ಹೀರೋ ಎಕ್ಸ್‌ಟ್ರಿಮ್200ಆರ್ ಬೈಕಿನ ಖರೀದಿ ಇದೀಗ ಮತ್ತಷ್ಟು ದುಬಾರಿ

ಹೀರೋ ಮೋಟೊಕಾರ್ಪ್ ಸಂಸ್ಥೆಯ 200ಸಿಸಿ ಅಗ್ಗದ ಬೈಕ್ ಖ್ಯಾತಿ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕಿನ ಬೆಲೆಗಳನ್ನ ಹೊಸ ದರ ಪಟ್ಟಿಯಲ್ಲಿ ಹೆಚ್ಚಳ ಮಾಡಲಾಗಿದ್ದು, ಇಂಡಿಯನ್ ಆಟೋಸ್ ಬ್ಲಾಗ್ ವರದಿ ಪ್ರಕಾರ ಈ ಹಿಂದೆ ಇದ್ದ ಎಕ್ಸ್‌ಶೋರೂಂ ಬೆಲೆಯು ರೂ.90 ಸಾವಿರದಿಂದ ಇದೀಗ ಎಕ್ಸ್ ಶೋರುಂ ಪ್ರಕಾರ ರೂ. 91,900 ಸಾವಿರಕ್ಕೆ ಏರಿಕೆಯಾಗಿದೆ.

ಹೀರೋ ಎಕ್ಸ್‌ಟ್ರಿಮ್200ಆರ್ ಬೈಕಿನ ಖರೀದಿ ಇದೀಗ ಮತ್ತಷ್ಟು ದುಬಾರಿ

ಇನ್ನು ಜಗತ್ತಿನ ಅತಿ ದೊಡ್ಡ ಬೈಕ್ ಉತ್ಪಾದನಾ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್‌ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದ್ದು, 200ಸಿಸಿ ಸಾಮರ್ಥ್ಯ ಬೈಕ್ ಮಾದರಿಯನ್ನು ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಏಕೈಕ ಬೈಕ್ ಸಂಸ್ಥೆಯಾಗಿದೆ.

ಹೀರೋ ಎಕ್ಸ್‌ಟ್ರಿಮ್200ಆರ್ ಬೈಕಿನ ಖರೀದಿ ಇದೀಗ ಮತ್ತಷ್ಟು ದುಬಾರಿ

ಹೀರೋ ಸಂಸ್ಥೆಯು ಕಮ್ಯೂಟರ್ ಬೈಕ್ ಪ್ರೇಮಿಗಳನ್ನು ಸೆಳೆಯುವ ಉದ್ದೇಶದೊಂದಿಗೆ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ಇದು ಹೀರೋ ಸಿಬಿಝೆಡ್ ಎಕ್ಸ್‌ಟ್ರಿಮ್ ಬೈಕಿನ ಮುಂದುವರೆದ ಮಾದರಿಯಾಗಿರಲಿದೆ.

ಹೀರೋ ಎಕ್ಸ್‌ಟ್ರಿಮ್200ಆರ್ ಬೈಕಿನ ಖರೀದಿ ಇದೀಗ ಮತ್ತಷ್ಟು ದುಬಾರಿ

ಎಂಜಿನ್ ಸಾಮರ್ಥ್ಯ

199 ಸಿಸಿ ಫೋರ್ ಸ್ಟೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು 18-ಬಿಎಚ್‌ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ. ಹಾಗೆಯೇ ಹೊಸ ಬೈಕಿನಲ್ಲಿ ಹೆಡ್‌ಲೈಟ್ಸ್ ಜೊತೆಗೆ ಎಲ್ಇಡಿ ಪೈಲೆಟ್ ಲ್ಯಾಂಪ್ಸ್, ಎಲ್ಇಡಿ ಟೈಲ್ ಲೈಟ್ಸ್, ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಟೋನ್ ಗ್ರಾಫಿಕ್ಸ್ ಮತ್ತು ದೂರದ ಪ್ರಯಾಣದಲ್ಲೂ ಆರಾಮದಾಯಕವಾಗಿ ಕುಳಿತು ಸವಾರಿ ಮಾಡಬಲ್ಲ ಕೌಂಟರ್ಡ್ ಸೀಟುಗಳನ್ನು ಜೋಡಿಸಲಾಗಿದೆ.

ಹೀರೋ ಎಕ್ಸ್‌ಟ್ರಿಮ್200ಆರ್ ಬೈಕಿನ ಖರೀದಿ ಇದೀಗ ಮತ್ತಷ್ಟು ದುಬಾರಿ

ಸುರಕ್ಷಾ ಸಾಧನಗಳು

ಬೈಕ್ ಮುಂಭಾಗದಲ್ಲಿ 37-ಎಂಎಂ ಟೆಲಿಸ್ಕೋಪಿಕ್ ಸಸ್ಪೆಷನ್ ಹಾಗೂ 37-ಎಂಎಂ ಎಳು ಹಂತದಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದಾದ ಮೋನೋಶಾರ್ಕ್ ಸಸ್ಷೆಷನ್, 276-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 220-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಟೆಕ್ನಾಲಜಿ ಅನ್ನು ಸಹ ಹೊಂದಿದೆ.

ಹೀರೋ ಎಕ್ಸ್‌ಟ್ರಿಮ್200ಆರ್ ಬೈಕಿನ ಖರೀದಿ ಇದೀಗ ಮತ್ತಷ್ಟು ದುಬಾರಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಖರೀದಿಗೆ ಲಭ್ಯವಿರುವ ಬಣ್ಣಗಳು

ಒಟ್ಟು 5 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಪ್ಯಾಂಥರ್ ಬ್ಲ್ಯಾಕ್ ಜೊತೆ ಕೂಲ್ ಸಿಲ್ವರ್, ಬ್ಲ್ಯಾಕ್ ಆ್ಯಂಡ್ ರೆಡ್, ಸ್ಪೋರ್ಟ್ ರೆಡ್, ಚಾರ್ಕೋಲ್ ಗ್ರೇ ಜೊತೆ ಆರೇಂಜ್ ಮತ್ತು ಟೆಕ್ನೋ ಬ್ಲ್ಯೂ ಬಣ್ಣಗಳನ್ನ ಹೊಂದಿರಲಿದೆ.

ಹೀರೋ ಎಕ್ಸ್‌ಟ್ರಿಮ್200ಆರ್ ಬೈಕಿನ ಖರೀದಿ ಇದೀಗ ಮತ್ತಷ್ಟು ದುಬಾರಿ

ಈ ಮೂಲಕ 200ಸಿಸಿ ವಿಭಾಗದ ಬೈಕ್‌ಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಹೀರೋ ಹೊಸ ಬೈಕ್‌ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಬಜಾಜ್ ಪಲ್ಸರ್ 200ಎನ್ಎಸ್, ಕೆಟಿಎಂ ಡ್ಯೂಕ್ 200 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳಿಗೆ ಇದು ತೀವ್ರ ಪೈಪೋಟಿ ನೀಡುತ್ತಿದೆ.

ಹೀರೋ ಎಕ್ಸ್‌ಟ್ರಿಮ್200ಆರ್ ಬೈಕಿನ ಖರೀದಿ ಇದೀಗ ಮತ್ತಷ್ಟು ದುಬಾರಿ

ಒಟ್ಟಿನಲ್ಲಿ ಹೊಸ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಇದುವರೆಗೆ ಮಾರುಕಟ್ಟೆಯಲ್ಲಿರುವ 200ಸಿಸಿ ಬೈಕ್‌ಗಳಿಂತಲೂ ಹೆಚ್ಚಿನ ಸೌಲಭ್ಯ ಮತ್ತು ಕಡಿಮೆ ಬೆಲೆ ಹೊಂದಿರುವ ಈ ಬೈಕಿನ ವಿಶೇಷ ಎನ್ನಬಹುದು.

Most Read Articles

Kannada
English summary
Hero Xtreme 200R Gets Another Price Hike. Read In Kannada
Story first published: Friday, July 19, 2019, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X