ಸಂಚಾರಿ ಜಾಗೃತಿಗಾಗಿ ಶುರುವಾಯ್ತು ಹೊಸ ಪಾರ್ಕ್

ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಹೈದರಾಬಾದ್‌ನ ರಾಚಕೊಂಡದಲ್ಲಿ ಮಕ್ಕಳ ಸಂಚಾರ ತರಬೇತಿ ಪಾರ್ಕ್ ಅನ್ನು ಆರಂಭಿಸಿದೆ. ಈ ಪಾರ್ಕ್ ಅನ್ನು ಸ್ಥಳೀಯ ಸಂಚಾರ ಪೊಲೀಸರ ಸಹಯೋಗದೊಂದಿಗೆ ತೆರೆಯಲಾಗಿದೆ.

ಸಂಚಾರಿ ಜಾಗೃತಿಗಾಗಿ ಶುರುವಾಯ್ತು ಹೊಸ ಪಾರ್ಕ್

ಹೀರೋ ಮೊಟೊಕಾರ್ಪ್ ದೇಶಾದ್ಯಂತ ಒಂಬತ್ತು ಸಂಚಾರ ತರಬೇತಿ ಪಾರ್ಕ್‍‍ಗಳನ್ನು ಹೊಂದಿದೆ. ಈ ಪಾರ್ಕುಗಳನ್ನು ಎಲ್ಲಾ ವಯೋಮಾನದವರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ತೆರೆಯಲಾಗಿದೆ.

ಸಂಚಾರಿ ಜಾಗೃತಿಗಾಗಿ ಶುರುವಾಯ್ತು ಹೊಸ ಪಾರ್ಕ್

ಹೀರೋ ಮೊಟೊಕಾರ್ಪ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಮುಖ್ಯಸ್ಥರಾದ ವಿಜಯ್ ಸೇಥಿರವರು ಮಾತನಾಡಿ, ದೇಶಾದ್ಯಂತ ರಸ್ತೆ ಸುರಕ್ಷತೆಯ ಜಾಗೃತಿಯನ್ನು ಹೆಚ್ಚಿಸುವಲ್ಲಿ ಕಂಪನಿಯು ಯಾವಾಗಲೂ ಮುಂಚೂಣಿಯಲ್ಲಿದೆ. ವಿಶೇಷ ಅಭಿಯಾನ ಹಾಗೂ ಕ್ರಮಗಳ ಮೂಲಕ ಅದನ್ನು ಮುಂದುವರೆಸಲಾಗಿದೆ ಎಂದು ಹೇಳಿದರು.

ಸಂಚಾರಿ ಜಾಗೃತಿಗಾಗಿ ಶುರುವಾಯ್ತು ಹೊಸ ಪಾರ್ಕ್

ಹೈದರಾಬಾದ್‌ನಲ್ಲಿ ಮಕ್ಕಳ ಸಂಚಾರ ತರಬೇತಿ ಪಾರ್ಕಿನ ಆರಂಭವು ರಸ್ತೆ ಸುರಕ್ಷತೆಯ ಬಗ್ಗೆ ಕಂಪನಿಗಿರುವ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಮಕ್ಕಳಿಗೆ ರಸ್ತೆ ಸುರಕ್ಷತೆಯ ಅರಿವು ನೀಡುವುದರಿಂದ ಅಂತಿಮವಾಗಿ ದೇಶದ ರಸ್ತೆಗಳು ಸುರಕ್ಷಿತವಾಗುತ್ತವೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ.

ಸಂಚಾರಿ ಜಾಗೃತಿಗಾಗಿ ಶುರುವಾಯ್ತು ಹೊಸ ಪಾರ್ಕ್

ಹೀರೋ ಮೊಟೊಕಾರ್ಪ್ ಗುರುಗ್ರಾಮ್, ದೆಹಲಿ, ರೂರ್ಕೆಲಾ, ಲಕ್ನೋ, ನಾಸಿಕ್, ನಾಗ್ಪುರ ಹಾಗೂ ಬಿಲಾಸ್ ಪುರದಲ್ಲಿ ಸಂಚಾರ ತರಬೇತಿ ಪಾರ್ಕ್‍‍ಗಳನ್ನು ಹೊಂದಿದೆ. ಈ ಪಾರ್ಕ್‍‍ಗಳು ರೈಡಿಂಗ್ ಸಿಮ್ಯುಲೇಟರ್‌ ಹಾಗೂ ಇತರ ಸೌಲಭ್ಯಗಳನ್ನು ಹೊಂದಿವೆ.

ಸಂಚಾರಿ ಜಾಗೃತಿಗಾಗಿ ಶುರುವಾಯ್ತು ಹೊಸ ಪಾರ್ಕ್

ಶಾಲಾ, ಕಾಲೇಜುಗಳು ಹಾಗೂ ಇತರ ಸಂಸ್ಥೆಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಸುರಕ್ಷತಾ ಬೋಧಕರಿಗೆ, ಸ್ಥಳೀಯ ಟ್ರಾಫಿಕ್ ಪೊಲೀಸರಿಂದ ನಿಯಮಿತವಾಗಿ ತರಬೇತಿ ನೀಡಲಾಗಿದೆ.

ಸಂಚಾರಿ ಜಾಗೃತಿಗಾಗಿ ಶುರುವಾಯ್ತು ಹೊಸ ಪಾರ್ಕ್

ಹೀರೋ ಮೊಟೊಕಾರ್ಪ್ ತನ್ನ ದಶಕದಷ್ಟು ಹಳೆಯದಾದ ಜಾಗತೀಕರಣ ಯೋಜನೆಗಳಲ್ಲಿ ಬದಲಾವಣೆ ತರುತ್ತಿದೆ. ಕಂಪನಿಯ 90%ನಷ್ಟು ಮಾರಾಟವು ದೇಶೀಯವಾಗಿ ಬರುತ್ತಿದೆ. ಜಾಗತೀಕರಣದ ಯೋಜನೆಗಳಲ್ಲಿನ ಬದಲಾವಣೆಗಳಿಂದಾಗಿ ವಿದೇಶಿ ಮಾರಾಟವು 10%ನಷ್ಟು ಹೆಚ್ಚಾಗಲಿದೆ. ಸದ್ಯಕ್ಕೆ ವಿದೇಶಿ ಮಾರಾಟವು 3%ನಷ್ಟಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಸಂಚಾರಿ ಜಾಗೃತಿಗಾಗಿ ಶುರುವಾಯ್ತು ಹೊಸ ಪಾರ್ಕ್

ಹೀರೋ ಮೊಟೊಕಾರ್ಪ್ ಹೊಸ ಯೋಜನೆಗಳು ಜಾರಿಗೆ ಬಂದ ನಂತರ, ಅದನ್ನು ಸಾಧಿಸಲು ನಾಲ್ಕು ವರ್ಷಗಳು ಬೇಕಾಗುತ್ತವೆ. ಕಂಪನಿಯು 2011ರಲ್ಲಿ ತನ್ನ 1 ಮಿಲಿಯನ್ ಯುನಿಟ್ ರಫ್ತು ಯೋಜನೆಗಳನ್ನು ಘೋಷಿಸಿತ್ತು. ಇದನ್ನು ಸಾಧಿಸಲು 2017ರವರೆಗೆ ಗಡುವನ್ನು ವಿಧಿಸಿಕೊಂಡಿತ್ತು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಸಂಚಾರಿ ಜಾಗೃತಿಗಾಗಿ ಶುರುವಾಯ್ತು ಹೊಸ ಪಾರ್ಕ್

ಹೀರೋ ಮೊಟೊಕಾರ್ಪ್ ತನ್ನ ಉತ್ಪನ್ನದಲ್ಲಿ ಕೇವಲ 3%ನಷ್ಟನ್ನು ಮಾತ್ರ ರಫ್ತು ಮಾಡುತ್ತದೆ. ಆದರೆ ಬಜಾಜ್ ಆಟೋ ಹಾಗೂ ಟಿವಿಎಸ್ ಮೋಟಾರ್‍‍ನಂತಹ ಕಂಪನಿಗಳು ಕ್ರಮವಾಗಿ 40% ಹಾಗೂ 16.5%ನಷ್ಟು ರಫ್ತು ಮಾಡುತ್ತವೆ. ಕಂಪನಿಯು ಹೆಚ್ಚಿನ ಪ್ರಮಾಣದ ರಫ್ತನ್ನು ಬಯಸುತ್ತಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಸಂಚಾರಿ ಜಾಗೃತಿಗಾಗಿ ಶುರುವಾಯ್ತು ಹೊಸ ಪಾರ್ಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೀರೋ ಮೊಟೊಕಾರ್ಪ್ ಈ ಪಾರ್ಕ್ ಅನ್ನು ಆರಂಭಿಸಿದ್ದು ನಿಜಕ್ಕೂ ಶ್ಲಾಘನೀಯ. ಮಕ್ಕಳಿಗೆ ಸಂಚಾರ ತರಬೇತಿ ನೀಡುವುದು ಉತ್ತಮ, ಏಕೆಂದರೆ ವಯಸ್ಕರು ಈ ದೇಶದಲ್ಲಿ ಸಂಚಾರ ನಿಯಮಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಸಾರಿಗೆ ಇಲಾಖೆ ಹಾಗೂ ಆರ್‌ಟಿಒಗಳು ಮಾಡಬೇಕಾದ ಕಾರ್ಯವನ್ನು ಹೀರೋ ಮೋಟೊಕಾರ್ಪ್ ಮಾಡುತ್ತಿದೆ.

Most Read Articles

Kannada
English summary
Hero MotoCorp Inaugurates Children’s Traffic Training Park At Rachakonda In Hyderabad - Read in Kannada
Story first published: Wednesday, November 20, 2019, 17:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X