ಹೊಸ ಬದಲಾವಣೆಗಳೊಂದಿಗೆ 2019ರ ಹೋಂಡಾ ಗ್ರಾಜಿಯಾ ಬಿಡುಗಡೆ

ಹೋಂಡಾ ದ್ವಿಚಕ್ರ ವಾಹನ ವಿಭಾಗವು ತನ್ನ ಜನಪ್ರಿಯ ಗ್ರಾಜಿಝಾ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಟಾಪ್ ವೆರಿಯೆಂಟ್‌ನಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಇದರ ಹೊರತವಾಗಿ ಹಳೆಯ ಸೌಲಭ್ಯಗಳನ್ನೇ ಮುಂದುವರಿಸಿರುವ ಹೋಂಡಾ ಸಂಸ್ಥೆಯು ಹೊಸ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.64,668 ಬೆಲೆ ನಿಗದಿಗೊಳಿಸಿದೆ.

ಹೊಸ ಬದಲಾವಣೆಗಳೊಂದಿಗೆ 2019ರ ಹೋಂಡಾ ಗ್ರಾಜಿಯಾ ಬಿಡುಗಡೆ

ಹೋಂಡಾ ನಿರ್ಮಾಣದ ಸ್ಕೂಟರ್ ಮಾದರಿಗಳಲ್ಲಿ ಆಕ್ಟಿವಾ ನಂತರ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುವ ಗ್ರಾಜಿಯಾ ಸ್ಕೂಟರ್ ಮಾದರಿಯು ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಮಾರಾಟವಾಗಿದ್ದು, 2019ರ ಅವಧಿಯಲ್ಲೂ 125 ಸಿಸಿ ವಿಭಾಗದಲ್ಲಿರುವ ಹಲವು ಸ್ಕೂಟರ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ಭರವಸೆಯಲ್ಲಿದೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಗ್ರಾಜಿಯಾ ಉತ್ಪಾದನೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಗ್ರಾಜಿಝಾ ಮಾರಾಟಕ್ಕಿದೆ.

ಹೊಸ ಬದಲಾವಣೆಗಳೊಂದಿಗೆ 2019ರ ಹೋಂಡಾ ಗ್ರಾಜಿಯಾ ಬಿಡುಗಡೆ

ಗ್ರಾಜಿಯಾ ಸ್ಕೂಟರ್ ಮಾದರಿಯಲ್ಲಿ ಡಿಎಕ್ಸ್ ವೆರಿಯೆಂಟ್ ಮಾದರಿಯು ಟಾಪ್ ಎಂಡ್ ಆವೃತ್ತಿಯಾಗಿ ಮಾರಾಟವಾಗುತ್ತಿದ್ದು, ಇದರಲ್ಲಿ ಮಾತ್ರವೇ ಕೆಲವು ಬದಲಾವಣೆ ತರಲಾಗಿದೆ. 2019ರ ಆವೃತ್ತಿಯಲ್ಲಿ ಪರ್ಲ್ ಶಿರೆನ್ ಬ್ಲ್ಯೂ ಎನ್ನುವ ಹೊಸ ಬಣ್ಣದ ಆಯ್ಕೆ ನೀಡಲಾಗಿದ್ದು, ಸುಧಾರಿತ ಇನ್‌ಸ್ಟ್ರಮೆಂಟ್ ಕ್ಲಸ್ಟರ್ ಸೇರಿದಂತೆ ಕೆಲವು ಡಿಸೈನ್‌ಗಳಲ್ಲಿ ಬದಲಾವಣೆ ತರಲಾಗಿದೆ.

ಹೊಸ ಬದಲಾವಣೆಗಳೊಂದಿಗೆ 2019ರ ಹೋಂಡಾ ಗ್ರಾಜಿಯಾ ಬಿಡುಗಡೆ

ಇದರ ಹೊರತಾಗಿ ಇನ್ನುಳಿದ ಕೆಳದರ್ಜೆಯ ಎರಡು ವೆರಿಯೆಂಟ್‌ಗಳಲ್ಲಿ ಯಾವುದೇ ಬದಲಾವಣೆ ತರದ ಹೋಂಡಾ ಸಂಸ್ಥೆಯು ಈ ಹಿಂದಿನ ತಾಂತ್ರಿಕ ಸೌಲಭ್ಯಗಳನ್ನೇ ಮುಂದುವರಿಸಿದ್ದು, ಬೆಲೆಯಲ್ಲೂ ಯಾವುದೇ ಬದಲಾವಣೆ ತರದೆ ಈ ಹಿಂದೆ ಇದ್ದ ರೂ.60,296(ಡ್ರಮ್ ಬ್ರೇಕ್) ಮತ್ತು ರೂ.62,227(ಡ್ರಮ್ ಅಲಾಯ್) ದರ ಪಟ್ಟಿಯೇ ಹೊಸ ಸ್ಕೂಟರ್‌ಗಳಿಗೂ ಅನ್ವಯವಾಗುತ್ತೆ.

ಹೊಸ ಬದಲಾವಣೆಗಳೊಂದಿಗೆ 2019ರ ಹೋಂಡಾ ಗ್ರಾಜಿಯಾ ಬಿಡುಗಡೆ

ಇನ್ನು ಗ್ರಾಜಿಯಾ ಡಿಎಕ್ಸ್ ಟಾಪ್ ಎಂಡ್ ವೆರಿಯೆಂಟ್‌ನಲ್ಲಿ ಡಿಸ್ಕ್ ಬ್ರೇಕ್ ಮತ್ತು ಸಿಬಿಯು(ಕಾಂಬಿ ಬ್ರೇಕಿಂಗ್ ಸಿಸ್ಟಂ) ಸೌಲಭ್ಯವಿದ್ದು, 124.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 8.5-ಬಿಎಚ್‌ಪಿ ಮತ್ತು 10.5 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಹೊಸ ಬದಲಾವಣೆಗಳೊಂದಿಗೆ 2019ರ ಹೋಂಡಾ ಗ್ರಾಜಿಯಾ ಬಿಡುಗಡೆ

ಹಾಗೆಯೇ ಗ್ರಾಜಿಯಾ ಸ್ಕೂಟರ್ ಹೋಂಡಾ ಸ್ಕೂಟರ್ ಮಾದರಿಗಳಲ್ಲೇ ವಿಭಿನ್ನವಾಗಿದ್ದು, 1,812 ಎಂಎಂ ಉದ್ದ, 697ಎಂಎಂ ಅಗಲ, 1,146 ಎಂಎಂ ಎತ್ತರ, 1,260 ಲಾಂಗ್ ವೀಲ್ಹ್ ಬೇಸ್, 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಜೊತೆಗೆ 5.3 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಜೋಡಣೆ ಮಾಡಲಾಗಿದ್ದು, 12 ಇಂಚಿನ ಅಲಾಯ್ ವೀಲ್ಹ್, ಮುಂಭಾಗದ ಚಕ್ರದಲ್ಲಿ 190 ಎಂಎಂ ಗಾತ್ರದ ಡಿಸ್ಕ್ ಬ್ರೇಕ್ ಪಡೆದುಕೊಂಡಿರುವುದು ಡಿಯೋ ಸ್ಕೂಟರ್‌ಗಿಂತಲೂ ಉತ್ತಮ ಎನ್ನಬಹುದಾಗಿದೆ.

Most Read Articles

Kannada
English summary
2019 Honda Grazia Launched In India — Priced At Rs 64,668. Read in Kannada.
Story first published: Monday, March 11, 2019, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X