ್ಬರಿ 2.5 ಕೋಟಿ ಗಡಿ ದಾಟಿದೆ. ಕಂಪನಿಯ ಹರಿದ್ವಾರದ ಘಟಕದಲ್ಲಿ ಈ ಹೊಸ ಮೈಲಿಗಲ್ಲನ್ನು ಸಾಧಿಸಲಾಗಿದೆ.

ದಾಖಲೆಯ ಪ್ರಮಾಣದ ವಾಹನಗಳನ್ನು ಉತ್ಪಾದಿಸಿದ ಹೀರೋ ಮೋಟೊಕಾರ್ಪ್

ಕಂಪನಿಯ ಹರಿದ್ವಾರದ ಘಟಕವು ವಿಶ್ವದ ಅತಿದೊಡ್ದ ದ್ವಿಚಕ್ರ ವಾಹನ ಉತ್ಪಾದನಾ ಕೇಂದ್ರವಾಗಿದೆ. ಪ್ರತಿದಿನ 9,500 ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಕೇವಲ 11 ವರ್ಷಗಳಲ್ಲಿ ಈ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ದಾಖಲೆಯ ಪ್ರಮಾಣದ ವಾಹನಗಳನ್ನು ಉತ್ಪಾದಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯ, ಚೀಫ್ ಟೆಕ್ನಾಲಜಿ ಅಫೀಸರ್ ವಿಕ್ರಮ್ ಕಾಸ್ಬೆಕರ್ ಅವರು ಮಾತನಾಡಿ, ಈ ಸಾಧನೆಯು ಕಂಪನಿಗೆ ಮಹತ್ವದ ಮೈಲಿಗಲ್ಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ 2.5 ಕೋಟಿ ದ್ವಿಚಕ್ರ ವಾಹನಗಳ ಉತ್ಪಾದನೆಯು ಕಂಪನಿಯ ಸಾಮರ್ಥ್ಯ ಮತ್ತು ಬದ್ದತೆಯಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.

ದಾಖಲೆಯ ಪ್ರಮಾಣದ ವಾಹನಗಳನ್ನು ಉತ್ಪಾದಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯ ಹರಿದ್ವಾರದ ಘಟಕವು 4500 ಚದರ ಮೀಟರ್ ವಿಸ್ತಾರದಲ್ಲಿ ವಿಶ್ವದ ಅತಿದೊಡ್ಡ ಗ್ರೀನ್ ರೂಫ್ ಅನ್ನು ಹೊಂದಿದೆ. 1.95 ಎಂಡಬ್ಲ್ಯು ಸೋಲಾರ್ ಪವರ್, ಜೀರೋ ಲಿಕ್ವಿಡ್ ಡಿಸ್‍‍ಚಾರ್ಚ್ ಮತ್ತು ಮಳೆನೀರು ಕೊಯ್ಲು ಪದ್ದತಿಗೆ ಸರೋವರವನ್ನು ಹೊಂದಿದೆ.

ದಾಖಲೆಯ ಪ್ರಮಾಣದ ವಾಹನಗಳನ್ನು ಉತ್ಪಾದಿಸಿದ ಹೀರೋ ಮೋಟೊಕಾರ್ಪ್

ಈ ಘಟಕದಲ್ಲಿ ಹೆಚ್‌ಎಫ್ ಡಿಲಕ್ಸ್, ಸ್ಪ್ಲೆಂಡರ್ ಪ್ಲಸ್, ಸ್ಪ್ಲೆಂಡರ್ ಐಸ್ಮಾರ್ಟ್ 110, ಪ್ಯಾಶನ್ ಪ್ರೊ ಮತ್ತು ಪ್ಯಾಶನ್ 110 ಮಾದರಿಗಳನ್ನು ಉತ್ಪಾದಿಸಲಾಗುತ್ತದೆ. ಕಂಪನಿಯು ಉತ್ತರಾಖಂಡದ ಘಟಕದಿಂದ ಶೇ.75ರಷ್ಟು ಬಿಡಿಭಾಗಗಳನ್ನು ಪಡೆಯುತ್ತದೆ.

ದಾಖಲೆಯ ಪ್ರಮಾಣದ ವಾಹನಗಳನ್ನು ಉತ್ಪಾದಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಏಳು ಉತ್ಪಾದನಾ ಘಟಕಗಳನ್ನು ಹೊಂದಿವೆ. ಭಾರತದಲ್ಲಿ ಐದು (ಹರಿಯಾಣದಲ್ಲಿ ಗುರುಗ್ರಾಮ್ ಮತ್ತು ಧುರುಹೆರಾ, ರಾಜಸ್ಥಾನದ ನೀಮ್ರಾನಾ, ಗುಜರಾತ್‍‍ನ ಹಲೋಲ್ ಮತ್ತು ಉತ್ತರಾಖಂಡದ ಹರಿದ್ವಾರ) ಮತ್ತು ಬಾಂಗ್ಲಾದೇಶ ಮತ್ತು ಕೊಲಂಬಿಯಾದಲ್ಲಿ ತಲಾ ಒಂದು ಘಟಕವನ್ನು ಹೊಂದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ದಾಖಲೆಯ ಪ್ರಮಾಣದ ವಾಹನಗಳನ್ನು ಉತ್ಪಾದಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್‍‍ನ ಏಳು ಘಟಕಗಳು ಸುಮಾರು 90 ಲಕ್ಷ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಎಂಟನೇ ಘಟಕವನ್ನು ಸ್ಥಾಪಿಸಲಾಗುತ್ತಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ದಾಖಲೆಯ ಪ್ರಮಾಣದ ವಾಹನಗಳನ್ನು ಉತ್ಪಾದಿಸಿದ ಹೀರೋ ಮೋಟೊಕಾರ್ಪ್

ಪ್ರಸ್ತುತ ಹೀರೋ ಮೋಟೊಕಾರ್ಪ್ ದ್ವಿಚಕ್ರ ಮಾರಾಟವು ಹಬ್ಬದ ಸಮಯದಲ್ಲಿ ಸ್ಥಿರವಾಗಿದೆ ಎಂದು ಕಂಪನಿ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಮೂರು ಹೊಸ ಪ್ರೀಮಿಯಂ ಬೈಕ್‍‍ಗಳನ್ನು ಮತ್ತು ಎರಡು ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ದಾಖಲೆಯ ಪ್ರಮಾಣದ ವಾಹನಗಳನ್ನು ಉತ್ಪಾದಿಸಿದ ಹೀರೋ ಮೋಟೊಕಾರ್ಪ್

ವಿಶ್ವದ ಅತಿದೊಡ್ದ ಉತ್ಪಾದನಾ ಘಟಕವನ್ನು ಹೊಂದಿರುವುದರಿಂದ ಹೀರೋ ಮೋಟೊಕಾರ್ಪ್ ದಾಖಲೆಯ ಪ್ರಮಾಣದಲ್ಲಿ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಿದೆ. ಏಳು ಬೃಹತ್ ಪ್ರಮಾಣದ ದ್ವಿಚಕ್ರವನ್ನು ಉತ್ಪಾದನಾ ಹೊಂದಿರುವ ಹೀರೋ ಮೊಟೊಕಾರ್ಪ್ ಸದ್ಯದಲ್ಲೇ ಎಂಟನೇ ಉತ್ಪಾದನಾ ಘಟಕವನ್ನು ಹೊಂದಲಿದೆ. ಇದಾದ ನಂತರ ಹೀರೋ ಮೋಟೊಕಾರ್ಪ್‍ ದ್ವಿಚಕ್ರ ಉತ್ಪಾದನೆಯು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Hero MotoCorp Crosses 2.5 Crore Units In Production At Haridwar Plant - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X