ಮಾರಾಟ ಏರಿಕೆಯ ನಿರೀಕ್ಷೆಯಲ್ಲಿ ಹೀರೋ ಮೋಟೋಕಾರ್ಪ್

ಜನಪ್ರಿಯ ಹೀರೋ ಮೋಟೊಕಾರ್ಪ್ ಕಂಪನಿಯು, ತನ್ನ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟವು ಹಬ್ಬದ ಸಮಯದಲ್ಲಿ ಏರಿಕೆಯಾಗಬಹುದೆಂಬ ನಿರೀಕ್ಷೆಯಲ್ಲಿದೆ. ಇಟಿ ಆಟೋ ವರದಿಯ ಪ್ರಕಾರ ಕಂಪನಿಯು ಮುಂಬರುವ ತಿಂಗಳುಗಳಲ್ಲಿ ತನ್ನ ಮಾರಾಟ ಪ್ರಮಾಣವನ್ನು ಶೇ.10 ರಷ್ಟು ಹೆಚ್ಚಿಸಿ ಕೊಳ್ಳುವ ಗುರಿಯನ್ನು ಹೊಂದಿದೆ.

ಮಾರಾಟ ಏರಿಕೆಯ ನಿರೀಕ್ಷೆಯಲ್ಲಿ ಹೀರೋ ಮೋಟೋಕಾರ್ಪ್

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್‍‍ನ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟವು 2019 ರಲ್ಲಿ ಸತತವಾಗಿ ಕುಸಿಯುತ್ತಿವೆ. ಆಟೋಮೊಬೈಲ್ ಉದ್ಯಮದಲ್ಲಿ ಭಾರೀ ಕುಸಿತ ಉಂಟಾಗಿರುವ ಹಿನ್ನಲೆಯಲ್ಲಿ ಎಲ್ಲಾ ವಾಹನ ಉತ್ಪಾದನಾ ಸಂಸ್ಥೆಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ.

ಮಾರಾಟ ಏರಿಕೆಯ ನಿರೀಕ್ಷೆಯಲ್ಲಿ ಹೀರೋ ಮೋಟೋಕಾರ್ಪ್

ಹೀರೊ ಕಂಪನಿಯು ಭಾರತದಲ್ಲಿ ಸಾಲು ಸಾಲು ಹಬ್ಬಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ಮಾರಾಟವು ಏರಿಕೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸಿರುವುದು ಕಂಪನಿಗೆ ದೊಡ್ದ ಉತ್ತೇಜನವಾಗಿದೆ.

ಮಾರಾಟ ಏರಿಕೆಯ ನಿರೀಕ್ಷೆಯಲ್ಲಿ ಹೀರೋ ಮೋಟೋಕಾರ್ಪ್

ಇತ್ತೀಚಿಗೆ ಕೇಂದ್ರ ಸರ್ಕಾರವು ಆಟೋಮೊಬೈಲ್ ಉದ್ಯಮ ಕ್ಷೇತ್ರ ಕುಸಿತ ಕಂಡಿರುವ ಹಿನ್ನಲೆಯಲ್ಲಿಅದನ್ನು ಪುನಜ್ಜೇತನ ಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಿಂದ ಹೀರೋ ಮೊಟೊಕಾರ್ಪ್ ಕೂಡ ಈ ಕ್ರಮಗಳು ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಸಹಾಯವಾಗಲಿದ್ದು, ಬೇಡಿಕೆಯು ಮತ್ತೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸುತ್ತಿದೆ.

ಮಾರಾಟ ಏರಿಕೆಯ ನಿರೀಕ್ಷೆಯಲ್ಲಿ ಹೀರೋ ಮೋಟೋಕಾರ್ಪ್

ಹೀರೋ ಮೋಟೊಕಾರ್ಪ್ ಮಾರಾಟವನ್ನು ಹೆಚ್ಚಿಸಲು ಯಾವುದೇ ವಿಶೇಷ ರಿಯಾಯಿತಿ ಅಥವಾ ಕೊಡುಗೆಗಳನ್ನು ನೀಡುತ್ತಿಲ್ಲ. ಹಬ್ಬದ ಕಾಲದಲ್ಲಿ ಮಾರುಕಟ್ಟೆಯಲ್ಲಿನ ಮಾರಾಟವನ್ನು ಸುಧಾರಿಸಲು ಮೇಲೆ ತಿಳಿಸಿದ ಕಾರಣಗಳು ಸಾಕು ಎಂದು ಕಂಪನಿ ನಂಬಿದೆ.

ಮಾರಾಟ ಏರಿಕೆಯ ನಿರೀಕ್ಷೆಯಲ್ಲಿ ಹೀರೋ ಮೋಟೋಕಾರ್ಪ್

ಕಂಪನಿಯು ಈಗಾಗಲೇ 2019-20ರ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ಐದು ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೀರೋ ಮೆಸ್ಟ್ರೋ ಎಡ್ಜ್ 125 ಎಫ್‌ಐ, ಹೀರೋ ಪ್ಲೆಷರ್ 110, ಎಕ್ಟ್ರೀಮ್ 200 ಎಸ್ ಮತ್ತು ಎಕ್ಸ್‌ಪಲ್ಸ್ ಟ್ವಿನ್ಸ್ ಸೇರಿವೆ. ಕಂಪನಿಯು ಬಿಎಸ್-6 ಎಂಜಿನ್ ಹೊಂದಿರುವ ದ್ವಿಚಕ್ರ ವಾಹನಗಳನ್ನೇ ಬಿಡುಗಡೆಗೊಳಿಸುತ್ತಿದೆ.

ಮಾರಾಟ ಏರಿಕೆಯ ನಿರೀಕ್ಷೆಯಲ್ಲಿ ಹೀರೋ ಮೋಟೋಕಾರ್ಪ್

ಹೀರೋ ಮೋಟೊಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್‍‍ರವರು ಮಾತನಾಡಿ, ಇತರ ಕಂಪನಿಗಳು ಹೊಸ ಉತ್ಪನ್ನ ಬಿಡುಗಡೆ ಮತ್ತು ಹೂಡಿಕೆಗಳನ್ನು ಸ್ಥಗಿತಗೊಳಿಸಿದ ಸಮಯದಲ್ಲಿ ನಾವು ಮಾರಾಟವನ್ನು ಹಾಗೂ ಉತ್ಪಾದನೆಯನ್ನು ಮುಂದುವರಿಸಿದ್ದೇವೆ. ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಐದು ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ್ದೇವೆ. ಇದರಲ್ಲಿ ಮೂರು ಹೊಸ ಪ್ರಿಮಿಯಂ ಬೈಕ್‍‍ಗಳು ಮತ್ತು ಎರಡು ಸ್ಕೂಟರ್‍‍ಗಳಾಗಿವೆ ಎಂದು ಹೇಳಿದರು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮಾರಾಟ ಏರಿಕೆಯ ನಿರೀಕ್ಷೆಯಲ್ಲಿ ಹೀರೋ ಮೋಟೋಕಾರ್ಪ್

ಹೀರೋ ಈಗಾಗಲೇ ಮಧ್ಯಮ ವರ್ಗದ ಗಮನಸೆಳೆದ ಸ್ಲೆಂಡರ್ ಐಸ್ಮಾರ್ಟ್ ಬಿಎಸ್-6 ಪ್ರೇರಿತ ಎಂಜಿನ್ ಹೊಂದಿರುವ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದು ದೇಶಿಯ ಮಾರುಕಟ್ಟೆಯಲ್ಲಿನ ಮೊದಲ ಬಿಎಸ್-6 ಪ್ರೇರಿತ ಕಮ್ಯೂಟರ್ ಬೈಕ್ ಆಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮಾರಾಟ ಏರಿಕೆಯ ನಿರೀಕ್ಷೆಯಲ್ಲಿ ಹೀರೋ ಮೋಟೋಕಾರ್ಪ್

ಹೀರೋ ಮೋಟೊಕಾರ್ಪ್ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟವನ್ನು ಸುಧಾರಿಸಲು ಸಾಕಷ್ಟು ಶ್ರಮಿಸುತ್ತಿದೆ. ಕಂಪನಿಯು ಶೇ. 10 ಬೆಳವಣೆಗೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಸದ್ಯಕ್ಕೆ ಮಾರಾಟದಲ್ಲಿ ಭಾರೀ ಕುಸಿತ ಉಂಟಾಗಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ತನ್ನ ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಭಾರತದ ಹಬ್ಬದ ಕಾಲವನ್ನು ಅವಲಂಬಿಸಿದೆ.

Most Read Articles

Kannada
English summary
Hero MotoCorp Aiming To Register 10% Growth In Sales During Festive Season - Read in Kannada
Story first published: Friday, September 27, 2019, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X