ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಲ್ಲಿ ಒಂದಾದ ಹೋಂಡಾ ಮೋಟಾರ್‍‍ಸೈಕಲ್ ತನ್ನ ಸರಣಿಯಲ್ಲಿರುವ ವಾಹನಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಕಂಪನಿಯು ರೂ.9,500ದವರೆಗೆ ಕೊಡುಗೆಗಳನ್ನು ನೀಡುತ್ತಿದೆ.

ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್

ಗ್ರಾಹಕರನ್ನು ಸೆಳೆಯಲು ಕಂಪನಿಯು ರೂ.1,100ಗಳ ಡೌನ್‍‍ಪೇಮೆಂಟ್ ಅನ್ನು ಘೋಷಿಸಿದೆ. ಹೋಂಡಾ ಕಂಪನಿಯು ಹೊಸ ವಾಹನಗಳ ಖರೀದಿಯ ಮೇಲೆ ಯಾವುದೇ ರೀತಿಯ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುತ್ತಿಲ್ಲ.

ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್

ಗ್ರಾಹಕರು ಹೋಂಡಾ ಸಿ‍ಬಿ‍ಆರ್ 250 ಆರ್, ಸಿಬಿ ಶೈನ್, ಲಿವೊ, ಸಿಬಿ ಹಾರ್ನೆಟ್ 160 ಆರ್ ಹಾಗೂ ಸಿಬಿ ಯುನಿಕಾರ್ನ್ ಬೈಕ್‍‍ಗಳ ಮೇಲೆ ಈ ಆಫರ್‍‍ಗಳನ್ನು ಪಡೆಯಲಿದ್ದಾರೆ. ಸ್ಕೂಟರ್‌ಗಳಿಗೆ ಸಂಬಂಧ ಪಟ್ಟಂತೆ, ಗ್ರಾಹಕರು ಇತ್ತೀಚೆಗೆ ಬಿಡುಗಡೆಯಾದ ಆಕ್ಟಿವಾ 125 ಫೈ, ಆಕ್ಟಿವಾ 5 ಜಿ, ಡಿಯೋ, ಗ್ರಾಜಿಯಾ , ಕ್ಲಿಕ್ ಹಾಗೂ ನವಿ ಸ್ಕೂಟರ್‍‍ಗಳ ಮೇಲೆ ಈ ಕೊಡುಗೆಗಳನ್ನು ಪಡೆಯಲಿದ್ದಾರೆ.

ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್

ಗ್ರಾಹಕರು ಪೇಟಿಎಂ ಮುಖಾಂತರ ಈ ವಾಹನಗಳನ್ನು ಖರೀದಿಸಿದರೆ ರೂ.7000ಗಳ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ಈ ಆಫರ್ 2020ರ ಜನವರಿ 15ರವರೆಗೆ ದೇಶಾದ್ಯಂತವಿರುವ ಅಧಿಕೃತ ಹೋಂಡಾ ಡೀಲರ್‍‍ಗಳ ಬಳಿ ಲಭ್ಯವಿರುವುದಾಗಿ ಹೋಂಡಾ ಕಂಪನಿಯು ತಿಳಿಸಿದೆ.

ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್

ಆಕ್ಟಿವಾ ಹೋಂಡಾ ಕಂಪನಿಯ ಜನಪ್ರಿಯ ಸ್ಕೂಟರ್ ಆಗಿದೆ. ಪ್ರತಿ ತಿಂಗಳು ಈ ಸ್ಕೂಟರಿನ 2 ಲಕ್ಷ ಯುನಿಟ್‍‍ಗಳು ಮಾರಾಟವಾಗುತ್ತವೆ. ಮಾರಾಟದಲ್ಲಿ ಸಿಬಿ ಶೈನ್ ಎರಡನೇ ಸ್ಥಾನದಲ್ಲಿದೆ. ಹೋಂಡಾ ಕಂಪನಿಯು ಈ ಆಫರ್‍‍ನ ನಂತರ ಮಾರಾಟವು ಮತ್ತಷ್ಟು ಹೆಚ್ಚಾಗಲಿದೆ ಎಂಬ ನಿರೀಕ್ಷೆಯಲ್ಲಿದೆ.

ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್

ಹೋಂಡಾ ಕಂಪನಿಯು ಇತ್ತೀಚಿಗೆ ಲಿಮಿಟೆಡ್ ಎಡಿಷನ್‍‍ನ ಶೈನ್ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದಕ್ಕೂ ಮೊದಲು ಆಕ್ಟಿವಾ 5 ಜಿ ಸ್ಕೂಟರ್ ಅನ್ನು ಲಿಮಿಟೆಡ್ ಎಡಿಷನ್‍‍ನಲ್ಲಿ ಬಿಡುಗಡೆಗೊಳಿಸಿತ್ತು. ಈ ಲಿಮಿಟೆಡ್ ಎಡಿಷನ್ ವಾಹನಗಳಲ್ಲಿ ಯಾವುದೇ ಮೆಕಾನಿಕಲ್ ಅಂಶಗಳ ಬದಲಾವಣೆಯಾಗಿಲ್ಲ.

ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್

ಆದರೆ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಆಕ್ಟಿವಾ 5 ಜಿ ಲಿಮಿಟೆಡ್ ಎಡಿಷನ್ ಸ್ಕೂಟರ್‍‍ನಲ್ಲಿ 109.2 ಸಿಸಿಯ ಸಿಂಗಲ್ ಸಿಲಿಂಡರ್ ಏರ್‍‍ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8 ಬಿ‍‍ಹೆಚ್‍‍ಪಿ ಪವರ್ ಹಾಗೂ 9 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್

ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬೈಕಿನ ಗ್ರಾಫಿಕ್ಸ್ ಹಾಗೂ ವಿನ್ಯಾಸದಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಬೈಕಿನಲ್ಲಿ 124.6 ಸಿಸಿಯ ಏರ್ ಕೂಲಿಂಗ್ ಸಿಸ್ಟಂ ಎಂಜಿನ್ ಅಳವಡಿಸಲಾಗಿದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್

ಈ ಎಂಜಿನ್ 10.1 ಬಿ‍‍ಹೆಚ್‍‍ಪಿ ಪವರ್ ಹಾಗೂ 10.3 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 4 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಹೋಂಡಾ ಕಂಪನಿಯು ತನ್ನ ಮೊದಲ ಬಿ‍ಎಸ್ 6 ಎಂಜಿನ್ ಹೊಂದಿರುವ ವಾಹನವಾದ ಆಕ್ಟಿವಾ 125 ಸ್ಕೂಟರ್ ಅನ್ನು ಕೆಲ ದಿನಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್

ಈ ಸ್ಕೂಟರ್ ಅನ್ನು ಸ್ಟಾಂಡರ್ಡ್, ಅಲಾಯ್ ಹಾಗೂ ಡೀಲಕ್ಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬಿಎಸ್ 6 ಎಂಜಿನ್ ಹೊಂದಿರುವ ಹೋಂಡಾ ಆಕ್ಟಿವಾ 125 ಸ್ಕೂಟರಿನ ಬೆಲೆಯು ರೂ.67,490ಗಳಾಗಿದೆ.

Most Read Articles

Kannada
English summary
Honda announces offers on selected models - Read in Kannada
Story first published: Thursday, December 5, 2019, 15:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X