ಬಿಎಸ್-6 ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದ ಹೀರೋ

ಭಾರತೀಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಹೊಸ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದೆ. ಹೊಸ ಬೈಕಿನಲ್ಲಿ ಬಿಎಸ್-6 ಎಂಜಿನ್ ಮತ್ತು ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ.

ಬಿಎಸ್-6 ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದ ಹೀರೋ

ಹೀರೋ ಮೋಟೊಕಾರ್ಪ್ ಇತ್ತೀಚಿಗೆ ಬಿಡುಗಡೆಗೊಳಿಸಿದ ಜನಪ್ರಿಯ ಹೀರೋ ಸ್ಪ್ಲೆಂಡರ್ ಐ ಸ್ಮಾರ್ಟ್ ವಿತರಣೆಯನ್ನು ಪ್ರಾರಂಭಿಸಿದೆ. ಬಿಎಸ್ 6 ಸ್ಪ್ಲೆಂಡರ್ ಬೈಕಿನಲ್ಲಿ 113.2 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9.15 ಬಿ‍‍‍‍ಹೆಚ್‌ಪಿ ಪವರ್ ಮತ್ತು 9.89 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದ ಹೀರೋ

ನವೀಕರಿಸಿದ ಬೈಕು (ಸಿಒ) ಕಾರ್ಬನ್ ಮಾನಾಕ್ಸೈಡ್ ಹೊರಸೂಸುವಿಕೆಯನ್ನು ಶೇಕಡಾ 45 ರಷ್ಟು ಕಡಿಮೆ ಮಾಡುತ್ತದೆ ಮತ್ತು (ಎನ್ಒಎಕ್ಸ್) ಸಾರಜನಕ ಆಕ್ಸೈಡ್ ಮಟ್ಟವನ್ನು ಶೇಕಡಾ 88 ರಷ್ಟು ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿದೆ.

ಬಿಎಸ್-6 ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದ ಹೀರೋ

ಈ ಎಂಜಿನ್ ಹೊಸ ಡೈಮಂಡ್ ಫ್ರೇಂನಲ್ಲಿ ಇರಲಿದೆ. ಆರಾಮದಾಯಕವಾದ ಹಾಗೂ ಸ್ಥಿರವಾದ ಸವಾರಿಗಾಗಿ ಹೀರೋ ಮೋಟೊಕಾರ್ಪ್ ಈ ಬೈಕಿನಲ್ಲಿರುವ ಸಸ್ಪೆಂಷನ್ ಅನ್ನು 15 ಎಂಎಂ ಹಾಗೂ ವ್ಹೀಲ್‍‍ಬೇಸ್ ಅನ್ನು 36 ಎಂಎಂನಷ್ಟು ಹೆಚ್ಚಿಸಿದೆ.

ಬಿಎಸ್-6 ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದ ಹೀರೋ

ಹೊಸ ಸ್ಪ್ಲೆಂಡರ್ ಐ‍‍ಸ್ಮಾರ್ಟ್ ಬೈಕಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು 180 ಎಂಎಂನಷ್ಟು ಹೆಚ್ಚಿಸಲಾಗಿದೆ. ಹೀರೋ ಮೋಟೊಕಾರ್ಪ್ 799 ಎಂಎಂ ಸೀಟ್ ಉದ್ದದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಬಿಎಸ್-6 ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದ ಹೀರೋ

ಹೊಸ ಬಿ‍ಎಸ್6 ಎಂಜಿನ್ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಹೊಂದಿರಲಿದೆ. ಇದರೊಂದಿಗೆ ಐ3 ಎಸ್ ಸ್ಟಾರ್ಟ್ ಸ್ಟಾಪ್ ಟೆಕ್ನಾಲಜಿ ಇರಲಿದೆ. ಇದು ಐಡಲ್ ಸ್ಟಾರ್ಟ್ ಹಾಗೂ ಸ್ಟಾಪ್ ಸಿಸ್ಟಂ ಆಗಿದ್ದು, ಹೆಚ್ಚು ಅವಧಿಯವರೆಗೆ ಬೈಕ್ ಅನ್ನು ಆಫ್ ಮಾಡದೇ ನಿಲ್ಲಿಸಿದ್ದರೆ ಈ ಸಿಸ್ಟಂ ಎಂಜಿನ್ ಅನ್ನು ಆಫ್ ಮಾಡುತ್ತದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಬಿಎಸ್-6 ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದ ಹೀರೋ

ಅದರಂತೆ ಹೀರೋ ಮೋಟೊಕಾರ್ಪ್ ಸಹ ತನ್ನ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ಗೆ ಅಪ್‍‍ಗ್ರೇಡ್‍‍ಗೊಳಿಸುತ್ತಿದೆ. ಅದರ ಭಾಗವಾಗಿ ಈಗ ಕಂಪನಿಯ ಜನಪ್ರಿಯ ಬೈಕ್ ಆದ ಸ್ಲ್ಪೆಂಡರ್ ಅನ್ನು ಐ‍‍ಸ್ಮಾರ್ಟ್ ಹೆಸರಿನಲ್ಲಿ ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿತ್ತು. ಬಿಎಸ್-6 ಮಾದರಿಯ ಹೊಸ್ ಬೈಕಿನಲ್ಲಿ ಹ್ಯಾಲೊಜಿನ್ ಹೆಡ್‍‍ಲೈ‍ಟ್ ಮತ್ತು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಎಸ್-6 ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದ ಹೀರೋ

ಬೈಕಿನಲ್ಲಿ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಮೂರು ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಅದರಲ್ಲಿ ಸ್ಪೋರ್ಟ್ಸ್ ರೆಡ್ ಅಂಡ್ ಬ್ಲಾಕ್, ಟಕ್ನೋ ಬ್ಲೂ ಅಂಡ್ ಬ್ಲ್ಯಾಕ್ ಮತ್ತು ಫೋರ್ಸ್ ಸಿಲ್ವರ್ ಮತ್ತು ಹೆವಿ ಗ್ರೇ ಬಣ್ಣವನ್ನು ಹೊಂದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಎಸ್-6 ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದ ಹೀರೋ

ಹೀರೋ ಗ್ರಾಹಕರ ಬೇಡಿಕೆಯನ್ನು ಅರ್ಥ ಮಾಡಿಕೊಂಡು ಹೊಸ ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದೆ. ಹೊಸ ಬಣ್ಣಗಳ ಆಯ್ಕೆ ಮೂಲಕ ಆಕರ್ಷಕ ಲುಕ್ ಅನ್ನು ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಮೆಚ್ಚಿನ ಬೈಕು ಹೊಸ ಲುಕ್‍‍ನಲ್ಲಿ ಮತ್ತಷ್ಟು ಜನರ ಗಮನಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Hero MotoCorp Begins Deliveries Of BS-VI Compliant Splendor iSmart - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X