ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಬಿ‍ಎಸ್6 ಹೋಂಡಾ ಆಕ್ಟಿವಾ 125

ಹೋಂಡಾ ಕಂಪನಿಯು, ತನ್ನ ಹೊಸ ಬಿ‍ಎಸ್ 6 ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಬಿಡುಗಡೆಯಾದ ನಂತರ ಬಿ‍ಎಸ್6 ಎಂಜಿನ್ ಹೊಂದಿರುವ ಭಾರತದ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಹೋಂಡಾ ಕಂಪನಿಯು ಈ ಹೊಸ ಸ್ಕೂಟರ್ ಅನ್ನು ಸೆಪ್ಟೆಂಬರ್ 11ರಂದು ಬಿಡುಗಡೆಗೊಳಿಸಲಿದೆ.

ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಬಿ‍ಎಸ್6 ಹೋಂಡಾ ಆಕ್ಟಿವಾ 125

ಆಕ್ಟಿವಾ ಸ್ಕೂಟರ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಹಾಗೂ ಹೆಚ್ಚು ಜನಪ್ರಿಯವಾಗಿರುವ ಸ್ಕೂಟರ್ ಆಗಿದೆ. ಈ ಹೊಸ ಸ್ಕೂಟರ್ ಹಲವಾರು ಹೊಸ ಫೀಚರ್‍‍ಗಳ ಜೊತೆಗೆ, ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಹೊಂದಿದೆ. ಹೊಸ ಸ್ಕೂಟರ್‍‍ನಲ್ಲಿಯೂ ಸಹ 125 ಸಿಸಿ ಸಾಮರ್ಥ್ಯದ ಎಂಜಿನ್ ಅಳವಡಿಸಲಾಗಿದ್ದರೂ, ಈ ಎಂಜಿನ್ ಅನ್ನು ಕಂಪನಿಯ ಹೊಸ ತಂತ್ರಜ್ಞಾನಗಳೊಂದಿಗೆ ಒವರ್‍‍ಹಾಲ್ ಮಾಡಲಾಗಿದೆ.

ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಬಿ‍ಎಸ್6 ಹೋಂಡಾ ಆಕ್ಟಿವಾ 125

ಹೊಸ ಎಂಜಿನ್ ಹೋಂಡಾದ ಸ್ಮಾರ್ಟ್ ಪವರ್ ಟೆಕ್ನಾಲಜಿಯೊಂದಿಗೆ (ಇಎಸ್‍‍ಪಿ) ಪ್ರೊಗ್ರಾಮೆಬಲ್ ಫ್ಯೂಯಲ್ ಇಂಜೆಕ್ಷನ್ (ಪಿಜಿಎಂ-ಫೈ) ಅನ್ನು ಹೊಂದಿದೆ. ಹಳೆಯ ಮಾದರಿಗೆ ಹೋಲಿಸಿದರೆ ಉತ್ತಮ ಫ್ಯೂಯಲ್ ಎಫಿಶಿಯನ್ಸಿಯಿಂದಾಗಿ ಉತ್ಪಾದನೆಯಾಗುವ ಪವರ್ ಅನ್ನು ಉತ್ತಮಗೊಳಿಸಲು ಹೊಸ ಎಂಜಿನ್ ಅಳವಡಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಬಿ‍ಎಸ್6 ಹೋಂಡಾ ಆಕ್ಟಿವಾ 125

ಹೊಸ ಆಕ್ಟಿವಾ 125 ಸ್ಕೂಟರಿನ ಹೊರಭಾಗವು ಮರುವಿನ್ಯಾಸಗೊಳಿಸಲಾದ ಹೊಸ ಹೆಡ್ ಲ್ಯಾಂಪ್ ಹಾಗೂ ವೈಸರ್ ಯುನಿಟ್ ಸೇರಿದಂತೆ ಸಣ್ಣ ಪುಟ್ಟ ಬದಲಾವಣೆಗಳನ್ನು ಹೊಂದಿದೆ. ಸ್ಕೂಟರ್ ಹೊರಗೆ ಟೇಲ್ ಲ್ಯಾಂಪ್‌, ಸೈಡ್ ಪ್ಯಾನೆಲ್‌ ಹಾಗೂ ಸ್ಕೂಟರ್‌ನ ಏಪ್ರನ್‌ನಲ್ಲಿರುವ ಕ್ರೋಮ್ ಅಸೆಂಟ್‍‍ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಬಿ‍ಎಸ್6 ಹೋಂಡಾ ಆಕ್ಟಿವಾ 125

ಹೊಸ ಹೋಂಡಾ ಆಕ್ಟಿವಾ 125 ಅನ್ನು, 26 ಹೊಸ ಪೇಟೆಂಟ್ ಅರ್ಜಿ ಸಲ್ಲಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೋಂಡಾ ಕಂಪನಿ ಹೇಳಿಕೊಂಡಿದೆ. ಹೊಸ ಸ್ಕೂಟರ್ ಈ ಸೆಗ್‍‍ಮೆಂಟಿನಲ್ಲಿಯೇ ಮೊದಲ ಬಾರಿಗೆ ಹಲವು ಫೀಚರ್‍‍ಗಳನ್ನು ನೀಡುತ್ತಿದೆ.

ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಬಿ‍ಎಸ್6 ಹೋಂಡಾ ಆಕ್ಟಿವಾ 125

ಹಿಂದಿನ ಮಾದರಿಗಳಲ್ಲಿ ಬಳಸುವ ಸಾಂಪ್ರದಾಯಿಕ ಸ್ಟೇಟರ್ ಬದಲಿಗೆ ಈ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಲು ಎಸಿ ಆಲ್ಟರ್‍‍ನೇಟರ್ ಅಳವಡಿಸಲಾಗಿದೆ. ಈ ಸ್ಕೂಟರ್‍‍ನಲ್ಲಿ ಅಳವಡಿಸಲಾಗಿರುವ ಆಟೋ ಸ್ಟಾರ್ಟ್ ಸ್ಟಾಪ್ ಸಿಸ್ಟಂನಿಂದಾಗಿ ಇಂಧನ ಕ್ಷಮತೆ ಹೆಚ್ಚಲಿದೆ.

ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಬಿ‍ಎಸ್6 ಹೋಂಡಾ ಆಕ್ಟಿವಾ 125

ಎಕ್ಸ್ ಟರ್ನಲ್ ಫ್ಯೂಯಲ್ ಪಿಲ್ಲರ್ ಕ್ಯಾಪ್, ಪಾಸ್ ಲೈಟ್ ಹಾಗೂ ಫ್ರಂಟ್ ಗ್ಲೋವ್ ಬಾಕ್ಸ್ ಸ್ಕೂಟರ್‌ನಲ್ಲಿರುವ ಇತರ ಫೀಚರ್‍‍ಗಳಾಗಿವೆ. ಹೊಸ ಆಕ್ಟಿವಾ 125 ಬಿಎಸ್6 ಸ್ಕೂಟರ್ ಡಿಜಿಟಲ್ ಅನಲಾಗ್ ಕಾಂಬಿನೇಶನ್‍‍ನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಬಿ‍ಎಸ್6 ಹೋಂಡಾ ಆಕ್ಟಿವಾ 125

ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ ಇಸಿಯುಯಿಂದಾಗಿ ಸ್ಕೂಟರ್ ಸವಾರರು, ಸ್ಕೂಟರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿರುವ ಡಿಸ್‍‍ಪ್ಲೇನಲ್ಲಿ ರಿಯಲ್ ಟೈಂ ಫ್ಯೂಯಲ್ ಎಫಿಶಿಯನ್ಸಿ ಹಾಗೂ ಡಿಸ್ಟೆನ್ಸ್ ಟು ಎಂಟಿಗಳ ಬಗ್ಗೆ ಮಾಹಿತಿ ಪಡೆಯಬಹುದು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಬಿ‍ಎಸ್6 ಹೋಂಡಾ ಆಕ್ಟಿವಾ 125

ಆಕ್ಟಿವಾ ಬಿಎಸ್6 125 ಮಾರುಕಟ್ಟೆಯಲ್ಲಿರುವ ಸ್ಕೂಟರಿಗಿಂತ 36 ಎಂಎಂ ಉದ್ದ, 3 ಎಂಎಂ ಅಗಲ ಹಾಗೂ 19 ಎಂಎಂ ಎತ್ತರವಾಗಿದೆ. ಹೊಸ ಸ್ಕೂಟರ್ ಅನ್ನು ಕಪ್ಪು, ರೆಬೆಲ್ ರೆಡ್ ಮೆಟಾಲಿಕ್, ಮೆಜೆಸ್ಟಿಕ್ ಬ್ರೌನ್ ಮೆಟಾಲಿಕ್, ಹೆವಿ ಗ್ರೇ ಮೆಟಾಲಿಕ್, ಪರ್ಲ್ ಪ್ರೆಷಿಯಸ್ ವೈಟ್ ಹಾಗೂ ಮಿಡ್ ನೈಟ್ ಬ್ಲೂ ಮೆಟಾಲಿಕ್ ಎಂಬ ಆರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

MOST READ: ಪೆಟ್ರೋಲ್ ಬಂಕ್‍‍ನಿಂದ ಹೊರಡುವ ಮುನ್ನ ಎಚ್ಚರ..!

ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಬಿ‍ಎಸ್6 ಹೋಂಡಾ ಆಕ್ಟಿವಾ 125

ಹೊಸ ಆಕ್ಟಿವಾ 125 ಬಿಎಸ್6 ಮಾದರಿಯನ್ನು ಕಳೆದ ಜೂನ್‌ನಲ್ಲಿ ಅನಾವರಣಗೊಳಿಸಲಾಯಿತು. ಹೊಸ ಸ್ಕೂಟರ್‌ನ ಬೆಲೆಗಳು 10% ನಿಂದ 15%ರಷ್ಟು ಹೆಚ್ಚಾಗಲಿವೆ ಎಂದು ಹೋಂಡಾ ಹೇಳಿದೆ. ಬಿಎಸ್ 6 ಆಕ್ಟಿವಾ 125 ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.70,000ಗಳಾಗಬಹುದು. ಮಾರುಕಟ್ಟೆಯಲ್ಲಿರುವ ಹೋಂಡಾ ಆಕ್ಟಿವಾದ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.62,591ಗಳಾಗಿದೆ.

ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಬಿ‍ಎಸ್6 ಹೋಂಡಾ ಆಕ್ಟಿವಾ 125

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಆಕ್ಟಿವಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಸ್ಕೂಟರ್‍‍ನಲ್ಲಿರುವ ಸರಳವಾದ ವಿನ್ಯಾಸ ಹಾಗೂ ಹೋಂಡಾದ ವಿಶ್ವಾಸಾರ್ಹತೆಯಿಂದಾಗಿ ಹೆಚ್ಚು ಜನಪ್ರಿಯವಾಗಿದೆ. ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹಾಗೂ ಆಟೋ ಸ್ಟಾರ್ಟ್ ಸಿಸ್ಟಂನಂತಹ ಹೊಸದಾಗಿ ಅಳವಡಿಸಲಾಗಿರುವ ಫೀಚರ್‍‍ಗಳ ಕಾರಣಕ್ಕೆ ಈ ಸ್ಕೂಟರ್ ಇನ್ನಷ್ಟು ಜನಪ್ರಿಯವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Honda Activa 125 BS-VI Variant India Launch Confirmed For 11th September - Read in kannada
Story first published: Monday, September 9, 2019, 15:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X