ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೋಂಡಾ ಆಕ್ಟೀವಾ 6ಜಿ

ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡು ಅತ್ತ ವ್ಯಾಪರಕ್ಕಾಗಿ ಇತ್ತ ಸ್ವಂತ ಬಳಕೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವ ಹೋಂಡಾ ಆಕ್ಟೀವಾ ಇದೀಗ ಹೊಸ ಅವತಾರದಲ್ಲಿ ಮತ್ತು ಇನ್ನಷ್ಟು ವಿನೂತನ ವೈಶಿಷ್ಟ್ಯತೆಗಳೊಂದಿಗೆ ನಮ್ಮ ಮುಂದೆ ಬರಲು ಸಜ್ಜಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೋಂಡಾ ಆಕ್ಟೀವಾ 6ಜಿ

ಹೌದು, ಹೋಂಡಾ ಸಂಸ್ಥೆಯು ತಮ್ಮ ಆಕ್ಟೀವಾ 6ಜಿ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸುವುದಾಗಿ ಹೇಳಿಕೊಂಡಿತ್ತು. ಇದೇ ಮೊದಲ ಬಾರಿಗೆ ಹೋಂಡಾ ಸಂಸ್ಥೆಯ ಆಕ್ಟಿವಾ 6ಜಿ ಸ್ಕೂಟರ್ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಮೊದಲೇ ಹೇಳಿರುವ ಹಾಗೆ ಮತ್ತೆ ಸ್ಕೂಟರ್ ಮಾರಾಟದಲ್ಲಿ ಅಗ್ರ ಸ್ಥಾನವನ್ನು ಪಡೆಯಲು ಸಿದ್ಧಗೊಳ್ಳುತ್ತಿದೆ. ಈ ಸ್ಕೂಟರ್‍‍ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂದು ತಿಳಿಯಲು ಮುಂದಕ್ಕೆ ಓದಿರಿ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೋಂಡಾ ಆಕ್ಟೀವಾ 6ಜಿ

2019ರ ಹೋಂಡಾ ಆಕ್ಟಿವಾ 6ಜಿ ಇದೇ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಈ ಪೋಸ್ಟ್ನಲ್ಲಿ ರಹಸ್ಯ ಚಿತ್ರಗಳನ್ನು ಪುಣೆ ಸಮೀಪದ ಎಎಆರ್‍‍ಐ ಯಲ್ಲಿ ಶಾನಕ್ ಸರ್ಪೋಡ್ದಾರ್ ಅವರು ಕ್ಲಿಕ್ ಮಾಡಲಾಗಿದೆ. ಉತ್ಪಾದನೆಯ ಉದ್ದೇಶದಿಂದ ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ARAI ಸೌಲಭ್ಯವನ್ನು ತಲುಪಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೋಂಡಾ ಆಕ್ಟೀವಾ 6ಜಿ

ಹೋಂಡಾ ಆಕ್ಟೀವಾ 6ಜಿ ಸ್ಕೂಟರ್‍‍‍ನಲ್ಲಿ ಈ ಬಾರಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಅನ್ನು ನೀಡಲಾಗಿದ್ದು, ಈ ಅಪ್ಡೇಟ್ ಅನ್ನು ಆಕ್ಟೀವಾ ಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದರು ಎಂದರೆ ತಪ್ಪಾಗುವುದಿಲ್ಲ. ಈ ಅಪ್ಡೇಟ್ ಕಳಪೆ ರಸ್ತೆಯಲ್ಲಿ ಹಾಗು ಬ್ರೇಕಿಂಗ್ ಸಿಸ್ಟಂಗಾಗಿ ಉತ್ತಮವೆಂದು ಹೇಳಬಹುದು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೋಂಡಾ ಆಕ್ಟೀವಾ 6ಜಿ

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಸ್ಕೂಟರ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ ಸಿಕ್ಕ ಮಾಹಿತಿಗಳ ಪ್ರಕಾರ ಈ ಬಾರಿ ಎಲ್ಇಡಿ ಲೈಟ್ಸ್ ಮತ್ತು ಎಲ್ಇಡಿ ಡಿಆರ್‍ಎಲ್, ಮುಂಭಾಗದಲ್ಲಿ ಡಿಸ್ಕ್ ಬ್ರೆಕ್, ಹಿಂಭಾಗದಲ್ಲಿ ಡ್ರಂ ಬ್ರೇಕ್ ಮತ್ತು ಸಿಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

MOST READ: ಆಟೋ ರಿಕ್ಷಾಗಳನ್ನು ಹಿಂದಿಕ್ಕುತ್ತಾ ಬಜಾಜ್ ಕ್ಯೂಟ್.?

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೋಂಡಾ ಆಕ್ಟೀವಾ 6ಜಿ

ಹೊಸದಾಗಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಒದಗಿಸಲಾಗಿದ್ದು, ಇದರಲ್ಲಿನ ದೊಡ್ಡ ಗಾತ್ರದ ಎಲ್‍ಸಿಡಿ ಡಿಜಿಟಲ್ ಡಿಸ್ಪ್ಲೇಯಲ್ಲಿ ಪ್ಯುಯಲ್ ಲೆವೆಲ್, ಟ್ರಿಪ್ ಮೀಟರ್ ಮತ್ತು ಚಾಲಕನಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀವಿಲ್ಲಿ ಹೊಸ ಆಕ್ಟೀವಾ 6ಜಿ ಸ್ಕೂಟರ್ ಪಡೆದುಕೊಂಡಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೋಂಡಾ ಆಕ್ಟೀವಾ 6ಜಿ

ಇದೀಗ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೊಸ ನಿಯಮವನ್ನು ಅನುಷ್ಠಾನ ತರಲು ಮುಂದಾಗುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಏಪ್ರಿಲ್ 1, 2019ರಿಂದ ಅನ್ವಯವಾಗುವಂತೆ ಬಿಎಸ್-4 ಎಂಜಿನ್‌ಗಳನ್ನು ಸಹ ನಿಷೇಧಗೊಳಿಸಿ ಸುಧಾರಿತ ಮಾದರಿಯ ಬಿಎಸ್-6 ಎಂಜಿನ್ ಜಾರಿಗೆ ತರಲು ಸಜ್ಜಾಗುತ್ತಿದೆ. ಹೀಗಾಗಿ ಹೊಸ ನಿಯಮಗಳಿಗೆ ಅನುಗುಣವಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಸಹ ಭವಿಷ್ಯದ ವಾಹನಗಳನ್ನು ಬಿಎಸ್-6 ಪ್ರೇರಣೆಯೊಂದಿಗೆ ಅಭಿವೃದ್ಧಿಗೊಳಿಸುತ್ತಿವೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೋಂಡಾ ಆಕ್ಟೀವಾ 6ಜಿ

ಹೋಂಡಾ ಇಂಡಿಯಾ ಸಹ ಇದೇ ನಿಟ್ಟಿನಲ್ಲಿ ತನ್ನ ಜನಪ್ರಿಯ ಸ್ಕೂಟರ್ ಮಾದರಿಯಾದ ಆಕ್ಟಿವಾ ಮಾದರಿಗಳನ್ನು ಉನ್ನತಿಕರಣ ಮಾಡುತ್ತಿದ್ದು, ಮುಂಬರುವ 2019ರ ವೇಳೆಗೆ ಬಿಡುಗಡೆಯಾಗಲಿರುವ ಆಕ್ಟಿವಾ 6ಜಿ ಸ್ಕೂಟರ್ ಅನ್ನು ಬಿಎಸ್-6 ಪ್ರೇರಿತ ಫ್ಯೂಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬಿಡುಗಡೆಗಾಗಿ ಸಜ್ಜುಗೊಳಿಸಿದೆ.

MOST READ: ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೋಂಡಾ ಆಕ್ಟೀವಾ 6ಜಿ

ಇದರಿಂದ ಹೊಸ ಸ್ಕೂಟರ್ ಮೈಲೇಜ್ ಮತ್ತು ಎಂಜಿನ್ ಕಾರ್ಯಕ್ಷಮತೆ ಸಾಕಷ್ಟು ಸುಧಾರಣೆಯಾಗಿದ್ದು, ಮೂಲಗಳ ಪ್ರಕಾರ ಹೊಸ ಎಂಜಿನ್ ಜೋಡಣೆಯಿಂದಾಗಿ ಆಕ್ಟಿವಾ 6ಜಿ ಸ್ಕೂಟರ್ ಮೈಲೇಜ್ ಪ್ರಮಾಣವು ಆಕ್ಟಿವಾ 5ಜಿ ಸ್ಕೂಟರ್ ಮೈಲೇಜ್‌ಗಿಂತಲೂ ಶೇ.10ರಷ್ಟು ಹೆಚ್ಚಳವಾಗಲಿದೆ ಎನ್ನಲಾಗಿದೆ.

Source: MotorBeam

Most Read Articles

Kannada
English summary
Honda Activa 6G gets telescopic suspension – Spied near ARAI. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X