ಹೊಸ ಸ್ಕೂಟರಿಗೆ ನಂಬರ್ ಪ್ಲೇಟ್ ನೀಡದ ಡೀಲರ್‍‍ಗೆ ಬಿತ್ತು ಭಾರೀ ದಂಡ..!

ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ದೇಶಾದ್ಯಂತ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಈ ರೀತಿಯಾಗಿ ದಂಡವನ್ನು ವಿಧಿಸುತ್ತಿರುವ ಪ್ರಕರಣಗಳು ಹೆಚ್ಚು ಸುದ್ದಿಯಾಗುತ್ತಿವೆ.

ಹೊಸ ಸ್ಕೂಟರಿಗೆ ನಂಬರ್ ಪ್ಲೇಟ್ ನೀಡದ ಡೀಲರ್‍‍ಗೆ ಬಿತ್ತು ಭಾರೀ ದಂಡ..!

ಇದುವರೆಗೂ ಹೊಸ ವಾಹನಕ್ಕಿಂತ ಹೆಚ್ಚಿನ ಪ್ರಮಾಣ ದಂಡವನ್ನು ವಿಧಿಸಿದ್ದ ಯಾವುದೇ ಪ್ರಕರಣಗಳು ವರದಿಯಾಗಿರಲಿಲ್ಲ. ಆದರೆ ಒಡಿಶಾದಲ್ಲಿ ಹೊಸ ಸ್ಕೂಟರ್ ಬೆಲೆಗಿಂತ ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸಲಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ ವಿತರಿಸಿದ ಡೀಲರ್‍‍ಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಜೊತೆಗೆ ಸ್ಕೂಟರ್ ಅನ್ನು ವಶಪಡಿಸಿ ಕೊಳ್ಳಲಾಗಿದೆ.

ಹೊಸ ಸ್ಕೂಟರಿಗೆ ನಂಬರ್ ಪ್ಲೇಟ್ ನೀಡದ ಡೀಲರ್‍‍ಗೆ ಬಿತ್ತು ಭಾರೀ ದಂಡ..!

ಅಂದ ಹಾಗೆ ಈ ಹೊಸ ಸ್ಕೂಟರ್ ಅನ್ನು ಆಗಸ್ಟ್ 28ರಂದು ಭುವನೇಶ್ವರದಲ್ಲಿ ಖರೀದಿಸಲಾಗಿದೆ. ಸೆಪ್ಟೆಂಬರ್ 12ರಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆಯಲ್ಲಿ ಈ ಸ್ಕೂಟರ್ ಅನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ.

ಹೊಸ ಸ್ಕೂಟರಿಗೆ ನಂಬರ್ ಪ್ಲೇಟ್ ನೀಡದ ಡೀಲರ್‍‍ಗೆ ಬಿತ್ತು ಭಾರೀ ದಂಡ..!

ಬೆರಾಂಗ್ ಪ್ರದೇಶದಲ್ಲಿ ಈ ಹೊಸ ಸ್ಕೂಟರ್ ಅನ್ನು ತಡೆದು ನಿಲ್ಲಿಸಿದ ಅಧಿಕಾರಿಗಳಿಗೆ ಈ ಸ್ಕೂಟರ್ ರಿಜಿಸ್ಟ್ರೇಷನ್ ನಂಬರ್ ಹೊಂದಿಲ್ಲದೇ ಇರುವುದು ಕಂಡು ಬಂದಿದೆ. ತಕ್ಷಣವೇ ಆರ್‍‍ಟಿ‍ಒ ಅಧಿಕಾರಿಗಳು ಡೀಲರ್‍‍ಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ, ಸ್ಕೂಟರ್ ಅನ್ನು ವಶಕ್ಕೆ ಪಡೆದಿದ್ದಾರೆ.

ದಂಡವನ್ನು ಹೊಸ ಮೋಟಾರು ವಾಹನ ಕಾಯ್ದೆಯನ್ವಯ ವಿಧಿಸಲಾಗಿದೆ. ಆರ್‍‍ಟಿ‍ಒ ಅಧಿಕಾರಿಗಳು, ರಿಜಿಸ್ಟ್ರೇಷನ್ ನಂಬರ್ ಹೊಂದಿಲ್ಲದ ಸ್ಕೂಟರ್ ಅನ್ನು ವಿತರಿಸಿದ ಡೀಲರ್‍‍ಶಿಪ್‍‍ನ ಲೈಸೆನ್ಸ್ ಅನ್ನು ರದ್ದು ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.

ಹೊಸ ಸ್ಕೂಟರಿಗೆ ನಂಬರ್ ಪ್ಲೇಟ್ ನೀಡದ ಡೀಲರ್‍‍ಗೆ ಬಿತ್ತು ಭಾರೀ ದಂಡ..!

ಭಾರತದಲ್ಲಿರುವ ಕಾನೂನಿನಂತೆ ಯಾವುದೇ ಹೊಸ ವಾಹನವನ್ನು ವಿತರಿಸುವಾಗ ರಿಜಿಸ್ಟ್ರೇಷನ್ ನಂಬರ್, ಇನ್ಶೂರೆನ್ಸ್ ಹಾಗೂ ಇನ್ನಿತರ ಸಂಬಂಧಪಟ್ಟ ದಾಖಲೆಗಳನ್ನು ವಾಹನದ ಮಾಲೀಕರಿಗೆ ಡೀಲರ್ ನೀಡಬೇಕು. ಈ ಕಾನೂನನ್ನು ಹೊಸದಾಗಿ ಜಾರಿಗೊಳಿಸಿಲ್ಲ. ಈ ನಿಯಮವು ಬಹಳಷ್ಟು ವರ್ಷಗಳಿಂದ ಜಾರಿಯಲ್ಲಿದೆ.

ಹೊಸ ಸ್ಕೂಟರಿಗೆ ನಂಬರ್ ಪ್ಲೇಟ್ ನೀಡದ ಡೀಲರ್‍‍ಗೆ ಬಿತ್ತು ಭಾರೀ ದಂಡ..!

ಆದರೆ ಹೊಸ ಕಾಯ್ದೆಯನ್ನು ಜಾರಿಗೊಳಿಸಿದ ನಂತರ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಸ್ಕೂಟರ್ ಮಾಲೀಕರಿಗೆ ಈ ಸ್ಕೂಟರ್ ಅನ್ನು ಹೇಗೆ ವಾಪಸ್ ನೀಡಲಾಗುವುದು. ಮಾಲೀಕರ ಮೇಲೆ ದಂಡ ವಿಧಿಸಲಾಗುವುದೇ ಎಂಬುದು ತಿಳಿದು ಬಂದಿಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೊಸ ಸ್ಕೂಟರಿಗೆ ನಂಬರ್ ಪ್ಲೇಟ್ ನೀಡದ ಡೀಲರ್‍‍ಗೆ ಬಿತ್ತು ಭಾರೀ ದಂಡ..!

ಭಾರತದಲ್ಲಿರುವ ಬಹುತೇಕ ಡೀಲರ್‍‍ಗಳು ಹೊಸ ವಾಹನಗಳ ಮೇಲೆ ಟ್ರೇಡ್ ಸರ್ಟಿಫಿಕೇಟ್‍‍ಗಳನ್ನು ಅಂಟಿಸಿಕೊಳ್ಳುತ್ತಾರೆ. ಈ ಸರ್ಟಿಫಿಕೇಟ್‍‍ಗಳನ್ನು ಡೀಲರ್‍‍ಗಳು ತಮ್ಮ ಆಂತರಿಕ ಕೆಲಸಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು. ಸ್ಟಾಕ್ ಯಾರ್ಡ್‍‍ನಿಂದ ಶೋರೂಂಗಳಿಗೆ ವಾಹನಗಳನ್ನು ಸಾಗಿಸುವ ಸಂದರ್ಭಗಳಲ್ಲಿ ಈ ಟ್ರೇಡ್ ಸರ್ಟಿಫಿಕೇಟ್‍‍ಗಳನ್ನು ಬಳಸಿಕೊಳ್ಳಬಹುದು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಹೊಸ ಸ್ಕೂಟರಿಗೆ ನಂಬರ್ ಪ್ಲೇಟ್ ನೀಡದ ಡೀಲರ್‍‍ಗೆ ಬಿತ್ತು ಭಾರೀ ದಂಡ..!

ವಾಹನವನ್ನು ಮಾರಾಟ ಮಾಡಿದ ನಂತರ ಆ ವಾಹನವು ತಾತ್ಕಾಲಿಕವಾದ ಅಥವಾ ಶಾಶ್ವತವಾದ ನಂಬರ್ ಪ್ಲೇಟ್‍ ಹೊಂದಿರಬೇಕಾಗುತ್ತದೆ. ಭಾರತದಲ್ಲಿರುವ ಬಹುತೇಕ ರಾಜ್ಯಗಳ ಡೀಲರ್‍‍‍ಗಳು ವಾಹನ ಮಾರಾಟದ ಸಮಯದಲ್ಲಿ ಅಥವಾ ಮಾರಾಟವಾದ ಕೆಲ ದಿನಗಳಲ್ಲಿ ರಿಜಿಸ್ಟ್ರೇಷನ್ ನಂಬರ್ ಪಡೆಯುತ್ತಾರೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಹೊಸ ಸ್ಕೂಟರಿಗೆ ನಂಬರ್ ಪ್ಲೇಟ್ ನೀಡದ ಡೀಲರ್‍‍ಗೆ ಬಿತ್ತು ಭಾರೀ ದಂಡ..!

ದೆಹಲ್ಲಿಯಲ್ಲಿರುವ ಡೀಲರ್‍‍ಗಳು ಆನ್‍‍ಲೈನ್‍‍ನಲ್ಲಿಯೇ ಶಾಶ್ವತವಾದ ರಿಜಿಸ್ಟ್ರೇಷನ್ ನಂಬರ್ ಪಡೆಯುತ್ತಾರೆ. ಒಡಿಶಾ ಸೇರಿದಂತೆ ಹಲವು ರಾಜ್ಯಗಳು ಹೊಸ ಮೋಟಾರು ವಾಹನ ಕಾಯ್ದೆಯನ್ನು ಅನುಷ್ಟಾನಗೊಳಿಸಿವೆ.

ಹೊಸ ಸ್ಕೂಟರಿಗೆ ನಂಬರ್ ಪ್ಲೇಟ್ ನೀಡದ ಡೀಲರ್‍‍ಗೆ ಬಿತ್ತು ಭಾರೀ ದಂಡ..!

ಗುಜರಾತ್‍‍ನಂತಹ ರಾಜ್ಯಗಳು ದಂಡದ ಮೊತ್ತವನ್ನು ಇಳಿಸಿವೆ. ಟ್ರಿಪಲ್ ರೈಡಿಂಗ್ ಹಾಗೂ ಹೆಲ್ಮೆಟ್ ಧರಿಸದ ಹಿಂಬದಿಯ ಸವಾರರಿಗೆ ವಿಧಿಸಲಾಗುವ ದಂಡವನ್ನು ತೆಗೆದು ಹಾಕಿವೆ. ವಾಹನ ಸವಾರರಿಗೆ ಹೊಸ ಕಾಯ್ದೆಗೆ ಹೊಂದಿಕೊಳ್ಳುವ ಕಾರಣಕ್ಕೆ ಒಡಿಶಾ ಸರ್ಕಾರವು ಕಾಲಾವಕಾಶವನ್ನು ನೀಡಿತ್ತು.

ಹೊಸ ಸ್ಕೂಟರಿಗೆ ನಂಬರ್ ಪ್ಲೇಟ್ ನೀಡದ ಡೀಲರ್‍‍ಗೆ ಬಿತ್ತು ಭಾರೀ ದಂಡ..!

ಒಡಿಶಾದಲ್ಲಿ ಇದುವರೆಗೂ ಸಂಚಾರಿ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಹೊಸ ಕಾಯ್ದೆಯನ್ವಯ ಒಂದು ಕೋಟಿ ರೂಪಾಯಿಗಳವರೆಗೂ ದಂಡ ವಿಧಿಸಿದ್ದಾರೆ.

Source: News 18 Virals

Most Read Articles

Kannada
English summary
Brand-new Honda Activa seized; Issued a fine of massive Rs 1 lakh - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X