ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಹೀರೋ ಮೋಟೊಕಾರ್ಪ್ 2019ರ ಇಐಸಿಎಂಎನಲ್ಲಿ ಹೊಸ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್ ಅನ್ನು ಅನಾವರಣಗೊಳಿಸಿದೆ. ರ‍್ಯಾಲಿ ಕಿಟ್‍‍ಗಾಗಿ ಹೊಸ ಎಕ್ಸ್‌ಪಲ್ಸ್ 200 ಬೈಕ್‍‍ಗಳಲ್ಲಿ ಆಯ್ಕೆ ಮಾಡಬಹುದು ಅಥವಾ ಈಗಾಗಲೇ ಖರೀದಿಸಿರುವ ಗ್ರಾಹಕರು ತಮ್ಮ ಬೈಕ್‍‍ಗಳಲ್ಲಿ ಮರುಹೊಂದಿಸಬಹುದಾಗಿದೆ.

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ರ‍್ಯಾಲಿ ಉತ್ಸಾಹಿಗಳನ್ನು ಸೆಳೆಯುವಂತೆ ಎಕ್ಸ್‌ಪಲ್ಸ್ 200ಗಾಗಿ ರ‍್ಯಾಲಿ ಕಿಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಎಕ್ಸ್‌ಪಲ್ಸ್ 200 ಬೈಕಿನ ಆಫ್ ರೋಡ್ ಸಾಮರ್ಥ್ಯವು ಸುಧಾರಿಸುತ್ತದೆ. ಹೀರೋ ಮೋಟೊಕಾರ್ಪ್ ಪ್ರಕಾರ ರ‍್ಯಾಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಇದು ಸೂಕ್ತವಾದ ಬೈಕ್ ಆಗಿದೆ.

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಎಂಟ್ರಿ ಲೆವೆಲ್ ಆಫ್ ರೋಡ್ ಬೈಕ್ ಖರೀದಿದಾರರನ್ನು ಗುರಿಯಾಗಿಸಿಕೊಂಡು ಹೀರೋ ಮೋಟೊಕಾರ್ಪ್ ಈ ವರ್ಷದ ಮೇ ತಿಂಗಳಲ್ಲಿ ಎಕ್ಸ್‌ಪಲ್ಸ್ 200 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದು ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಹೀರೋ ಮೋಟೊಸ್ಪೋರ್ಟ್ಸ್ ಟೀಮ್ ರ‍್ಯಾಲಿಯ ಅನುಭವ ಮತ್ತು ಸಲಹೆಯನ್ನು ಪಡೆದು ತಯಾರಕರು ಈ ಬೈಕ್ ರ‍್ಯಾಲಿ ಕಿಟ್ ಅನ್ನು ಅಭಿವೃದ್ದಿಪಡಿಸಿದ್ದಾರೆ. ಪ್ರಪಂಚದಾದ್ಯಂತದ ವಿವಿಧ ಅಂತರರಾಷ್ಟ್ರೀಯ ರ‍್ಯಾಲಿಗಳಲ್ಲಿ ಮೆಚ್ಚುಗೆ ಗಳಿಸಿದ ತಂಡವಿದು.

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಈ ತಂಡವು ವಿಶ್ವದ ಅತ್ಯಂತ ಕಠಿಣ ಮೋಟಾರ್‍‍ಸ್ಪೋರ್ಟ್ಸ್ ಸ್ಪರ್ಧೆಯಾದ ಡಾಕರ್ ರ‍್ಯಾಲಿಯಲ್ಲಿ ಭಾಗವಹಿಸಿದ ಹೆಗ್ಗಳಿಕೆಗೆ ಪಾತ್ರವಾದ ತಂಡವಾಗಿದೆ. ಇಷ್ಟು ಅನುಭವವನ್ನು ಹೊಂದಿರುವವರ ಸಲಹೆಯನ್ನು ಪಡೆದುಕೊಂಡು ತಯಾರಿಸಿದ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್‍ ಉತ್ತಮ ಗುಣಮಟ್ಟವನ್ನು ಹೊಂದಿರಬಹುದು ಎಂದು ನಿರೀಕ್ಷಿಸಬಹುದು. ರ‍್ಯಾಲಿ ಕಿಟ್ ಹಲವಾರು ಸುಧಾರಣೆಗಳನ್ನು ಒಳಗೊಂಡಿದೆ.

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಎಕ್ಸ್‌ಪಲ್ಸ್ 200 ಬೈಕು ಬ್ಯಾಟ್‍‍ನಿಂದ ಸ್ವಲ್ಪ ಎತ್ತರವಾಗಿಸಿದೆ. ಈಗ ಮುಂಭಾಗ ಮತ್ತು ಹಿಂಭಾಗದಲ್ಲಿ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೆಚ್ಚಿಸಿದೆ. ಇದೀಗ 275 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ್ದು, ಸ್ಟಾಕ್ ಬೈಕ್‍‍ಗಿಂತ 55 ಎಂಎಂ ಹೆಚ್ಚಾಗಿದೆ. ಟೆಲಿಸ್ಕೋಪಿಕ್ ಫೋರ್ಕ್ ಅಪ್ ಫ್ರಂಟ್ ಈಗ ಧೂಳು‍ನಿಂದ ರಕ್ಷಣೆ ಪಡೆಯಲು ಬೂಟ್‍‍ಗಳನ್ನು ಅಳವಡಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಈ ಬೈಕಿನಲ್ಲಿ ಮ್ಯಾಕ್ಸಿಸ್‌ ನಾಬಿ ಟಯರ್‍‍ಗಳಿಂದ ಕೂಡಿವೆ. ರ‍್ಯಾಲಿ ಆಧಾರಿತ ಸೀಟ್ ಅನ್ನು ಹೊಂದಿದ್ದು, ಇದು ರೈಡರ್‍‍ಗೆ ಹೆಚ್ಚು ಸಹಾಯವಾಗಲಿದೆ. ಫುಟ್‍‍ರೆಸ್ಟ್ ಗಳು ಆಫ್-ರೋಡ್ ಮಾರ್ಗಗಳಿಗೆ ಅನುಗುಣವಾಗಿದೆ ಮತ್ತು ಆಫ್-ರೋಡ್‍ಗಳಲ್ಲಿ ಸುಲಭವಾಗಿ ಚಲಿಸಲು ಗೇರ್‍‍ಲಿವರ್ ಅನ್ನು ವಿಸ್ತರಿಸಲಾಗಿದೆ. ಈ ಬೈಕಿನಲ್ಲಿ ರ‍್ಯಾಲಿ ಹ್ಯಾಂಡಲ್ ಬಾರ್ ಮತ್ತು ಆಪ್‍-ರೋಡ್‍‍ಗಳಲ್ಲಿ ಕಾರ್ಯಕ್ಷಮತೆಯನ್ನು ಸುಧಾರಿಸಲು ರ‍್ಯಾಲಿ ಕಿಟ್ 12/40 ಟಿ ಫ್ರಂಟ್/ರೇರ್ ಸ್ಟ್ರಾಕೆಟ್ ಅನ್ನು ಹೊಂದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಇದು ಹೆಚ್ಚು ವೇಗವಾಗಿ ಸಾಗಲು ಅನುವು ಮಾಡಿಕೊಡುತ್ತದೆ. ಇದು ರ‍್ಯಾಲಿ ಸ್ಪೆಕ್ ಡ್ರೈವ್ ಚೈನ್ ಟೆನ್ಷನರ್‍ ಹೊಂದಿದೆ. ಈ ಬೈಕಿನ ಹಿಂಭಾದಲ್ಲಿ ನವೀಕರಣವನ್ನು ನಡೆಸಲಾಗಿದ್ದು, ಸಣ್ಣ ಮಡ್‍‍ಗಾರ್ಡ್ ಅನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಇಂಡಿಕೇಟರ್‍‍ಗಳನ್ನು, ನಂಬರ್‍‍ಪ್ಲೇಟ್ ಮೌಂಟ್ಸ್ ಅನ್ನು ತೆಗೆದುಹಾಕಲಾಗಿದೆ. ಇದ್ದರಿಂದ ಈ ಬೈಕನ್ನು ಸಾರ್ವಜನಿಕ ರಸ್ತೆಗಳಲ್ಲಿ ಚಲಾಯಿಸುವುದು ಕಾನೂನುಬಾಹಿರವಾಗಿದೆ.

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಎಕ್ಸ್‌ಪಲ್ಸ್ 200 ಬೈಕಿನಲ್ಲಿ 199.6 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 18.3 ಬಿ‍ಹೆಚ್‍‍ಪಿ ಪವರ್ ಮತ್ತು 17.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್ ಪ್ರಿಯರಿಗೆ ಈ ವರ್ಷ ಎಐಸಿಎಂಎನಲ್ಲಿ ಎಕ್ಸ್‌ಪಲ್ಸ್ 200 ಬೈಕ್ ಅನಾವರಣಗೊಂಡಿರುವುದು ಸಂತಸ ಮೂಡಿಸಿದೆ. ಎಕ್ಸ್‌ಪಲ್ಸ್ 200 ಬೈಕ್‍ ರ‍್ಯಾಲಿ ಕಿಟ್‍ನಿಂದ ಅದರ ಸಾಮರ್ಥ್ಯವನ್ನು ಗಮನರ್ಹವಾಗಿ ಸುಧಾರಣೆ ಕಂಡಿರಬಹುದು.

Most Read Articles

Kannada
English summary
EICMA 2019: Hero XPulse 200 Rally Kit Showcased In An Attempt To Improve Off-Road Ability - Read in Kannada
Story first published: Thursday, November 7, 2019, 19:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X