ಆರ್‌ಇ ಹಿಮಾಲಯನ್ ಪ್ರತಿಸ್ಪರ್ಧಿ ಹೀರೋ ಎಕ್ಸ್‌ಪಲ್ಸ್ 200 ಮಾರಾಟವಾಗಿದ್ದು ಎಷ್ಟು ಗೊತ್ತಾ?

ಹೀರೋ ಮೋಟೊಕಾರ್ಪ್ ಸಂಸ್ಥೆಯು ಮಾರುಕಟ್ಟೆಯಲ್ಲಿ ಪರ್ಫಾಮೆನ್ಸ್ ಬೈಕ್ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರೀ ನೀರಿಕ್ಷೆಯೊಂದಿಗೆ ತನ್ನ ಬಹುನೀರಿಕ್ಷಿತ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬೈಕ್ ಬಿಡುಗಡೆ ಮಾಡಿತ್ತು. ಆದರೆ ನೀರಿಕ್ಷೆಯಂತೆ ಬೈಕ್ ಮಾರಾಟದಲ್ಲಿ ಯಾವುದೇ ಸಂಚಲನ ಮೂಡಿಸದ ಹೊಸ ಬೈಕ್‌ಗಳು ಮೇ ಅವಧಿಯಲ್ಲಿ ಅತಿ ಕಡಿಮೆ ಮಾರಾಟ ಪ್ರಮಾಣ ದಾಖಲಿಸಿವೆ.

ಆರ್‌ಇ ಹಿಮಾಲಯನ್ ಪ್ರತಿಸ್ಪರ್ಧಿ ಹೀರೋ ಎಕ್ಸ್‌ಪಲ್ಸ್ 200 ಮಾರಾಟವಾಗಿದ್ದು ಎಷ್ಟು ಗೊತ್ತಾ?

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿದ್ದ ಎಕ್ಸ್‌ಪಲ್ಸ್ 200 ಬೈಕ್‌ಗಳು ಪ್ರತಿ ತಿಂಗಳು ಸರಾಸರಿಯಾಗಿ 15ರಿಂದ 20 ಸಾವಿರ ಬೈಕ್ ಮಾರಾಟ ನೀರಿಕ್ಷೆಯಲ್ಲಿದ್ದ ಹೀರೋ ಸಂಸ್ಥೆಯು ಮೇ ಅವಧಿಯಲ್ಲಿ ಕೇವಲ 1,026 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ದುಬಾರಿ ಬೆಲೆಯ ಪ್ರತಿ ಸ್ಪರ್ಧಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಇದೇ ಅವಧಿಯಲ್ಲಿ 1,192 ಯುನಿಟ್‌ಗಳು ಮಾರಾಟಗೊಂಡಿವೆ.

ಆರ್‌ಇ ಹಿಮಾಲಯನ್ ಪ್ರತಿಸ್ಪರ್ಧಿ ಹೀರೋ ಎಕ್ಸ್‌ಪಲ್ಸ್ 200 ಮಾರಾಟವಾಗಿದ್ದು ಎಷ್ಟು ಗೊತ್ತಾ?

ಹೀಗಾಗಿ ನೀರಿಕ್ಷೆ ಮಾಡಿದ್ದಕ್ಕಿಂತಲೂ ಎಕ್ಸ್‌ಪಲ್ಸ್ 200 ಮಾರಾಟ ಗುರಿ ಸಾಧಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಬೆಲೆಗಳಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆ ಆಧಾರದ ಮೇಲೆ ಹೊಸ ಬೈಕ್ ಭವಿಷ್ಯ ನಿರ್ಧಾರವಾಗಲಿದೆ.

ಆರ್‌ಇ ಹಿಮಾಲಯನ್ ಪ್ರತಿಸ್ಪರ್ಧಿ ಹೀರೋ ಎಕ್ಸ್‌ಪಲ್ಸ್ 200 ಮಾರಾಟವಾಗಿದ್ದು ಎಷ್ಟು ಗೊತ್ತಾ?

ಇನ್ನು ಮೇ ಆರಂಭದಲ್ಲಿ ಹೀರೋ ಬಿಡುಗಡೆ ಮಾಡಲಾಗಿರುವ ಎಕ್ಸ್‌ಪಲ್ಸ್ 200 ಮಾದರಿಯು ಅಡ್ವೆಂಚರ್ ವೈಶಿಷ್ಟ್ಯತೆಗಳನ್ನು ಹೊಂದಿದ್ದರೆ ಎಕ್ಸ್‌ಪಲ್ಸ್ 200ಟಿ ಮಾದರಿಯು ಟೂರರ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಕಾಬ್ಯೂರೆಟೆಡ್ ಮತ್ತು ಫ್ಯೂಲ್ ಇಂಜೆಕ್ಷಡೆಡ್ ಎಂಜಿನ್ ಸೌಲಭ್ಯಗಳೊಂದಿಗೆ ಹೊಸ ಬೈಕ್ ಖರೀದಿಗೆ ಲಭ್ಯವಿವೆ.

ಆರ್‌ಇ ಹಿಮಾಲಯನ್ ಪ್ರತಿಸ್ಪರ್ಧಿ ಹೀರೋ ಎಕ್ಸ್‌ಪಲ್ಸ್ 200 ಮಾರಾಟವಾಗಿದ್ದು ಎಷ್ಟು ಗೊತ್ತಾ?

ಹೊಸ ಬೈಕ್‌ಗಳ ಬೆಲೆ ಪಟ್ಟಿ(ಎಕ್ಸ್‌ಶೋರೂಂ ಪ್ರಕಾರ)

ಎಕ್ಸ್‌ಪಲ್ಸ್ 200ಟಿ - ರೂ.94,000

ಎಕ್ಸ್‌ಪಲ್ಸ್ 200(ಕಾಬ್ಯೂರೆಟೆಡ್) - ರೂ. 97,000

ಎಕ್ಸ್‌ಪಲ್ಸ್ 200(ಫ್ಯೂಲ್ ಇಂಜೆಕ್ಷಡೆಡ್)- 1,05,000

ಎಂಜಿನ್ ಸಾಮರ್ಥ್ಯ

ಹೊಸ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಮಾದರಿಗಳು 199.6 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದ್ದು, 5-ಸ್ಪೀಡ್ ಮ್ಯನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 18.4-ಬಿಎಚ್‌ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಆರ್‌ಇ ಹಿಮಾಲಯನ್ ಪ್ರತಿಸ್ಪರ್ಧಿ ಹೀರೋ ಎಕ್ಸ್‌ಪಲ್ಸ್ 200 ಮಾರಾಟವಾಗಿದ್ದು ಎಷ್ಟು ಗೊತ್ತಾ?

ಅಡ್ವೆಂಚರ್ ಮತ್ತು ಟೂರರ್ ವಿಭಾಗದಲ್ಲಿನ ಬೇಡಿಕೆಯೆಂತೆ ಗರಿಷ್ಠ ಮಟ್ಟದ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಬೈಕ್‌ಗಳು ಡ್ಯುಯಲ್ ಪರ್ಪಸ್ ಟೈರ್, 21-ಇಂಚಿನ ಫ್ರಂಟ್ ವೀಲ್ಹ್, 18-ಇಂಚಿನ ರಿಯರ್ ವೀಲ್ಹ್ ಸೌಲಭ್ಯ ಪಡೆದಿದ್ದು, ಫುಲ್ ಎಲ್‌ಇಡಿ ರೌಂಡ್ ಹೆಡ್‌ಲ್ಯಾಂಪ್, ಸಿಂಗಲ್ ಪೀಸ್ ಸೀಟ್, ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಗೇರ್ ಇಂಡಿಕೇಟರ್ ಗಮನಸೆಳೆಯುತ್ತವೆ.

ಆರ್‌ಇ ಹಿಮಾಲಯನ್ ಪ್ರತಿಸ್ಪರ್ಧಿ ಹೀರೋ ಎಕ್ಸ್‌ಪಲ್ಸ್ 200 ಮಾರಾಟವಾಗಿದ್ದು ಎಷ್ಟು ಗೊತ್ತಾ?

ಹಾಗೆಯೇ ಹೊಸ ಬೈಕ್‌ಗಳಲ್ಲಿ ಸರ್ವಿಸ್ ರಿಮೆಂಡರ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಕಾಲ್ ಅಲರ್ಟ್, ಬ್ಲೂಟೂಥ್ ಕನೆಕ್ಟಿವಿಟಿ ಸೌಲಭ್ಯವಿದ್ದು, ಬೈಕ್ ಸವಾರರ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್, ಕನ್ವೆಷನಲ್ ಎಕ್ಸಾಸ್ಟ್, ಸಣ್ಣದಾದ ವೀಂಡ್ ಸ್ಕೀನ್, ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಮತ್ತು ಲಾಂಗ್ ಟ್ರಾವೆಲ್ ಸಸ್ಪೆಷನ್ ಅಳವಡಿಸಲಾಗಿದೆ.

ಆರ್‌ಇ ಹಿಮಾಲಯನ್ ಪ್ರತಿಸ್ಪರ್ಧಿ ಹೀರೋ ಎಕ್ಸ್‌ಪಲ್ಸ್ 200 ಮಾರಾಟವಾಗಿದ್ದು ಎಷ್ಟು ಗೊತ್ತಾ?

ಲಭ್ಯವಿರುವ ಬಣ್ಣಗಳು

ಎಕ್ಸ್‌ಪಲ್ಸ್ 200- ಮ್ಯಾಟೆ ಗ್ರೀನ್, ಪರ್ಲ್ ಫೆಡ್‌ಲೆಸ್ ವೈಟ್, ಮ್ಯಾಟೆ ಎಕ್ಸಿಸ್, ಸ್ಪೋರ್ಟ್ ರೆಡ್ ಮತ್ತು ಬ್ಲ್ಯಾಕ್

ಎಕ್ಸ್‌ಪಲ್ಸ್ 200ಟಿ- ಮ್ಯಾಟೆ ಎಕ್ಸಿಸ್ ಗ್ರೇ, ಮ್ಯಾಟೆ ಶೈಲ್ಡ್ ಗೋಲ್ಡ್, ಬ್ಲ್ಯಾಕ್ ಮತ್ತು ಕ್ಯಾಂಡಿ ಬ್ಲೆಜಿಂಗ್ ರೆಡ್

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಆರ್‌ಇ ಹಿಮಾಲಯನ್ ಪ್ರತಿಸ್ಪರ್ಧಿ ಹೀರೋ ಎಕ್ಸ್‌ಪಲ್ಸ್ 200 ಮಾರಾಟವಾಗಿದ್ದು ಎಷ್ಟು ಗೊತ್ತಾ?

ಒಟ್ಟಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಅಡ್ವೆಂಚರ್ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಎಕ್ಸ್‌ಪಲ್ಸ್ 200 ಬೈಕ್ ಮತ್ತು ಎಕ್ಸ್‌ಪಲ್ಸ್ 200ಟಿ ಮಾದರಿಗಳು ಉತ್ತಮ ಬೇಡಿಕೆಯ ನೀರಿಕ್ಷೆಯಲ್ಲಿದ್ದು, ಆರ್‌ಇ ಹಿಮಾಲಯನ್ ಬೈಕಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Source: rushlane

Most Read Articles

Kannada
English summary
Hero Xpulse 200 May 2019 Sales Report. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X