ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಸ್ಕೂಟರ್ ಮಾರಾಟದಲ್ಲಿ ಸದ್ಯ ನಂ.1 ಸ್ಥಾನದಲ್ಲಿರುವ ಹೋಂಡಾ ಆಕ್ಟಿವಾ 5ಜಿ ಮಾದರಿಯು ಶೇ. 52 ರಷ್ಟು ಮಾರಾಟ ಪಾಲನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಗ್ರಾಹಕರ ಆಕರ್ಷಣೆಗಾಗಿ ಮತ್ತೊಂದು ಸ್ಪೆಷಲ್ ಎಡಿಷನ್ ಆಕ್ಟಿವಾ 5ಜಿ ಮಾದರಿಯನ್ನು ಪರಿಚಯಿಸಲಾಗುತ್ತಿದೆ.

ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಹೋಂಡಾ ಸಂಸ್ಥೆಯ ಜನಪ್ರಿಯ ಆಕ್ಟಿವಾ 5ಜಿ ಮಾದರಿಗಳಿಗೆ ಭಾರೀ ಬೇಡಿಕೆಯಿದ್ದು, ಪ್ರತಿ ತಿಂಗಳು ಸರಾಸರಿಯಾಗಿ 2.50 ಲಕ್ಷ ಯುನಿಟ್‌ಗಳು ಮಾರಾಟವಾಗುತ್ತಿವೆ. ಹೀಗಿರುವಾಗ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಹೋಂಡಾ ಸಂಸ್ಥೆಯು ಸೀಮಿತ ಅವಧಿಗಾಗಿ ಆಕ್ಟಿವಾ 5ಜಿ ಮಾದರಿಯಲ್ಲಿ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡುತ್ತಿದೆ.

ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಆಕ್ಟಿವಾ 5ಜಿ ಸ್ಪೆಷನ್ ಮಾದರಿಯು ಈಗಾಗಲೇ ದೇಶದ ಪ್ರಮುಖ ಹೋಂಡಾ ದ್ವಿಚಕ್ರ ವಾಹನ ಡೀಲರ್ಸ್‌ಗಳನ್ನು ತಲುಪಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ಸ್ಪೆಷಲ್ ಎಡಿಷನ್ ಮಾದರಿಯು ಡ್ಯಯಲ್ ಕಲರ್ ಆಯ್ಕೆಯನ್ನು ಹೊರತುಪಡಿಸಿ ಈ ಹಿಂದಿನಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಸಿಲ್ಪರ್/ಬ್ಲ್ಯಾಕ್ ಮತ್ತು ಪರ್ಲ್ ವೈಟ್/ಗೋಲ್ಡ್ ಬಣ್ಣಗಳಲ್ಲಿ ಸ್ಪೆಷಲ್ ಎಡಿಷನ್ ಮಿಂಚಲಿವೆ.

ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಜೊತೆಗೆ ಸ್ಪೆಷಲ್ ಎಡಿಷನ್ ಸ್ಕೂಟರ್ ಮೇಲೆ ಲಿಮಿಟೆಡ್ ಎಡಿಷನ್ ಬ್ಯಾಡ್ಜ್ ಹಾಕಲಾಗಿದ್ದು, ಕಪ್ಪು ಬಣ್ಣದ ವೀಲ್ಹ್‌ಗಳನ್ನು ಹೊಸ ಸ್ಕೂಟರ್‌ಗಳಲ್ಲಿ ನೋಡಬಹುದಾಗಿದ್ದು, ಸ್ಪೆಷಲ್ ಎಡಿಷನ್ ಸ್ಕೂಟರ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.55,032(ಎಸ್‌ಟಿಡಿ ವೆರಿಯೆಂಟ್) ಮತ್ತು ಟಾಪ್ ಎಂಡ್ ಮಾದರಿಗೆ ರೂ.56,897(ಡಿಎಲ್ಎಕ್ಸ್ ವೆರಿಯೆಂಟ್)ಕ್ಕೆ ಲಭ್ಯವಿರಲಿವೆ.

ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಸದ್ಯ ಮಾರುಕಟ್ಟೆಯಲ್ಲಿ ಸಾಮಾನ್ಯ ಆಕ್ಟಿವಾ 5ಜಿ ಮಾದರಿಗಿಂತ ಕೇವಲ ರೂ.400 ಹೆಚ್ಚುವರಿ ಬೆಲೆ ಹೊಂದಿರುವ ಸ್ಪೆಷಲ್ ಎಡಿಷನ್ ಆಕ್ಟಿವಾ 5ಜಿ ಮಾದರಿಯು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿರುವುದು ಭಾರೀ ಪ್ರಮಾಣದಲ್ಲಿ ಮಾರಾಟವಾಗುವ ನೀರಿಕ್ಷೆಯಿದೆ.

ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಇದರ ಹೊರತವಾಗಿ ಸ್ಪೆಷಲ್ ಎಡಿಷನ್ ಮಾದರಿಯು ಈ ಹಿಂದಿನಂತೆಯೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರಲಿದ್ದು, ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಪಡೆದುಕೊಳ್ಳುತ್ತಿರುವ ಸುಜುಕಿ ಅಕ್ಸೆಸ್, ಟಿವಿಎಸ್ ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳಿಗೆ ಮತ್ತಷ್ಟು ಟಕ್ಕರ್ ನೀಡಲಿದೆ.

ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಎಂಜಿನ್ ಸಾಮರ್ಥ್ಯ

ಆಕ್ಟಿವಾ 4ಜಿ ಸ್ಕೂಟರ್‌ಗಳಿಂದಲೇ ಎರವಲು ಪಡೆಯಲಾಗಿರುವ 109.19 ಸಿಸಿ ಎಂಜಿನ್ ಹೊಂದಿರುವ ಆಕ್ಟಿವಾ 5ಜಿ ಆವೃತ್ತಿಗಳು, 8-ಬಿಎಚ್‌ಪಿ, 9-ಎನ್ಎಂ ಟಾರ್ಕ್ ಉತ್ಪಾದನಾ ಶೈಲಿಯನ್ನು ಹೊಂದಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಜೊತೆಗೆ 5.3 ಲೀಟರ್ ಇಂಧನ ಟ್ಯಾಂಕ್, 130 ಎಂಎಂ ಡ್ರಮ್ ಬ್ರೇಕ್, ಕೊಂಬಿ ಬ್ರೇಕ್ ಸಿಸ್ಟಂ, ನ್ಯೂ ಕ್ರೋಮ್ ಹೈಲೆಟ್ಸ್, ಮೆಟಲ್ ಮಫ್ಲರ್ ಪ್ರೋಜೆಕ್ಟರ್ ಮತ್ತು ಸಾಂಪ್ರದಾಯಿಕ ಬಣ್ಣಗಳೊಂದಿಗೆ ಹೊಸ ರೂಪದಲ್ಲಿ ಅಭಿವೃದ್ಧಿಪಡಿಸಲಾದ ಎರಡು ಪ್ರಮುಖ ಬಣ್ಣಗಳಲ್ಲಿ ಲಭ್ಯವಿರಲಿದೆ.

ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಸದ್ಯ ಲಭ್ಯವಿರುವ ಬಣ್ಣಗಳು

6 ಬಣ್ಣಗಳ ಜೊತೆ ಜೊತೆಗೆ ಹೊಸದಾಗಿ ಸಿದ್ದಪಡಿಸಿರುವ ಡ್ಯಾಜೆಲ್ ಯೆಲ್ಲೋ ಮೆಟಾಲಿಕ್ ಮತ್ತು ಪರ್ಲ್ ಸ್ಪ್ಯಾರ್ಟನ್ ರೆಡ್‌ನಲ್ಲೂ ಆಕ್ಟಿವಾ 5ಜಿ ಸಾಮಾನ್ಯ ಆವೃತ್ತಿಯನ್ನು ಕೂಡಾ ಖರೀದಿ ಮಾಡಬಹುದಾಗಿದೆ.

MOST READ: ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಸ್ಕೂಟರ್ ವೈಶಿಷ್ಟ್ಯತೆಗಳು

ಹೊಸ ಎಲ್ಇಡಿ ಹೆಡ್‍ಲೈಟ್‍ಗಳನ್ನು ಹೊರತುಪಡಿಸಿ ಆಕ್ಟಿವಾ 5ಜಿ ಸ್ಕೂಟರಿನಲ್ಲಿ ಅನುಕೂಲಕರ 4 ಇನ್ 1 ಲಾಕ್ ಸಿಸ್ಟಂ ಹೊಂದಿದ್ದು, ಇದರಲ್ಲಿ ಸೀಟ್-ರಿಲೀಸ್ ಬಟನ್, ಇಗ್ನೀಷನ್ ಮತ್ತು ಇನ್ನಿತರೆ ಅನುಕೂಲತೆಗಳನ್ನು ಪಡೆದಿದೆ. ಇನ್ನು ಆಕ್ಟಿವಾ 4ಜಿ ಸ್ಕೂಟರ್‍‍ನಲ್ಲಿ ಇರುವ ಹಾಗೆಯೇ 5ಜಿ ಸ್ಕೂಟರ್‌ನಲ್ಲೂ ಕೂಡಾ ಚಾರ್ಜಿಂಗ್ ಸಾಕೆಟ್ ಅನ್ನು ಇರಿಸಲಾಗಿದೆ.

ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಈ ಸ್ಕೂಟರಿನಲ್ಲಿ ಇನ್ಸ್ಟ್ರೂಮೆಂಟ್ ಕಂಸೋಲ್ ಅನ್ನು ಪುನರಾವರ್ತಿಸಿದ್ದು, ಸೆಮಿ-ಡಿಜಿಟಲ್ ಆಯ್ಕೆಯನ್ನು ಪಡೆದಿದೆ. ಇನ್ನು ಇದರಲ್ಲಿ ಚಾಲಕರು ಸರ್ವಿಸ್ ಇಂಟರ್‍‍ವಲ್ ಮತ್ತು ಇಕೊ ಸ್ಪೀಡ್ ಇಂಡಿಕೇಟರ್ ಹೊಸದಾಗಿ ಕಾಣಬಹುದಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 60 ಕಿ.ಮಿ ಮೈಲೇಜ್ ಸಾಮರ್ಥ್ಯದೊಂದಿಗೆ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದೆ.

Image courtesy: Facebook

Most Read Articles

Kannada
English summary
Honda Activa 5G Limited Edition Arrives At Dealerships — Launch Expected Soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X