ಅಗ್ಗದ ಎಲೆಕ್ಟ್ರಿಕ್ ಬೈಕ್‍‍ಗಳನ್ನು ತಯಾರಿಸಲಿದೆ ಹೀರೋ ಲೆಕ್ಟ್ರೋ

ಹೀರೋ ಲೆಕ್ಟ್ರೋ ಕಂಪನಿಯು ಮುಂದಿನ ವರ್ಷ ಎಲೆಕ್ಟ್ರಿಕ್ ಬೈಕುಗಳನ್ನು ಸಂಪೂರ್ಣ ಸ್ಥಳೀಯವಾಗಿ ಉತ್ಪಾದಿಸಲಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಕಂಪನಿಯು ತನ್ನ ಎಲೆಕ್ಟ್ರಿಕಲ್ ಪೆಡಲ್ ಅಸಿಸ್ಟೆಡ್ ಸೈಕಲ್ (ಇಪಿಎಸಿ) ಉತ್ಪಾದನೆಯನ್ನು ನಡೆಸಿ ಅದನ್ನು ಉತ್ತೇಜಿಸಲಿದೆ.

ಅಗ್ಗದ ಎಲೆಕ್ಟ್ರಿಕ್ ಬೈಕ್‍‍ಗಳನ್ನು ತಯಾರಿಸಲಿದೆ ಹೀರೋ ಲೆಕ್ಟ್ರೋ

ಹೀರೋ ಕಂಪನಿಯು ಈ ಯೋಜನೆಯನ್ನು ಒಂದು ವರ್ಷದೊಳಗೆ ಕಾರ್ಯರೂಪಕ್ಕೆ ತರಲು ಯೋಜಿಸಿದ್ದು, ಉತ್ಪನ್ನಗಳ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಬಿಡಿಭಾಗಗಳನ್ನು ಸಂಪೂರ್ಣವಾಗಿ ಸ್ಥಳೀಯ ಮಟ್ಟದಲ್ಲಿ ಉತ್ಪಾದಿಸಲು ಕಂಪನಿ ಚಿಂತಿಸಿದೆ.

ಅಗ್ಗದ ಎಲೆಕ್ಟ್ರಿಕ್ ಬೈಕ್‍‍ಗಳನ್ನು ತಯಾರಿಸಲಿದೆ ಹೀರೋ ಲೆಕ್ಟ್ರೋ

ಪ್ರಸ್ತುತ ಎಲೆಕ್ಟ್ರಿಕ್ ಬೈಕು‍ಗಳ ವಿನ್ಯಾಸವನ್ನು ಇಂಗ್ಲೇಂಡಿನ ಮ್ಯಾಂಚೆಸ್ಟರ್‍‍ನಲ್ಲಿ ಮಾಡಲಾಗುತ್ತದೆ. ಇದು ಗ್ರೇಟರ್ ನೋಯ್ಡಾದಲ್ಲಿ ಆರ್ ಅಂಡ್ ಡಿ ಕೇಂದ್ರವನ್ನು ಹೊಂದಿದೆ. ಎಲೆಕ್ಟ್ರಿಕಲ್ ಪೆಡಲ್ ನೆರವಿನನೊಂದಿಗೆ ಬ್ಯಾಟರಿ ಮತ್ತು ಕಂಟ್ರೋಲರ್‍ ಅನ್ನು ಆರಂಭದಲ್ಲಿ ಉತ್ಪಾದಿಸಲು ಕಂಪನಿಯು ಯೋಜಿಸಿದೆ.

ಅಗ್ಗದ ಎಲೆಕ್ಟ್ರಿಕ್ ಬೈಕ್‍‍ಗಳನ್ನು ತಯಾರಿಸಲಿದೆ ಹೀರೋ ಲೆಕ್ಟ್ರೋ

ಇವು ಇ-ಬೈಸಿಕಲ್ ಮುಖ್ಯ ಅಂಶಗಳಾಗಿರುವುದರಿಂದ ಈ ಯುನಿ‍ಟ್‍ಗಳನ್ನು ಸ್ಥಳೀಯವಾಗಿ ತಯಾರಿಸಿದರೆ ತಮ್ಮ ಉತ್ಪನ್ನಗಳು ಅಗ್ಗವಾಗಲಿವೆ. ಪ್ರಸ್ತುತ ಭಾರತದ ಎಲೆಕ್ಟ್ರಿಕ್ ಸೈಕಲ್‍‍ಗಳ ಮಾರುಕಟ್ಟೆಯಲ್ಲಿ ಹೀರೋ ಕಂಪನಿಯು ಪಾರುಪತ್ಯ ಸಾಧಿಸುತ್ತಿದೆ. ಹೀರೋ ಸ್ಥಳೀಯವಾಗಿ ಉತ್ಪಾದನೆ ನಡೆಸುವ ಮೂಲಕ ಇ-ಸೈಕಲ್ ಮಾರುಕಟ್ಟೆಯಲ್ಲಿ ಶೇ.10 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಅಗ್ಗದ ಎಲೆಕ್ಟ್ರಿಕ್ ಬೈಕ್‍‍ಗಳನ್ನು ತಯಾರಿಸಲಿದೆ ಹೀರೋ ಲೆಕ್ಟ್ರೋ

ಮೂರು ವರ್ಷದಲ್ಲಿ ಶೇ.2ರಷ್ಟು ಸ್ಕೂಟರ್ ಮತ್ತು ಬೈಕುಗಳ ಮಾರುಕಟ್ಟೆ ಪಾಲನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕಂಪನಿಯ ಅಧಿಕಾರಿಗಳ ಪ್ರಕಾರ, ಹೀರೋ ಲೆಕ್ಟೋ ಇ-ಸೈಕಲ್‍‍ಗಳಿಗೆ ಎರಡನೇ ಹಂತದ ನಗರಗಳಲ್ಲಿ ಶೇ.65ರಷ್ಟು ಬೇಡಿಕೆಯಿದ್ದು, ಮೊದಲನೇ ಹಂತದ ನಗರಗಳಲ್ಲಿ ಶೇ.35ರಷ್ಟು ಬೇಡಿಕೆ ಹೊಂದಿವೆ.

ಅಗ್ಗದ ಎಲೆಕ್ಟ್ರಿಕ್ ಬೈಕ್‍‍ಗಳನ್ನು ತಯಾರಿಸಲಿದೆ ಹೀರೋ ಲೆಕ್ಟ್ರೋ

ದೇಶದ ದಕ್ಷಿಣ ಭಾಗದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಬೆಂಗಳೂರು ನಗರದಲ್ಲಿ ಉತ್ತಮ ಫಲಿತಾಂಶ ನೀಡುವ ನಗರವಾಗಿದೆ ಎಂದು ಅವರು ಹೇಳಿದರು. ಹೀರೋ ಲೆಕ್ಟ್ರೋ ನಿರ್ದೇಶಕ ಆದಿತ್ಯ ಮುಂಜಾಲ್‍‍ರವರು ಮಾತಾನಾಡಿ, ಹೆಚ್ಚುತ್ತಿರುವ ಮಾಲಿನ್ಯವನ್ನು ನಿಯಂತ್ರಿಸಲು ದೇಶವು ಗ್ರೀನ್ ಮೊಬಿಲಿಟಿಯತ್ತ ಸಾಗುತ್ತಿರುವುದರಿಂದ ಇ-ಬೈಸಿಕಲ್‍‍ಗಳು ಪ್ರಮುಖ ಪಾತ್ರವಹಿಸುತ್ತವೆ.

ಅಗ್ಗದ ಎಲೆಕ್ಟ್ರಿಕ್ ಬೈಕ್‍‍ಗಳನ್ನು ತಯಾರಿಸಲಿದೆ ಹೀರೋ ಲೆಕ್ಟ್ರೋ

ಇ-ಬೈಸಿಕಲ್ ತಯಾರಕರಿಗೆ ಪ್ರೋತ್ಸಾಹ ನೀಡುತ್ತವೆ ಮತ್ತು ಬೈಸಿ‍ಕಲ್‍‍ಗಳ ಬೆಲೆಯನ್ನು ಕಡಿಮೆ ಮಾಡುವ ಫೇಮ್ ಯೋಜನೆಯನ್ನು ಬಳಿಸಿಕೊಂಡು ಲಾಭದೊಂದಿಗೆ ಉತ್ಪಾದನೆಯನ್ನು ನಡೆಸಿ ಇ-ಬೈಸಿಕಲ್‍‍ಗಳು ಹೆಚ್ಚು ಲಭ್ಯವಾಗುವಂತೆ ಇರಬೇಕು ಎಂದು ಅವರು ಹೇಳಿದರು.ಭಾರತ ಸರ್ಕಾರದ ಫೇಮ್-2 ಯೋಜನೆಯು ವಾಹನ ತಯಾರಕರಿಗೆ ಪ್ರೋತ್ಸಾಹವನ್ನು ನೀಡುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅಗ್ಗದ ಎಲೆಕ್ಟ್ರಿಕ್ ಬೈಕ್‍‍ಗಳನ್ನು ತಯಾರಿಸಲಿದೆ ಹೀರೋ ಲೆಕ್ಟ್ರೋ

ಯಾರು ಎಲೆಕ್ಟ್ರಿಕ್ ವಾಹನಗಳು ಮತ್ತು ಅವುಗಳ ಘಟಕಗಳನ್ನು ಅಭಿವೃದ್ದಿಪಡಿಸುವಲ್ಲಿ ಹೂಡಿಕೆ ಮಾಡುತ್ತಾರೆ, ಇದರಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳು ಮತ್ತು ಎಲೆಕ್ಟ್ರಿಕ್ ಮೋಟರ್‍‍ಗಳು ಸೇರಿವೆ. ಇದು ತಯಾರಕರಿಗೆ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಅಗ್ಗವಾಗಿ ಉತ್ಪಾದನೆ ಮಾಡಲು ಸಹಾಯ ಮಾಡುತ್ತದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಅಗ್ಗದ ಎಲೆಕ್ಟ್ರಿಕ್ ಬೈಕ್‍‍ಗಳನ್ನು ತಯಾರಿಸಲಿದೆ ಹೀರೋ ಲೆಕ್ಟ್ರೋ

ಹೀರೋ ಲೆಕ್ಟ್ರೋ ಇತ್ತೀಚೆಗೆ ತನ್ನ ಇ-ಸೈಕಲ್‍‍ಗಳ ಸಾಲಿನಲ್ಲಿ ಮತ್ತೊಂದು ಉತ್ಪನ್ನವನ್ನು ಬಿಡುಗಡೆಗೊಳಿಸಿತ್ತು. ಟೌನ್‍‍ಮಾಸ್ಟರ್ ಎಂಬ ಇ-ಸೈಕಲ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಸೈಕಲ್ ಅನ್ನು ಒಂದು ಬಾರಿ ಜಾರ್ಜ್ ಮಾಡಿದರೆ 30 ರಿಂದ 40 ಕಿ.ಮೀ ಚಲಿಸುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಅಗ್ಗದ ಎಲೆಕ್ಟ್ರಿಕ್ ಬೈಕ್‍‍ಗಳನ್ನು ತಯಾರಿಸಲಿದೆ ಹೀರೋ ಲೆಕ್ಟ್ರೋ

ಹೀರೋ ತಮ್ಮ ಲೆಕ್ಟ್ರೋ ಎಲೆಕ್ಟ್ರಿಕ್ ಸೈಕಲ್‍‍ಗಳ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಯೋಜಿಸಿದೆ. ಇ-ಸೈಕಲ್‍ಗಳು ಪ್ರಸ್ತುತ ರೂ.17,000 ದಿಂದ ರೂ.31,000ಗಳವರೆಗಿನ ಬೆಲೆಯನ್ನು ಹೊಂದಿವೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸಂಪೂರ್ಣವಾಗಿ ಸ್ಥಳೀಯವಾಗಿ ಉತ್ಪಾದಿಸುವ ಮೂಲಕ ಬೆಲೆಗಳು ಮತ್ತಷ್ಟು ಇಳಿಯುತ್ತವೆ. ಇ-ಸೈಕಲ್ 20 ರಿಂದ 30 ಕಿ.ಮೀವರೆಗೆ ಯಾವುದೇ ತೊಂದರೆ ಇಲ್ಲದೆ ಚಲಿಸುತ್ತದೆ.

Most Read Articles

Kannada
English summary
Hero Plans Full Localization Manufacturing Of Lectro Electric Bikes By Next Year - Read in Kannada
Story first published: Wednesday, October 30, 2019, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X